Home
ಮೊಬೈಲ್

ನೋಚ್‌ಗೆ ಗುಡ್ ಬೈ ಹೇಳಿದ ಒಪ್ಪೋ: ಭವಿಷ್ಯದ 'ವಾಟರ್ ಡ್ರಾಪ್ ಡಿಸ್‌ಪ್ಲೇ' ಫೋನ್ ...!

By Srinidhi

ಇಂದಿನ ದಿನದಲ್ಲಿ ಮಾರುಕಟ್ಟೆಯಲ್ಲಿ ಒಂದು ಸ್ಮಾರ್ಟ್‌ಫೋನ್‌ ಖರೀದಿ ಮಾಡಲು ಹೋದ ಸಂದರ್ಭದಲ್ಲಿ ಸಾಕಷ್ಟು ದೊಡ್ಡ ಪ್ರಮಾಣದ ಗೊಂದಲವು ನಿರ್ಮಾಣವಾಗುವುದು ಖಂಡಿತ. ಕಾರಣ ಹೆಚ್ಚಿನ ಪ್ರಮಾಣದ ಸ್ಮಾರ್ಟ್‌ಫೋನ್ ಆಯ್ಕೆಗಳನ್ನು ಮಾರುಕಟ್ಟೆಯಲ್ಲಿ ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಉತ್ತಮ ಬ್ಯಾಟರಿ, ದೊಡ್ಡ ಡಿಸ್‌ಪ್ಲೇ ಜೊತೆಗೆ ವೇಗದ CPU ಸೇರಿದಂತೆ ವೇಗದ ಚಾರ್ಜಿಂಗ್ ಸೇರಿದಂತೆ ಎಲ್ಲವನ್ನು ಹೊಂದಿರುವ ಒಂದು ಸ್ಮಾರ್ಟ್‌ಫೋನ್‌ ಅನ್ನು ನಿಮಗೆ ತಿಳಿಸುವ ಪ್ರಯತ್ನವೇ ಇದಾಗಿದೆ.

ಟಾಪ್ ಎಂಡ್ ಮತ್ತು ಮಾರುಕಟ್ಟೆಯ ಟ್ರೆಂಡ್ ಆಗಿರುವ ವಿಶೇಷತೆಗಳನ್ನು ಹೊಂದಿದ ಫೋನ್ ಖರೀದಿಸಿದರೆ ಮಾತ್ರವೇ ನೀವು ಕೊಡುವ ಬೆಲೆಗೆ ವ್ಯಾಲ್ಯು ಇರಲಿದೆ. ಇದಕ್ಕಾಗಿಯೇ ಒಪ್ಪೋ ಮಾರುಕಟ್ಟೆಗೆ F ಸರಣಿಯಲ್ಲಿ ಮತ್ತೊಂದು ಬೊಂಬಾಟ್ ಫೋನ್ ಅನ್ನು ಲಾಂಚ್ ಮಾಡಿದೆ. ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಈಗಾಗಲೇ ಕಾಣಿಸಿಕೊಂಡಿದೆ. ರೂ.23,990ಕ್ಕೆ ಮಾರಾಟವಾಗುವ ಈ ಸ್ಮಾರ್ಟ್ಫೋನ್ ಮಧ್ಯಮ ಸರಣಿಯ ಪ್ರೀಮಿಯಮ್ ಫೋನ್ ಎನ್ನಿಸಿಕೊಂಡಿದೆ. ಉತ್ತವಮ ತಂತ್ರಜ್ಞಾನದೊಂದಿಗೆ ಫಾಸ್ಟ್‌ ಚಾರ್ಜಿಂಗ್ ಅನ್ನು ಇದರಲ್ಲಿ ನೋಡಬಹುದಾಗಿದೆ. ಈ ಹಿನ್ನಲೆಯಲ್ಲಿ ನೀವು ಈ ಸ್ಮಾರ್ಟ್‌ಫೋನ್ ಖರೀದಿಸುವ ಯೋಜನೆಯಲ್ಲಿದ್ದರೆ ಈ ಲೇಖನ ನಿಮಗೆ ಸಹಾಯವನ್ನು ಮಾಡಲಿದೆ.

ಬೆಸ್ಟ್ ಇನ್ ಕ್ಲಾಸ್ ಡಿಸ್‌ಪ್ಲೇ:

ಬೆಸ್ಟ್ ಇನ್ ಕ್ಲಾಸ್ ಡಿಸ್‌ಪ್ಲೇ:

ಇಂದಿನ ಸ್ಮಾರ್ಟ್‌ಫೋನ್‌ಗಳಲ್ಲಿ ಡಿಸ್‌ಪ್ಲೇ ಅತ್ಯಂತ ಮುಖ್ಯವಾದ ಅಂಗವಾಗಿದೆ. ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ಹೊಸ ವಿನ್ಯಾಸವನ್ನು ಹೊಂದಿದ್ದು, ನೋಚ್ ಬದಲಿಗೆ ವಾಟರ್ ಡ್ರಾಪ್ ವಿನ್ಯಾಸದಿಂದ ಕೂಡಿದೆ. 6.3 ಇಂಚಿನ FHD+ ಗುಣಮಟ್ಟದ ಡಿಸ್‌ಪ್ಲೇಯನ್ನು ಇದರಲ್ಲಿ ಕಾಣಬಹುದಾಗಿದ್ದು, ಇದು 19.5:9 ಅನುಪಾತದಿಂದ ಕೂಡಿರುವ ಡಿಸ್‌ಪ್ಲೇ ವಿಡಿಯೋ ನೋಡಲು ಮತ್ತು ಗೇಮ್ ಆಡಲು ಹೇಳಿ ಮಾಡಿಸಿದಂತೆಯೇ ಇದೆ.

ಪ್ರೀಮಿಯಮ್ ಡಿಸೈನ್ ಮತ್ತು ಬೇರೆಲ್ಲಿಯೂ ಇಲ್ಲದ ಬಣ್ಣಗಳು:

ಪ್ರೀಮಿಯಮ್ ಡಿಸೈನ್ ಮತ್ತು ಬೇರೆಲ್ಲಿಯೂ ಇಲ್ಲದ ಬಣ್ಣಗಳು:

ಡಿಸೈನ್ ವಿಚಾರದಲ್ಲಿಯೂ ಹೊಸದಾಗಿ ಕಾಣಿಸಿಕೊಂಡಿರುವ ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್, ಮಾರುಕಟ್ಟೆಯಲ್ಲಿ ಇದುವರೆಗೂ ಕಾಣಿಸಿಕೊಳ್ಳದ ಬಣ್ಣಗಳಲ್ಲಿ ಮಾರಾಟವಾಗಲಿದೆ. ಸ್ಟಾರಿ ಪರ್ಪಲ್, ಸನ್ರೈಸ್ ರೆಡ್, ಮತ್ತು ಟ್ವಿಲೈಟ್ ಬ್ಲೂ ಬಣ್ಣಗಳು ಮಾರುಕಟ್ಟೆಗೆ ಹೊಸದಾಗಿದೆ. ಅಲ್ಲದೇ ಒನ್‌ ಹ್ಯಾಂಡ್ ಯೂಸ್‌ಗೆ ಸಹಾಯವಾಗುವಂತೆ ನಿರ್ಮಿಸಲಾಗಿದೆ.

ಫಾಸ್ಟ್ ಅಲ್ಲ ಸೂಪರ್ ಫಾಸ್ಟ್ ಚಾರ್ಜಿಂಗ್:

ಫಾಸ್ಟ್ ಅಲ್ಲ ಸೂಪರ್ ಫಾಸ್ಟ್ ಚಾರ್ಜಿಂಗ್:

ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಯಾರು ನೀಡದ ಸೂಪರ್ ಫಾಸ್ಟ್ ಚಾರ್ಜಿಂಗ್ ಅನ್ನು ನೀಡಿದೆ. ಹೊಸದಾಗಿ ಫ್ಲಾಷ್ ಚಾರ್ಜಿಂಗ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಫ್ಲಾಷ್ ಆಗಿ ಬ್ಯಾಟರಿಯನ್ನು ಚಾರ್ಜ್ ಮಾಡಲಿದೆ. ಕಡಿಮೆ ಸಮಯದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಚಾರ್ಜ್ ಮಾಡಿಕೊಡಲಿದೆ. ಸಾಮಾನ್ಯ ಚಾರ್ಜರ್ ಗಿಂತಲೂ 4 ಪಟ್ಟು ವೇಗದಲ್ಲಿ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಿಕೊಡುತ್ತದೆ.

ಫೋಟೋ ತೆಗೆಯುವ ಕೃತಕ ಬುದ್ದಿಮತ್ತೆ:

ಫೋಟೋ ತೆಗೆಯುವ ಕೃತಕ ಬುದ್ದಿಮತ್ತೆ:

ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನಿನಲ್ಲಿ ಉತ್ತಮವಾದ ಚಿತ್ರಗಳನ್ನು ಸೆರೆಹಿಡಿಯುವ ಸಲುವಾಗಿ ಕೃತಕ ಬುದ್ದಿಮತ್ತೆಯನ್ನು ಅಳವಡಿಸಲಾಗಿದೆ. ರಿಯಲ್ ಟೈಮಿನಲ್ಲಿ ಆಬ್ಜೆಟ್ ಗಳನ್ನು ಗುರುತಿಸುವುದಲ್ಲದೇ ಅವುಗಳಿಗೆ ಬೇಕಾದ ಸೆಟ್ಟಿಂಗ್ಸ್ ಅನ್ನು ರೆಡಿ ಮಾಡಿಕೊಳ್ಳುತ್ತದೆ. ಹಿಂಭಾಗದ 16 MP + 2 MP ಡ್ಯುಯಲ್ ಕ್ಯಾಮೆರಾ ಲೋ ಲೈಟಿಂಗ್‌ನಲ್ಲಿಯೂ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಶಕ್ತವಾಗಿದೆ. ಇದಲ್ಲದೇ ಡಿಪ್ತ್ ಆಫ್ ಫಿಲ್ಡ್ ಉತ್ತಮವಾಗಿ ಮೂಡಿಬರಲಿದೆ. ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ಸೆಲ್ಫಿಗಾಗಿಯೇ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇದರಲ್ಲಿ 25MP ಸೆಲ್ಪಿ ಕ್ಯಾಮೆರಾವನ್ನು ಮುಂಭಾಗದಲ್ಲಿ ಅಳವಡಿಸಲಾಗಿದ್ದು, HRD ಸೆನ್ಸಾರ್‌ಗಳನ್ನು ಒಳಗೊಂಡಿದೆ.

ಕನೆಕ್ಟಿವಿಟಿ :

ಕನೆಕ್ಟಿವಿಟಿ :

ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನಿನಲ್ಲಿ ಟ್ರಿಪಲ್ ಹೈಬ್ರಿಡ್ ಸಿಮ್ ಸ್ಲಾಟ್ ಕಾಣಬಹುದಾಗಿದೆ. ಇದರಲ್ಲಿ ನೀವು ಎರಡು ಸಿಮ್ ಕಾರ್ಡ್‌ನೊಂದಿಗೆ ಮತ್ತೊಂದು ಮೆಮೊರಿ ಕಾರ್ಡ್ ಹಾಕಿಕೊಳ್ಳಬಹುದಾಗಿದೆ. ಮಾರುಕಟ್ಟೆಯಲ್ಲಿ ಇದೇ ಮೊದಲು ಈ ಮಾದರಿಯ ಆಯ್ಕೆಯನ್ನು ಕಾಣಬಹುದಾಗಿದೆ.

ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌;

ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌;

ವೇಗವಾಗಿ ಕಾರ್ಯನಿರ್ವಹಿಸಲಿ ಎನ್ನುವ ಕಾರಣಕ್ಕಾಗಿ 6 GB RAM ನೊಂದಿಗೆ ಕಾಣಿಸಿಕೊಂಡಿರುವ ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್, ಆಂಡ್ರಾಯ್ಡ್ ಒರಿಯೋ ದಲ್ಲಿ ಕಾರ್ಯನಿರ್ವಹಿಸಲಿದೆ ಮತ್ತು ಇದರೊಂದಿಗೆ ಕಲರ್ OS 5.2ವನ್ನು ಕಾಣಬಹುದಾಗಿದ್ದು, ಇದು ಬಳಕೆದಾರರಿಗೆ ಉತ್ತಮ ಆಯ್ಕೆಗಳನ್ನು ನೀಡಲಿದೆ.

ಬೆಸ್ಟ್ ಇನ್ ಕ್ಲಾಸ್ ಸ್ಮಾರ್ಟ್‌ಫೋನ್ ಎಕ್ಸ್ ಪಿರೀಯನ್ಸ್:

ಬೆಸ್ಟ್ ಇನ್ ಕ್ಲಾಸ್ ಸ್ಮಾರ್ಟ್‌ಫೋನ್ ಎಕ್ಸ್ ಪಿರೀಯನ್ಸ್:

ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ಆಡ್ವಾನ್ಸ್ ಕ್ಯಾಮೆರಾ, ಫರ್ಫಾರ್ಮೆನ್ಸ್ ಸೇರಿದಂತೆ ಕ್ಲಾಸ್ ಆಯ್ಕೆಗಳನ್ನು ಹೊಂದಿದೆ. ಇಯರ್ ಫೋನ್ ಜಾಕ್ ಸೇರಿದಂತೆ ಡೆಡಿಕೇಟೆಟ್ ಮೆಮೊರಿ ಕಾರ್ಡ್ ಸ್ಲಾಟ್ ನೀಡಲಾಗಿದೆ. ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನ್ ಬೆಸ್ಟ್ ಫೋನ್ ಎನ್ನಬಹುದಾಗಿದೆ.

Best Mobiles in India

English summary
OPPO F9 Pro: Next gen. technology features without compromising on basics. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+