Home
ಮೊಬೈಲ್

Oppo F31 ಸರಣಿ: ಭಾರತದಲ್ಲಿ ಬಿಡುಗಡೆ ದಿನಾಂಕ ಘೋಷಣೆ!..ಸಂಪೂರ್ಣ ವಿವರ!

ಜನಪ್ರಿಯ ಮೊಬೈಲ್ ಬ್ರ್ಯಾಂಡ್ Oppo ತನ್ನ ಹೊಸ F31 ಸರಣಿ 5G ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಸೆಪ್ಟೆಂಬರ್ 15ರಂದು ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ! "Durable Champion" ಎಂಬ ಟ್ಯಾಗ್‌ಲೈನ್‌ನೊಂದಿಗೆ Oppo ತನ್ನ ಹೊಸ Oppo F31 ಸರಣಿ ಫೋನ್‌ಗಳ ಟೀಸರ್ ಅನ್ನು ಪರಿಚಯಿಸಿದೆ, ಮೊದಲ ನೋಟದಲ್ಲಿ ಗೋಲ್ಡನ್ ಮತ್ತು ಡಾರ್ಕ್ ಬ್ಲೂ ಬಣ್ಣಗಳಲ್ಲಿ ಕಾಣಿಸುತ್ತಿರುವ ಎರಡು ಫೋನ್ ಮಾದರಿಗಳು ವೃತ್ತಾಕಾರದ ಕ್ಯಾಮರಾ ಮೋಡ್ಯೂಲ್ ಅನ್ನು ಹೊಂದಿವೆ. ಈ ಸರಣಿಯಲ್ಲಿ F31, F31 Pro, ಮತ್ತು F31 Pro+ ಎಂಬ ಮೂರು ಪ್ರಮುಖ ಫೋನ್‌ಗಳು ಬರಲಿರುವ ನಿರೀಕ್ಷೆ ಇದೆ. ಮತ್ತು ಈಗಾಗಲೇ ಈ ಫೋನ್‌ಗಳ ಕುರಿತು ಹಲವಾರು ಮಾಹಿತಿಗಳು ಸೋರಿಕೆಯಾಗಿವೆ.! ಹಾಗಾದರೆ, ಮುಂಬರಲಿರುವ Oppo F31 ಸರಣಿ ಫೋನ್‌ಗಳು ಹೇಗಿರಲಿವೆ?, ಬೆಲೆ ಎಷ್ಟಿರಬಹುದು ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ.

Oppo F31 ಸರಣಿ : ಪ್ರಮುಖ ವೈಶಿಷ್ಟ್ಯಗಳು
ಜನಪ್ರಿಯ ಟಿಪ್‌ಸ್ಟರ್ ಪ್ಯಾರಾಸ್ ಗುಗ್ಲಾನಿ ಪ್ರಕಾರ, ಹೊಸ F31 ಸರಣಿಯಲಲ್ಇನ ಪ್ರತಿ ಮಾದರಿಯು ತನ್ನದೇ ಆದ ವಿಶಿಷ್ಟ ತಾಂತ್ರಿಕ ಅಂಶಗಳನ್ನು ಒಳಗೊಂಡಿದೆ. Oppo F31 ಮಾದರಿಯು 6.57 ಇಂಚಿನ 120Hz AMOLED ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಇದು MediaTek Dimensity 6300 ಪ್ರೊಸೆಸರ್, 8GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಕ್ಯಾಮರಾ ವಿಭಾಗದಲ್ಲಿ 50MP ಮುಖ್ಯ ಲೆನ್ಸ್ ಮತ್ತು 2MP ಡೆಪ್ತ್ ಸೆನ್ಸರ್ ಇದ್ದು, ಮುಂದೆ 16MP ಸೆಲ್ಫಿ ಕ್ಯಾಮರಾ ಇದೆ. ಈ ಮಾದರಿಯ ಪ್ರಮುಖ ಆಕರ್ಷಣೆ ಎಂದರೆ 7,000mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ತಂತ್ರಜ್ಞಾನ.

ಇತ್ತ Oppo F31 Pro ಕೂಡ ಇದೇ ಗಾತ್ರದ ಡಿಸ್‌ಪ್ಲೇಯನ್ನು ಹೊಂದಿದ್ದರೂ, ಇದು ಹೆಚ್ಚು ಶಕ್ತಿಶಾಲಿ MediaTek Dimensity 7300 Energy ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದರ ಹಿಂದಿನ ಕ್ಯಾಮರಾ ಸೆಟಪ್ F31 ಮಾದರಿಯಂತೆಯೇ ಇದ್ದರೂ, ಸೆಲ್ಫಿ ಕ್ಯಾಮರಾ 32MP ಸೆನ್ಸರ್ ಆಗಿ ಅಪ್‌ಗ್ರೇಡ್ ಆಗಿದೆ. ಸರಣಿಯ ಟಾಪ್-ಎಂಡ್ ಮಾದರಿಯಾದ Oppo F31 Pro+, 6.79 ಇಂಚಿನ ದೊಡ್ಡ 120Hz AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಫೋನ್ Snapdragon 7 Gen 3 ಪ್ರೊಸೆಸರ್‌ನೊಂದಿಗೆ ಬರುವುದಾಗಿ ನಿರೀಕ್ಷಿಸಲಾಗಿದೆ ಮತ್ತು ಇದು 256GB ವರೆಗೆ ಸ್ಟೋರೇಜ್ ಸಾಮರ್ಥ್ಯವನ್ನು ಬೆಂಬಲಿಸುತ್ತದೆ.

Oppo F31 ಸರಣಿ: ಭಾರತದಲ್ಲಿ ಬಿಡುಗಡೆ ದಿನಾಂಕ ಘೋಷಣೆ!..ಸಂಪೂರ್ಣ ವಿವರ!

ಈ Oppo F31 ಸರಣಿಯ ಫೋನ್‌ಗಳ ಮತ್ತೊಂದು ಪ್ರಮುಖ ವೈಶಿಷ್ಟ್ಯವೆಂದರೆ ಅವುಗಳ ಬಾಳಿಕೆ. ಮೂರೂ ಮಾದರಿಗಳು IP66, IP68, ಮತ್ತು IP69 ಪ್ರಮಾಣೀಕರಣಗಳನ್ನು ಪಡೆದಿವೆ. ಇದರರ್ಥ ಈ ಫೋನ್‌ಗಳು ನೀರು, ಧೂಳು, ಮತ್ತು ತೀವ್ರ ಒತ್ತಡದ ಜಲಧಾರೆಗೂ ಪ್ರತಿರೋಧ ಒಡ್ಡುತ್ತವೆ. ಹಾಗೆಯೇ 30 ನಿಮಿಷಗಳ ಕಾಲ ನೀರಿನೊಳಗೆ ಇರಿಸಿದರೂ ಯಾವುದೇ ಹಾನಿಯಾಗುವುದಿಲ್ಲ. ಇದರ ಜೊತೆಗೆ, 360-ಡಿಗ್ರಿ ಆರ್ಮರ್ ಬಾಡಿ ಮತ್ತು ಅಲ್ಟ್ರಾ-ಸ್ಲಿಮ್ ವಿನ್ಯಾಸವು ಈ ಸರಣಿಗೆ ದೃಢವಾದ ಮತ್ತು ಆಕರ್ಷಕ ನೋಟವನ್ನು ನೀಡಿದೆ ಎಂದಿದ್ದಾರೆ. ಆದರೆ, ಈ ಎಲ್ಲಾ ವಿವರಗಳನ್ನು ಕಂಪೆನಿಯು ಇನ್ನಷ್ಟೇ ಅಧಿಕೃತಗೊಳಿಸಬೇಕಿದೆ.

ಬೆಲೆ ಎಷ್ಟಿರಬಹುದು?
Oppo F31 ಸರಣಿಯ ಬೆಲೆ ಮಾಹಿತಿಯು ಬಹಿರಂಗವಾಗಿಲ್ಲ, ಆದರೆ ಹಿಂದಿನ ಟ್ರೆಂಡ್‌ಗಳನ್ನು ಗಮನಿಸಿದರೆ, Oppo F31 ಬೆಲೆ ₹20,000-₹25,000, F31 Pro ಬೆಲೆ ₹25,000-₹30,000, ಮತ್ತು F31 Pro+ ಬೆಲೆ ₹30,000-₹35,000 ಶ್ರೇಣಿಯಲ್ಲಿ ಇರಬಹುದೆಂದು ಅಂದಾಜಿಸಲಾಗಿದೆ.

ಭಾರತದಲ್ಲಿ ₹20,000-₹35,000 ಮಧ್ಯಮ ಶ್ರೇಣಿಯ ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ಬೆಲೆ ವಿಭಾಗದಲ್ಲಿ ಗ್ರಾಹಕರು ಉತ್ತಮ ಕ್ಯಾಮರಾ, ಬಾಳಿಕೆ ಬರುವ ಬ್ಯಾಟರಿ ಮತ್ತು ಗೇಮಿಂಗ್‌ಗಾಗಿ ಸಾಮರ್ಥ್ಯವಿರುವ ಫೋನ್‌ಗಳನ್ನು ನಿರೀಕ್ಷಿಸುತ್ತಾರೆ. Oppo F31 ಸರಣಿಯು ಈ ಎಲ್ಲಾ ಅಂಶಗಳನ್ನು ಒಳಗೊಂಡಿರುವ ಸಾಧ್ಯತೆ ಇದೆ. ಇದು Samsung Galaxy M ಸರಣಿ, OnePlus Nord, ಮತ್ತು iQOO ನಂತಹ ಮಾದರಿಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿದೆ. ವಿಶೇಷವಾಗಿ 7,000mAh ಬ್ಯಾಟರಿ ಮತ್ತು ಬಹು ಹಂತದ ವಾಟರ್-ರೆಸಿಸ್ಟೆನ್ಸ್ ಸೌಲಭ್ಯಗಳು ಈ ಸರಣಿಯನ್ನು ಮಾರುಕಟ್ಟೆಯಲ್ಲಿ ಎದ್ದು ಕಾಣುವಂತೆ ಮಾಡಲಿವೆ. ಈ ಬಿಡುಗಡೆಯು ಭಾರತದ ಮಧ್ಯಮ ಶ್ರೇಣಿಯ 5G ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಹೊಸ ಸ್ಪರ್ಧೆಯನ್ನು ತರಲಿದೆ ಎಂಬುದರಲ್ಲಿ ಸಂದೇಹವಿಲ್ಲ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದ್ನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
OPPO is all set to launch the F31 Series in India on September 15. The lineup is expected to feature a sleek design, upgraded specifications, and competitive pricing, making it one of the most anticipated smartphone releases this month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+