Subscribe to Gizbot

25MP ಸೆಲ್ಫಿ ಕ್ಯಾಮೆರಾ ಹೊಂದಿರುವ "ಒಪ್ಪೊ ಎಫ್ 7" ಕ್ಯಾಮೆರಾ ತಂತ್ರಜ್ಞಾನ ಹೇಗಿದೆ?

Written By:

ಭಾರತದ ಮೊಬೈಲ್ ಮಾರುಕಟ್ಟೆಗೆ ಮತ್ತೊಂದು ಅತ್ಯದ್ಬುತ ಸೆಲ್ಫಿ ಎಕ್ಸ್‌ಪರ್ಟ್ ಸ್ಮಾರ್ಟ್‌ಫೋನ್ ಒಂದು ಬಿಡುಗಡೆಗೆ ಸಜ್ಜಾಗಿ ನಿಂತಿದೆ.! ಇದೇ ಮಾರ್ಚ್ 26ರಂದು ಒಪ್ಪೊ ಕಂಪೆನಿಯ ಭಾರೀ ನಿರೀಕ್ಷಿತ ಸ್ಮಾರ್ಟ್‌ಫೋನ್ ಒಪ್ಪೊ ಎಫ್ 7 ಬಿಡುಗಡೆಯಾಗಲಿದ್ದು, ಸ್ಮಾರ್ಟ್‌ಫೋನಿನಲ್ಲಿ ತಂದಿರುವ ಕ್ಯಾಮೆರಾ ತಂತ್ರಜ್ಞಾನದಿಂದ ಭಾರೀ ಹೆಸರುಗಳಿಸುತ್ತಿದೆ.!!

ಒಪ್ಪೊ ಎಫ್ 3, ಒಪ್ಪೊ ಎಫ್ 5 ಹಾಗೂ ಒಪ್ಪೊ ಎ83 ಸೆಲ್ಫಿ ಎಕ್ಸ್‌ಪರ್ಟ್‌ ಸ್ಮಾರ್ಟ್‌ಫೋನ್‌ಗಳಿಂದ ಭಾರೀ ಯಶಸ್ಸನ್ನು ಗಳಿಸಿರುವ ಒಪ್ಪೊ ಕಂಪೆನಿ ಇದೀಗ ಕೃತಕ ಬುದ್ದಿಮತ್ತೆ ಆಧಾರಿತ ಅತ್ಯದ್ಬುತ ಕ್ಯಾಮೆರಾ ತಂತ್ರಜ್ಞಾನ ಹೊಂದಿರುವ ಫೋನ್ ಪರಿಚಯಿಸುತ್ತಿದೆ. ಹಾಗಾಗಿಯೇ ಮೊಬೈಲ್ ಮಾರುಕಟ್ಟೆಯಲ್ಲಿ ಒಪ್ಪೊ ಎಫ್ 7 ಬಿಡುಗಡೆ ಸುದ್ದಿ ವೃರೆಲ್ ಆಗುತ್ತಿದೆ.!!

25MP ಸೆಲ್ಫಿ ಕ್ಯಾಮೆರಾ ಹೊಂದಿರುವ

ಇದೇ ಮೊದಲ ಬಾರಿಗೆ 25MP ಸೆಲ್ಫಿ ಕ್ಯಾಮೆರಾ ಹೊಂದಿರುವ ಒಪ್ಪೊ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಾಲಿಡುತ್ತಿದ್ದು, ಹಾಗಾದರೆ, ಒಪ್ಪೊ ಎಫ್ 7 ಸ್ಮಾರ್ಟ್‌ಫೋನ್ ಕ್ಯಾಮೆರಾ ಹೇಗಿದೆ? ಸ್ಮಾರ್ಟ್‌ಫೋನಿನಲ್ಲಿರುವ ಕ್ಯಾಮೆರಾ ತಂತ್ರಜ್ಞಾನಗಳು ಯಾವುವು? ಸ್ಮಾರ್ಟ್‌ಫೋನ್ ಖರೀದಿಸಲು ಏನೇಲ್ಲಾ ಕಾರಣಗಳಿವೆ ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಪ್ಪೊ ಎಫ್ 7ನಲ್ಲಿ 25MP ಸೆಲ್ಫಿ ಕ್ಯಾಮೆರಾ!!

ಒಪ್ಪೊ ಎಫ್ 7ನಲ್ಲಿ 25MP ಸೆಲ್ಫಿ ಕ್ಯಾಮೆರಾ!!

ಒಪ್ಪೊ ಎಫ್ 7 ಸ್ಮಾರ್ಟ್‌ಫೋನಿನಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಕೃತಕ ಬುದ್ದಿಮತ್ತೆ ಆಧಾರಿತ 25MP ಸೆಲ್ಫಿ ಕ್ಯಾಮೆರಾ.! ರಿಯಲ್ ಟೈಮ್ ಹೈ ಡೈನಾಮಿಕ್ ರೇಂಜ್ ತಂತ್ರಜ್ಞಾನವನ್ನು ಹೊತ್ತುಬರುತ್ತಿರುವ ಕೃತಕ ಬುದ್ದಿಮತ್ತೆ ಆಧಾರಿತ 25MP ಸೆಲ್ಫಿ ಕ್ಯಾಮೆರಾ ಅಸಮವಾದ ಬೆಳಕಿನಲ್ಲಿಯೂ ಸಹ ನಿಖರವಾದ ಬಣ್ಣಗಳೊಂದಿಗೆ ಸೆಲ್ಫಿ ಚಿತ್ರಗಳನ್ನು ಚಿತ್ರಿಸಲಿದೆ.!!

ಸುಧಾರಿತ AI ಬ್ಯೂಟಿ ಮೋಡ್ 2.0

ಸುಧಾರಿತ AI ಬ್ಯೂಟಿ ಮೋಡ್ 2.0

ಒಪ್ಪೊ ಎಫ್ 5 ಬಿಡುಗಡೆಯಾದಾಗ ನಿಬ್ಬೆರಗಾಗಿದ್ದ AI ಬ್ಯೂಟಿ ಮೋಡ್ ಆಯ್ಕೆ ಈಗ ಒಪ್ಪೊ ಎಫ್ 7 ಸ್ಮಾರ್ಟ್‌ಫೋನಿನಲ್ಲಿ ಮತ್ತಷ್ಟು ಅಭಿವೃದ್ದಿಯಾಗಿದೆ. ಚರ್ಮದ ಟೋನ್‌ಗಳು ಮತ್ತು ಬಣ್ಣ, ವಯಸ್ಸು, ಚಿತ್ರದ ನಡುವಿನ ವ್ಯತ್ಯಾಸಗಳನ್ನು ಸ್ವಯಂ ಗುರುತಿಸುವ ಎಐ ಬ್ಯೂಟಿ ಮೋಡ್ ಸೂಕ್ತವಾದ ಸೌಂದರ್ಯವರ್ಧಕ ಚಿತ್ರಗಳನ್ನು ಚಿತ್ರಿಸಲಿದೆ.!!

ವರ್ಧಿತ ರಿಯಾಲಿಟಿ ಸ್ಟಿಕ್ಕರ್ಸ್!!

ವರ್ಧಿತ ರಿಯಾಲಿಟಿ ಸ್ಟಿಕ್ಕರ್ಸ್!!

ವರ್ಧಿತ ರಿಯಾಲಿಟಿ ಸ್ಟಿಕರ್‌ಗಳನ್ನು ಮತ್ತು ಕವರ್ ಶಾಟ್ ಫೀಚರ್ಸ್ ನಿಮ್ಮನ್ನು ಕುತೋಹಲಗೊಳಿಸುತ್ತವೆ. ಒಪ್ಪೊ ಎಫ್ 7 ಸ್ಮಾರ್ಟ್‌ಫೋನ್ AI ತಂತ್ರಜ್ಞಾನಕ್ಕೆ ಹೆಚ್ಚುವರಿಯಾಗಿವರ್ಧಿತ ರಿಯಾಲಿಟಿ ಸ್ಟಿಕರ್‌ಗಳನ್ನು ರಚಿಸುವ ಸಾಮರ್ಥ್ಯವನ್ನು ನೀವು ತಿಳಿಯಬೇಕು. ಕ್ಯಾಮರಾದಲ್ಲಿ ಒಮ್ಮೆ ಟ್ಯಾಪ್ ಮಾಡುವ ಮೂಲಕ ಸಂವೇದಾತ್ಮಕ ಅನಿಮೇಟೆಡ್ ಚಿತ್ರಗಳನ್ನು ಸೇರಿಸಬಹುದು.!!

AI ಫೋಟೋ ಆಲ್ಬಮ್ ನಿರ್ವಹಣೆ!!

AI ಫೋಟೋ ಆಲ್ಬಮ್ ನಿರ್ವಹಣೆ!!

ಒಪ್ಪೊ ಎಫ್ 7 ಸ್ಮಾರ್ಟ್‌ಫೋನ್ AI ತಂತ್ರಜ್ಞಾನದ ಕ್ಯಾಮೆರಾ ಫೀಚರ್ಸ್‌ಗಳನ್ನು ಮಾತ್ರವಲ್ಲದೇ, AI ತಂತ್ರಜ್ಞಾನ ಆಧಾರಿತ AI ಫೋಟೋ ಆಲ್ಬಮ್ ನಿರ್ವಹಣೆಯನ್ನು ಸಹ ನೀಡಲಿದೆ. ನಿಮ್ಮ ಸ್ಮಾರ್ಟ್‌ಫೋನ್ ಮೆಮೊರಿಯನ್ನು ಉತ್ತಮ ಫೋಟೋ ಆಲ್ಬಮ್‌ನೊಂದಿಗೆ ನಿರ್ವಹಣೆ ಮಾಡಬಹುದಾಗಿದ್ದು, ಸಂಕೀರ್ಣವಾದ AI ಕ್ರಮಾವಳಿಗಳನ್ನು ಸ್ಮಾರ್ಟ್ ಫೋಟೋ ಆಲ್ಬಮ್ ಬಳಸುತ್ತದೆ.

How to Check Your Voter ID Card Status (KANNADA)
ಅತ್ಯದ್ಬುತವಾಗಿದೆ ವಿನ್ಯಾಸ!!

ಅತ್ಯದ್ಬುತವಾಗಿದೆ ವಿನ್ಯಾಸ!!

ಇನ್ನೇನು ಎರಡು ದಿನಗಳಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಒಪ್ಪೊ ಎಫ್ 7 ಸ್ಮಾರ್ಟ್‌ಫೋನ್ ವಿನ್ಯಾಸ ಅತ್ಯದ್ಬುತವಾಗಿದೆ ಎಂದು ಹೇಳಬಹುದು.! ಅತ್ಯುತ್ತಮ ದರ್ಜೆಯ ಗುಣಮಟ್ಟದ ಬಾಡಿಯನ್ನು ಹೊಂದಿರುವ ಸ್ಮಾರ್ಟ್‌ಫೋನ್ ಅಂಚಿನಿಂದ ಅಂಚಿನ ತೆರವನ್ನು ಹೊಂದಿದ್ದು, ಉತ್ತಮ ವೀಡಿಯೋ ಪ್ಲೇಬ್ಯಾಕ್ ಮತ್ತು ಗೇಮಿಂಗ್ ಅನುಭವ ನೀಡಲಿದೆ.!!

ಓದಿರಿ:ಶಾಶ್ವತವಾಗಿ ಡೇಟಾ ಸೇಫ್ ಆಗಿರಲು ನಿಮ್ಮ ಲ್ಯಾಪ್‌ಟಾಪ್ ಲಾಕ್ ಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
OPPO F7 will sport a 25MP Artificial Intelligence equipped Front-facing Camera for brighter, clearer and more vibrant selfies.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot