ಅಮೆಜಾನ್‌ನಲ್ಲಿ ಒಪ್ಪೋ F9 ಪ್ರೋ ಉಚಿತ..! ಹೇಗೆ ಖರೀದಿಸಬಹುದು..?
ಮಾರ್ಕೆಟ್ ನಲ್ಲಿರುವ ಮಿಡ್ ರೇಂಜ್ ಫೋನ್ ಗಳಲ್ಲಿ ಓಪ್ಪೋ ಎಫ್9 ಪ್ರೋ ಕೂಡ ಒಂದು. ಕೆಲವು ಪ್ರಮುಖ ಹೈಲೆಟ್ ಗಳೊಂದಿಗೆ ಈ ಪೋನಿನ ಬೆಲೆಯು ಮಾರುಕಟ್ಟೆಯಲ್ಲಿ 23,990 ರುಪಾಯಿಗಳಾಗಿದೆ.

ಎಲ್ಲರೂ ಗುರುತಿಸಬಹುದಾದ ಈ ಸ್ಮಾರ್ಟ್ ಫೋನಿನ ಪ್ರಮುಖ ವೈಶಿಷ್ಟ್ಯತೆಯೆಂದರೆ ಅದು ವಾಟರ್ ಡ್ರಾಪ್ ನಾಚ್ ಡಿಸ್ಪ್ಲೇ. ಈ ಡಿಸೈನ್ ನಲ್ಲಿ ಪ್ರಸಿದ್ಧಿಯಾಗಿರುವ ಡಿವೈಸ್ ಗಳಲ್ಲಿ ಇದೇ ಮೊದಲನೆಯದ್ದು.

ಶೇ.100 ಕ್ಯಾಷ್ ಬ್ಯಾಕ್
ಇತ್ತೀಚೆಗೆ ಈ ಸ್ಮಾರ್ಟ್ ಫೋನ್ ಅಮೇಜಾನ್ ಇಂಡಿಯಾ ವೆಬ್ ಸೈಟ್ ನಲ್ಲಿ ಮಾರಾಟಕ್ಕಿಡಲಾಗಿದೆ ಮತ್ತು ಈ ಡಿವೈಸ್ ಖರೀದಿದಾರರಿಗೆ ಶೇಕಡಾ 100 ರಷ್ಟು ಕ್ಯಾಷ್ ಬ್ಯಾಕ್ ಅನ್ನು ಅಮೇಜಾನ್ ಇಂಡಿಯಾ ನೀಡುತ್ತಿದೆ. ಒಪ್ಪೋ ಎಫ್9 ಪ್ರೋ ಆಫರ್ ನ್ನು ಪಡೆಯುವುದು ಹೇಗೆ ಎಂಬ ಬಗ್ಗೆ ನೀವೀಗ ಯೋಚಿಸುತ್ತಿರಬಹುದು.

100% ಕ್ಯಾಷ್ ಬ್ಯಾಕ್ ಪಡೆಯುವುದು ಹೇಗೆ?
ಅಮೇಜಾನ್ ಇಂಡಿಯಾ ಒಂದು ಕಾಂಟೆಸ್ಟ್ ನ್ನು ಆಯೋಜಿಸಿದ್ದು ಎಫ್9 ಪ್ರೋ ಫೋನ್ ನ್ನು ಉಚಿತವಾಗಿ ಪಡೆಯುವ ಅವಕಾಶವನ್ನು ನೀಡುತ್ತಿದೆ. ದೊಡ್ಡ ಗೇಮ್ ನೊಂದಿಗೆ ದೊಡ್ಡ ಕ್ಯಾಷ್ ಬ್ಯಾಕ್ ಆಫರ್ ನ್ನು ಅಮೇಜಾನ್ ನೀಡುತ್ತಿದೆ. ಕೆಲವು ಅದೃಷ್ಟವಂತರು ಈ ಡಿವೈಸ್ ನ್ನು ಶೇ.100ರ ಕ್ಯಾಷ್ ಬ್ಯಾಕ್ ನಲ್ಲಿ ಖರೀದಿ ಮಾಡಲು ಅವಕಾಶವಿದೆ.

ಕ್ರಿಕೆಟ್ ಕಂಟೆಸ್ಟಂಟ್
ಕ್ಯಾಷ್ ಬ್ಯಾಕ್ ಗೆಲ್ಲಬೇಕು ಎಂದರೆ ಅಮೇಜಾನ್ ಇಂಡಿಯಾ ಗ್ರಾಹಕರು ಇಂಡಿಯನ್ ಕ್ರಿಕೆಟ್ ಮ್ಯಾಚ್ ಬಗ್ಗೆ ವೋಟ್ ಮಾಡಬೇಕು. ಸೆಪ್ಟೆಂಬರ್ 15 ರಿಂದ ಸೆಪ್ಟಂಬರ್ 28 ರ ವರೆಗೆ ವೋಟ್ ಮಾಡಬೇಕಾಗುತ್ತದೆ. ಈ ಕಾಂಟೆಸ್ಟ್ ನಲ್ಲಿ ಗೆಲ್ಲುವವರು 23,990 ರುಪಾಯಿ ಕ್ಯಾಷ್ ಬ್ಯಾಕ್ ಪಡೆಯಲು ಸಾಧ್ಯವಾಗುತ್ತದೆ. ಅಮೇಜಾನ್ ಲಿಸ್ಟ್ ಮಾಡಿರುವಂತೆ, ಕ್ಯಾಷ್ ಬ್ಯಾಕ್ ಗೆಲ್ಲುವವರ ಸಂಖ್ಯೆಯು ಭಾರತೀಯ ಕ್ರಿಕೆಟ್ ಟೀಮ್ ನಿರ್ಧಿಷ್ಟ ಮ್ಯಾಚ್ ನಲ್ಲಿ ಗೆಲ್ಲುವ ರನ್ ಗಳ ಆಧಾರದಲ್ಲಿ ಬರುವ ವೋಟ್ ಗಳನ್ನು ಆಧರಿಸಿರುತ್ತದೆಯಂತೆ. ಅಮೇಜಾನ್ ನಲ್ಲಿರುವ ಎಂಟ್ರಿ ಪಾರ್ಮ್ ಬಳಸಿ ಆಸಕ್ತರು ಈ ಕಾಂಟೆಸ್ಟ್ ನಲ್ಲಿ ಭಾಗವಹಿಸಬಹುದು.ಎಲ್ಲಕ್ಕಿಂತ ಮುಖ್ಯವಾಗಿ ಗಮನಿಸಬೇಕಾಗಿರುವ ಅಂಶವೆಂದರೆ ಈ ಆಫರ್ ಕೇವಲ ಅಮೇಜಾನ್ ನಲ್ಲಿ ಖರೀದಿಸುವವರಿಗೆ ಮಾತ್ರ ಲಭ್ಯವಾಗುತ್ತದೆ.

ಓಪ್ಪೋ ಎಫ್9 ಪ್ರೋ ಆಫರ್ ಗಳು
ಶೇ. 100 ರ ರಿಯಾಯಿತಿ ಇದ್ದರೂ ಕೂಡ ಇದು ಕೆಲವೇ ದಿನಗಳವರೆಗೆ ಇರುವ ಆಫರ್ ಆಗಿದೆ. ಇದನ್ನು ಹೊರತು ಪಡಿಸಿ ಇನ್ನು ಹಲವು ಆಫರ್ ಗಳು ಈ ಫೋನಿಗೆ ಲಭ್ಯವಿದೆ. ನೋ ಕಾಸ್ಟ್ ಇಎಂಐ ಆಫರ್ ಗಳು ಹೆಚ್ಚಿನ ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಲಭ್ಯವಿದೆ. ಹೆಚ್ಚುವರಿ 5% ರ ರಿಯಾಯಿತಿ ಅಂದರೆ 1,199 ರುಪಾಯಿಯನ್ನು ಹೆಚ್ ಡಿಎಫ್ ಸಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಕೆಯ ಇಎಂಐ ಪೇಮೆಂಟ್ ಗೆ ಸಿಗುತ್ತದೆ. ಇನ್ನು ಎಕ್ಸ್ ಚೇಂಜ್ ಆಫರ್ ನಲ್ಲಿ 3000 ರುಪಾಯಿ ವರೆಗೆ ರಿಯಾಯಿತಿ ಪಡೆಯಬಹುದು. ವೋಚರ್ ರೂಪದಲ್ಲಿ ರಿಲಯನ್ಸ್ ಜಿಯೋ ಮೂಲಕ 4,900 ರುಪಾಯಿಯ ಕ್ಯಾಷ್ ಬ್ಯಾಕ್ ಮತ್ತು 3.2TB ಯ 4G ಡಾಟಾವನ್ನು ಉಚಿತವಾಗಿ ಪಡೆಯಬಹುದು. ಒಂದು ವೇಳೆ ನೀವು ಕಾಂಟೆಸ್ಟ್ ನಲ್ಲಿ ಭಾಗವಹಿಸದೇ ಇದ್ದಲ್ಲಿ ಈ ಮೇಲೆ ತಿಳಿಸಿರುವ ಆಫರ್ ಗಳನ್ನು ಬಳಸಿಕೊಂಡು 21,800 ರುಪಾಯಿ ಬೆಲೆಗೆ ಈ ಫೋನ್ ಖರೀದಿಗೆ ಅವಕಾಶವಿರುತ್ತದೆ.


Click it and Unblock the Notifications