Home
ಮೊಬೈಲ್

'ಒಪ್ಪೋ ಎಫ್9' ಅಧಿಕೃತವಾಗಿ ಭಾರತಕ್ಕೆ ಲಗ್ಗೆ!..19,990ರೂ.ಗೆ ಇಂದಿನಿಂದ ಮಾರಾಟ!!

ಇತ್ತೀಚಿಗಷ್ಟೇ ಒಪ್ಪೊ ಪರಿಚಯಿಸಿದ್ದ ಎಫ್9 ಪ್ರೊ ಹಾಗೂ ಎಫ್9 ಸ್ಮಾರ್ಟ್‌ಫೋನ್‌ಗಳಲ್ಲಿ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ 'ಒಪ್ಪೋ ಎಫ್9' ಅಧಿಕೃತವಾಗಿ ಭಾರತಕ್ಕೆ ಲಗ್ಗೆಯಿಟ್ಟಿದೆ. ಒಪ್ಪೊ ಕಂಪೆನಿಯ ಬಜೆಟ್ ಪೋನ್ ಆಗಿರುವ 'ಒಪ್ಪೊ ಎಫ್9' ಸ್ಮಾರ್ಟ್‌ಫೋನ್ ಅನ್ನು ಗ್ರಾಹಕರು ಇಂದಿನಿಂದ ಆಫ್‌ಲೈನ್ ಮತ್ತು ಆನ್‌ಲೈನ್ ಮಾರುಕಟ್ಟೆಯಲ್ಲಿ ಖರೀದಿಸಬಹುದಾಗಿದೆ.

ಈ ಮೊದಲು 'ಒಪ್ಪೋ ಎಫ್9 ಪ್ರೊ' ಸ್ಮಾರ್ಟ್‌ಫೋನ್ ಅನ್ನು ಮಾತ್ರ ಮಾರಾಟಕ್ಕೆ ಇಟ್ಟಿದ್ದ ಒಪ್ಪೊ ಕಂಪೆನಿ, ಈಗ ಡೈಮಂಡ್ ನಮೂನೆಯ ರಿಯರ್ ಪ್ಯಾನೆಲ್ ಹೊಂದಿರುವ 'ಒಪ್ಪೊ ಎಫ್9' ಸ್ಮಾರ್ಟ್‌ಫೋನ್ ಅನ್ನು ಮಾರಾಟಕ್ಕೆ ತಂದಿದೆ. ಮಿಸ್ಟ್ ಬ್ಲ್ಯಾಕ್ ಮತ್ತು ಸ್ಟೆಲ್ಲರ್ ಪರ್ಪಲ್ ಎರಡು ಬಣ್ಣಗಳಲ್ಲಿ ಮೊಬೈಲ್ ಪ್ರಿಯರು ಈಗ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದಾಗಿದೆ.

'ಒಪ್ಪೋ ಎಫ್9' ಅಧಿಕೃತವಾಗಿ ಭಾರತಕ್ಕೆ ಲಗ್ಗೆ!..19,990ರೂ.ಗೆ ಇಂದಿನಿಂದ ಮಾರಾಟ!!

6.3 ಇಂಚುಗಳ HD+ ಡಿಸ್‌ಪ್ಲೇ, ಒಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ P60 ಪ್ರೊಸೆಸರ್ ಹಾಗೂ 16MP ಫ್ರಂಟ್ ಫೇಸಿಂಗ್ ಕ್ಯಾಮೆರಾಗಳಂತಹ ಫೀಚರ್ಸ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಬೆಲೆ ಕೇವಲ 19,990 ರೂಪಾಯಿಗಳಾಗಿದ್ದು, ಹಾಗಾದರೆ, ಬಹುನಿರೀಕ್ಷಿತ 'ಒಪ್ಪೋ ಎಫ್9' ಸ್ಮಾರ್ಟ್‌ಫೋನಿನ ವಿಶೇಷತೆಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ಡಿಸ್‌ಪ್ಲೇ ಮತ್ತು ವಿನ್ಯಾಸ!

ಡಿಸ್‌ಪ್ಲೇ ಮತ್ತು ವಿನ್ಯಾಸ!

'ಒಪ್ಪೋ ಎಫ್9' ಸ್ಮಾರ್ಟ್‌ಫೋನ್ 6.3 ಇಂಚುಗಳ HD+ ಡಿಸ್‌ಪ್ಲೇಯನ್ನು ಹೊಂದಿದೆ. 1080x2280 ಪಿಕ್ಸೆಲ್ ರೆಸೊಲ್ಯೂಷನ್ ಸಾಮರ್ಥ್ಯದ ಡಿಸ್‌ಪ್ಲೇ ವಾಟರ್ ಡ್ರಾಪ್‌ನಂತಹ ನೋಚ್ ಅನ್ನು ಹೊಂದಿರುವುದು ಡಿಸ್‌ಪ್ಲೇ ವಿಶೇಷವಾಗಿದೆ. ಇನ್ನು ಹಿಂಬಾಗದಲ್ಲಿ ಡ್ಯುಯಲ್ ಕ್ಯಾಮರಾ ಹಾಗೂ ಫಿಂಗರ್ ಪ್ರಿಂಟ್ ಆಯ್ಕೆಯನ್ನು ಹೊಂದಿರುವ ಫೋನಿನ ವಿನ್ಯಾಸ ಅತ್ಯುತ್ತಮವಾಗಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

'ಒಪ್ಪೋ ಎಫ್9' ಸ್ಮಾರ್ಟ್‌ಫೋನ್ ಒಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ P60 ಪ್ರೊಸೆಸರ್ ಅನ್ನು ಹೊಂದಿದೆ. ಆಂಡ್ರಾಯ್ಡ್ 8.1 ಒರಿಯೋ ಜತೆ ಸಂಸ್ಥೆಯದ್ದೇ ಕಸ್ಟಮೈಸ್ಡ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಸ್ಮಾರ್ಟ್‌ಪೋನ್ 4GB RAM ಮತ್ತು 64GB ಆಂತರಿಕ ಮೆಮೊರಿಯನ್ನು ಹೊಂದಿದ್ದು, 256GB ವರೆಗೂ ಮೆಮೊರಿಯನ್ನಯ ವರ್ಧಿಸಬಹುದಾದ ಆಯ್ಕೆ ಕೂಡ ಇದೆ.

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

f/1.85 ಅಪಾರ್ಚರ್ 16MP + 2MP ಸಾಮರ್ಥ್ಯದ ಎರಡು ರಿಯರ್ ಕ್ಯಾಮೆರಾಗಳು ಹಾಗೂ f/2.0 ಅಪಾರ್ಚರ್ 16MP ಫ್ರಂಟ್ ಫೇಸಿಂಗ್ ಸೆಲ್ಫಿ ಕ್ಯಾಮೆರಾವನ್ನು ಸ್ಮಾರ್ಟ್‌ಪೋನಿನಲ್ಲಿ ನೀಡಲಾಗಿದೆ. ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಹೊಂದಿರುವ ಪೋನಿನಲ್ಲಿ ಅತ್ಯುತ್ತಮ ಫೋಟೊಗಳನ್ನು ಚಿತ್ರಿಸಬಹುದಾಗಿದ್ದು, ಎರಡೂ ಬದಿಯಲ್ಲಿ LED ಫ್ಲ್ಯಾಶ್ ಅಯ್ಕೆ ಇವೆ.

ಬ್ಯಾಟರಿ ಶಕ್ತಿ ಎಷ್ಟು?

ಬ್ಯಾಟರಿ ಶಕ್ತಿ ಎಷ್ಟು?

ಸೆಲ್ಫಿ ಪ್ರಿಯರನ್ನು ಸೆಳೆಯುವ ಜೊತೆಗೆ ಗೇಮಿಂಗ್ ಮತ್ತು ಮಲ್ಟಿಮೀಡಿಯಾ ಪ್ರಿಯರಿಗಾಗಿಯೇ ತಯಾರಾಗಿರುವ 'ಒಪ್ಪೋ ಎಫ್9' ಸ್ಮಾರ್ಟ್‌ಫೋನ್ 3,500 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಗೇಮಿಂಗ್ ಮತ್ತು ಮಲ್ಟಿಮೀಡಿಯಾದ ಅನಿಯಮಿತ ಅನುಭವ ನೀಡುವ ಸಲುವಾಗಿ ಒಪ್ಪೊ ಕಂಪೆನಿ ನೂತನ ಚಾರ್ಜಿಂಗ್ ತಂತ್ರಜ್ಞಾನವನ್ನು ಸಹ ಅಳವಡಿಸಿಕೊಂಡಿದೆ.

ಇತರೆ ಫೀಚರ್ಸ್ ಮತ್ತು ಮಾರಾಟ!

ಇತರೆ ಫೀಚರ್ಸ್ ಮತ್ತು ಮಾರಾಟ!

4G ವೋಲ್ಟ್, ವೈ-ಫೈ 802.11ac, ಬ್ಲೂಟೂತ್ ವಿ4.2, ಜಿಪಿಎಸ್ / ಎ-ಜಿಪಿಎಸ್, ಮೈಕ್ರೋ ಯುಎಸ್‌ಬಿ ಒಟಿಜಿ ಕಾರ್ಯಕ್ಷಮತೆ ಮತ್ತು 3.5 ಎಂಎಂ ಹೆಡ್‌ಫೋನ್ ಜಾಕ್‌ಗಳು ಸ್ಮಾರ್ಟ್‌ಫೋನಿನಲ್ಲಿರುವ ಇನ್ನಿತರ ಸಾಮಾನ್ಯ ಫೀಚರ್ಸ್ ಆಗಿವೆ. ಇಂದಿನಿಂದ ಫ್ಲಿಪ್‌ಕಾಟ್ ಹಾಗೂ ಒಪ್ಪೊ ಆಫ್‌ಲೈನ್ ಮಳಿಗೆಗಳಲ್ಲಿ ಈ ಸ್ಮಾರ್ಟ್‌ಪೋನ್ ಅನ್ನು ಖರೀದಿಸಬಹುದು.

Best Mobiles in India

English summary
After announcing the Oppo F9 alongside the Oppo F9 Pro last month, the company is finally making the former available in India for sale today. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+