Home
ಮೊಬೈಲ್

ರೂ.23,990ರ ಒಪ್ಪೋ F9 ಪ್ರೋ ಫೋನ್ ಅಮೆಜಾನ್‌ನಲ್ಲಿ FREE: ಖರೀದಿಸುವುದು ಹೇಗೆ..?

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ಹೊಸ ಮಾದರಿಯ ಆಯ್ಕೆಗಳಿಂದಲೇ ಸದ್ದು ಮಾಡುತ್ತಿರುವ ಒಪ್ಪೋ ಬಿಡುಗಡೆ ಮಾಡಿರುವ ಒಪ್ಪೋ F9 ಪ್ರೋ ಸ್ಮಾರ್ಟ್‌ಪೋನ್ ಮೇಲೆ ಅಮೆಜಾನ್ ಬೊಂಬಾಟ್ ಆಫರ್ ವೊಂದನ್ನು ನೀಡಲು ಮುಂದಾಗಿದೆ. ಟಾಪ್ ಎಂಡ್ ಫೋನ್ ಮೇಲೆ 100% ಕ್ಯಾಷ್ ಬ್ಯಾಕ್ ಆಫರ್ ಅನ್ನು ನೀಡಲು ಮುಂದಾಗಿದೆ. ಹೀಗಾಗಿ ರೂ.23,990ಕ್ಕೆ ಮಾರಾಟವಾಗುವ ಸ್ಮಾರ್ಟ್‌ಫೋನ್ ಅನ್ನು ನೀವು ಉಚಿತವಾಗಿ ಖರೀದಿ ಮಾಡಬಹುದಾಗಿದೆ.

ರೂ.23,990ರ ಒಪ್ಪೋ F9 ಪ್ರೋ ಫೋನ್ ಅಮೆಜಾನ್‌ನಲ್ಲಿ FREE: ಖರೀದಿಸುವುದು ಹೇಗೆ..?

ಅಮೆಜಾನ್ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಸ್ಪರ್ಧೆಯೊಂದನ್ನು ಆಯೋಜನೆ ಮಾಡಿದ್ದು, ಅವರಿಗೆ 'ಬಿಗ್ ಗೇಮ್ ಬಿಗ್ ಕ್ಯಾಷ್ ಬ್ಯಾಕ್' ಆಫರ್ ಅನ್ನು ಲಾಂಚ್ ಮಾಡಿದೆ. ಇದರಲ್ಲಿ ಗೆದ್ದ ಒಪ್ಪೋ F9 ಪ್ರೋ ಸ್ಮಾರ್ಟ್‌ಪೋನ್ ಖರೀದಿಸಿದ ಹಲವು ಮಂದಿಗೆ ಅಮೆಜಾನ್ 100% ಕ್ಯಾಷ್ ಬ್ಯಾಕ್ ಅನ್ನು ನೀಡಲಿದೆ.

ಲಕ್ಕಿ ವಿನ್ನರ್:

ಲಕ್ಕಿ ವಿನ್ನರ್:

ಸೆಪ್ಟೆಂಬರ್ 15ರಿಂದ ಸೆಪ್ಟೆಂಬರ್ 28ರ ವರೆಗೆ ಏಷ್ಯಾ ಕಪ್‌ನಲ್ಲಿ ಇಂಡಿಯನ್ ಕ್ರಿಕೆಟ್ ಟೀಮ್ ಮ್ಯಾಚ್ ನಡೆಯಲಿದ್ದು, ಈ ಸಂದರ್ಭದಲ್ಲಿ ಅಮೆಜಾನ್ ನಲ್ಲಿ ಒಪ್ಪೋ F9 ಪ್ರೋ ಸ್ಮಾರ್ಟ್‌ಪೋನ್ ಖರೀದಿಸಿದವರು ಮೋಸ್ಟ್ ವೋಟೆಡ್ ಟೀಮ್ ಎಂದು ವೋಟ್ ಮಾಡಬೇಕಾಗಿದೆ. ಇದರಲ್ಲಿ ಕಂಪ್ಲಿಟ್ ಮಾಡಿದ ನಂತರದಲ್ಲಿ ಕೆಲವು ಮಂದಿ ವಿನ್ನರ್‌ಗಳಿಗೆ ರೂ.23990ಕ್ಕೆ ಮಾರಾಟವಾಗಿರುವ ಒಪ್ಪೋ F9 ಪ್ರೋ ಸ್ಮಾರ್ಟ್‌ಪೋನ್ ಹಣವನ್ನು ಹಿಂತಿರುಗಿ ನೀಡಲಿದೆ ಎನ್ನಲಾಗಿದೆ.

ಟೀಮ್ ಇಂಡಿಯಾ ಸ್ಕೋರ್ ಮೇಲೆ:

ಟೀಮ್ ಇಂಡಿಯಾ ಸ್ಕೋರ್ ಮೇಲೆ:

ಈ ಸ್ಪರ್ಧೆಯಲ್ಲಿ ಅಮೆಜಾನ್ ಬಳಕೆದಾರರು ಟೀಮ್ ಇಂಡಿಯಾ ಮಾಡುವ ಸ್ಕೋರ್ ಮೇಲೆ ಓಟಿಂಗ್ ನಡೆಯಲಿದೆ. ಅಮೆಜಾನ್‌ನಲ್ಲಿ ಒಪ್ಪೋ F9 ಪ್ರೋ ಸ್ಮಾರ್ಟ್‌ಪೋನ್ ಖರೀದಿ ಮಾಡಿದವರಿಗೆ ಮಾತ್ರವೇ ಈ ಸ್ಪರ್ದೇಯಲ್ಲಿ ಭಾಗವಹಿಸಲು ಅವಕಾಸವಿದೆ. ಅಲ್ಲದೇ ಗೆದ್ದರೆ ಕೊಟ್ಟ ಹಣ ಸಂಫೂರ್ಣವಾಗಿ ವಾಪಸ್ಸು ಬರಲಿದೆ.

ಒಪ್ಪೋ F9 ಪ್ರೋ ವಿಶೇಷತೆ:

ಒಪ್ಪೋ F9 ಪ್ರೋ ವಿಶೇಷತೆ:

ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನಿನಲ್ಲಿ 19:5:9 ಅನುಪಾತದ 6.3 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ ಇದು FHD+ ಗುಣಮಟ್ಟವನ್ನು ಹೊಂದಿದ್ದು, ಇದು ವಿಡಿಯೋ ನೋಡುವ ಅನುಭವನ್ನು ಉತ್ತಮ ಪಡಿಸಲಿದೆ. ದೊಡ್ಡದಾದ ಡಿಸ್‌ಪ್ಲೇ ಬಳಕೆಗೆ ದೊರೆಯಲಿದ್ದು, ಗೇಮ್ ಆಡುವ ಅನುಭವವು ಉತ್ತಮವಾಗಿರಲಿದೆ.

ಒಪ್ಪೋ F9 ಪ್ರೋ ಪ್ರೋಸೆಸರ್:

ಒಪ್ಪೋ F9 ಪ್ರೋ ಪ್ರೋಸೆಸರ್:

6 GB RAM ನೊಂದಿಗೆ ಕಾಣಿಸಿಕೊಂಡಿರುವ ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ಮಿಡಿಯಾ ಟೆಕ್ ಹೆಲಿಯೊ P60 ಪ್ರೋಸೆಸರ್ ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಹೆಚ್ಚಿನ ಗ್ರಾಫಿಕ್ಸ್ ಪ್ಲೇ ಮಾಡುವ ಸಲುವಾಗಿ ARM ಮಾಲಿ-G72 GPUವನ್ನು ಕಾಣಬಹುದಾಗಿದೆ. 64GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದ್ದು, 256 GB ವರೆಗೆ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

How to Send Message to Multiple Contacts on WhatsApp - GIZBOT KANNADA
ಸೆಲ್ಫಿ ಕ್ಯಾಮೆರಾ:

ಸೆಲ್ಫಿ ಕ್ಯಾಮೆರಾ:

ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ಸೆಲ್ಫಿಗಾಗಿಯೇ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇದರಲ್ಲಿ 25MP ಸೆಲ್ಪಿ ಕ್ಯಾಮೆರಾವನ್ನು ಮುಂಭಾಗದಲ್ಲಿ ಅಳವಡಿಸಲಾಗಿದ್ದು, HRD ಸೆನ್ಸಾರ್‌ಗಳನ್ನು ಒಳಗೊಂಡಿದೆ. ಬೇರೆ ಯಾವುದೇ ಸ್ಮಾರ್ಟ್ ಫೋನಿನಲ್ಲಿ ಇಷ್ಟು ಚಂದ ಸೆಲ್ಫಿಯನ್ನು ಕ್ಲಿಕ್ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 16 MP + 2 MP ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದೆ. ಇದು ಲೋ ಲೈಟಿಂಗ್‌ನಲ್ಲಿಯೂ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಶಕ್ತವಾಗಿದೆ ಎನ್ನಲಾಗಿದೆ. ಇದಲ್ಲದೇ ಡಿಪ್ತ್ ಆಫ್ ಫಿಲ್ಡ್ ಉತ್ತಮವಾಗಿ ಮೂಡಿಬರಲಿದೆ.

Best Mobiles in India

English summary
Oppo F9 Pro available with 100% cashback on Amazon India, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+