ಒಪ್ಪೋ ಎಫ್7 ಸ್ಮಾರ್ಟ್‌ಪೋನ್ ಬೆಲೆಯಲ್ಲಿ 3,000 ರೂ. ಕಡಿತ..!
ಪೂರೈಕೆ ಕಡಿಮೆ ಇದ್ದು ಬೇಡಿಕೆ ಹೆಚ್ಚಾದಾಗ ಬೆಲೆ ಅಧಿಕವಾಗುತ್ತೆ. ಪೂರೈಕೆ ಅಧಿಕವಾಗಿದ್ದು ಬೇಡಿಕೆಯೂ ಅಧಿಕವಾಗಿದ್ದಲ್ಲಿ ಬೆಲೆ ಕಡಿಮೆ ಇರುತ್ತದೆ. ಪೂರೈಕೆ ಅಧಿಕವಾಗಿದ್ದು ಬೇಡಿಕೆ ಕಡಿಮೆ ಇದ್ದರೆ ಬೆಲೆ ಕಡಿಮೆ ಇರುತ್ತದೆ. ಪೂರೈಕೆ ಕಡಿಮೆ ಇದ್ದು, ಬೇಡಿಕೆಯೂ ಕಡಿಮೆ ಇದ್ದರೆ ಬೆಲೆ ಅಧಿಕವಾಗಿರುತ್ತದೆ.
ವಾಣಿಜ್ಯ ಮತ್ತು ವ್ಯಾಪಾರದ ಯಾವ ಅರ್ಥಶಾಸ್ತ್ರವೋ ಗೊತ್ತಿಲ್ಲ, ಒಟ್ಟಾರೆ ಭಾರತದಲ್ಲಿ ಮೊಬೈಲ್ ಫೋನ್ ಗಳ ಬೆಲೆ ಭಾರೀ ದೊಡ್ಡ ಮಟ್ಟದಲ್ಲಿ ಇಳಿಮುಖವಾಗುತ್ತಿದೆ. ಕಳೆದ ಕೆಲವೇ ದಿನಗಳ ಹಿಂದೆ ಹೆಚ್ಚಿನ ಬೆಲೆಗೆ ಬಿಡುಗಡೆಗೊಂಡ ಮೊಬೈಲ್ ಗಳ ಬೆಲೆಯಲ್ಲಿ ಇದೀಗ ಇಳಿಕೆಯನ್ನು ಗಮನಿಸಬಹುದಾಗಿದೆ. ಈಗಾಗಲೇ ಹಲವು ಮೊಬೈಲ್ ಗಳ ಬೆಲೆಯಲ್ಲಿ ಇಳಿಕೆಯಾಗಿರುವ ಮಾಹಿತಿಯನ್ನು ನಾವು ನಿಮಗೆ ತಿಳಿಸಿದ್ದೆವು. ಈಗ ಮತ್ತೊಂದು ಫೋನಿನ ಸರದಿ. ಅದುವೇ ಓಪೋ ಎಫ್7.

ಚೈನೀಸ್ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ ಓಪೋ ಇತ್ತೀಚೆಗೆ ಅಂದರೆ ವರ್ಷದ ಆರಂಭದ ಸಮಯದಲ್ಲಿ ಓಫೋ ಎಫ್7 ನ್ನು ಬಿಡುಗಡೆಗೊಳಿಸಿತ್ತು ಮತ್ತು ಅದರ ಭಾರತೀಯ ಮಾರುಕಟ್ಟೆಯ ಬೆಲೆ 22,990 ರುಪಾಯಿಗಳಾಗಿದ್ದವು. ಆದರೆ ಈಗ ಈ ಸ್ಮಾರ್ಟ್ ಫೋನಿನ ಬೆಲೆಯಲ್ಲಿ 3,000 ರುಪಾಯಿಯ ಕಡಿತವನ್ನು ಮಾಡಲಾಗಿದ್ದು, ಗ್ರಾಹಕರಿಗೆ ಕೇವಲ 19,990 ರುಪಾಯಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ಇನ್ನು ಫ್ಲಿಫ್ ಕಾರ್ಟ್ ನಲ್ಲಿ ಇತರೆ ಕೆಲವು ಆಫರ್ ಗಳು ಲಭ್ಯವಿದ್ದು, ಇದಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಕೊಂಡುಕೊಳ್ಳಬಹುದಾದ ಅವಕಾಶ ಗ್ರಾಹಕರದ್ದು.

ಫ್ಲಿಪ್ ಕಾರ್ಟ್ ಆಫರ್
ಫ್ಲಿಪ್ ಕಾರ್ಟ್ ನಲ್ಲಿ ಇಎಂಐ ಆಫರ್ ಇದ್ದು ತಿಂಗಳಿಗೆ 664 ರುಪಾಯಿ ಪಾವತಿ ಮಾಡಿ ಕೊಂಡುಕೊಳ್ಳಬಹುದು. ಇನ್ನು 12,200 ರುಪಾಯಿವರೆಗಿನ ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದೆ.ಜೊತೆಗೆ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಶೇಕಡಾ 5 ರಷ್ಟು ರಿಯಾಯಿತಿ ಲಭ್ಯವಾಗಲಿದೆ.ವೀಸಾ ಕಾರ್ಡ್ ಬಳಕೆದಾರರಿಗೂ ಕೂಡ ಮೊದಲ ಮೂರು ಆನ್ ಲೈನ್ ಟ್ರ್ಯಾಶ್ ಸ್ಯಾಕ್ಷನ್ ಮಾಡುತ್ತಿದ್ದರೆ ಶೇಕಡಾ 5 ರ ರಿಯಾಯಿತಿ ಬೆಲೆ ಲಭ್ಯವಾಗಲಿದೆ.

ಎರಡು ವೇರಿಯಂಟ್ ನಲ್ಲಿ ಲಭ್ಯ
ಓಪೋ ಎಫ್7 ಎರಡು ವೇರಿಯಂಟ್ ನಲ್ಲಿ ಲಭ್ಯವಾಗುತ್ತದೆ.ಒಂದು 4ಜಿಬಿ ಮೆಮೊರಿ ಜೊತೆಗೆ 64ಜಿಬಿ ಸ್ಟೋರೇಜ್ ಮತ್ತೊಂದು 6ಜಿಬಿ ಮೆಮೊರಿ ಜೊತೆಗೆ 128 ಜಿಬಿ ಸ್ಟೋರೇಜ್ ಅವಕಾಶವಿರಲಿದೆ.ಎರಡೂ ವೇರಿಯಂಟ್ ನ ಫೋನನ್ನು ಕ್ರಮವಾಗಿ 19,990 ಮತ್ತು 23,990 ರುಪಾಯಿಗೆ ಈಗ ಮಾರಾಟ ಮಾಡಲಾಗುತ್ತಿದ್ದು, ಎರಡೂ ಫೋನ್ ಗಳಿಗೂ 3,000 ರುಪಾಯಿಯ ರಿಯಾಯಿತಿ ಲಭ್ಯವಾಗುತ್ತದೆ. ಇನ್ನು ಈ ಹ್ಯಾಂಡ್ ಸೆಟ್ ಸೋಲಾರ್ ರೆಡ್ ಮತ್ತು ಮೂನ್ ಲೈಟ್ ಸಿಲ್ವರ್ ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗುತ್ತದೆ.

6.23 ಇಂಚ್ HD+ ಡಿಸ್‌ಪ್ಲೇ
ಓಪೋ ಎಫ್ 7 ನಲ್ಲಿ ಬೇಝಲ್ -ಲೆಸ್ 6.23-ಇಂಚಿನ ಫುಲ್ HD+ ಜೊತೆಗೆ 2280×1080 ಪಿಕ್ಸಲ್ ರೆಸಲ್ಯೂಷನ್ ಮತ್ತು 19:9 ಅನುಪಾತವು ಇರಲಿದೆ. ಗೋರಿಲ್ಲಾ ಗ್ಲಾಸ್ ನಿಂದ ಡಿಸ್ಪ್ಲೇಯನ್ನು ಪ್ರೊಟೆಕ್ಟ್ ಮಾಡಲಾಗಿದ್ದು, ಯಾವುದೇ ಸ್ಕ್ರಾಚ್ ಆಗುವ ಸಾಧ್ಯತೆ ಇಲ್ಲ. ಐಫೋನ್ ಎಕ್ಸ್ ನಂತಹ ನಾಚ್ ನ್ನು ಕೂಡ ಇದು ಹೊಂದಿದ್ದು, ಮುಂಭಾಗದ ಕ್ಯಾಮರಾ, ಪ್ರಾಕ್ಸಿಮಿಟಿ ಸೆನ್ಸರ್ ಮತ್ತು ಇಯರ್ ಪೀಸ್ ಗಳನ್ನು ಒಳಗೊಂಡಿರುತ್ತದೆ.

25MP ಸೆಲ್ಫೀ ಕ್ಯಾಮರಾ
ಓಪೋ ಎಫ್ 7 ಮೀಡಿಯಾ ಟೆಕ್ ಹೆಲಿಯೋ ಪಿ60 ಆಕ್ಟಾ-ಕೋರ್ ಪ್ರೊಸೆಸ್ರ್ ಮತ್ತು ಆಂಡ್ರಾಯ್ಡ್ 8.1 ಓರಿಯೋ ಆಪರೇಟಿಂಗ್ ಸಿಸ್ಟಮ್ ನ್ನು ಹೊಂದಿದ್ದು ಕಂಪೆನಿಯ ಸ್ವಂತ ColorOS 5.0 UIನ್ನು ಒಳಗೊಂಡಿದೆ.ಸ್ಮಾರ್ಟ್ ಫೋನ್ ನಲ್ಲಿ 25MP ಸೆಲ್ಫೀ ಕ್ಯಾಮರಾ ಜೊತೆಗೆ AI ಬ್ಯೂಟಿ ಟೆಕ್ನಾಲಜಿಯನ್ನು 2.0 ವನ್ನು ಹೊಂದಿದೆ.ಕಂಪೆನಿಯು ಹೇಳುವಂತೆ ಸುಮಾರು 296 ಫೇಶಿಯಲ್ ಫೀಚರ್ ಗಳನ್ನು ಇದು ಗುರುತಿಸುತ್ತದೆ ಹಾಗಾಗಿ ಅತ್ಯುತ್ತಮ ಸೆಲ್ಫೀಗೆ ಸಹಾಯ ಮಾಡುತ್ತದೆ.

3,400mAh ಬ್ಯಾಟರಿ
ಸ್ಮಾರ್ಟ್ ಫೋನ್ ನ ಹಿಂಭಾಗದಲ್ಲಿ 16ಎಂಪಿ ಕ್ಯಾಮರಾವಿದ್ದು ಎಲ್ಇಡಿ ಫ್ಲ್ಶ್ಯಾಶ್ ಹೊಂದಿದೆ ಜೊತೆಗೆ AI-ಬೇಸ್ಡ್ ಸೀನ್ ರೆಕಗ್ನಿಷನ್ ಮಾಡುವ ಸಾಮರ್ಥ್ಯವಿದೆ ಮತ್ತು ಪೋಟ್ರೈಟ್ ಮೋಡ್ ನಲ್ಲಿ ಫೋಟೋ ಕ್ಲಿಕ್ಕಿಸಬಹುದು.ಡಿವೈಸ್ 3,400mAh ಬ್ಯಾಟರಿ ಹೊಂದಿದ್ದು ಕನೆಕ್ಟಿವಿಟಿಯಲ್ಲಿ 4ಜಿ VoLTE, 3ಜಿ, ವೈ-ಫೈ, ಬ್ಲೂಟೂತ್ ಮತ್ತು ಜಿಪಿಎಸ್ ಆಯ್ಕೆಗಳನ್ನು ಹೊಂದಿದೆ.


Click it and Unblock the Notifications








