ಐದು ನಿಮಿಷ ಚಾರ್ಜ್ ಮಾಡಿದ್ರೆ ಎರಡು ಗಂಟೆ ಬಳಸುವ ಫೋನ್ ಲಾಂಚ್ ಮಾಡಿದ ಒಪ್ಪೋ..!
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಅಭಿಮಾನಿಗಳನ್ನು ಸೃಷ್ಠಿಸಿಕೊಳ್ಳುತ್ತಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಒಪ್ಪೋ, ಹೊಸದಾಗಿ ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ತನ್ನದೇ ವಿಶೇಷತೆಗಳನ್ನು ಹೊಂದಿರುವ ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ಉತ್ತಮ ವಿನ್ಯಾಸದಿಂದ ಕೂಡಿದೆ. ಕೇವಲ ಐದು ನಿಮಿಷ ಚಾರ್ಜ್ ಮಾಡಿದರೆ ಎರಡು ಗಂಟೆಗಳ ಕಾಲ ಟಾಕ್ ಟೈಮ್ ಅನ್ನು ನೀಡಲಿದೆ ಈ ಫೋನ್.

ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ನೊಂದಿಗೆ ಮಾರುಕಟ್ಟೆಗೆ ಒಪ್ಪೋ F9 ಸ್ಮಾರ್ಟ್‌ಫೋನ್ ಸಹ ಲಾಂಚ್ ಆಗಿದ್ದು, ಬಳಕೆದಾರರಿಗೆ ಈ ಎರಡು ಫೋನ್‌ಗಳು ಭಿನ್ನ ಆಯ್ಕೆಗಳೊಂದಿಗೆ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಈ ಎರಡು ಸ್ಮಾರ್ಟ್‌ಫೋನ್‌ಗಳ ಕುರಿತ ಮಾಹಿತಿಯು ಮುಂದಿದೆ.

ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ವಿಶೇಷತೆಗಳು:
ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನಿನಲ್ಲಿ 19:5:9 ಅನುಪಾತದ 6.3 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ ಇದು FHD+ ಗುಣಮಟ್ಟವನ್ನು ಹೊಂದಿದ್ದು, ಇದು ವಿಡಿಯೋ ನೋಡುವ ಅನುಭವನ್ನು ಉತ್ತಮ ಪಡಿಸಲಿದೆ. ದೊಡ್ಡದಾದ ಡಿಸ್‌ಪ್ಲೇ ಬಳಕೆಗೆ ದೊರೆಯಲಿದ್ದು, ಗೇಮ್ ಆಡುವ ಅನುಭವವು ಉತ್ತಮವಾಗಿರಲಿದೆ.

ಪ್ರೋಸೆಸರ್
6 GB RAM ನೊಂದಿಗೆ ಕಾಣಿಸಿಕೊಂಡಿರುವ ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ಮಿಡಿಯಾ ಟೆಕ್ ಹೆಲಿಯೊ P60 ಪ್ರೋಸೆಸರ್ ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಹೆಚ್ಚಿನ ಗ್ರಾಫಿಕ್ಸ್ ಪ್ಲೇ ಮಾಡುವ ಸಲುವಾಗಿ ARM ಮಾಲಿ-G72 GPUವನ್ನು ಕಾಣಬಹುದಾಗಿದೆ. 64GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದ್ದು, 256 GB ವರೆಗೆ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಸೆಲ್ಫಿ ಕ್ಯಾಮೆರಾ:
ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ಸೆಲ್ಫಿಗಾಗಿಯೇ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇದರಲ್ಲಿ 25MP ಸೆಲ್ಪಿ ಕ್ಯಾಮೆರಾವನ್ನು ಮುಂಭಾಗದಲ್ಲಿ ಅಳವಡಿಸಲಾಗಿದ್ದು, HRD ಸೆನ್ಸಾರ್‌ಗಳನ್ನು ಒಳಗೊಂಡಿದೆ. ಬೇರೆ ಯಾವುದೇ ಸ್ಮಾರ್ಟ್ ಫೋನಿನಲ್ಲಿ ಇಷ್ಟು ಚಂದ ಸೆಲ್ಫಿಯನ್ನು ಕ್ಲಿಕ್ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ.

ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ:
ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 16 MP + 2 MP ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದೆ. ಇದು ಲೋ ಲೈಟಿಂಗ್‌ನಲ್ಲಿಯೂ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಶಕ್ತವಾಗಿದೆ ಎನ್ನಲಾಗಿದೆ. ಇದಲ್ಲದೇ ಡಿಪ್ತ್ ಆಫ್ ಫಿಲ್ಡ್ ಉತ್ತಮವಾಗಿ ಮೂಡಿಬರಲಿದೆ.

ಸೂಪರ್ ಫಾಸ್ಟ್ ಚಾರ್ಜಿಂಗ್:
ಕೇಲವ 5 ನಿಮಿಷ ಚಾರ್ಜ್ ಮಾಡಿದರೆ ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ 2 ಗಂಟೆಗಳ ಕಾಲ ಬಳಕೆ ಮಾಡಿಕೊಳ್ಳ ಬಹುದಾಗಿದೆ. ಇದಕ್ಕಾಗಿಯೇ 5V1A ಚಾರ್ಜಿಂಗ್ ಟೆಕ್ನಾಲಜಿಯನ್ನು ನೀಡಲಾಗಿದೆ. 3500mAh ಬ್ಯಾಟರಿಯನ್ನು ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ.

ಸೇಲ್ ಆಫರ್:
ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟಿನಲ್ಲಿ ಮತ್ತು ಅಮೆಜಾನ್‌ನಲ್ಲಿ ಮಾರಾಟವಾಗಲಿದ್ದು, ಇಂದಿನಿಂದಲೇ ಪ್ರೀ ಬುಂಕಿಂಗ್‌ಗೆ ಲಭ್ಯವಿದೆ. ಇದಲ್ಲದೇ ICICI ಕಾರ್ಡುದಾರರು 10% ಕಡಿತವನ್ನು ಪಡೆಯಬಹುದಾಗಿದೆ. ಇದಲ್ಲದೇ ಜಿಯೋ 3.2 TB ಡೇಟಾವನ್ನು ಉಚಿತವಾಗಿ ನೀಡಲಿದೆ ಎನ್ನಲಾಗಿದೆ.

ಒಪ್ಪೋ F9 ವಿಶೇಷತೆಗಳು;
ಎರಡು ಸ್ಮಾರ್ಟ್‌ಫೋನ್‌ಗಳು ಒಂದೇ ಮಾದರಿಯ ವಿಶೇಷತೆಗಳನ್ನು ಹೊಂದಿದೆ ಆದರೆ ಒಪ್ಪೋ F9 ಸ್ಮಾರ್ಟ್‌ಫೋನಿನಲ್ಲಿ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಅಲ್ಲದೇ ಮುಂಭಾಗದಲ್ಲಿ 16 MP ಕ್ಯಾಮೆರಾವನ್ನು ಕಾಣಬಹುದಾಗಿದೆ.

ಬೆಲೆ:
ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ರೂ.23,990ಕ್ಕೆ ಮಾರಾಟವಾಗಲಿದ್ದು, ಇದೇ ಮಾದರಿಯಲ್ಲಿ ಒಪ್ಪೋ F9 ಸ್ಮಾರ್ಟ್‌ಫೋನ್ ರೂ.19,990ಕ್ಕೆ ದೊರೆಯಲಿದೆ. ಆಗಸ್ಟ್ 31ರಿಂದ ಮಾರಾಟಕ್ಕೆ ಲಭ್ಯವಿರಲಿದೆ.


Click it and Unblock the Notifications




