Subscribe to Gizbot

ಮಾರುಕಟ್ಟೆಯಲ್ಲಿ ಧೂಳ್ ಎಬ್ಬಿಸುವ ಒಪ್ಪೋ F7 ಸ್ಮಾರ್ಟ್‌ಫೋನ್..!

Written By:

ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕ ಕಂಪನಿ ಒಪ್ಪೋ ಭಾರತೀಯ ಮಾರುಕಟ್ಟೆಗೆ ಮತ್ತೊಂದು ಉತ್ತಮ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಮುಂದಾಗಿದೆ. 19:9 ಅನುಪಾತ ಡಿಸ್‌ಪ್ಲೇಯನ್ನು ಹೊಂದಿರುವ ಒಪ್ಪೋ F7 ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಶೀಘ್ರವೇ ಮಾರುಕಟ್ಟೆಗೆ ಪರಿಚಯ ಮಾಡಲಿದ್ದು, ಬಳಕೆದಾರರಿಗೆ ಭಿನ್ನ ಅನುಭವನ್ನು ನೀಡಲು ಮುಂದಾಗಿದೆ. ಇದು ಸ್ಮಾರ್ಟ್‌ಫೋನ್ ತಂತ್ರಜ್ಞಾನದಲ್ಲಿ ಹೊಸ ರೆವಲ್ಯೂಷನ್ ತರಲಿದೆ.

ಮಾರುಕಟ್ಟೆಯಲ್ಲಿ ಧೂಳ್ ಎಬ್ಬಿಸುವ ಒಪ್ಪೋ F7 ಸ್ಮಾರ್ಟ್‌ಫೋನ್..!

ಒಪ್ಪೋ F7 ಸ್ಮಾರ್ಟ್‌ಫೋನ್ ಸೆಲ್ಫಿ ಕೇಂದ್ರಿತ ಫೋನ್‌ ಆಗಿದ್ದು, ದೊಡ್ಡ ಡಿಸ್‌ಪ್ಲೇಯನ್ನು ಹೊಂದಿದೆ. 19:9 ಅನುಪಾತ 6.2 ಇಂಚಿನ ಡಿಸ್‌ಪ್ಲೇಯನ್ನು ಈ ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದ್ದು, FHD+ ಗುಣಮಟ್ಟದ ಡಿಸ್‌ಪ್ಲೇ ಇದಾಗಿದೆ. ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ 18:9 ಅನುಪಾತಕ್ಕಿಂತಲೂ ಉತ್ತಮವಾದ ಡಿಸ್‌ಪ್ಲೇ ಇದಾಗಲಿದೆ. ಜೊತೆಗೆ ಫೋಟೋಗ್ರಫಿಗೆ ಹೆಚ್ಚಿನ ಆದ್ಯತೆಯನ್ನು ಇದರಲ್ಲಿ ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಡಿಯೋ ನೋಡಲು:

ವಿಡಿಯೋ ನೋಡಲು:

19:9 ಅನುಪಾತದ 6.2 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರುವ ಒಪ್ಪೋ F7 ಸ್ಮಾರ್ಟ್‌ಫೋನ್ನಲ್ಲಿ ವಿಡಿಯೋ ನೋಡುವುದು ಮತ್ತು ಗೇಮ್ ಆಡುವುದು ಉತ್ತಮವಾಗಿರಲಿದೆ. ಅಲ್ಲದೇ ಎಡ್ಜ್ ಟು ಎಡ್ಜ್ ಫುಲ್‌ಸ್ಕ್ರಿನ್ ಡಿಸ್‌ಪ್ಲೇಯ ವಿನ್ಯಾಸವಿದ್ದು, ಬಳಕೆದಾರರಿಗೆ ಉತ್ತಮವ ಅನುಭವನ್ನು ನೀಡಲಿದ.ಎ ಅಲ್ಲದೇ ಡಿಸ್‌ಪ್ಲೇ ಕ್ವಾಲಿಟಿ ಉತ್ತಮವಾಗಿರುವ ಕಾರಣ, ವಿಡಿಯೋ ಸಹ ಉತ್ತಮವಾಗಿ ಮೂಡಿಬರಲಿದೆ.

ಉತ್ತಮ ವಿನ್ಯಾಸ:

ಉತ್ತಮ ವಿನ್ಯಾಸ:

ಬ್ರಜಿಲ್ ಲೈಸ್ ಡಿಸ್‌ಪ್ಲೇ ವಿನ್ಯಾಸವನ್ನು ಒಪ್ಪೋ F7 ಸ್ಮಾರ್ಟ್‌ಫೋನ್ ನಲ್ಲಿ ಕಾಣಬಹುದಾಗಿದ್ದು, ಮುಂಭಾಗದಲ್ಲಿ ಐಫೋನ್ X ಮಾದರಿಯಲ್ಲಿ ಕಾಣಿಸುತ್ತಿದೆ. 6.2 ಇಂಚಿನ ಡಿಸ್‌ಪ್ಲೇ ಇರುವುದರಿಂದಾಗಿ ಫೋನ್ ಕೊಂಚ ದೊಡ್ಡದಾಗಿ ಇರಲಿದ್ದು, ಮಾರುಕಟ್ಟೆಯಲ್ಲಿ ಈ ಮಾದರಿಯ ಫೋನ್‌ಗಳು ಕೆಲವೇ ಕೆಲವು ಇದೆ ಎನ್ನಲಾಗಿದ್ದು, ಇವುಗಳಲ್ಲಿ ಒಪ್ಪೋ F7 ಸ್ಮಾರ್ಟ್‌ಫೋನ್ ವಿಭಿನ್ನವಾಗಿ ಕಾಣಿಸಿಕೊಳ್ಳಲಿದೆ.

ಸ್ಮಾರ್ಟ್‌ ಸೆಲ್ಫಿ

ಸ್ಮಾರ್ಟ್‌ ಸೆಲ್ಫಿ

ಒಪ್ಪೋ F7 ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ ಕೃತಕ ಬುದ್ದಿಮತ್ತೆಯೊಂದಿಗೆ ಕಾರ್ಯನಿರ್ವಹಿಸುವ 25MP ಕ್ಯಾಮೆರಾವನ್ನು ಅವಳಡಿಸಲಾಗಿದ್ದು. ಅಲ್ಲದೇ ಮೊದಲ ಬಾರಿಗೆ ಸೆಲ್ಫಿ ಕ್ಯಾಮೆರಾದಲ್ಲಿ ಹೈ ಡೈನಾಮಿಕ್ ರೆಂಜ್(HDR) ಆಯ್ಕೆಯನ್ನು ಈ ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ. ಜೊತೆಗೆ ಬ್ಯೂಟಿ ಮೋಡ್ ಅನ್ನು ಸಹ ಉತ್ತಮಪಡಿಸಲಾಗಿದೆ. ಇದರಲ್ಲಿ ಉತ್ತಮವ ಚಿತ್ರಗಳನ್ನು ಸೆರೆಹಿಡಿಯಬಹುದಾಗಿದೆ.

Here's how the Face ID of the newly launched Oppo A83 works (KANNADA)
ಉತ್ತಮ ಚಿತ್ರಗಳು:

ಉತ್ತಮ ಚಿತ್ರಗಳು:

ಉತ್ತಮವಾದ ಬ್ಯೂಟಿ ಆಯ್ಕೆಗಳನ್ನು ಹೊಂದಿರುವ ಮೋಡ್ ಅನ್ನು ಸೆಲ್ಫಿ ಕ್ಯಾಮೆರದೊಂದಿಗೆ ನೀಡಿದ್ದು, ಒಪ್ಪೋ F7 ಸ್ಮಾರ್ಟ್‌ಫೋನ್ ಉತ್ತಮ ಸೆಲ್ಫಿಗಳನ್ನು ಸೆರೆಹಿಡಿಯಲಿದೆ. ಬೆಸ್ಟ್ ಸೆಲ್ಫಿ ಎಕ್ಸ್‌ಫರ್ಟ್‌ ಕ್ಯಾಮೆರಾ ಎನ್ನುವ ಖ್ಯಾತಿಯನ್ನು ಪಡೆದುಕೊಳ್ಳಲಿದೆ. ಕೃತಕ ಬುದ್ದಿ ಮತ್ತೆ ಹಾಗೂ ಯಾಂತ್ರಿಕ ಕಲಿಕೆಯ ಸಹಾಯದಿಂದ ಉತ್ತಮ ಸೆಲ್ಪೀಗಳನ್ನು ಕ್ಲಿಕಿಸುವ ಒಪ್ಪೋ F7 ಮಾರುಕಟ್ಟೆಯಲ್ಲಿ ಹೊಸ ಭಾಷ್ಯವನ್ನು ಬರೆಯಲಿದೆ. ಮಾರ್ಚ್ 26ಕ್ಕೆ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಈ ಸ್ಮಾರ್ಟ್‌ಫೋನ್ ಕುರಿತಾದ ಹೆಚ್ಚಿನ ಮಾಹಿತಿಯನ್ನು ಗಿಜ್ ಬಾಟ್‌ನಲ್ಲಿ ನಿರೀಕ್ಷಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
OPPO F7 will sport a 6.2-inch Full HD+ screen with a stunning edge-to-edge design. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot