ಭಾರತದಲ್ಲಿ OPPO F31 ಸರಣಿ ಬಿಡುಗಡೆ: ಮೂರು ಪೋನ್‌ಗಳಲ್ಲೂ 7,000mAh ಬ್ಯಾಟರಿ!
ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಬ್ರ್ಯಾಂಡ್ OPPO, ಭಾರತದಲ್ಲಿ ತನ್ನ ಹೊಸ F31 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಸರಣಿಯು OPPO F31 5G, OPPO F31 Pro 5G ಮತ್ತು OPPO F31 Pro+ 5G ಎಂಬ ಮೂರು ಪ್ರಮುಖ ಮಾದರಿಗಳನ್ನು ಒಳಗೊಂಡಿದ್ದು, ಈ ಎಲ್ಲ ಫೋನ್‌ಗಳು ದೊಡ್ಡ 7,000mAh ಬ್ಯಾಟರಿ, ಶಕ್ತಿಯುತ ಕ್ಯಾಮೆರಾ ಮತ್ತು ವೇಗದ ಚಾರ್ಜಿಂಗ್ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ. ಮಧ್ಯಮ ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸುವ ಗುರಿಹೊಂದಿರುವ ಈ ಹೊಸ OPPO F31 ಸರಣಿ ಫೋನ್‌ಗಳ ಬೆಲೆ ಮತ್ತು ಪ್ರಮುಖ ಫೀಚರ್ಸ್ ಯಾವುವು ಮುಂದೆ ಓದಿ ತಿಳಿಯೊಣ ಬನ್ನಿ.
OPPO F31 ಸರಣಿ : ಬೆಲೆ ಬಣ್ಣಗಳು ಮತ್ತು ಲಭ್ಯತೆ
OPPO ಈ ಮೂರು ಮಾದರಿಗಳನ್ನು ವಿವಿಧ ಬೆಲೆ ಮತ್ತು ಸ್ಟೋರೇಜ್ ಆಯ್ಕೆಗಳಲ್ಲಿ ಪರಿಚಯಿಸಿದೆ:
OPPO F31 5G:
8GB RAM + 128GB ಸ್ಟೋರೇಜ್: ₹22,999
8GB RAM + 256GB ಸ್ಟೋರೇಜ್: ₹24,999
ಬಣ್ಣಗಳು: Midnight Blue, Cloud Green ಮತ್ತು Bloom Red.
ಲಭ್ಯತೆ: ಸೆಪ್ಟೆಂಬರ್ 27 ರಿಂದ ಮಾರಾಟ ಪ್ರಾರಂಭ.
OPPO F31 Pro 5G:
8GB RAM + 128GB ಸ್ಟೋರೇಜ್: ₹26,999
8GB RAM + 256GB ಸ್ಟೋರೇಜ್: ₹28,999
12GB RAM + 256GB ಸ್ಟೋರೇಜ್: ₹30,999
ಬಣ್ಣಗಳು: Desert Gold ಮತ್ತು Space Grey.
OPPO F31 Pro+ 5G:
8GB RAM + 256GB ಸ್ಟೋರೇಜ್: ₹32,999
12GB RAM + 256GB ಸ್ಟೋರೇಜ್: ₹34,999
ಬಣ್ಣಗಳು: Gemstone Blue, Himalayan White ಮತ್ತು Festive Pink.
OPPO F31 Pro 5G ಮತ್ತು F31 Pro+ 5G ಮಾದರಿಗಳು ಸೆಪ್ಟೆಂಬರ್ 19 ರಿಂದ Flipkart, Amazon ಮತ್ತು ಅಧಿಕೃತ ಆಫ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿರುತ್ತವೆ.

OPPO F31 ಸರಣಿ :ಪ್ರಮುಖ ವೈಶಿಷ್ಟ್ಯಗಳು
OPPO F31 5G
ಡಿಸ್‌ಪ್ಲೇ ಮತ್ತು ಸಾಫ್ಟ್‌ವೇರ್
6.5 ಇಂಚಿನ FHD+ AMOLED ಸ್ಕ್ರೀನ್, 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್. Android 15 ಆಧಾರಿತ ColorOS 15.
ಪ್ರೊಸೆಸರ್ ಮತ್ತು ಮೆಮೊರಿ
MediaTek Dimensity 6300 ಚಿಪ್‌ಸೆಟ್, Mali-G57 GPU. 8GB RAM, 256GB ಸ್ಟೋರೇಜ್.
ಕ್ಯಾಮೆರಾ
50MP ಪ್ರೈಮರಿ ಕ್ಯಾಮೆರಾ + 2MP ಪೋರ್ಟ್ರೇಟ್ ಲೆನ್ಸ್. 16MP ಸೆಲ್ಫಿ ಕ್ಯಾಮೆರಾ. ಮಲ್ಟಿ-ವ್ಯೂ ಶೂಟಿಂಗ್, 10x ಜೂಮ್ ಮತ್ತು ಅಂಡರ್‌ವಾಟರ್ ವೀಡಿಯೋ ಸಪೋರ್ಟ್.
ಬ್ಯಾಟರಿ ಮತ್ತು ಇತರೆ
7,000mAh ಬ್ಯಾಟರಿ, 80W SuperVOOC ಚಾರ್ಜಿಂಗ್. IP69 + IP68 + IP66 ರಕ್ಷಣೆ. ತೂಕ 185g.
Oppo F31 Pro 5G ವೈಶಿಷ್ಟ್ಯಗಳು
ಡಿಸ್‌ಪ್ಲೇ
6.5 ಇಂಚಿನ AMOLED ಸ್ಕ್ರೀನ್, ಅಡಾಪ್ಟಿವ್ 60Hz-120Hz ರಿಫ್ರೆಶ್ ರೇಟ್. 100% DCI-P3 ಮತ್ತು sRGB ಕಲರ್ ಸಪೋರ್ಟ್.
ಪ್ರೊಸೆಸರ್ ಮತ್ತು ಮೆಮೊರಿ
MediaTek Dimensity 7300 Energy ಚಿಪ್‌ಸೆಟ್. 12GB RAM ವರೆಗೆ, 256GB UFS 3.1 ಸ್ಟೋರೇಜ್.
ಕ್ಯಾಮೆರಾ
ಹಿಂಬದಿಯಲ್ಲಿ 50MP + 2MP ಲೆನ್ಸ್. ಮುಂದೆ 16MP ಸೆಲ್ಫಿ ಕ್ಯಾಮೆರಾ. ವೀಡಿಯೋ ವೈಶಿಷ್ಟ್ಯಗಳು F31 5G ಮಾದರಿಯಂತೆಯೇ.
ಬ್ಯಾಟರಿ ಮತ್ತು ಸಂಪರ್ಕ
7,000mAh ಬ್ಯಾಟರಿ, 80W ಚಾರ್ಜಿಂಗ್. Wi-Fi 6 ಸಪೋರ್ಟ್. ತೂಕ 190g (Space Grey), 191g (Desert Gold).

Oppo F31 Pro+ 5G ವೈಶಿಷ್ಟ್ಯಗಳು
ಡಿಸ್‌ಪ್ಲೇ
6.8 ಇಂಚಿನ BOE AMOLED ಸ್ಕ್ರೀನ್, 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್. 1.07 ಬಿಲಿಯನ್ ಕಲರ್‌ಗಳು, 453ppi ಡೆನ್ಸಿಟಿ.
ಪ್ರೊಸೆಸರ್ ಮತ್ತು ಮೆಮೊರಿ
Snapdragon 7 Gen 3 ಚಿಪ್‌ಸೆಟ್, Adreno 7 ಸರಣಿ GPU. RAM ಮತ್ತು ಸ್ಟೋರೇಜ್ Pro ಮಾದರಿಯಂತೆಯೇ.
ಬಿಲ್ಡ್ ಮತ್ತು ರಕ್ಷಣೆ ವೈಶಿಷ್ಟ್ಯಗಳು
Armour Body ತಂತ್ರಜ್ಞಾನ, IP69 + IP68 + IP66 ರೇಟಿಂಗ್. 7,000mAh ಬ್ಯಾಟರಿ, 80W ಚಾರ್ಜಿಂಗ್.
Oppo F31 ಸರಣಿ ದೊಡ್ಡ ಬ್ಯಾಟರಿ, ಶಕ್ತಿಯುತ ಕ್ಯಾಮೆರಾ ಹಾಗೂ ವೇಗದ ಚಾರ್ಜಿಂಗ್ ವೈಶಿಷ್ಟ್ಯಗಳ ಮೂಲಕ ಮಧ್ಯಮ ಮತ್ತು ಪ್ರೀಮಿಯಂ ಶ್ರೇಣಿಯಲ್ಲಿ ಗ್ರಾಹಕರನ್ನು ಸೆಳೆಯುವ ನಿರೀಕ್ಷೆಯಿದೆ. ವಿಶೇಷವಾಗಿ, F31 Pro+ 5G ಮಾದರಿ Snapdragon ಚಿಪ್‌ಸೆಟ್ ಮತ್ತು ದೊಡ್ಡ ಡಿಸ್‌ಪ್ಲೇ ಮೂಲಕ ಹೆಚ್ಚಿನ ತಂತ್ರಜ್ಞಾನ ಪ್ರಿಯರನ್ನು ಆಕರ್ಷಿಸಬಹುದು.


Click it and Unblock the Notifications








