Home
ಮೊಬೈಲ್

ಇತಿಹಾಸವನ್ನು ಬದಲಾಯಿಸಲಿದೆ ಒಪ್ಪೋ F7: ಸೆಲ್ಫಿ ಕ್ಯಾಮೆರಾಕ್ಕಾಗಿಯೇ ನಿರ್ಮಾಣವಾದ ಸ್ಮಾರ್ಟ್‌ಫೋನ್ ಇದು.!

By Srinidhi

ಸ್ಮಾರ್ಟ್‌ಫೋನ್ ಬಳಕೆದಾರರ ನಾಡಿ ಮಿಡಿತವನ್ನು ಕಂಡುಕೊಂಡಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕ ಕಂಪನಿ ಒಪ್ಪೋ, ಸೆಲ್ಫಿ ಕೇಂದ್ರಿತ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡುತ್ತಾ ಬಂದಿದೆ. ಇನ್‌ಸ್ಟಾಗ್ರಾಮ್-ಸ್ನಾಪ್‌ಚಾಟ್-ವಾಟ್ಸ್‌ಆಪ್ ಸ್ಟೋರಿಗಳಲ್ಲಿ ಸೆಲ್ಪಿಗಳು ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಸೆಲ್ಫಿ ತೆಗೆದುಕೊಳ್ಳುವ ಹವ್ಯಾಸ ಯುವ ಜನತೆಯಲ್ಲಿ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಸ್ಮಾರ್ಟ್‌ಫೋನ್ ಕೊಳ್ಳುವ ಸಂದರ್ಭದಲ್ಲಿ ಸೆಲ್ಪಿ ಕ್ಯಾಮೆರಾಗೆ ಬಳಕೆದಾರರು ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ. ಇದರ ಲಾಭವನ್ನು ಪಡೆದುಕೊಂಡು ಒಪ್ಪೋ ಹೆಚ್ಚು ಸೆಲ್ಫಿಗೆ ಆಧ್ಯತೆಯನ್ನು ನೀಡುತ್ತಿದೆ.

 ಒಪ್ಪೋ F7: ಸೆಲ್ಫಿ ಕ್ಯಾಮೆರಾಕ್ಕಾಗಿಯೇ ನಿರ್ಮಾಣವಾದ ಸ್ಮಾರ್ಟ್‌ಫೋನ್ ಇದು.!

ಈ ಹಿನ್ನಲೆಯಲ್ಲಿ ಒಪ್ಪೋ ಸೆಲ್ಫಿ ಕೇಂದ್ರಿತ ಸ್ಮಾರ್ಟ್‌ಫೋನ್‌ಗಳನ್ನು ತಯಾರು ಮಾಡುವಲ್ಲಿ ಮಂಚೂಣಿಯಲ್ಲಿದ್ದು, ಉತ್ತಮವಾದ ಆಯ್ಕೆಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ನೊಂದಿಗೆ ಬೆಸ್ಟ್ ಸೆಲ್ಫಿ ಕ್ಯಾಮೆರವನ್ನು ಅಳಡಿಸುತ್ತಿದೆ. ಇದೇ ಮಾದರಿಯಲ್ಲಿ ಫೋಟೋಗ್ರಫಿಗೆ ಹೆಚ್ಚಿನ ಆದ್ಯತೆ ನೀಡುವಂತಹ ಫೋನ್‌ಗಳನ್ನು ವಿನ್ಯಾಸ ಮಾಡುತ್ತಿರುವ ಒಪ್ಪೋ, ಈ ಬಾರಿ ಮತ್ತೊಂದು ಬೆಸ್ಟ್ ಸೆಲ್ಫಿ ಎಕ್ಸ್‌ಫರ್ಟ್‌ ಕ್ಯಾಮೆರಾವನ್ನು ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯನ್ನು ರೂಪಿಸಿದೆ.

ಒಪ್ಪೋ F7 ಬದಲಾಯಿಸಲಿದೆ ಸೆಲ್ಫಿ ಇತಿಹಾಸ:

ಒಪ್ಪೋ F7 ಬದಲಾಯಿಸಲಿದೆ ಸೆಲ್ಫಿ ಇತಿಹಾಸ:

ಮಾರುಕಟ್ಟೆಗೆ ಈಗಾಗಲೇ ಬೆಸ್ಟ್ ಸೆಲ್ಪಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿರುವ ಒಪ್ಪೋ, ಶೀಘ್ರವೇ ಒಪ್ಪೋ F7 ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಲಿದೆ. ಈ ಸ್ಮಾರ್ಟ್‌ಫೋನ್ ಸೆಲ್ಫಿ ಇತಿಹಾಸವನ್ನು ಬದಲಾವಣೆ ಮಾಡಲಿದೆ ಎನ್ನುವ ಮಾತು ಕೇಳಿಬಂದಿದೆ. ಇದರಲ್ಲಿ ಸೆಲ್ಪಿ ತೆಗೆಯುವ ಸಲುವಾಗಿ ಮುಂಭಾಗದಲ್ಲಿ 25MP ಕ್ಯಾಮೆರಾವನ್ನು ಅವಳಡಿಸಲಾಗಿದ್ದು. ಇದರೊಂದಿಗೆ ಕೃತಕ ಬುದ್ದಿಮತ್ತೆಯನ್ನು ನೀಡಲಾಗಿದೆ. ಅಲ್ಲದೇ ಮೊದಲ ಬಾರಿಗೆ ಸೆಲ್ಫಿ ಕ್ಯಾಮೆರಾದಲ್ಲಿ ಹೈ ಡೈನಾಮಿಕ್ ರೆಂಜ್(HDR) ಆಯ್ಕೆಯನ್ನು ಈ ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ. ಜೊತೆಗೆ ಬ್ಯೂಟಿ ಮೋಡ್ ಅನ್ನು ಸಹ ಉತ್ತಮಪಡಿಸಲಾಗಿದೆ.

ಸೆಲ್ಫಿ ಟೆಕ್ನಾಲಜಿಗಾಗಿ ಒಪ್ಪೋ ಶ್ರಮ:

ಸೆಲ್ಫಿ ಟೆಕ್ನಾಲಜಿಗಾಗಿ ಒಪ್ಪೋ ಶ್ರಮ:

ಸೆಲ್ಫಿ ಪೋಟ್ರೆಟ್‌ಗಳು ಉತ್ತಮವಾಗಿ ಮೂಡಿಬರಬೇಕೆಂಬ ಕಾರಣಕ್ಕಾಗಿಯೇ ಒಪ್ಪೋ ಬಹಳದಿನಗಳಿಂದ ಶ್ರಮಪಟ್ಟಿದ್ದು, ಇದಕ್ಕಾಗಿಯೇ ಕೃತಕ ಬುದ್ದಿಮತ್ತೆಯನ್ನು ಈ ಸ್ಮಾರ್ಟ್‌ಫೋನಿನಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಟಾಪ್ ಗುಣಮಟ್ಟದ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ ಅನ್ನು ಅಭಿವೃದ್ದಿ ಒಪ್ಪೋ ಮಾಡಿದ್ದು, ಇದನ್ನು ನೂತನ ಸ್ಮಾರ್ಟ್‌ಫೋನ್ ಒಪ್ಪೋ F7 ಅಳವಡಿಸಿದೆ.

Here's how the Face ID of the newly launched Oppo A83 works (KANNADA)
ಕೃತಕ ಬುದ್ದಿಮತ್ತೆಯ ಬಳಕೆ:

ಕೃತಕ ಬುದ್ದಿಮತ್ತೆಯ ಬಳಕೆ:

ಈ ಹಿಂದಿನ ಪೋನ್‌ಗಳಲ್ಲೇ ಫೋಟೋಗಾಗಿ ಕೃತಕಬುದ್ದಿಮತ್ತೆಯನ್ನು ಬಳಕೆ ಮಾಡಿಕೊಂಡಿದ್ದ ಒಪ್ಪೋ, ತನ್ನ ಮುಂಬರುವ ಒಪ್ಪೋ F7 ನಲ್ಲಿ ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಕೃತಕ ಬುದ್ದಿ ಮತ್ತೆ ಹಾಗೂ ಯಾಂತ್ರಿಕ ಕಲಿಕೆಯ ಸಹಾಯದಿಂದ ಉತ್ತಮ ಸೆಲ್ಪೀಗಳನ್ನು ಕ್ಲಿಕಿಸುವ ಅವಕಾಶವನ್ನು ಬಳಕೆದಾರರಿಗೆ ಮಾಡಿಕೊಟ್ಟಿದೆ. ಇದು ಮಾರುಕಟ್ಟೆಯಲ್ಲಿ ಗೇಮ್ ಚೇಂಜರ್ ಆಗಲಿದೆ. ನಿಮ್ಮ ಫೋಟೋಗ್ರಫಿ ಕೌಲಶ್ಯವನ್ನು ಮತ್ತಷ್ಟು ಏರಿಕೆ ಮಾಡಲಿದೆ.

ಒಪ್ಪೋ F7 ಸ್ಮಾರ್ಟ್‌ಫೋನ್ ನಿರೀಕ್ಷೆಗಳೇನು..?

ಒಪ್ಪೋ F7 ಸ್ಮಾರ್ಟ್‌ಫೋನ್ ನಿರೀಕ್ಷೆಗಳೇನು..?

ಶೀಘ್ರವೇ ಮಾರುಕಟ್ಟೆಯನ್ನು ಪ್ರವೇಶಿಸಲಿರುವ ಒಪ್ಪೋ F7 ಸ್ಮಾರ್ಟ್Fಫೋನ್ ನಲ್ಲಿ ಸೆಲ್ಪೀಗಾಗಿಯೇ ಕೃತಕಬುದ್ದಿಮತ್ತೆ ಮತ್ತು 25MP ಹೈಎಂಡ್ ಕ್ಯಾಮೆರಾವನ್ನು ಕಾಣಬಹುದಾಗಿದೆ. ಅಲ್ಲದೇ ಬ್ಯೂಟಿ ಮೋಡ್ ಅನ್ನು ಇನ್ನಷ್ಟು ಉತ್ತಮಪಡಿಸಲಾಗಿದೆ. ಈ ಹಿಂದಿನ ಸ್ಮಾರ್ಟ್‌ಫೋನ್‌ಗಳಿಗಿಂತಲೂ ಉತ್ತಮ ಸೆಲ್ಫಿಗಳನ್ನು ಇದರಲ್ಲಿ ಸೆರೆಹಿಡಿಯಬಹುದಾಗಿದೆ. ಮಾರುಕಟ್ಟೆಗೆ ಶೀಘ್ರವೇ ಕಾಲಿಡುವ ಈ ಸ್ಮಾರ್ಟ್‌ಫೋನ್ ಕುರಿತಾದ ಹೆಚ್ಚಿನ ಮಾಹಿತಿಯೂ ಶೀಘ್ರವೇ ಹೊರಬರಲಿದೆ.

Best Mobiles in India

English summary
OPPO F7 with the new AI powered camera will set new benchmarks in selfie segment. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+