ಬೆಜೆಲ್‌ಲೆಸ್ ಡಿಸ್‌ಪ್ಲೇ ಹೊತ್ತು ಸೆಲ್ಫಿ ಲೀಡರ್ 'ಒಪ್ಪೋ ಎಫ್5' ಬಿಡುಗಡೆ!!

Written By:

ಪೂರ್ತಿ ಸೆಲ್ಫಿಗಾಗಿಯೇ ರೂಪಿಸಲ್ಪಟ್ಟಿರುವ ಒಪ್ಪೋ ಕಂಪೆನಿಯ 'ಒಪ್ಪೋ ಎಫ್5' ಸ್ಮಾರ್ಟ್‌ಫೋನ್ ಭಾರತದಲ್ಲಿ ಇದೀಗ ಬಿಡುಗಡೆಯಾಗಿದೆ.! ಕಳೆದ ತಿಂಗಳಲ್ಲಿಯೇ ಫಿಲಿಫೈನ್ಸ್‌ನಲ್ಲಿ ಲಾಂಚ್ ಆಗಿದ್ದ ಒಪ್ಪೊ 5 ಸ್ಮಾರ್ಟ್‌ಫೋನ್ ಎಲ್ಲರನ್ನು ಸೆಲ್ಫಿ ಕ್ಯಾಮರಾದಿಂದಲೇ ಆಕರ್ಷಸಿದ್ದು, ಭಾರತದಲ್ಲಿ ಉತ್ತಮ ಮಾರುಕಟ್ಟೆಯನ್ನು ನಿರೀಕ್ಷಿಸಿದೆ.!!

20ಮೆಗಾಪಿಕ್ಸೆಲ್ ಕ್ಯಾಮೆರಾ, 6 ಇಂಚ್ ಬೆಜೆಲ್‌ಲೆಸ್ ಡಿಸ್‌ಪ್ಲೇ ಹಾಗೂ 4GB ಮತ್ತು 6GBಯ ಎರಡು ವೆರಿಯಂಟ್‌ಗಳಲ್ಲಿ 'ಒಪ್ಪೋ ಎಫ್5' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದ್ದು, ಇದೀಗ ಬೆಲೆ ಕೂಡ ಸ್ವಲ್ಪ ಕಡಿತಗೊಂಡಿದೆ.!! ಹಾಗಾದರೆ, ಒಪ್ಪೋ ಎಫ್5 ಫೋನ್ ಏನೆಲ್ಲಾ ಫೀಚರ್ಸ್‌ ಹೊಂದಿದೆ? ಖರೀದಿಸಲು ಯೋಗ್ಯವೇ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿನ್ಯಾಸ ಮತ್ತು ಡಿಸ್‌ಪ್ಲೇ!!

ವಿನ್ಯಾಸ ಮತ್ತು ಡಿಸ್‌ಪ್ಲೇ!!

ಒಪ್ಪೋ ಎಫ್5 ಸ್ಮಾರ್ಟ್‌ಫೋನ್ 6 ಇಂಚ್ (18:9) ಹೆಚ್‌ಡಿ ಬೆಜೆಲ್‌ಲೆಸ್ ಡಿಸ್‌ಪ್ಲೇ ಹೊಂದಿದ್ದು, ಫೋನ್ ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಫೀಚರ್ ಅಳವಡಿಸಿಲಾಗಿದೆ.! ಫೋನ್‌ನಲ್ಲಿ ಬೆಜೆಲ್‌ಲೆಸ್ ಡಿಸ್‌ಪ್ಲೇ ತರುವ ಸಲುವಾಗಿ ಒಪ್ಪೋ ಎಫ್5 ಫಿಂಗರ್‌ಪ್ರಿಂಟ್ ಸ್ಥಳ ಬದಲಾಗಿದೆ.!!

20MP ಸೆಲ್ಫಿ ಕ್ಯಾಮೆರಾ!!

20MP ಸೆಲ್ಫಿ ಕ್ಯಾಮೆರಾ!!

ಒಪ್ಪೊ ಸ್ಮಾರ್ಟ್‌ಫೋನ್‌ಗಳು ಎಂದರೆ ಕ್ಯಾಮೆರಾ ಕ್ಯಾಮೆರಾಗಾಗಿಯೇ ಮೀಸಲು ಎಂಬ ಮಾತಿದೆ. ಹಾಗೆಯೇ ಒಪ್ಪೋ ಎಫ್5 20MP F/2.0 ಅಪಾರ್ಚರ್ ಸೆಲ್ಫಿ ಕ್ಯಾಮೆರಾ ಹಾಗೂ 16MP F/1.8 ರಿಯರ್ ಕ್ಯಾಮೆರಾಗಳನ್ನು ಒಳಗೊಂಡಿದೆ. ಎರಡೂ ಕ್ಯಾಮೆರಾಗಳಿಗೂ ಎಲ್ಇಡಿ ಫ್ಲಾಶ್‌ ಲೈಟ್ ಸಹ ಲಭ್ಯವಿದ್ದು, ಸೆಲ್ಫಿ ಸ್ಮಾರ್ಟ್‌ಫೋನ್ ಎನಿಸಲು ಇಷ್ಟು ಸಾಕು.!!

ಪ್ರೊಸೆಸರ್ ಯಾವುದು?

ಪ್ರೊಸೆಸರ್ ಯಾವುದು?

ಯಾವಾಗಲೂ ಕ್ಯಾಮೆರಾಗಳನ್ನೆ ತನ್ನ ಮುಖ್ಯವಾಹಿನಿ ಮಾಡಿಕೊಳ್ಳುವ ಒಪ್ಪೋ ಕಂಪೆನಿ ಪ್ರೊಸೆಸರ್ ಆಯ್ಕೆಯಲ್ಲಿ ಮಾತ್ರ ಮುತುವರ್ಜಿ ವಹಿಸುತ್ತಿರಲಿಲ್ಲ ಎನ್ನಬಹುದು. ಆದರೆ, ಒಪ್ಪೋ ಎಫ್5 ನಲ್ಲಿ 16nM "ಹೀಲಿಯೋ ಪಿ23" ಚಿಪ್‌ಸೆಟ್ ಅಳವಡಿಸಿಕೊಂಡಿದ್ದು, ಆಂಡ್ರಾಯ್ಡ್ 7.1 ಓಎಸ್‌ ಮೂಲಕ ಕಾರ್ಯನಿರ್ವಹಣೆ ಉತ್ತಮವಾಗಿರಲಿದೆ ಎಂದು ಹೇಳಬಹುದು.!

RAM ಮತ್ತು ಮೆಮೊರಿ!!

RAM ಮತ್ತು ಮೆಮೊರಿ!!

ಒಪ್ಪೋ ಎಫ್5 ಸ್ಮಾರ್ಟ್‌ಫೋನ್ 4GB RAM ಮತ್ತು 32GB ಮೆಮೊರಿ ಹಾಗೂ 6G RAM ಮತ್ತು 64GB ಮೆಮೊರಿ ಹೊಂದಿರುವ ಎರಡು ವೆರಿಯಂಟ್‌ನಲ್ಲಿ ಬಿಡುಗಡೆಯಾಗಿದೆ. ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಮೆಮೊರಿಯನ್ನು 256GB ವರೆಗೂ ಹೆಚ್ಚಿಸುವ ಆಯ್ಕೆಯನ್ನು ಎರಡು ವೆರಿಯಂಟ್‌ಗಳು ಸಹ ಹೊಂದಿವೆ.!!

ಉತರ ಫೀಚರ್ಸ್ ಮತ್ತು ಬೆಲೆ ಎಷ್ಟು?

ಉತರ ಫೀಚರ್ಸ್ ಮತ್ತು ಬೆಲೆ ಎಷ್ಟು?

ಒಪ್ಪೋ ಎಫ್5 3,200mAH ಬ್ಯಾಟರಿ, 4Gವೋಲ್ಟ್, ಬ್ಲೂಟೂತ್ 4.2, ಯುಎಸ್‌ಬಿ ಪೋರ್ಟ್‌ನಂತಹ ಹಲವು ಫೀಚರ್‌ಗಳನ್ನು ಹೊಂದಿದ್ದು, 4GB RAM ಮತ್ತು 32GB ವೆರಿಯಂಟ್ ಬೆಲೆ 19,999ರೂ.ಆದರೆ, 6G RAM ಮತ್ತು 64GB ವೆರಿಯಂಟ್ ಫೋನ್ ಬೆಲೆ 24,990 ರೂಪಾಯಿಗಳಾಗಿವೆ.!!

ಓದಿರಿ:16MP ಸೆಲ್ಫಿ ಕ್ಯಾಮೆರಾದ 'ಶಿಯೋಮಿ' ಫೋನ್ 8,999 ರೂ.ಗೆ ಬಿಡುಗಡೆ!..ಒಪ್ಪೊ, ವಿವೊಗೆ ಶಾಕ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Oppo F5 brings 20 MP selfie camera 6-inch, 18:9 display and more.to know more visi to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot