ದೇಶದ ಎಲ್ಲಾ ಒಪ್ಪೊ ಮಳಿಗೆಗಳಲ್ಲಿ ಇಂದು 'ಒಪ್ಪೊ ಎಫ್ 7' ಆಫ್‌ಲೈನ್ ಫ್ಲಾಶ್‌ಸೇಲ್!!

ಸ್ಮಾರ್ಟ್‌ಪೋನ್ ಪ್ರಿಯರು ಊಹಿಸಿದಕ್ಕಿಂತಲೂ ಅತ್ಯಂತ ಕಡಿಮೆ ಬೆಲೆಗೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿರುವ ನೂತನ 'ಒಪ್ಪೊ ಎಫ್ 7' ಸೆಲ್ಫಿ ಎಕ್ಸ್‌ಪರ್ಟ್ ಸ್ಮಾರ್ಟ್‌ಫೋನ್ ಮೊದಲ ಫ್ಲಾಶ್‌ಸೇಲ್ ಆಯೋಜನೆಯಾಗಿದೆ.

|

ಸ್ಮಾರ್ಟ್‌ಪೋನ್ ಪ್ರಿಯರು ಊಹಿಸಿದಕ್ಕಿಂತಲೂ ಅತ್ಯಂತ ಕಡಿಮೆ ಬೆಲೆಗೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿರುವ ನೂತನ 'ಒಪ್ಪೊ ಎಫ್ 7' ಸೆಲ್ಫಿ ಎಕ್ಸ್‌ಪರ್ಟ್ ಸ್ಮಾರ್ಟ್‌ಫೋನ್ ಮೊದಲ ಬಾರಿಗೆ ಆಫ್‌ಲೈನ್ ಮಾರುಕಟ್ಟೆಗೆ ಕಾಲಿಟ್ಟಿದೆ. ಏಪ್ರಿಲ್ 2 ರಂದು ಆಯೋಜನೆಯಾಗಿದ್ದ ಫ್ಲಾಶ್‌ಸೇಲ್‌ನಲ್ಲಿ ಒಪ್ಪೊವಿನ ಮೊದಲ 25MP ಸೆಲ್ಫಿ ಕ್ಯಾಮೆರಾ ಸ್ಮಾರ್ಟ್‌ಪೋನ್ ಖರೀದಿಸಲು ಸಾಧ್ಯವಾಗದೇ ಇದ್ದವರಿಗೆ ಇಂದಿನಿಂದ ಸ್ಮಾರ್ಟ್‌ಫೋನ್ ಕೈ ಸೇರುವುದು ಪಕ್ಕಾ ಆಗಿದೆ.!!

ಫುಲ್‌ಸ್ಕ್ರೀನ್ ಎಡ್ಜ್ ಟು ಎಡ್ಜ್ ಡಿಸ್‌ಪ್ಲೇ, ಕೃತಕ ಬುದ್ದಿಮತ್ತೆ ಕ್ಯಾಮೆರಾ ತಂತ್ರಜ್ಞಾನ ಮತ್ತು ಅದ್ಬುತ ಫೀಚರ್ಸ್‌ಗಳಿಂದ ಗಮನ ಸೆಳೆಯುತ್ತಿರುವ 'ಒಪ್ಪೊ ಎಫ್ 7' ಸೆಲ್ಫಿ ಎಕ್ಸ್‌ಪರ್ಟ್ ಸ್ಮಾರ್ಟ್‌ಫೋನ್ ಈಗಾಗಲೇ ಸ್ಮಾರ್ಟ್‌ಪೋನ್ ಪ್ರಿಯರ ಗಮನ ಸೆಳೆದಿದ್ದು, 'ಒಪ್ಪೊ ಎಫ್ 7' ಸೆಲ್ಫಿ ಎಕ್ಸ್‌ಪರ್ಟ್ ಸ್ಮಾರ್ಟ್‌ಫೋನ್ ಖರೀದಿಸಲು ಜನರು ತಯಾರಾಗಿದ್ದಾರೆ.!!

ದೇಶದ ಎಲ್ಲಾ ಒಪ್ಪೊ ಮಳಿಗೆಗಳಲ್ಲಿ ಇಂದು 'ಒಪ್ಪೊ ಎಫ್ 7' ಆಫ್‌ಲೈನ್ ಫ್ಲಾಶ್‌ಸೇಲ್!!

ನೂತನ 'ಒಪ್ಪೊ ಎಫ್ 7' ಸೆಲ್ಫಿ ಸ್ಮಾರ್ಟ್‌ಫೋನ್ ಎರಡು ವೆರಿಯಂಟ್‌ಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, 4GB ಮತ್ತು 64GB ಮೆಮೊರಿ ಹೊಂದಿರುವ ಸ್ಮಾರ್ಟ್‌ಪೋನ್ ಬೆಲೆ ಕೇವಲ 21,990 ರೂಪಾಯಿಗಳಾಗಿವೆ. ಹಾಗೆಯೇ, 6GB ಮತ್ತು 128GB ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್ ಕೇವಲ 26,990 ರೂಪಾಯಿಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ.!!

ಮೊಬೈಲ್ ಪರಿಚಯಿಸಿದ ಒಪ್ಪೋ ಬ್ರಾಂಡ್ ಡೈರೆಟ್ಟರ್ ವಿಲ್ ಯಂಗ್:

ಮೊಬೈಲ್ ಪರಿಚಯಿಸಿದ ಒಪ್ಪೋ ಬ್ರಾಂಡ್ ಡೈರೆಟ್ಟರ್ ವಿಲ್ ಯಂಗ್:

ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಪ್ಪೋ ಭಾರತದ ಬ್ರಾಂಡ್ ಡೈರೆಟ್ಟರ್ ವಿಲ್ ಯಂಗ್ ಒಪ್ಪೋ F7 ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಿದರು. ಇದಲ್ಲದೇ ಒಪ್ಪೋ, ಟೆಕ್‌ ದೈತ್ಯ ಗೂಗಲ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿರುವ ಬಗ್ಗೆ ಮಾಹಿತಿ ನೀಡಿದಲ್ಲದೇ, ಮುಂದಿನ ದಿನದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಯ ಬಗ್ಗೆಯೂ ಮಾತನಾಡಿದರು.

ಮೊಬೈಲ್ ಬಗ್ಗೆ ಮಾಹಿತಿ ನೀಡಿದ ಒಪ್ಪೋ ಭಾರತದ ಪ್ರಾಡೆಕ್ಟ್ ಮ್ಯಾನೆಜರ್ ರಿಶಬ್ ಶ್ರೀವಾಸ್ತವ್:

ಮೊಬೈಲ್ ಬಗ್ಗೆ ಮಾಹಿತಿ ನೀಡಿದ ಒಪ್ಪೋ ಭಾರತದ ಪ್ರಾಡೆಕ್ಟ್ ಮ್ಯಾನೆಜರ್ ರಿಶಬ್ ಶ್ರೀವಾಸ್ತವ್:

ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೋ F7 ಸ್ಮಾರ್ಟ್‌ಫೋನ್ ಬಗ್ಗೆ ಮಾತನಾಡಿದ ಶ್ರೀವಾಸ್ತವ್, ಈ ಸ್ಮಾರ್ಟ್‌ಫೋನಿನಲ್ಲಿ 25MP ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಇದಕ್ಕಾಗಿ ಸೋನಿ IMX 576 ಸೆನ್ಸರ್ ಅನ್ನು ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ. ಇದು HDR ಫೋಟೋಗಳನ್ನು ಕ್ಲಿಕಿಸಲು ಮತ್ತು ಉತ್ತಮವ ವಿಡಿಯೋಗಳನ್ನು ಮಾಡಲು ಸಹಾಯಕಾರಿಯಾಗಿದೆ ಎಂದು ತಿಳಿಸಿದರು.

ಬ್ಯೂಟಿ ಮೋಡ್:

ಬ್ಯೂಟಿ ಮೋಡ್:

ಒಪ್ಪೋ ಸ್ಮಾರ್ಟ್‌ಫೋನ್‌ ಈ ಹಿಂದಿನಿಂದಲೂ ಸೆಲ್ಫಿಗೆ ಹೆಚ್ಚಿನ ಪ್ರಮುಖ್ಯತೆಯನ್ನು ನೀಡುತ್ತಿದ್ದು, ಇದೇ ಮಾದರಿಯಲ್ಲಿ ಸೆಲ್ಪಿ ಎಕ್ಸ್‌ಪರ್ಟ್ ಒಪ್ಪೋ F7 ಸ್ಮಾರ್ಟ್‌ಫೋನಿನಲ್ಲಿಯೂ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಬ್ಯೂಟಿ 2.0 ಟೆಕ್ನಾಲಜಿಯನ್ನು ಬಳಸಿಕೊಳ್ಳಲಾಗಿದ್ದು, ಇದು 296 ಫೇಷಿಯಲ್ ಸ್ಪಾಟ್‌ಗಳನ್ನು ಗುರುತಿಸಿ ಉತ್ತಮವಾಗಿಸಲಿದೆ. ಇದಲ್ಲದೇ ಕೃತಕ ಬುದ್ದಿಮತ್ತೆಯೂ 16 ಸಿನ್‌ಗಳನ್ನು ಗುರುತಿಸಲಿದ್ದು, ಅದರಂತೆ ಫೋಟೋಗನ್ನು ಕ್ಲಿಕ್ ಮಾಡುವ ಸಾಧ್ಯತೆಯನ್ನು ಹೊಂದಿದೆ.

ಫುಲ್‌ ಸ್ಕ್ರಿನ್ ಡಿಸ್‌ಪ್ಲೇ:

ಫುಲ್‌ ಸ್ಕ್ರಿನ್ ಡಿಸ್‌ಪ್ಲೇ:

ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೋ F7 ಸ್ಮಾರ್ಟ್‌ಫೋನ್ ನಲ್ಲಿ ನೋಚ್ ವಿನ್ಯಾಸವನ್ನು ಕಾಣಬಹದಾಗಿದ್ದು, ಎಡ್ಜ್ ಟು ಎಡ್ಜ್ ಡಿಸ್‌ಪ್ಲೇ 6.23 ಇಂಚುಗಳಷ್ಟಿದ್ದು, 19:9 ಅನುಪಾತದಿಂದ ಕೂಡಿದೆ. ಅಲ್ಲದೇ ಸೂಪರ್ ಫುಲ್ ವ್ಯೂ ಮತ್ತು FHD+ ಗುಣಮಟ್ಟವನ್ನು ಹೊಂದಿದೆ. ಇದರಲ್ಲಿ ಗೇಮ್ ಆಡುವ ಅನುಭವ ಮತ್ತು ವಿಡಿಯೋ ನೋಡುವ ಅನುಭವನ್ನು ಬಣ್ಣಸಲು ಸಾಧ್ಯವಿಲ್ಲ ಎನ್ನಲಾಗಿದೆ.

ಉತ್ತಮ ಹಾರ್ಡ್‌ವೇರ್:

ಉತ್ತಮ ಹಾರ್ಡ್‌ವೇರ್:

ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೋ F7 ಸ್ಮಾರ್ಟ್‌ಫೋನ್ ನಲ್ಲಿ 64 ಬಿಟ್ ಆಕ್ಟಾ ಕೋರ್ ಪ್ರೊಸೆಸರ್ ಅನ್ನು ಕಾಣಬಹುದಾಗಿದ್ದು, ಎರಡು ಸಿಮ್ ಸ್ಲಾಟ್ ನೊಂದಿಗೆ ಮೆಮೊರಿ ಕಾರ್ಡ್ ಅನ್ನು ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದಲ್ಲದೇ 3400mAh ಬ್ಯಾಟರಿಯನ್ನು ಇದರಲ್ಲಿ ಕಾಣಬಹುದಾಗಿದೆ. ಆಂಡ್ರಾಯ್ಡ್ 8.1 ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನಿನಲ್ಲಿ ಕಲರ್ OS 5.0ವನ್ನು ನೀಡಲಾಗಿದೆ. ಇದು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಮತ್ತು ಫೇಷಿಯಲ್ ರೆಕಗ್ನೇಷನ್ ಆಯ್ಕೆಗಳನ್ನು ಹೊಂದಿದೆ ಎನ್ನಲಾಗಿದೆ.

ಕ್ರಿ ಕೆಟ್ ತಾರೆಗಳು

ಕ್ರಿ ಕೆಟ್ ತಾರೆಗಳು

ಇದಲ್ಲದೇ ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೋ F7 ಸ್ಮಾರ್ಟ್‌ಫೋನ್ ಲಾಂಚ್ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡದ ಸದಸ್ಯರಾದ ರೋಹಿತ್ ಶರ್ಮ, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಆಶ್ವಿನ್ ಸಹ ವೇದಿಕೆಯಲ್ಲಿ ಕಾಣಿಸಿಕೊಂಡರು.

ಬೆಲೆ:

ಬೆಲೆ:

ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೋ F7 ಸ್ಮಾರ್ಟ್‌ಫೋನ್ 4GB RAM ಮತ್ತು 64GB ಇಂಟರ್ನಲ್ ಮೆಮೊರಿ ಆವೃತ್ತಿ ರೂ.21,990ಕ್ಕೆ ಲಭ್ಯವಿದ್ದು, 6GB RAM ಮತ್ತು 128GB ಇಂಟರ್ನಲ್‌ ಮೆಮೊರಿಯ ಆವೃತ್ತಿ ರೂ.26,990ಕ್ಕೆ ಮಾರಾಟವಾಗಲಿದೆ.

Best Mobiles in India

English summary
The new OPPO F7 is priced at Rs. 21,990 for the 4GB RAM + 64GB ROM variant and will sell at Rs. 26,990 for the 6GB RAM + 128GB ROM variant. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X