25 MP ಸೆಲ್ಫಿ ಕ್ಯಾಮೆರಾ ಹೊಂದಿರುವ ಒಪ್ಪೋ F7 ಸ್ಮಾರ್ಟ್‌ಫೋನ್ ಲಾಂಚ್..!
ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಕುತೂಹಲವನ್ನು ಮೂಡಿಸಿದ್ದ ಒಪ್ಪೋ F7 ಸ್ಮಾರ್ಟ್‌ಫೋನ್ ಲಾಂಚ್ ಆಗಿದ್ದು, ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಠಿಸಿದೆ. ಐಪೋನ್ X ಮಾದರಿಯಲ್ಲಿ ಕಾಣಿಸಿಕೊಂಡಿರುವ ಈ ಸ್ಮಾರ್ಟ್‌ಫೋನ್ 6.33 ಇಂಚಿನ ಡಿಸ್‌ಪ್ಲೇ, 25MP ಕ್ಯಾಮೆರಾ ಸೇರಿದಂತೆ ಟಾಪ್ ಎಂಡ್ ಫೀಚರ್ ಗಳನ್ನು ಹೊಂದಿದೆ ಎನ್ನಲಾಗಿದ್ದು, ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವೋ V9. ಮೊಟೊ X4 ಮತ್ತು ಹಾನರ್8 ಪ್ರೋ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯಲಿದೆ.

ರೂ.21,990ರಿಂದ ಆರಂಭವಾಗುವ ಒಪ್ಪೋ F7 ಸ್ಮಾರ್ಟ್‌ಫೋನ್ ಏಪ್ರಿಲ್ 9 ರಿಂದ ಆಫ್‌ಲೈನ್ ಮತ್ತು ಆನ್‌ಲೈನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಇದಲ್ಲದೇ ಏಪ್ರಿಲ್ 2 ರಂದು ಫ್ಲಿಪ್‌ಕಾರ್ಟಿನಲ್ಲಿ ಫ್ಲಾಷ್ ಸೇಲ್ ನಡೆಲಿದ್ದು, ಕೇವಲ 10000 ಸ್ಮಾರ್ಟ್‌ಫೋನ್‌ಗಳು ಮಾತ್ರವೇ ದೊರೆಯಲಿದೆ. ಈ ಹಿನ್ನಲೆಯಲ್ಲಿ ಒಪ್ಪೋ F7 ಸ್ಮಾರ್ಟ್‌ಫೋನ್ ಕುರಿತ ಸಂಪೂರ್ಣ ಮಾಹಿತಿಯೂ ಈ ಮುಂದಿನಂತೆ ಇದೆ.

ಮಾರುಕಟ್ಟೆಯಲ್ಲಿಯೇ ದೊಡ್ಡ ಡಿಸ್‌ಪ್ಲೇ:
ಒಪ್ಪೋ F7 ಸ್ಮಾರ್ಟ್‌ಫೋನ್ ದೊಡ್ಡ ಡಿಸ್‌ಪ್ಲೇಯನ್ನು ಹೊಂದಿದೆ. 19:9 ಅನುಪಾತದ 6.23 ಇಂಚಿನ FHD+ ಗುಣಮಟ್ಟದ ಡಿಸ್‌ಪ್ಲೇ ಇದಾಗಿದೆ. ಮುಂಭಾಗದಲ್ಲಿ ಐಫೋನ್ X ಮಾದರಿಯಲ್ಲಿ ಕಾಣಿಸುತ್ತಿದೆ. ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಲಿದೆ. ಎಡ್ಜ್ ಟು ಎಡ್ಜ್ ಫುಲ್‌ಸ್ಕ್ರಿನ್ ಡಿಸ್‌ಪ್ಲೇಯ ವಿನ್ಯಾಸವಿರುವ ಸ್ಮಾರ್ಟ್‌ಫೋನಿನಲ್ಲಿ ವಿಡಿಯೋ ನೋಡುವುದು ಮತ್ತು ಗೇಮ್ ಆಡುವುದು ಉತ್ತಮವಾಗಿರಲಿದೆ.

25 MP ಸೆಲ್ಪಿ ಕ್ಯಾಮೆರಾ:
ಒಪ್ಪೋ F7 ಸ್ಮಾರ್ಟ್‌ಫೋನ್ ನಲ್ಲಿ ಸೆಲ್ಪೀಗಾಗಿಯೇ ಕೃತಕಬುದ್ದಿಮತ್ತೆ ಅಳವಡಿಸಲಾಗಿದ್ದು, 25MP ಕ್ಯಾಮೆರಾವನ್ನು ಮುಂಭಾಗದಲ್ಲಿ ಕಾಣಬಹುದಾಗಿದೆ. ಉತ್ತಮ ಫೋಟೋ ತೆಗೆಯುವ ಸಲುವಾಗಿ ಬ್ಯೂಟಿಫೈ 2.0ವನ್ನು ನೀಡಲಾಗಿದೆ. ಇದಲ್ಲದೇ ಈ ಕ್ಯಾಮೆರಾವೂ ಫೇಸ್‌ಆನ್‌ಲಾಕ್ ಮಾಡಲು ಸಹ ಬಳಕೆಯಾಗಲಿದ್ದು, ಫೆಷಿಯಲ್ ರೆಕಗ್ನೇಷನ್ ಆಯ್ಕೆಯನ್ನು ಒಳಗೊಂಡಿದೆ. ಹಿಂಭಾಗದಲ್ಲಿ 16MP ಕ್ಯಾಮೆರಾವನ್ನು ನೀಡಲಾಗಿದೆ.

ಪ್ರೋಸೆಸರ್:
ಒಪ್ಪೋ F7 ಸ್ಮಾರ್ಟ್‌ಫೋನ್ ನಲ್ಲಿ ಮೀಡಿಯಾ ಟೆಕ್ ಹೆಲಿಯೋ P60 ಆಕ್ಟಾಕೋರ್ ಪ್ರೋಸೆಸರ್ ಅನ್ನು ನೀಡಲಾಗಿದ್ದು, ಇದರೊಂದಿಗೆ 4GB/6GB RAM ಕಾಣಿಸಿಕೊಳ್ಳಲಿದೆ. ಅಲ್ಲದೇ ಇದರೊಂದಿಗೆ 64GB ಮತ್ತು 128GB ಇಂಟರ್ನಲ್ ಮೆಮೊರಿಯನ್ನು ನೀಡಲಾಗುತ್ತಿದ್ದು, ಬಳಕೆದಾರರಿಗೆ ಎರಡು ಆವೃತ್ತಿಯಲ್ಲಿ ದೊರೆಯಲಿದೆ. ಬೆಲೆಗಳು ಕ್ರಮವಾಗಿ ರೂ.21,990 ಮತ್ತು ರೂ,26,990 ಆಗಿದೆ.


ಬ್ಯಾಟರಿ:
ಒಪ್ಪೋ F7 ಸ್ಮಾರ್ಟ್‌ಫೋನ್ ನಲ್ಲಿ 3400mAh ಬ್ಯಾಟರಿಯನ್ನು ಕಾಣಬಹುದಾಗಿದ್ದು, ಮೂರು ಬಣ್ಣಗಳಲ್ಲಿ ದೊರೆಯಲಿದೆ. ಇದರೊಂದಿಗೆ ಜಿಯೋ ಕ್ಯಾಷ್ ಬ್ಯಾಕ್ ಆಫರ್ ಅನ್ನು ಸಹ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.


Click it and Unblock the Notifications