Home
ಮೊಬೈಲ್

ಒಪ್ಪೊ F31 ಸರಣಿ: ಭಾರತದಲ್ಲಿ ಸೆ.15 ರಿಂದ ಲಭ್ಯ, ಫೀಚರ್ಸ್, ಬೆಲೆ ಔಟ್!

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ Oppo ಭಾರತದಲ್ಲಿ ತನ್ನ ಹೊಸ F31 ಸರಣಿ ಫೋನ್‌ಗಳ ಬಿಡುಗಡೆ ದಿನಾಂಕವನ್ನು ಈಗಾಗಲೇ ಘೋಷಿಸಿದೆ. ಇದೇ ಸೆಪ್ಟೆಂಬರ್ 15 ರಂದು ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಒಪ್ಪೊ F31 ಸರಣಿ ಪೋನ್‌ಗಳು ಪರಿಚಯಗೊಳ್ಳಲಿವೆ ಮತ್ತು ಮಾರಾಟವು ಸಹ ಪ್ರಾರಂಭವಾಗಲಿದೆ ಎಂದು ತಿಳಿಸಲಾಗಿದೆ. ಇದೀಗ, ಬಿಡುಗಡೆಗೂ ಮೊದಲೇ ಕಂಪನಿಯು ಹೊಸ F31 ಸರಣಿ ಫೋನ್‌ಗಳ ಕುರಿತು ಕೆಲವು ಮುಖ್ಯ ವೈಶಿಷ್ಟ್ಯಗಳನ್ನು ಹಂಚಿಕೊಂಡಿದೆ. ಹಾಗಾದರೆ, ಹೊಸ ಒಪ್ಪೊ F31 ಸರಣಿ ಫೋನ್‌ಗಳು ಹೇಗಿರಲಿವೆ ಮತ್ತು ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.

ಒಪ್ಪೊ F31 ಸರಣಿಯಲ್ಲಿ ಒಪ್ಪೊ F31 5G, ಒಪ್ಪೊ F31 Pro 5G ಮತ್ತು ಒಪ್ಪೊ F31 Pro+ 5G ಮೂರು ಮಾದರಿ ಫೋನ್‌ಗಳು ಬಿಡುಗಡೆಯಾಗುವ ಸೂಚನೆ ದೊರೆತಿದೆ. ಒಪ್ಪೊ F31 ಸರಣಿಯ ಪ್ರಚಾರದ ಚಿತ್ರಗಳಲ್ಲಿ ಈಗಾಗಲೇ ಎರಡು ಬಣ್ಣಗಳ ವಿನ್ಯಾಸ ಬಹಿರಂಗಗೊಂಡಿದೆ. ಒಂದು ವೃತ್ತದ ಆಕಾರದಲ್ಲಿ ಚಿನ್ನದ ಟ್ರಿಪಲ್-ಕ್ಯಾಮೆರಾ ಮಾಡ್ಯೂಲ್ ಆಗಿದೆ ಮತ್ತು ಇನ್ನೊಂದು ನೀಲಿ ಸ್ಕ್ವಿರ್ಕಲ್-ಆಕಾರದ ಕ್ಯಾಮೆರಾ ದ್ವೀಪದೊಂದಿಗೆ ಕಾಣಿಸಿಕೊಂಡಿದೆ. ಇದರ ಬೇಸ್ ಮಾದರಿಯು ನೀಲಿ, ಹಸಿರು ಮತ್ತು ಕೆಂಪು ಬಣ್ಣಗಳಲ್ಲಿ ಬರುವುದನ್ನು ಸೂಚಿಸಲಾಗಿದೆ.

ಈ ಹೊಸ ಸರಣಿಯ ಎಲ್ಲಾ ಮಾದರಿಗಳು Qualcomm Snapdragon 7 Gen 3 ಪ್ರೊಸೆಸರ್‌ನಿಂದ ಶಕ್ತಿಯುತ ಪರ್ಫಾರ್ಮೆನ್ಸ್ ನೀಡಲಿವೆ. ಒಪ್ಪೊ ಪ್ರಕಾರ, ಫೋನ್‌ವು AnTuTu ಪರೀಕ್ಷೆಯಲ್ಲಿ 8,90,000 ಕ್ಕೂ ಹೆಚ್ಚು ಅಂಕಗಳನ್ನು ಪಡೆದಿದೆ. Oppo F31 Pro 5G ಮಾದರಿ ಹೆಚ್ಚಿನ ತಾಪಮಾನದಲ್ಲಿಯೂ ಸ್ಥಿರ ಕಾರ್ಯಕ್ಷಮತೆಯನ್ನು ತೋರಿಸಿದೆ. ಈ ಮಾದರಿಯು 40°C ನಲ್ಲಿ ಸುಗಮತೆ ಪರೀಕ್ಷೆಗಳಲ್ಲಿ 20,000 ರಿಂದ 30,000 ಅಂಕಗಳನ್ನು ಸಾಧಿಸಿದೆ ಎಂದು ಕಂಪೆನಿ ಹೇಳಿದೆ. ಇದು ಫೋನಿನ ಕಾರ್ಯಕ್ಷಮತೆಯ ಬಗ್ಗೆ ಒಂದು ನೋಟವನ್ನು ಒದಗಿಸಿದೆ.

ಭಾರೀ ಬಳಕೆಯ ಸಮಯದಲ್ಲಿ ಹೆಚ್ಚುವರಿ ಕೆಲಸದ ಹೊರೆಯನ್ನು ನಿರ್ವಹಿಸಲು, ಒಪ್ಪೋ F31 ಸರಣಿಯಲ್ಲಿ 5,219mm² ಸೂಪರ್‌ಕೂಲ್ ವೇಪರ್ ಚೇಂಬರ್ ಕೂಲಿಂಗ್ ವ್ಯವಸ್ಥೆಯನ್ನು ಸೇರಿಸಿದ್ದು, ಇದು ಸಾಧನವು ಅಧಿಕ ಬಿಸಿಯಾಗುವುದನ್ನು ತಡೆಯುತ್ತದೆ.ಕ್ಯಾಮೆರಾ ವಿಭಾಗದಲ್ಲಿ, Oppo F31 ಶ್ರೇಣಿಯು ಟ್ರಿಪಲ್ ಹಿಂಭಾಗದ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾ ಹಾಗೂ 2MP ಡೆಪ್ತ್ ಸೆನ್ಸಾರ್ ಇದೆ. ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಒಪ್ಪೊ F31 ಸರಣಿ: ಭಾರತದಲ್ಲಿ ಸೆ.15 ರಿಂದ ಲಭ್ಯ, ಫೀಚರ್ಸ್, ಬೆಲೆ ಔಟ್!
Image credit: Heyits yogesh

ಬ್ಯಾಟರಿ ವಿಭಾಗದಲ್ಲಿ, ಒಪ್ಪೊ F31 ಸರಣಿಯಲ್ಲಿ 7,000mAh ಬ್ಯಾಟರಿ ಜೊತೆಗೆ 80W SuperVOOC ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ. ಹೆಚ್ಚು ಸಮಯ ಬಳಸುವವರಿಗೂ ದೀರ್ಘ ಬ್ಯಾಟರಿ ಲೈಫ್ ಒದಗಲಿದೆ. ಜೊತೆಗೆ, IP69, IP68, ಒಪ್ಪೊ F31 ಸರಣಿಯಲ್ಲಿIP66 ರಕ್ಷಣಾ ಪ್ರಮಾಣೀಕರಣ ಮತ್ತು 360° ಆರ್ಮರ್ ಬಾಡಿ ವಿನ್ಯಾಸ ಇರಲಿದೆ. ಬೆಲೆ ಪಟ್ಟಿ ಪ್ರಕಾರ, F31 5G ₹20,000 ಒಳಗೆ, F31 Pro 5G ₹30,000 ಒಳಗೆ ಹಾಗೂ F31 Pro+ 5G ₹35,000 ಒಳಗೆ ಲಭ್ಯವಾಗಲಿದೆ ಎಂದು ಸೂಚಿಸಲಾಗಿದೆ.

ಸ್ನಾಪ್‌ಡ್ರಾಗನ್ 7 ಜೆನ್ 3 ಚಿಪ್‌ಸೆಟ್, ದೊಡ್ಡ 7,000mAh ಬ್ಯಾಟರಿ, ಸುಧಾರಿತ ಕೂಲಿಂಗ್ ತಂತ್ರಜ್ಞಾನ ಮತ್ತು ಶಕ್ತಿಯುತ ನಿರ್ಮಾಣದೊಂದಿಗೆ ಒಪ್ಪೋ F31 ಸರಣಿಯು ಭಾರತೀಯ ಗ್ರಾಹಕರಿಗೆ ಉತ್ತಮ ಮಧ್ಯಮ ಶ್ರೇಣಿಯ ಆಯ್ಕೆಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಆಕರ್ಷಕ ವಿನ್ಯಾಸ ಮತ್ತು ಉತ್ತಮ ಕ್ಯಾಮೆರಾಗಳನ್ನು ಹೊಂದಿರುವ ಈ ಒಪ್ಪೋ F31 ಸರಣಿ ಫೋನ್‌ಗಳ ಕುರಿತು ಸಂಪೂರ್ಣ ಮಾಹಿತಿಯು ಇದೇ ಸೆಪ್ಟೆಂಬರ್ 15 ರಂದು ಹೊರಬೀಳಲಿದೆ. ಅಲ್ಲಿಯವರೆಗೂ, ನಿಮ್ಮ ನೆಚ್ಚಿನ ಕನ್ನಡ ಗಿಜ್‌ಬಾಟ್‌ನಲ್ಲಿ ಟ್ಯೂನ್ ಆಗಿರಿ.

Best Mobiles in India

English summary
Oppo F31 5G is set to launch in India with a stylish design, 5G connectivity, Qualcomm Snapdragon 7 Gen 3 performance, and competitive pricing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+