ಸೆಲ್ಫಿ ಎಕ್ಸ್‌ಪರ್ಟ್ 'ಒಪ್ಪೊ ಎಫ್ 7' ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳಿವು!!

ಭಾರತೀಯ ಸ್ಮಾರ್ಟ್‌ಫೋನ್ ಪ್ರಿಯರು ಭಾರೀ ನಿರೀಕ್ಷೆಯಿಂದ ಎದುರುನೋಡುತ್ತಿದ್ದ 25MP ಸೆಲ್ಫಿ ಕ್ಯಾಮೆರಾದ 'ಒಪ್ಪೊ ಎಫ್ 7' ಸೆಲ್ಫಿ ಎಕ್ಸ್‌ಪರ್ಟ್ ಸ್ಮಾರ್ಟ್‌ಫೋನ್ ಭಾರತೀಯ ಮೊಬೈಲ್ ಮಾರುಕಟ್ಟೆಗೆ ಇದೀಗ ಬಿಡುಗಡೆಯಾಗಿದೆ.

|

ಭಾರತೀಯ ಸ್ಮಾರ್ಟ್‌ಫೋನ್ ಪ್ರಿಯರು ಭಾರೀ ನಿರೀಕ್ಷೆಯಿಂದ ಎದುರುನೋಡುತ್ತಿದ್ದ 25MP ಸೆಲ್ಫಿ ಕ್ಯಾಮೆರಾದ 'ಒಪ್ಪೊ ಎಫ್ 7' ಸೆಲ್ಫಿ ಎಕ್ಸ್‌ಪರ್ಟ್ ಸ್ಮಾರ್ಟ್‌ಫೋನ್ ಭಾರತೀಯ ಮೊಬೈಲ್ ಮಾರುಕಟ್ಟೆಗೆ ಇದೀಗ ಬಿಡುಗಡೆಯಾಗಿದೆ. ಫುಲ್‌ಸ್ಕ್ರೀನ್ ಎಡ್ಜ್ ಟು ಎಡ್ಜ್ ಡಿಸ್‌ಪ್ಲೇ ಹಾಗೂ ಕೃತಕ ಬುದ್ದಿ ಮತ್ತೆ ಕ್ಯಾಮೆರಾ ತಂತ್ರಜ್ಞಾನವನ್ನು ಹೊತ್ತು ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ.!!

ಮೊಬೈಲ್ ಪ್ರಿಯರು ಊಹಿಸಿದಕ್ಕಿಂತಲೂ ಅತ್ಯಂತ ಕಡಿಮೆ ಬೆಲೆಗೆ 25MP ಸೆಲ್ಫಿ ಕ್ಯಾಮೆರಾದ 'ಒಪ್ಪೊ ಎಫ್ 7' ಸೆಲ್ಫಿ ಎಕ್ಸ್‌ಪರ್ಟ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಾಲಿಟ್ಟಿದ್ದು, ಕೆಲವು ಅದ್ಬುತ ತಂತ್ರಜ್ಞಾನಗಳ ಜೊತೆಗೆ ಮಲ್ಟಿಮೀಡಿಯಾ, ಪ್ರೊಸೆಸರ್ ಫೀಚರ್ಸ್‌ಗಳೊಂದಿಗೆ 'ಒಪ್ಪೊ ಎಫ್ 7' ಸೆಲ್ಫಿ ಎಕ್ಸ್‌ಪರ್ಟ್ ಸ್ಮಾರ್ಟ್‌ಪೋನ್ ಪ್ರಿಯರ ಗಮನ ಸೆಳೆಯುತ್ತಿದೆ.!!

ಸೆಲ್ಫಿ ಎಕ್ಸ್‌ಪರ್ಟ್ 'ಒಪ್ಪೊ ಎಫ್ 7' ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳಿವು!!

ನೂತನ 'ಒಪ್ಪೊ ಎಫ್ 7' ಸೆಲ್ಫಿ ಸ್ಮಾರ್ಟ್‌ಫೋನ್ ಎರಡು ವೆರಿಯಂಟ್‌ಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, 4GB ಮತ್ತು 64GB ಮೆಮೊರಿ ಹೊಂದಿರುವ ಸ್ಮಾರ್ಟ್‌ಪೋನ್ ಬೆಲೆ ಕೇವಲ 21,990 ರೂಪಾಯಿಗಳಾಗಿವೆ. ಹಾಗೆಯೇ, 6GB ಮತ್ತು 128GB ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್ ಕೇವಲ 26,990 ರೂಪಾಯಿಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ.!!

ಇದೇ ಏಪ್ರಿಲ್ 2 ರಂದ 'ಒಪ್ಪೊ ಎಫ್ 7' ಸೆಲ್ಫಿ ಸ್ಮಾರ್ಟ್‌ಫೋನ್ ಫ್ಲಾಶ್‌ಸೇಲ್ ಆರಂಭವಾಗಲಿದೆ. ಇನ್ನು ಏಪ್ರಿಲ್ 7 ರಿಂದ ಆಫ್‌ಲೈನ್ ಸ್ಟೋರ್‌ಗಳಲ್ಲಿಯೂ ಸ್ಮಾರ್ಟ್‌ಫೋನ್ ಲಭ್ಯವಾಗಲಿದೆ.! ಹಾಗಾದರೆ, 'ಒಪ್ಪೊ ಎಫ್ 7' ಸೆಲ್ಫಿ ಎಕ್ಸ್‌ಪರ್ಟ್ ಸ್ಮಾರ್ಟ್‌ಫೋನ್ ಹೇಗಿದೆ? ನೀವು ಏನೆಲ್ಲಾ ವಿಷಯಗಳನ್ನು ತಿಳಿಯಲೇಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ಓದಿರಿ.!!

25 ಎಂಪಿ ಎಐ ಸೆಲ್ಫಿ ಕ್ಯಾಮೆರಾ!!

25 ಎಂಪಿ ಎಐ ಸೆಲ್ಫಿ ಕ್ಯಾಮೆರಾ!!

ಒಂದು 25 ಮೆಗಾಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಮೂಲಕ ಹೊರಬಂದಿರುವ ಒಪ್ಪೊವಿನ ಮೊದಲ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಗೆ ಒಪ್ಪೊ ಎಫ್ 7' ಸ್ಮಾರ್ಟ್‌ಪೋನ್ ಪಾತ್ರವಾಗಿದೆ. ಕೃತಕ ಬುದ್ದಿಮತ್ತೆ ತಂತ್ರಜ್ಞಾನದೊಂದಿಗೆ ಎಐ ಬ್ಯೂಟಿ 2.0 ತಂತ್ರಜ್ಞಾನವನ್ನು ಸ್ಮಾರ್ಟ್‌ಫೋನ್ ಒಳಗೊಂಡಿದೆ. ಮುಖದ ಮೇಲೆ 296 ಮುಖದ ಚುಕ್ಕೆಗಳನ್ನು ಹೆಚ್ಚು ನಿಖರವಾಗಿ ಗುರುತಿಸುವ ಮೂಲಕ ಮುಖ ಗುರುತಿಸುವಿಕೆಯ ಪರಿಣಾಮಕಾರಿ ಸಾಮರ್ಥ್ಯವನ್ನು ಸೆಲ್ಫಿ ಕ್ಯಾಮೆರಾ ತಂತ್ರಜ್ಞಾನ ಹೊಂದಿದೆ.!!

ಎಐ ಬ್ಯೂಟಿ 2.0 ಮತ್ತು HDR ತಂತ್ರಜ್ಞಾನ!!

ಎಐ ಬ್ಯೂಟಿ 2.0 ಮತ್ತು HDR ತಂತ್ರಜ್ಞಾನ!!

ಒಪ್ಪೊ ಎಫ್ 5 ಬಿಡುಗಡೆಯಾದಾಗ ನಿಬ್ಬೆರಗಾಗಿದ್ದ AI ಬ್ಯೂಟಿ ಮೋಡ್ ಆಯ್ಕೆ ಈಗ ಒಪ್ಪೊ ಎಫ್ 7 ಸ್ಮಾರ್ಟ್‌ಫೋನಿನಲ್ಲಿ ಮತ್ತಷ್ಟು ಅಭಿವೃದ್ದಿಯಾಗಿದೆ. ಚರ್ಮದ ಟೋನ್‌ಗಳು ಮತ್ತು ಬಣ್ಣ, ವಯಸ್ಸು, ಚಿತ್ರದ ನಡುವಿನ ವ್ಯತ್ಯಾಸಗಳನ್ನು ಸ್ವಯಂ ಗುರುತಿಸುವ ಎಐ ಬ್ಯೂಟಿ ಮೋಡ್ ಸೂಕ್ತವಾದ ಸೌಂದರ್ಯವರ್ಧಕ ಚಿತ್ರಗಳನ್ನು ಚಿತ್ರಿಸಲಿದೆ. HDR ತಂತ್ರಜ್ಞಾನವು ಬಣ್ಣಗಳನ್ನು ವರ್ಧಿಸುತ್ತದೆ ಮತ್ತು ಸವಾಲಿನ ಬೆಳಕಿನ ಪರಿಸ್ಥಿತಿಗಳಲ್ಲಿ ಅತ್ಯುತ್ತಮ ಗುಣಮಟ್ಟದ ಫೋಟೊಗಳನ್ನು ಚಿತ್ರಿಸಲು ಸಹಾಯ ಮಾಡುತ್ತದೆ.!!

ಅದ್ಬುತವಾಗಿದೆ ಸ್ಮಾರ್ಟ್‌ಪೋನ್ ವಿನ್ಯಾಸ!!

ಅದ್ಬುತವಾಗಿದೆ ಸ್ಮಾರ್ಟ್‌ಪೋನ್ ವಿನ್ಯಾಸ!!

ಫುಲ್‌ಸ್ಕ್ರೀನ್ ಎಡ್ಜ್ ಟು ಎಡ್ಜ್ ಡಿಸ್‌ಪ್ಲೇಯನ್ನು ಸಹೊಂದಿರುವ ಒಪ್ಪೊ ಎಫ್ 7 ಸ್ಮಾರ್ಟ್ಫೋನ್ 19.9 ಆಕಾರ ಅನುಪಾತದ 6.23-ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ ಸುತ್ತಲೂ ಇರುವ ಬೆಜಲ್‌ಗಳನ್ನು ಕಡಿಮೆ ಮಾಡಲಾಗಿದ್ದು, ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ನೀಡಲಾಗಿದೆ. ಎಲ್ಲದಕ್ಕಿಂತ ಹೆಚ್ಚಿನದಾಗಿ ಸ್ಮಾರ್ಟ್‌ಪೋನಿನಲ್ಲಿ ಮಲ್ಟಿಮೀಡಿಯಾ ಪ್ರದರ್ಶನಕ್ಕೆ ಅತ್ಯುತ್ತಮ ಅವಕಾಶವನ್ನು ಕಲ್ಪಿಸಲಾಗಿದೆ ಎನ್ನಬಹುದು.!!

ಪವರ್‌ಫುಲ್ ಹಾರ್ಡ್‌ವೇರ್!!

ಪವರ್‌ಫುಲ್ ಹಾರ್ಡ್‌ವೇರ್!!

64-ಬಿಟ್ ಆಕ್ಟಾ-ಕೋರ್ ಪ್ರೊಸೆಸರ್ ಜೊತೆಗೆ 4GB ಮತ್ತು 6GB RAM ಹೊಂದಿರುವ ಒಪ್ಪೊ ಎಫ್ 7 ಸ್ಮಾರ್ಟ್‌ಪೋನ್ ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆ ನೀಡಲಿದೆ. ಒಪ್ಪೊ ಕಂಪೆನಿ ಹೇಳುವಂತೆ ಹಿಂದಿನ ಸರಣಿ ಒಪ್ಪೊ ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೊ ಎಫ್ 5 ಸ್ಮಾರ್ಟ್‌ಫೋನಿಗಿಂತಲೂ ಶೇ 80 ರಷ್ಟು ವೇಗದ ಕಾರ್ಯನಿರ್ವಹನೆಯನ್ನು ನೀಡಲಾಗಿದೆಯಂತೆ. ನೂತನ ಒಪ್ಪೊ ಎಫ್ 7 ಸ್ಮಾರ್ಟ್‌ಪೋನಿನಲ್ಲಿ ಬ್ಯಾಟರಿ ಜೀವಿತಾವಧಿ ಸಮಯವೂ ಸಾಕಷ್ಟು ಹೆಚ್ಚಳವಾಗಿದೆ ಎಂದು ಒಪ್ಪೊ ಕಂಪೆನಿ ತಿಳಿಸಿದೆ.!!

ರಿಯಾಲಿಟಿ ಸ್ಟಿಕ್ಕರ್ಸ್ ಮತ್ತು AI ಫೋಟೋ ಆಲ್ಬಮ್ ನಿರ್ವಹಣೆ!

ಪ್ಪೊ ಎಫ್ 7 ಸ್ಮಾರ್ಟ್‌ಫೋನ್ AI ತಂತ್ರಜ್ಞಾನಕ್ಕೆ ಹೆಚ್ಚುವರಿಯಾಗಿ ವರ್ಧಿತ ರಿಯಾಲಿಟಿ ಸ್ಟಿಕರ್‌ಗಳನ್ನು ರಚಿಸುವ ಸಾಮರ್ಥ್ಯವನ್ನು ಸೇರಿಸಲಾಗಿದೆ. ಈ ವರ್ಧಿತ ರಿಯಾಲಿಟಿ ಸ್ಟಿಕರ್‌ಗಳು ಮತ್ತು ಕವರ್ ಶಾಟ್ ಫೀಚರ್ಸ್ ನಿಮ್ಮನ್ನು ಕುತೋಹಲಗೊಳಿಸುತ್ತವೆ. ಕ್ಯಾಮರಾದಲ್ಲಿ ಒಮ್ಮೆ ಟ್ಯಾಪ್ ಮಾಡುವ ಮೂಲಕ ಸಂವೇದಾತ್ಮಕ ಅನಿಮೇಟೆಡ್ ಚಿತ್ರಗಳನ್ನು ಸಹ ಇಲ್ಲಿ ಸೇರಿಸಬಹುದು. ಇನ್ನು ಒಪ್ಪೊ ಎಫ್ 7 ಸ್ಮಾರ್ಟ್‌ಫೋನ್ AI ತಂತ್ರಜ್ಞಾನದ ಕ್ಯಾಮೆರಾ ಫೀಚರ್ಸ್‌ಗಳನ್ನು ಮಾತ್ರವಲ್ಲದೇ, AI ತಂತ್ರಜ್ಞಾನ ಆಧಾರಿತ AI ಫೋಟೋ ಆಲ್ಬಮ್ ನಿರ್ವಹಣೆಯನ್ನು ಸಹ ನೀಡಲಿದೆ. ನಿಮ್ಮ ಸ್ಮಾರ್ಟ್‌ಫೋನ್ ಮೆಮೊರಿಯನ್ನು ಉತ್ತಮ ಫೋಟೋ ಆಲ್ಬಮ್‌ನೊಂದಿಗೆ ನಿರ್ವಹಣೆ ಮಾಡಬಹುದಾಗಿದ್ದು, ಸಂಕೀರ್ಣವಾದ AI ಕ್ರಮಾವಳಿಗಳನ್ನು ಸ್ಮಾರ್ಟ್ ಫೋಟೋ ಆಲ್ಬಮ್ ಬಳಸುತ್ತದೆ.

Best Mobiles in India

English summary
The new OPPO F7 is priced at Rs. 21,990 for the 4GB RAM + 64GB ROM variant and will sell at Rs. 26,990 for the 6GB RAM + 128GB ROM variant. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X