ಬ್ಯಾಟರಿ ಬ್ಯಾಕಪ್ ಯುದ್ಧದಲ್ಲಿ ಗೆದ್ದ ಓಪ್ಪೋ F3 ಪ್ಲಸ್ ಸ್ಮಾರ್ಟ್‌ಫೋನ್

Written By:

ದಿನೇ ದಿನೇ ಸ್ಮಾರ್ಟ್‌ಫೋನ್ ಮಾರುಕಟ್ಟೆಯೂ ವಿಶ್ವದಲ್ಲಿ ಏರುಗತಿಯಲ್ಲಿ ಬೆಳೆಯುತ್ತಿದೆ. ಈ ಕಾರಣದಿಂದಾಗಿಯೇ ಸ್ಮಾರ್ಟ್‌ಫೋನ್‌ಗಳು ದಿನದಿಂದ ದಿನಕ್ಕೆ ತಮ್ಮ ಗುಣಮಟ್ಟವನ್ನು ಉತ್ತಮ ಪಡಿಸಿಕೊಳ್ಳುತ್ತಿದ್ದು, ಸ್ಮಾರ್ಟ್‌ಫೋನ್ ತಯಾರಕ ಕಂಪನಿಗಳು ಸಹ ಗ್ರಾಹಕರಿಗೆ ಉತ್ತಮ ಫೋನ್ ಅನ್ನು ನೀಡಲು ಎಲ್ಲಾ ರೀತಿಯಲೂ ಶ್ರಮಿಸುತ್ತಿವೆ.

ಬ್ಯಾಟರಿ ಬ್ಯಾಕಪ್ ಯುದ್ಧದಲ್ಲಿ ಗೆದ್ದ ಓಪ್ಪೋ F3 ಪ್ಲಸ್ ಸ್ಮಾರ್ಟ್‌ಫೋನ್

ಇದೇ ಹಾದಿಯಲ್ಲಿ ಸಾಗುತ್ತಿರುವ ಚೀನಾ ಮೂಲದ ಓಪ್ಪೋ ಕಂಪನಿಯೂ ತನ್ನ ಗ್ರಾಹಕರ ಮೊದಲ ಸಮಸ್ಯೆಯಾದ ಬ್ಯಾಟರಿ ಬಾಳಿಕೆಯನ್ನು ಹೆಚ್ಚು ಮಾಡಲು ಗಮನ ಹರಿಸಿದ್ದು, ಇದಕ್ಕೆ ಪರಿಹಾರವನ್ನು ಕಂಡುಕೊಂಡಿದೆ. ನೂತನವಾಗಿ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಓಪ್ಪೋ F3 ಪ್ಲಸ್ ಸ್ಮಾರ್ಟ್‌ಫೋನ್ ಉತ್ತಮ ಬ್ಯಾಟರಿ ಬ್ಯಾಕಪ್ ಹೊಂದಿದೆ. ಸದ್ಯ ಮಾರುಕಟ್ಟೆಯಲ್ಲಿ ಇರುವ ಎಲ್ಲಾ ಫೋನಿಗಿಂತಲೂ ಉತ್ತಮ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಅದು ಹೇಗೆ ಎಂಬದನ್ನು ಮುಂದೆ ತಿಳಿದುಕೊಳ್ಳುವ ಇತರೇ ಫೋನುಗಳೊಂದಿಗೆ ವ್ಯತ್ಯಾಸವನ್ನು ತುಲನೆ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಓಪ್ಪೋ ಪೋ F3 ಪ್ಲಸ್: ದೀರ್ಘ ಬ್ಯಾಟರಿ ಬಾಳಿಕೆ:

ಓಪ್ಪೋ ಪೋ F3 ಪ್ಲಸ್: ದೀರ್ಘ ಬ್ಯಾಟರಿ ಬಾಳಿಕೆ:

ಓಪ್ಪೋ F3 ಪ್ಲಸ್ ಸ್ಮಾರ್ಟ್‌ಫೋನನ್ನು ಹೆಚ್ಚು ಕಾಲ ಸ್ಮಾರ್ಟ್‌ಫೋನ್ ಬಳಸುವವರಿಗಾಯೇ ನಿರ್ಮಿಸಲಾಗಿದ್ದು, 4000mAh ಬ್ಯಾಟರಿಯನ್ನು ಈ ಫೋನಿನಲ್ಲಿ ಅಳವಡಿಸಲಾಗಿದೆ. ಸುಮಾರು 20 ಗಂಟೆಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸಲು ಓಪ್ಪೋ F3 ಪ್ಲಸ್ ಸಮರ್ಥವಾಗಿದೆ.

6 ಇಂಚಿನ FHD ಡಿಸ್‌ಪ್ಲೇಯನ್ನು ಹೊಂದಿರುವ ಈ ಫೋನ್ ವಿಡಿಯೋ ನೋಡಲು, ಗೇಮ್ ಆಡಲು, ಮ್ಯೂಸಿಕ್ ಕೇಳಲು ಸೇರಿದಂತೆ ಫೋಟೋ ತೆಗೆಯಲು ಬಳಸುವುದರಿಂದ ಉತ್ತಮ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದಕ್ಕಾಗಿಯೇ ಪವರ್ ಸೇವಿಂಗ್ ಮೋಡ್ ಸಹ ಈ ಫೋನಿನಲ್ಲಿದೆ.

ಓಪ್ಪೋ F3 ಪ್ಲಸ್: ಫಾಸ್ಟ್ ಚಾರ್ಜಿಂಗ್ ಆಯ್ಕೆ

ಓಪ್ಪೋ F3 ಪ್ಲಸ್: ಫಾಸ್ಟ್ ಚಾರ್ಜಿಂಗ್ ಆಯ್ಕೆ

ಓಪ್ಪೋ F3 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ ಗುಣಮಟ್ಟದ ಬ್ಯಾಟರಿಯನ್ನು ನೀಡುವುದರೊಂದಿಗೆ ವೇಗವಾಗಿ ಚಾರ್ಜಿಂಗ್ ಮಾಡುವ ಆಯ್ಕೆಯನ್ನು ನೀಡಲಾಗಿದೆ. ಕೇವಲ ಒಂದೂವರೆ ಗಂಟೆಯಲ್ಲಿ ಫೂರ್ಣ ಬ್ಯಾಟರಿ ಚಾರ್ಜ್ ಆಗುವ ವ್ಯವಸ್ಥೆಯನ್ನು ಮಾಡಲಾಗಿದೆ. ಇದಕ್ಕಾಗಿಯ ಓಪ್ಪೋ VOOC ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

ಈ ತಂತ್ರಜ್ಞಾನವು ವೇಗವಾಗಿ ಫೋನ್ ಚಾರ್ಜ್ ಆಗುವಂತೆ ಮಾಡಲಿದ್ದು, ಇದರೊಂದಿಗೆ ಚಾರ್ಜಿಂಗ್ ಸಮಯದಲ್ಲಿ ಫೋನ್ ಓವರ್ ಹಿಟ್ ಆಗದಂತೆ ತಡೆಯುವ ಕೆಲಸವನ್ನು ಮಾಡಲಿದೆ. ಅಲ್ಲದೇ ಕಡಿಮೆ ವಿದ್ಯುತ್ ಪ್ರವಹಿಸುವಿಕೆ ಇರುವಲ್ಲಿಯೂ ಫೋನ್ ಚಾರ್ಜ್ ಮಾಡಿಕೊಳ್ಳಲು ಈ ತಂತ್ರಜ್ಞಾನವು ಸಹಾಯಕವಾಗಿದೆ.

ವಿವೋ V5 ಪ್ಲಸ್: ಡ್ಯುಯಲ್ ಚಾರ್ಜಿಂಗ್:

ವಿವೋ V5 ಪ್ಲಸ್: ಡ್ಯುಯಲ್ ಚಾರ್ಜಿಂಗ್:

ಓಪ್ಪೋ F3 ಪ್ಲಸ್ ಸ್ಮಾರ್ಟ್‌ಫೋನಿನ ಮಾದರಿಯಲ್ಲಿ ಮಾರುಕಟ್ಟೆಗೆ ಬಂದಿರುವ ಸೆಲ್ಫಿ ಸ್ಮಾರ್ಟ್‌ಫೋನ್ ವಿವೋ V5 ಪ್ಲಸ್ ಸಹ 3,055 mAh ಬ್ಯಾಟರಿಯನ್ನು ಹೊಂದಿದೆ. ಆದರೆ ಈ ಫೋನ್ ಕೇವಲ 16 ಗಂಟೆ ಮಾತ್ರ ಕಾರ್ಯನಿರ್ವಹಿಸುವ ಕ್ಷಮತೆಯನ್ನು ಹೊಂದಿದೆಯಷ್ಟೆ.

ಈ ಫೋನಿನಲ್ಲಿ ಡ್ಯುಯಲ್ ಚಾರ್ಜಿಂಗ್ ವ್ಯವಸ್ಥೆಯನ್ನು ನೀಡಲಾಗಿದ್ದು, ಇದು ಸಹ ದೀರ್ಘಕಾಲ ಸ್ಮಾರ್ಟ್‌ಫೋನ್ ಬಳಕೆಗೆ ಸಹಾಯಕಾರಿಯಾಗಿದೆ. ಡ್ಯುಯಲ್ ಚಾರ್ಜಿಂಗ್ ಅರ್ಧಗಂಟೆಯಲ್ಲಿ 43% ಬ್ಯಾಟರಿಯನ್ನು ಚಾರ್ಜ್ ಮಾಡಲು ಶಕ್ತವಾಗಿದೆ. ಇದರಲ್ಲಿ ಚಾರ್ಜಿಂಗ್ ಪ್ರೋಟೆಕ್ಷನ್ ನಿಮ್ಮ ಫೋನನ್ನು ಶಾಕ್ ಪ್ರೂಫ್ ಮತ್ತು ಓವರ್ ಚಾರ್ಜಿಂಗ್ ಅಗುವುವನ್ನು ತಡೆಯಲಿದೆ.

ಓಪ್ಪೋ F3 ಪ್ಲಸ್ ಮತ್ತು ವಿವೋ V5 ಪ್ಲಸ್ ಫೋನಿನಲ್ಲಿ ಎರಡು ಬೇರೆ ಬೇರೆ ಮಾದರಿಯ ಚಾರ್ಜಿಂಗ್ ವ್ಯವಸ್ಥೆಯನ್ನು ನೋಡಬಹುದಾಗಿದೆ. ಆದರೆ ಓಪ್ಪೋ F3 ಪ್ಲಸ್ ದೊಡ್ಡ ಪ್ರಮಾಣದ ಬ್ಯಾಟರಿಯನ್ನು ಹೊಂದಿದೆ ಮತ್ತು ದೀರ್ಘಕಾಲದ ಬಾಳಿಕೆಯನ್ನು ಹೊಂದಿದ್ದು, ಪದೇ ಪದೇ ಚಾರ್ಜ್ ಮಾಡುವುದನ್ನು ತಪ್ಪಿಸುತ್ತದೆ.

ಓಪ್ಪೋ F3 ಪ್ಲಸ್ VS ಓನ್ ಪ್ಲಸ್ 3T:

ಓಪ್ಪೋ F3 ಪ್ಲಸ್ VS ಓನ್ ಪ್ಲಸ್ 3T:

ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿಕೊಂಡಿರುವ ಓನ್ ಪ್ಲಸ್ 3T ಸ್ಮಾರ್ಟ್‌ಫೋನ್ 3,400 mAh ಬ್ಯಾಟರಿಯನ್ನು ಹೊಂದಿದೆ. ಇದು ಸಹ ಡ್ಯಾಷ್ ಚಾರ್ಜಿಂಗ್ ಆಯ್ಕೆಯನ್ನು ಹೊಂದಿದೆ. ಈ ತಂತ್ರಜ್ಞಾನವು ವೇಗವಾಗಿ ಬ್ಯಾಟರಿಯನ್ನು ಚಾರ್ಜ್ ಮಾಡಲು ಶಕ್ತವಾಗಿದೆ.

ಆದರೆ ಬ್ಯಾಟರಿ ವೇಗವಾಗಿ ಚಾರ್ಜ್ ಆದರೂ ಜಾಸ್ತಿ ವಿಡಿಯೋ ನೋಡುವುದು ಮತ್ತು ಗೇಮ್ ಆಡುವುದನ್ನು ಮಾಡಿದರೆ ಓನ್ ಪ್ಲಸ್ 3Tನಲ್ಲಿ ವೇಗವಾಗಿ ಬ್ಯಾಟರಿ ಖಾಲಿಯಾಗಲಿದ್ದು, ಅದೇ ಓಪ್ಪೋ F3 ಪ್ಲಸ್ ಬ್ಯಾಟರಿ ನಿಧಾನವಾಗಿ ಕಡಿಮೆಯಾಗಲಿದೆ.

ಓಪ್ಪೋ F3 ಪ್ಲಸ್ VS ಸ್ಯಾಮ್‌ಸಂಗ್ C9 ಪ್ರೋ:

ಓಪ್ಪೋ F3 ಪ್ಲಸ್ VS ಸ್ಯಾಮ್‌ಸಂಗ್ C9 ಪ್ರೋ:

ಓಪ್ಪೋ F3 ಪ್ಲಸ್ ನಂತಯೇ ಮೊನ್ನೇ ಲಾಂಚ್ ಮಾಡಲಾದ ಸ್ಯಾಮ್‌ಸಂಗ್ C9 ಪ್ರೋ 4000mAh ಬ್ಯಾಟರಿಯನ್ನು ಹೊಂದಿರುವ ಸ್ಮಾರ್ಟ್‌ಫೋನಾಗಿದೆ. ಈ ಫೋನಿನಲ್ಲಿ 6 ಇಂಚಿನ FHD ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಆದರೆ ಈ ಫೋನ್ ಓಪ್ಪೋ F3 ಪ್ಲಸ್‌ಗಿಂತಲೂ ಸ್ಪಲ್ಪ ಬ್ಯಾಟರಿ ಬ್ಯಾಕಪ್ ಜಾಸ್ತಿ ಹೊಂದಿದೆ ಎಂದೇ ಹೇಳಬಹುದು.

ಆದರೆ ಈ ಪೋನಿನಲ್ಲಿ ಅಮೋಲೈಡ್ ಡಿಸ್‌ಪ್ಲೇ ಇದ್ದು, ಕಡಿಮೆ ಪ್ರಮಾಣದ ಬ್ಯಾಟರಿ ಉಪಯೋಗಿಸಿಕೊಳ್ಳಲಿದೆ. ಇದರಿಂದಾಗಿ ಹೆಚ್ಚು ಬ್ಯಾಕಪ್ ಹೊಂದಿದೆ. ಆದರೆ ಓಪ್ಪೋ F3 ಪ್ಲಸ್ ವೇಗವಾಗಿ ಚಾರ್ಜ್ ಮಾಡಬಹುದಾಗಿದೆ. ಆದರೆ ಸ್ಯಾಮ್‌ಸಂಗ್ C9 ಪ್ರೋ ಪೂರ್ಣ ಜಾರ್ಜ್ ಆಗಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಲಿದೆ.

ಪೂರ್ಣಪ್ರಮಾಣದಲ್ಲಿ ನೋಡಿದರೆ ಓಪ್ಪೋ F3 ಪ್ಲಸ್‌ ಬೆಸ್ಟ್ ಫೋನ್:

ಪೂರ್ಣಪ್ರಮಾಣದಲ್ಲಿ ನೋಡಿದರೆ ಓಪ್ಪೋ F3 ಪ್ಲಸ್‌ ಬೆಸ್ಟ್ ಫೋನ್:

ಉತ್ತಮ ಬ್ಯಾಟರಿ ಬಾಳಿಕೆ ಸೇರಿದಂತೆ ಎಲ್ಲಾ ಭಾಗಗಳಿಂದಲೂ ಓಪ್ಪೋ F3 ಪ್ಲಸ್‌ ಉತ್ತಮ ಫೋನ್ ಎಂದು ಹೇಳಬಹುದಾಗಿದೆ. ಉತ್ತಮ ಗುಣಮಟ್ಟದ ಕ್ಯಾಮೆರಾವನ್ನು ಹೊಂದಿರುವ ಫೋನ್ ಇದಾಗಿದ್ದು, ಸೆಲ್ಫಿ ತೆಗೆಯುವವರಿಗಾಯೇ ರೂಪಿಸಿದಂತೆ ಇದೆ. ಹಿಂಭಾಗದಲ್ಲಿ 16 MP ಕ್ಯಾಮೆರಾವನ್ನು ನೀಡಲಾಗಿದ್ದು, ಮುಂಭಾಗದಲ್ಲಿ ಎರಡು ಕ್ಯಾಮೆರಾವನ್ನು ನೀಡಿರುವುದು ಓಪ್ಪೋ F3 ಪ್ಲಸ್‌ ಫೋನಿನ ವಿಶೇಷತೆಯಾಗಿದೆ.

ಇದರೊಂದಿಗೆ 4GB RAM, 64 GB ಇಂರ್ಟನಲ್ ಮೆಮೊರಿ ಓಪ್ಪೋ F3 ಪ್ಲಸ್‌ ಫೋನಿನಲ್ಲಿದ್ದು, ಆಕ್ಟಾ ಕೋರ್ ಪ್ರೋಸೆಸರ್ ಅನ್ನು ಈ ಫೋನಿನಲ್ಲಿ ಕಾಣಬಹುದಾಗಿದೆ. ಇದರೊಂದಿಗೆ ಡ್ಯುಯಲ್ ಸ್ಲಾಟ್ ಕಾರ್ಡ್ ಸಹ ಇದ್ದು, ಎರಡು ನ್ಯಾನೋ 4G ಸಿಮ್ ಹಾಕಬಹುದಾಗಿದೆ. ಅಲ್ಲದೇ ಮೆಮೋರಿ ಕಾರ್ಡ್ ಹಾಕುವ ಮೂಲಕ 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಈ ಪೋನಿನಲ್ಲಿ ಮಾಡಿಕೊಡಲಾಗಿದೆ.

ಸದ್ಯ ಆಂಡ್ರಾಯ್ಡ್ 6.0 ನಲ್ಲಿ ಕಾರ್ಯನಿರ್ವಹಿಸುವ ಓಪ್ಪೋ F3 ಪ್ಲಸ್‌, ಫಿಂಗರ್ ಫ್ರಿಂಟ್ ಸೆನ್ಸಾರ್ ಹೊಂದಿದೆ. ಇದು ಸಹ ವೇಗವಾಗಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಗೂಗಲ್ ಅಸಿಸ್ಟೆಂಟ್ ಸಹ ಈ ಫೋನಿನಲ್ಲಿದೆ.

ಕೊನೆಯ ಮಾತು:

ಕೊನೆಯ ಮಾತು:

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಓಪ್ಪೋ F3 ಪ್ಲಸ್‌ ಎಲ್ಲಾ ಫೀಚರ್‌ಗಳನ್ನು ಹೊಂದಿರುವ ಉತ್ತಮ ಪೋನ್ ಎಂದೇ ಹೇಳಬಹುದಾಗಿದೆ. ಬಿಗ್ ಸ್ಕ್ರಿನ್ ಫೋನ್‌ಗಳಲ್ಲಿ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಈ ಫೋನ್ ನಿರ್ಮಾಣ ಮಾಡಲಾಗಿದೆ. ಉತ್ತಮ ಬ್ಯಾಟರಿ, ಡೊಡ್ಡ ಸ್ಕ್ರಿನ್ ಮತ್ತು ವೇಗದ ಚಾರ್ಜಿಂಗ್ ಇವೆಲ್ಲವೂ ಇದಕ್ಕೆ ಕಾರಣವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
We compared the OPPO F3 Plus with other smartphones to find out which handset delivers the best battery performance. to know more visit kananda.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot