Home
ಮೊಬೈಲ್

ಆಗಸ್ಟ್ 21ಕ್ಕೆ ಎಂಟ್ರಿ ನಿಡುತ್ತಿರುವ 'ಒಪ್ಪೊ ಎಫ್‌ 9 ಪ್ರೋ' ಸ್ಮಾರ್ಟ್‌ಪೋನ್ ವಿಶೇಷತೆಗಳು!!

By Bhaskar N J

ನೋಡು ನೋಡುತ್ತಿರುವಂತೆಯೇ ಕಳೆದ ಕೆಲವು ವರ್ಷಗಳಲ್ಲಿ ಮೊಬೈಲ್‌ಗಳು ಹೇಗೆ ವಿಸ್ಮಯಕಾರಿಯಾಗಿ ಬದಲಾದವು ಅಲ್ಲವೇ?. ಕೇವಲ ಕರೆ ಮಾಡುವುದಕ್ಕೆ ಸೀಮಿತವಾಗಿದ್ದ ಮೊಬೈಲ್‌ಗಳು ನಂತರ ದಿನಗಳಲ್ಲಿ ಮಲ್ಟಿಮೀಡಿಯಾ ಡಿವೈಸ್‌ಗಳಾಗಿ, ಕೃತಕ ಬುದ್ದಿಮತ್ತೆಯ ಸಾಧನಗಳಾಗಿ ಬದಲಾಗಿರುವುದಲ್ಲದೇ, ಈಗ ಮತ್ತಷ್ಟು ಮುಂದೆ ಬಂದಿವೆ ಎಂದರೆ ಆಶ್ಚರ್ಯವಾಗದೇ ಇರದು.!

ಹೌದು, ಸ್ಮಾರ್ಟ್‌ಫೋನ್‌ಗಳು ಈಗ ಕೃತಕ ಬುದ್ದಿಮತ್ತೆಯ ಸಾಧನಗಳನ್ನೂ ಸಹ ಮೀರಿದ್ದು ಮೊಬೈಲ್ ಬಳಕೆದಾರರು ಅಂದುಕೊಂಡಿದ್ದಕಿಂತಲೂ ಹೆಚ್ಚು ಕೆಲಸವನ್ನು ಮಾಡಬಲ್ಲ ಶಕ್ತಿಯನ್ನು ಹೊಂದಿವೆ. ಅಸಾಧ್ಯವೆಂದು ಪರಿಗಣಿಸಲಾದ ಕಾರ್ಯಗಳನ್ನು ಸಹ ಸಾಧ್ಯವಾಗಿಸಿದ ಕೀರ್ತಿ ಇಂದಿನ ಸ್ಮಾರ್ಟ್‌ಪೋನ್‌ಗಳಿಗೆ ಸಿಕ್ಕಿದೆ ಎಂದರೆ ಖಂಡಿತವಾಗಿಯೂ ಇದು ತಪ್ಪಾಗಲಾರದು.

ಆಗಸ್ಟ್ 21ಕ್ಕೆ ಎಂಟ್ರಿ ನಿಡುತ್ತಿರುವ 'ಒಪ್ಪೊ ಎಫ್‌ 9 ಪ್ರೋ' ವಿಶೇಷತೆಗಳು!!

ಇಂತಹ ಫೋನ್‌ಗಳ ಪಟ್ಟಿಗೆ ಸೇರಿಕೊಳ್ಳಲು ಒಪ್ಪೊ ಕಂಪೆನಿಯ ಮತ್ತೊಂದು ಮುಂದಿನ ತಿಂಗಳು ಮಾರುಕಟ್ಟೆಗೆ ಕಾಲಿಡುತ್ತಿದೆ .ಗ್ರಾಹಕರಿಗೆ ಅಗತ್ಯಕ್ಕಿಂತ ಹೆಚ್ಚಿನದನ್ನು ನೀಡಲು 'ಒಪ್ಪೊ ಎಫ್‌ 9 ಪ್ರೋ' ಈಗಾಗಲೇ ತಯಾರಾಗಿದೆ. ಹಾಗಾಗಿ, ಈ ಲೇಖನದಲ್ಲಿ ಎಲ್ಲರನ್ನು ಚಕಿತಗೊಳಿಸಿರುವ 'ಒಪ್ಪೊ ಎಫ್‌ 9 ಪ್ರೋ'ಸ್ಮಾರ್ಟ್‌ಫೋನ್ ಬಗೆಗೆ ತಿಳಿಸುವ ಕೆಲಸವನ್ನು ನಾನು ಮಾಡುತ್ತಿದ್ದೇನೆ.

VOOC ಚಾರ್ಜಿಂಗ್ ತಂತ್ರಜ್ಞಾನ!

VOOC ಚಾರ್ಜಿಂಗ್ ತಂತ್ರಜ್ಞಾನ!

ಇಂದಿನ ಯುವಜನತೆಯ ಚಾರ್ಜಿಂಗ್ ಅಗತ್ಯತೆಗೆ ಬದಲಾಗಿರುವ 'ಒಪ್ಪೊ ಎಫ್‌ 9 ಪ್ರೋ' ಸ್ಮಾರ್ಟ್‌ಪೋನ್ VOOC ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ ಎಂದರೆ ನೀವು ಆಶ್ಚರ್ಯ ಪಡಲೇಬೇಕು. ಏಕೆಂದರೆ, VOOC ಒಂದು ಕ್ರಾಂತಿಕಾರಿ ವೇಗದ ಚಾರ್ಜಿಂಗ್ ತಂತ್ರಜ್ಞಾನವಾಗಿದ್ದು, ಮಿಂಚಿನ ವೇಗದಲ್ಲಿ ಸ್ಮಾರ್ಟ್‌ಪೋನ್ ಅನ್ನು ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

4 ಪಟ್ಟು ಹೆಚ್ಚಿನ ವೇಗದಲ್ಲಿ ಚಾರ್ಜ್!

4 ಪಟ್ಟು ಹೆಚ್ಚಿನ ವೇಗದಲ್ಲಿ ಚಾರ್ಜ್!

'ಒಪ್ಪೊ ಎಫ್‌ 9 ಪ್ರೋ' ಸ್ಮಾರ್ಟ್‌ಪೋನಿನಲ್ಲಿರುವ VOOC ಚಾರ್ಜಿಂಗ್ ತಂತ್ರಜ್ಞಾನದಿಂದ ಸಾಂಪ್ರದಾಯಿಕ 5V / 1A ಚಾರ್ಜಿಂಗ್ ತಂತ್ರಜ್ಞಾನಕ್ಕಿಂತ 4 ಪಟ್ಟು ವೇಗವನ್ನು ಚಾರ್ಜ್ ಮಾಡುವ (5V /4A) ಶಕ್ತಿ ಈ ತಂತ್ರಜ್ಞಾನಕ್ಕಿದೆ. ಹಾಗಾಗಿ, 'ಒಪ್ಪೊ ಎಫ್‌ 9 ಪ್ರೋ' ಸ್ಮಾರ್ಟ್‌ಪೋನ್ ಎಂದೂ ಬ್ಯಾಟರಿ ಖಾಲಿಯಾಗುವ ಸಮಸ್ಯೆಯನ್ನು ಎದುರಿಸುವುದಿಲ್ಲ ಎಂದು ಹೇಳಬಹುದು.

ಕಂಪ್ಯೂಟರ್‌ಗಿಂತ ಹೆಚ್ಚು ಶಕ್ತಿಶಾಲಿ

ಕಂಪ್ಯೂಟರ್‌ಗಿಂತ ಹೆಚ್ಚು ಶಕ್ತಿಶಾಲಿ

2018 ನೇ ವರ್ಷದ ಸ್ಮಾರ್ಟ್‌ಫೋನ್‌ಗಳನ್ನು ಒಂದರ್ಥದಲ್ಲಿ ಪಾಕೆಟ್ ಗಾತ್ರದ ಕಂಪ್ಯೂಟರ್‌ಗಳು ಎಂದರೆ ತಪ್ಪಾಗಲಾಗದು. ಏಕೆಂದರೆ, ಈಗಿನ ಸ್ಮಾರ್ಟ್‌ಫೋನ್‌ಗಳು ಒಂದು ಸಾಮಾನ್ಯ ಕಂಪ್ಯೂಟರ್‌ಗಿಂತ ಹೆಚ್ಚು ಶಕ್ತಿಶಾಲಿಯಾಗಿವೆ ಮತ್ತು ಹೆಚ್ಚು ಕೆಲಸಗಳನ್ನು ನಿರ್ವಹಿಸುತ್ತದೆ. ಇಂತಹ ಸಮಯದಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಲು 'ಒಪ್ಪೊ ಎಫ್‌ 9 ಪ್ರೋ' ತಯಾರಾಗಿದೆ.

98% ಸ್ಕ್ರೀನ್ ರೆಷ್ಯೂ!

98% ಸ್ಕ್ರೀನ್ ರೆಷ್ಯೂ!

98% ಸ್ಕ್ರೀನ್ ರೆಷ್ಯೂ ಸ್ಪೋರ್ಟ್ಸ್ ವಾಟರ್ ಪ್ರೂಫ್ ಬಾಡಿಯನ್ನು ಹೊತ್ತು ಮಾರುಕಟ್ಟೆಗೆ ಬರುತ್ತಿರುವ ಮೊದಲ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಗೆ 'ಒಪ್ಪೊ ಎಫ್‌ 9 ಪ್ರೋ' ಸ್ಮಾರ್ಟ್‌ಪೋನ್ ಪಾತ್ರವಾಗಲಿದೆ. ಹಾಗಾಗಿ, 'ಒಪ್ಪೊ ಎಫ್‌ 9 ಪ್ರೋ' ಸ್ಮಾರ್ಟ್‌ಪೋನ್ ಮಲ್ಟಿಮೀಡಿಯಾ ಮತ್ತು ಗೇಮಿಂಗ್ ಅನುಭವವನ್ನು ದುಪ್ಪಟ್ಟುಗೊಳಿಸಲಿದೆ ಎಂಬುದನ್ನು ನಾವು ಹೇಳಬೇಕಿಲ್ಲ.!

ರೋಮಾಂನಕಾರಿ ಬಣ್ಣಗಳಲ್ಲಿ ಸ್ಮಾರ್ಟ್‌ಫೋನ್!

ರೋಮಾಂನಕಾರಿ ಬಣ್ಣಗಳಲ್ಲಿ ಸ್ಮಾರ್ಟ್‌ಫೋನ್!

ಸ್ಮಾರ್ಟ್‌ಪೋನ್‌ಗಳು ಈಗ ಕೇವಲ ಅನುಕೂಲತೆಗೆ ಮಾತ್ರ ಬಳಕೆಯಾಗುತ್ತಿಲ್ಲ. ಬದಲಾಗಿ, ನಾವು ಹೊಂದಿರುವ ಸ್ಮಾರ್ಟ್‌ಫೋನ್‌ಗಳು ನಮ್ಮ ವ್ಯಕ್ತಿತ್ವ ಗುಣಲಕ್ಷಣಗಳನ್ನು ಪ್ರತಿಬಿಂಬಿಸುತ್ತವೆ ಎಂಬುದನ್ನು ತಪ್ಪು ಎನ್ನಲಾಗದು. ಸಯಾನ್, ಕೆಂಪು, ಪರ್ಪಲ್ ಮುಂತಾದ ರೋಮಾಂಚಕ ಬಣ್ಣಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡುತ್ತಿರುವ ಈ ಫೋನ್ ನಿಮ್ಮ ಆಯ್ಕೆಯಾಗಬಹುದು.

Best Mobiles in India

English summary
Todays millennial need a powerful and revolutionary product to ensure uninterrupted and power-packed performance. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+