ಬೆಸ್ಟ್ ಸ್ಫೀಡ್-ಬೆಸ್ಟ್ ಕ್ಯಾಮ್-ಫಾಸ್ಟ್ ಚಾರ್ಜ್: ಒಪ್ಪೋ F9 ಪ್ರೋ ಪವರ್ ಪ್ಯಾಕ್..!
ಭಾರತೀಯ ಮಾರಕಟ್ಟೆಯಲ್ಲಿ ಹೊಸ ಮಾದರಿಯ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಅನ್ನು ಹುಡುಕುತ್ತಿರುವವರಿಗೆ ಉತ್ತಮ ಆಯ್ಕೆಯೆಂದರೆ ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ಎಂದರೆ ತಪ್ಪಾಗುವುದಿಲ್ಲ. ಉತ್ತಮ ಸ್ಮಾರ್ಟ್‌ಫೋನ್‌ವೊಂದರಲ್ಲಿ ಇರಬೇಕಾದ ಎಲ್ಲಾ ಅಂಶವನ್ನು ಈ ಸ್ಮಾರ್ಟ್‌ಫೋನಿನಲ್ಲಿ ತುಂಬಿಸಿಕೊಡಲಾಗಿದೆ. ಸ್ಮಾರ್ಟ್‌ಫೋನ್ ಮೂಲಕವೇ ಎಲ್ಲಾ ರೀತಿಯ ಲಾಭವನ್ನು ಪಡೆದುಕೊಳ್ಳುವವರಿಗಾಗಿಯೇ ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ನಿರ್ಮಾಣವಾಗಿದೆ.

ಉತ್ತಮ ಸೆಲ್ಪಿ ತೆಗೆಯುವುದರೊಂದಿಗೆ ಬೆಸ್ಟ್ ಡ್ಯುಯಲ್ ಹಿಂಬದಿಯ ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದಲ್ಲದೇ ಬೆಸ್ಟ್ ಎನ್ನುವ ಬ್ಯಾಟರಿ, ಕ್ಷಣದಲ್ಲಿ ಚಾರ್ಜ್ ಆಗುವ ಟೆಕ್ನಲಜಿ ಸೇರಿದಂತೆ ಎಲ್ಲಾ ಅಂಶಗಳು ತುಂಬಿಕೊಂಡಿದೆ. ಇಂದು ಸ್ಮಾರ್ಟ್‌ಫೋನ್ ಕೇವಲ ಒಂದು ಕಾರ್ಯಕ್ಕೆ ಮಾತ್ರವೇ ಬಳಕೆ ಮಾಡಿಕೊಳ್ಳುವವರು ಕಡಿಮೆ, ಫೋಟೋ, ಗೇಮ್, ವಿಡಿಯೋ, ಶಾಪಿಂಗ್, ಬ್ರೌಸಿಂಗ್, ಸೋಶಿಯಲ್ ಮೀಡಿಯಾ, ಡೇಟಿಂಗ್ ಸೇರಿದಂತ ಎಲ್ಲಾ ಮಾದರಿಯ ಕಾರ್ಯಗಳಿಗೆ ಬಳಕೆಯಾಗುತ್ತಿದೆ. ಇವಗಳಿಗೆಲ್ಲವೂ ಸಹಾಯವಾಗುವಂತ ಸ್ಮಾರ್ಟ್‌ಫೋನ್ ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ಎನ್ನಬಹುದಾಗಿದೆ. ಹೊಸ ಮಾದರಿ ಆಯ್ಕೆಗಳು ಮೊದಲಿಗೆ ಈ ಸ್ಮಾರ್ಟ್‌ಫೋನ್‌ನಲ್ಲಿದೆ.

ಪವರ್ ಪ್ಯಾಕ್:
ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ಅನ್ನು ಒಂದು ಪವರ್ ಪ್ಯಾಕ್ ಎನ್ನಬಹುದಾಗಿದೆ. ರೂ.23,990ಕ್ಕೆ ಮಾರಾಟವಾಗುವ ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಟೈಲ್ ಮತ್ತು ಫಾರ್ಪರ್ಮೆನ್ಸ್ ಎರಡಕ್ಕೂ ಹೆಸರುಗಳಿಸಿಕೊಂಡಿದೆ. ಮಾರುಕಟ್ಟೆಯಲ್ಲಿ ಇದಕ್ಕಾಗಿಯೇ ಉತ್ತಮ ಬೇಡಿಕೆಯನ್ನು ನಿರ್ಮಿಸಿಕೊಂಡಿದೆ.

ಫ್ಲಾಷ್ ಚಾರ್ಜಿಂಗ್ ಹೈಲೆಟ್:
ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ಯಾಕೆ ಬೇಕು ಎನ್ನುವವರಿಗೆ ಇದೊಂದು ಕಾರಣವೇ ಸಾಕು ಕೊಳ್ಳಲೇ ಬೇಕು ಎಂದು ಹೇಳಲು. ಹೊಸದಾಗಿ ಫ್ಲಾಷ್ ಚಾರ್ಜಿಂಗ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಮಾರುಕಟ್ಟೆಯಲ್ಲಿರುವ ಫಾಸ್ಟ್ ಚಾರ್ಜರ್ ಅನ್ನು ಮೀರಿಸುವಂತೆ ಫ್ಲಾಷ್ ಆಗಿ ಬ್ಯಾಟರಿಯನ್ನು ಚಾರ್ಜ್ ಮಾಡಲಿದೆ. ಕಡಿಮೆ ಸಮಯದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಿಕೊಡಲಿದೆ. ಸಾಮಾನ್ಯ ಚಾರ್ಜರ್ ಗಿಂತಲೂ 4 ಪಟ್ಟು ವವೇಗದಲ್ಲಿ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಿಕೊಡುತ್ತದೆ.

ಬೆಸ್ಟ್ ಫೋಟೋ ಕ್ಲಿಕಿಸುವ ಕ್ಯಾಮೆರಾ:
ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 16 MP + 2 MP ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದೆ. ಇದು ಲೋ ಲೈಟಿಂಗ್‌ನಲ್ಲಿಯೂ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಶಕ್ತವಾಗಿದೆ ಎನ್ನಲಾಗಿದೆ. ಇದಲ್ಲದೇ ಡಿಪ್ತ್ ಆಫ್ ಫಿಲ್ಡ್ ಉತ್ತಮವಾಗಿ ಮೂಡಿಬರಲಿದೆ. ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ಸೆಲ್ಫಿಗಾಗಿಯೇ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇದರಲ್ಲಿ 25MP ಸೆಲ್ಪಿ ಕ್ಯಾಮೆರಾವನ್ನು ಮುಂಭಾಗದಲ್ಲಿ ಅಳವಡಿಸಲಾಗಿದ್ದು, HRD ಸೆನ್ಸಾರ್‌ಗಳನ್ನು ಒಳಗೊಂಡಿದೆ. ಬೇರೆ ಯಾವುದೇ ಸ್ಮಾರ್ಟ್ ಫೋನಿನಲ್ಲಿ ಇಷ್ಟು ಚಂದ ಸೆಲ್ಫಿಯನ್ನು ಕ್ಲಿಕ್ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ.

ಕೃತಕ ಬುದ್ದಿ ಮತ್ತೆ:
ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ಉತ್ತಮವಾದ ಚಿತ್ರಗಳನ್ನು ಸೆರೆಹಿಡಿಯಲಿ ಎನ್ನುವ ಕಾಣಕ್ಕಾಗಿಯೇ ಕೃತಕ ಬುದ್ದಿಮತ್ತೆಯನ್ನು ಅಳವಡಿಸಲಾಗಿದೆ. ಇದು ರಿಯಲ್ ಟೈಮಿನಲ್ಲಿ ಆಬ್ಜೆಟ್ ಗಳನ್ನು ಗುರುತಿಸುವುದಲ್ಲದೇ ಅವುಗಳಿಗೆ ಬೇಕಾದ ಸೆಟ್ಟಿಂಗ್ಸ್ ಅನ್ನು ರೆಡಿ ಮಾಡಿಕೊಳ್ಳುತ್ತದೆ. ಟಾಪ್ ಎಂಡ್ ಕ್ಯಾಮೆರಾದಲ್ಲಿ ತೆಗೆದ ಫೋಟೋಗಳ ಮಾದರಿಯಲ್ಲಿಯೇ ಚಿತ್ರಗಳನ್ನು ಸೆರೆಹಿಡಿಯಲಿದೆ.

FHD+ ಡಿಸ್‌ಪ್ಲೇಯೂ ಇದರಲಿದೆ:
ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನಿನಲ್ಲಿ ಬಳಕೆದಾರರು ಉತ್ತಮ ವಿಡಿಯೋಗಳನ್ನು ನೋಡುವಂತೆ ವಿನ್ಯಾಸ ಮಾಡಲಾಗಿದ್ದು, ಇದಕ್ಕಾಗಿಯೇ 19:5:9 ಅನುಪಾತದ 6.3 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ ಇದು FHD+ ಗುಣಮಟ್ಟವನ್ನು ಹೊಂದಿದ್ದು, ಇದು ವಿಡಿಯೋ ನೋಡುವ ಅನುಭವನ್ನು ಉತ್ತಮ ಪಡಿಸಲಿದೆ. ದೊಡ್ಡದಾದ ಡಿಸ್‌ಪ್ಲೇ ಬಳಕೆಗೆ ದೊರೆಯಲಿದ್ದು, ಗೇಮ್ ಆಡುವ ಅನುಭವವು ಉತ್ತಮವಾಗಿರಲಿದೆ. ಇದು ವಾಟರ್ ಡ್ರಾಪ್ ಪ್ರೋಟೆಕ್ಷನ್ ಅನ್ನು ಹೊಂದಿದೆ. ಅಲ್ಲದೇ ಎಡ್ಜ್ ಟು ಎಡ್ಜ್ ವಿನ್ಯಾಸ ಇರುವುದರಿಂದ ಗೇಮ್ ಅಡುವ ಅನುಭವ ಸಹ ಬೆಸ್ಟ್ ಆಗಿದೆ.

ಟಾಪ್ ಹಾರ್ಡ್ ವೇರ್:
ವೇಗವಾಗಿ ಕಾರ್ಯನಿರ್ವಹಿಸಲಿ ಎನ್ನುವ ಕಾರಣಕ್ಕಾಗಿ 6 GB RAM ನೊಂದಿಗೆ ಕಾಣಿಸಿಕೊಂಡಿರುವ ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ಮಿಡಿಯಾ ಟೆಕ್ ಹೆಲಿಯೊ P60 ಪ್ರೋಸೆಸರ್ ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಹೆಚ್ಚಿನ ಗ್ರಾಫಿಕ್ಸ್ ಪ್ಲೇ ಮಾಡುವ ಸಲುವಾಗಿ ARM ಮಾಲಿ-G72 GPUವನ್ನು ಕಾಣಬಹುದಾಗಿದೆ. 64GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದ್ದು, 256 GB ವರೆಗೆ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ. ಎರಡು ಸಿಮ್ ಮತ್ತು ಮೆಮೊರಿ ಕಾರ್ಡ್ ಅನ್ನು ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಡಲಿದೆ.


Click it and Unblock the Notifications




