Subscribe to Gizbot

ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ಕೊಟ್ಟ ಒಪ್ಪೋ F7 ಸ್ಮಾರ್ಟ್‌ಫೋನ್‌: ಹೇಗಿದೆ..? ಇಲ್ಲಿದೇ ಫುಲ್ ಮಾಹಿತಿ..!

Written By:

ಒಪ್ಪೋ ಭಾರತೀಯ ಮಾರುಕಟ್ಟೆಗೆ ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೋ F7 ಸ್ಮಾರ್ಟ್‌ಫೋನ್‌ನನ್ನು ಅದ್ದೂರಿಯಾಗಿ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಯನ್ನು ಮಾಡಿದೆ. 4GB/6GB RAM ಆವೃತ್ತಿಯಲ್ಲಿ ದೊರೆಯುವ ಈ ಸ್ಮಾರ್ಟ್‌ಫೋನಿನಲ್ಲಿ ಸೆಲ್ಪಿಗಾಗಿಯೇ 25MP ಕ್ಯಾಮೆರಾವನ್ನು ನೀಡಲಾಗಿದ್ದು, ಇದಕ್ಕಾಗಿಯೇ ಕೃತಕಬುದ್ದಿಮತ್ತೆಯನ್ನು ಈ ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿದೆ. ಎಡ್ಜ್ ಟು ಎಡ್ಜ್ ವಿನ್ಯಾಸದ ಫುಲ್‌ಸ್ಕ್ರಿನ್ ಡಿಸ್‌ಪ್ಲೇಯನ್ನು ಒಪ್ಪೋ F7 ಸ್ಮಾರ್ಟ್‌ಫೋನ್ ನಲ್ಲಿ ಕಾಣಬಹುದಾಗಿದೆ.

4GB RAM ಮತ್ತು 64GB ಇಂಟರ್ನಲ್ ಮೆಮೊರಿ ಇರುವ ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೋ F7 ಸ್ಮಾರ್ಟ್‌ಫೋನ್ ರೂ.21,990ಕ್ಕೆ ಲಭ್ಯವಿದ್ದು, ಇದೇ ಮಾದರಿಯಲ್ಲಿ 6GB RAM ಮತ್ತು 128GB ಇಂಟರ್ನಲ್‌ ಮೆಮೊರಿಯ ಸ್ಮಾರ್ಟ್‌ ಫೋನ್ ರೂ.26,990ಕ್ಕೆ ಮಾರಾಟವಾಗಲಿದೆ. ಏಪ್ರಿಲ್ 9 ರಿಂದ ಈ ಸ್ಮಾರ್ಟ್‌ಫೋನ್‌ಗಳು ಆಫ್‌ಲೈನ್ ಮತ್ತು ಆನ್‌ಲೈನ್‌ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಇದಲ್ಲದೇ ಏಪ್ರಿಲ್ 2 ರಂದು ಫ್ಲಾಷ್ ಸೇಲ್‌ ಸಹ ನಡೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಬೈಲ್ ಪರಿಚಯಿಸಿದ ಒಪ್ಪೋ ಬ್ರಾಂಡ್ ಡೈರೆಟ್ಟರ್ ವಿಲ್ ಯಂಗ್:

ಮೊಬೈಲ್ ಪರಿಚಯಿಸಿದ ಒಪ್ಪೋ ಬ್ರಾಂಡ್ ಡೈರೆಟ್ಟರ್ ವಿಲ್ ಯಂಗ್:

ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಪ್ಪೋ ಭಾರತದ ಬ್ರಾಂಡ್ ಡೈರೆಟ್ಟರ್ ವಿಲ್ ಯಂಗ್ ಒಪ್ಪೋ F7 ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಿದರು. ಇದಲ್ಲದೇ ಒಪ್ಪೋ, ಟೆಕ್‌ ದೈತ್ಯ ಗೂಗಲ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿರುವ ಬಗ್ಗೆ ಮಾಹಿತಿ ನೀಡಿದಲ್ಲದೇ, ಮುಂದಿನ ದಿನದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಯ ಬಗ್ಗೆಯೂ ಮಾತನಾಡಿದರು.

ಮೊಬೈಲ್ ಬಗ್ಗೆ ಮಾಹಿತಿ ನೀಡಿದ ಒಪ್ಪೋ ಭಾರತದ ಪ್ರಾಡೆಕ್ಟ್ ಮ್ಯಾನೆಜರ್ ರಿಶಬ್ ಶ್ರೀವಾಸ್ತವ್:

ಮೊಬೈಲ್ ಬಗ್ಗೆ ಮಾಹಿತಿ ನೀಡಿದ ಒಪ್ಪೋ ಭಾರತದ ಪ್ರಾಡೆಕ್ಟ್ ಮ್ಯಾನೆಜರ್ ರಿಶಬ್ ಶ್ರೀವಾಸ್ತವ್:

ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೋ F7 ಸ್ಮಾರ್ಟ್‌ಫೋನ್ ಬಗ್ಗೆ ಮಾತನಾಡಿದ ಶ್ರೀವಾಸ್ತವ್, ಈ ಸ್ಮಾರ್ಟ್‌ಫೋನಿನಲ್ಲಿ 25MP ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಇದಕ್ಕಾಗಿ ಸೋನಿ IMX 576 ಸೆನ್ಸರ್ ಅನ್ನು ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ. ಇದು HDR ಫೋಟೋಗಳನ್ನು ಕ್ಲಿಕಿಸಲು ಮತ್ತು ಉತ್ತಮವ ವಿಡಿಯೋಗಳನ್ನು ಮಾಡಲು ಸಹಾಯಕಾರಿಯಾಗಿದೆ ಎಂದು ತಿಳಿಸಿದರು.

ಬ್ಯೂಟಿ ಮೋಡ್:

ಬ್ಯೂಟಿ ಮೋಡ್:

ಒಪ್ಪೋ ಸ್ಮಾರ್ಟ್‌ಫೋನ್‌ ಈ ಹಿಂದಿನಿಂದಲೂ ಸೆಲ್ಫಿಗೆ ಹೆಚ್ಚಿನ ಪ್ರಮುಖ್ಯತೆಯನ್ನು ನೀಡುತ್ತಿದ್ದು, ಇದೇ ಮಾದರಿಯಲ್ಲಿ ಸೆಲ್ಪಿ ಎಕ್ಸ್‌ಪರ್ಟ್ ಒಪ್ಪೋ F7 ಸ್ಮಾರ್ಟ್‌ಫೋನಿನಲ್ಲಿಯೂ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಬ್ಯೂಟಿ 2.0 ಟೆಕ್ನಾಲಜಿಯನ್ನು ಬಳಸಿಕೊಳ್ಳಲಾಗಿದ್ದು, ಇದು 296 ಫೇಷಿಯಲ್ ಸ್ಪಾಟ್‌ಗಳನ್ನು ಗುರುತಿಸಿ ಉತ್ತಮವಾಗಿಸಲಿದೆ. ಇದಲ್ಲದೇ ಕೃತಕ ಬುದ್ದಿಮತ್ತೆಯೂ 16 ಸಿನ್‌ಗಳನ್ನು ಗುರುತಿಸಲಿದ್ದು, ಅದರಂತೆ ಫೋಟೋಗನ್ನು ಕ್ಲಿಕ್ ಮಾಡುವ ಸಾಧ್ಯತೆಯನ್ನು ಹೊಂದಿದೆ.

ಫುಲ್‌ ಸ್ಕ್ರಿನ್ ಡಿಸ್‌ಪ್ಲೇ:

ಫುಲ್‌ ಸ್ಕ್ರಿನ್ ಡಿಸ್‌ಪ್ಲೇ:

ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೋ F7 ಸ್ಮಾರ್ಟ್‌ಫೋನ್ ನಲ್ಲಿ ನೋಚ್ ವಿನ್ಯಾಸವನ್ನು ಕಾಣಬಹದಾಗಿದ್ದು, ಎಡ್ಜ್ ಟು ಎಡ್ಜ್ ಡಿಸ್‌ಪ್ಲೇ 6.23 ಇಂಚುಗಳಷ್ಟಿದ್ದು, 19:9 ಅನುಪಾತದಿಂದ ಕೂಡಿದೆ. ಅಲ್ಲದೇ ಸೂಪರ್ ಫುಲ್ ವ್ಯೂ ಮತ್ತು FHD+ ಗುಣಮಟ್ಟವನ್ನು ಹೊಂದಿದೆ. ಇದರಲ್ಲಿ ಗೇಮ್ ಆಡುವ ಅನುಭವ ಮತ್ತು ವಿಡಿಯೋ ನೋಡುವ ಅನುಭವನ್ನು ಬಣ್ಣಸಲು ಸಾಧ್ಯವಿಲ್ಲ ಎನ್ನಲಾಗಿದೆ.

ಉತ್ತಮ ಹಾರ್ಡ್‌ವೇರ್:

ಉತ್ತಮ ಹಾರ್ಡ್‌ವೇರ್:

ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೋ F7 ಸ್ಮಾರ್ಟ್‌ಫೋನ್ ನಲ್ಲಿ 64 ಬಿಟ್ ಆಕ್ಟಾ ಕೋರ್ ಪ್ರೊಸೆಸರ್ ಅನ್ನು ಕಾಣಬಹುದಾಗಿದ್ದು, ಎರಡು ಸಿಮ್ ಸ್ಲಾಟ್ ನೊಂದಿಗೆ ಮೆಮೊರಿ ಕಾರ್ಡ್ ಅನ್ನು ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದಲ್ಲದೇ 3400mAh ಬ್ಯಾಟರಿಯನ್ನು ಇದರಲ್ಲಿ ಕಾಣಬಹುದಾಗಿದೆ. ಆಂಡ್ರಾಯ್ಡ್ 8.1 ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನಿನಲ್ಲಿ ಕಲರ್ OS 5.0ವನ್ನು ನೀಡಲಾಗಿದೆ. ಇದು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಮತ್ತು ಫೇಷಿಯಲ್ ರೆಕಗ್ನೇಷನ್ ಆಯ್ಕೆಗಳನ್ನು ಹೊಂದಿದೆ ಎನ್ನಲಾಗಿದೆ.

ಕ್ರಿ ಕೆಟ್ ತಾರೆಗಳು

ಕ್ರಿ ಕೆಟ್ ತಾರೆಗಳು

ಇದಲ್ಲದೇ ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೋ F7 ಸ್ಮಾರ್ಟ್‌ಫೋನ್ ಲಾಂಚ್ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡದ ಸದಸ್ಯರಾದ ರೋಹಿತ್ ಶರ್ಮ, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಆಶ್ವಿನ್ ಸಹ ವೇದಿಕೆಯಲ್ಲಿ ಕಾಣಿಸಿಕೊಂಡರು.

ಬೆಲೆ:

ಬೆಲೆ:

ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೋ F7 ಸ್ಮಾರ್ಟ್‌ಫೋನ್ 4GB RAM ಮತ್ತು 64GB ಇಂಟರ್ನಲ್ ಮೆಮೊರಿ ಆವೃತ್ತಿ ರೂ.21,990ಕ್ಕೆ ಲಭ್ಯವಿದ್ದು, 6GB RAM ಮತ್ತು 128GB ಇಂಟರ್ನಲ್‌ ಮೆಮೊರಿಯ ಆವೃತ್ತಿ ರೂ.26,990ಕ್ಕೆ ಮಾರಾಟವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
OPPO F7 made its grand entry in Indian market with Star Indian Cricketers. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot