Home
ಮೊಬೈಲ್

Oppo F29 Pro 5G: ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಲು ಸಜ್ಜು!

ಚೀನಾದ ಸ್ಮಾರ್ಟ್‌ಫೋನ್ ದಿಗ್ಗಜ Oppo ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ Oppo F29 Pro 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ ಎನ್ನಲಾಗಿದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್‌ (BIS) ವೆಬ್‌ಸೈಟ್‌ನಲ್ಲಿ ಹೊಸದಾಗಿ Oppo F29 Pro 5G ಸ್ಮಾರ್ಟ್‌ಫೋನನ್ನು ಗುರುತಿಸಲ್ಪಟ್ಟಿದ್ದು, Oppo ಕಂಪೆನಿಯು ಶೀಘ್ರದಲ್ಲೇ ಈ ಸಾಧನವನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಆನ್‌ಲೈನ್ ವದಂತಿಗಳು ಮತ್ತು ಸೋರಿಕೆಗಳು ಈ ಸ್ಮಾರ್ಟ್‌ಫೋನಿನ ವಿಶೇಷತೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದು, ವದಂತಿಗಳು ಮತ್ತು ಸೋರಿಕೆಗಳ ಪ್ರಕಾರ ಮುಂಬರುವ Oppo F29 Pro 5G ಸಾಧನದಿಂದ ನಾವು ಏನೆಲ್ಲಾ ವೈಶಿಷ್ಟ್ಯಗಳನ್ನು ನಿರೀಕ್ಷಿಸಬಹುದು ಮತ್ತು ಬೆಲೆ ಎಷ್ಟಿರಬಹುದು ಎಂಬೆಲ್ಲಾ ಮಾಹಿತಿಯನ್ನು ಮುಂದೆ ನೋಡೋಣ ಬನ್ನಿ.

Oppo F29 Pro 5G ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು.

ಪ್ರಸಿದ್ಧ ಟಿಪ್‌ಸ್ಟರ್ ಸುಧಾಂಶು ಅಂಬೋರ್ ಪ್ರಕಾರ, ಹಾಗೂ ಆನ್‌ಲೈನ್ ವದಂತಿಗಳು ಮತ್ತು ಸೋರಿಕೆಗಳ ಮಾಹಿತಿಯಂತೆ, ಹೊಸ Oppo F29 Pro 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್‌ನಿಂದ ಚಾಲಿತವಾಗುವ ನಿರೀಕ್ಷೆಯಿದೆ. ಇದು LPDDR4X RAM ಮತ್ತು UFS 3.1 ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಆಂಡ್ರಾಯ್ಡ್ 15-ಆಧಾರಿತ ColorOS 15 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.ಈ ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ದರದೊಂದಿಗೆ 6.7-ಇಂಚಿನ ಪೂರ್ಣ-HD+ ಕ್ವಾಡ್-ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿರಲಿದೆ ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಒಳಗೊಂಡಿರಲಿದೆ.

Oppo F29 Pro 5G: ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಲು ಸಜ್ಜು!

ಕ್ಯಾಮೆರಾ ವಿಭಾಗದಲ್ಲಿ, ಹೊಸ Oppo F29 Pro 5G ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸರ್ ಅನ್ನು ಒಳಗೊಂಡಿರುವ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ ಎಂದು ಹೇಳಲಾಗಿದೆ. ಇನ್ನುಳಿದಂತೆ, ಈ ಸ್ಮಾರ್ಟ್‌ಫೋನ್ 6,000mAh ಬ್ಯಾಟರಿ, ಇದು 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ ನಿರೀಕ್ಷೆ ಇದೆ. ಹಾಗೂ ಈ Oppo F29 Pro 5G ಮಾನಿಕರ್ ಅನ್ನು ಬ್ಲೂಟೂತ್ SIG ಪಟ್ಟಿಯಲ್ಲಿ ದೃಢಪಡಿಸಲಾಗಿದೆ. ಇದು ಮಾದರಿ ಸಂಖ್ಯೆ CPH2705 ಅನ್ನು ಹೊಂದಿದೆ.

Oppo F29 Pro 5G ಸ್ಮಾರ್ಟ್‌ಫೋನಿನ ಬೆಲೆ ಎಷ್ಟು

ಒಪ್ಪೋ ಇನ್ನೂ ಅಧಿಕೃತವಾಗಿ Oppo F29 Pro 5G ಸ್ಮಾರ್ಟ್‌ಫೋನಿನ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ಆದರೆ, ಇದರ ವೈಶಿಷ್ಟ್ಯಗಳು ಕಳೆದ ಡಿಸೆಂಬರ್ 2024 ರಲ್ಲಿ ಚೀನಾದಲ್ಲಿ ಬಿಡುಗಡೆಯಾದ Oppo A5 Pro 5G ಸ್ಮಾರ್ಟ್‌ಫೋನಿಗೆ ಹೋಲುತ್ತವೆ. ಚೀನಾದಲ್ಲಿ ಬಿಡುಗಡೆಯಾಗಿದ್ದ Oppo A5 Pro 5G ಸ್ಮಾರ್ಟ್‌ಫೋನಿನ ಆರಂಭಿಕ ಬೆಲೆ CNY 1,999 ಗಳಾಗಿದ್ದು, ಇದು ಭಾರತದಲ್ಲಿ ಸುಮಾರು 23,300 ರೂ. ಬೆಲೆಯ ಆಸುಪಾಸಿಲ್ಲಿ ಬಿಡುಗಡೆಯಾಗಬಹುದು.

ಒಟ್ಟಾರೆಯಾಗಿ, Oppo F29 Pro 5G ಸ್ಮಾರ್ಟ್‌ಫೋನ್, ಶಕ್ತಿಯುತ ಚಿಪ್‌ಸೆಟ್, ಅತ್ಯುತ್ತಮ ಡಿಸ್ಪ್ಲೇ, ಉತ್ತಮ ಕ್ಯಾಮೆರಾ ಮತ್ತು ದೀರ್ಘಕಾಲದ ಬ್ಯಾಟರಿಯಂತಹ ವೈಶಿಷ್ಟ್ಯಗಳನ್ನು ಹೊತ್ತು ಬರುತ್ತಿದೆ. ಈ ಫೋನ್‌ನ ಬಿಡುಗಡೆಯೊಂದಿಗೆ, ಮಧ್ಯಮ-ಶ್ರೇಣಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇದ್ದು, ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಹಾಗಾಗಿ, ಮುಂಬರುವ Oppo F29 Pro 5G ಸ್ಮಾರ್ಟ್‌ಫೋನ್‌ನ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್‌ನಲ್ಲಿ ನಿರೀಕ್ಷಿಸಿ.

Best Mobiles in India

English summary
The Oppo F29 Pro 5G is anticipated to be equipped with the MediaTek Dimensity 7300 chipset.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+