Home
ಮೊಬೈಲ್

ಒಪ್ಪೋ ಸ್ಮಾರ್ಟ್‌ಫೋನ್‌ ಖರೀದಿಗೆ ಯೋಚಿಸುತ್ತಿದ್ದೀರಾ..? ಹಾಗಾದ್ರೆ ಈ ಆಫರ್‌ಗಳನ್ನೊಮ್ಮೆ ನೋಡಿ..!

By Gizbot Bureau

ಫ್ಲಿಪ್‌ಕಾರ್ಟ್‌ನ ಒಪ್ಪೋ ಫಂಟಾಸ್ಟಿಕ್ ಡೇಸ್ ಯೋಜನೆ ಹೆಚ್ಚು ಲಾಭದಾಯಕ ಕೊಡುಗೆಗಳೊಂದಿಗೆ ಈ ವರ್ಷ ಮರಳಿ ಬಂದಿದೆ. ಫೆಬ್ರವರಿ 24 ರಿಂದ ಫೆಬ್ರವರಿ 27 ರವರೆಗೆ ಒಪ್ಪೋ ಈ ಸೇಲ್‌ನ್ನು ನಡೆಸುತ್ತಿದ್ದು, ಅನೇಕ ಒಪ್ಪೋ ಹ್ಯಾಂಡ್‌ಸೆಟ್‌ಗಳ ಮೇಲೆ ಉತ್ತಮ ಆಫರ್‌ಗಳನ್ನು ನೀಡುತ್ತಿದೆ. ಅದರಲ್ಲಿ ಕೆಲವು ಫೋನ್‌ಗಳನ್ನು ಕೆಳಗೆ ನೀಡಲಾಗಿದೆ.

ಆಫರ್‌

ಪ್ರಮುಖ ಆಫರ್‌ಗಳೆಂದರೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಶೇ.5ರಷ್ಟು ಅನ್‌ಲಿಮಿಟೆಡ್‌ ಕ್ಯಾಶ್‌ಬ್ಯಾಕ್, ಆಕ್ಸಿಸ್ ಬ್ಯಾಂಕ್ ಬಜ್‌ಕ್ರೆಡಿಟ್ ಕಾರ್ಡ್‌ನೊಂದಿಗೆ ಹೆಚ್ಚುವರಿ ಶೇ.5ರಷ್ಟು ರಿಯಾಯಿತಿ ದೊರೆಯುತ್ತದೆ. ಇವುಗಳೊಂದಿಗೆ ಹೆಚ್ಚುವರಿ ರಿಯಾಯಿತಿಗಳು, ಇಎಂಐ ಯೋಜನೆಗಳು, ವಿನಿಮಯ ಸೇರಿ ಅನೇಕ ಆಫರ್‌ಗಳು ಗ್ರಾಹಕರಿಗೆ ದೊರೆಯುತ್ತವೆ.

ಒಪ್ಪೋ ಎಫ್ 11 ಪ್ರೊ

ಒಪ್ಪೋ ಎಫ್ 11 ಪ್ರೊ

ಈ ಸ್ಮಾರ್ಟ್‌ಫೋನ್‌ನ 6GB RAM ಮತ್ತು 64GB ಮೆಮೊರಿ ಆವೃತ್ತಿಯ ಬೆಲೆ 15,990 ರೂ. ಆಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಸಾಧನವನ್ನು ಖರೀದಿಸಿದಾಗ ನಿಮಗೆ ಹೆಚ್ಚುವರಿ 13,000 ರೂ. ರಿಯಾಯಿತಿ ಸಿಗುತ್ತದೆ. ಈ ಹ್ಯಾಂಡ್‌ಸೆಟ್‌ನ ಇಎಂಐ 1,333 ರೂ.ಯಿಂದ ಪ್ರಾರಂಭವಾಗುತ್ತದೆ.

ಒಪ್ಪೋ ರೆನೋ 10x ಜೂಮ್

ಒಪ್ಪೋ ರೆನೋ 10x ಜೂಮ್

ಇದು, 4065 mAh ಬ್ಯಾಟರಿ, 48MP ಟ್ರಿಪಲ್ ರಿಯರ್ ಲೆನ್ಸ್ ಕ್ಯಾಮೆರಾ, ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಸೆನ್ಸಾರ್ ಮತ್ತು VOOC 3.0 ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ. 8GB RAM ಮತ್ತು 256GB ಮೆಮೊರಿ ಆಯ್ಕೆಗೆ 49,999 ರೂ. ಬೆಲೆ ಹೊಂದಿದೆ.

ಒಪ್ಪೋ A3s

ಒಪ್ಪೋ A3s

ಈ ಹ್ಯಾಂಡ್‌ಸೆಟ್‌ನಲ್ಲಿ ಸಾಕಷ್ಟು ಅದ್ಭುತ ವೈಶಿಷ್ಟ್ಯಗಳಿವೆ. ಇದು ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು, ಸೊಗಸಾದ ವೀಕ್ಷಣೆ ಅನುಭವವನ್ನು ನೀಡುತ್ತದೆ. ಇದರ 4GB RAM ಮತ್ತು 64GB ಮೆಮೊರಿ ಆಯ್ಕೆಯು 7,990 ರೂ.ಗೆ ದೊರೆಯುತ್ತದೆ.

ಒಪ್ಪೋ ಎ5 2020

ಒಪ್ಪೋ ಎ5 2020

ಕ್ವಾಡ್ ರಿಯರ್ ಕ್ಯಾಮೆರಾ, 8MP ಫ್ರಂಟ್ ಕ್ಯಾಮೆರಾ ಮತ್ತು 5000 mAh ಬ್ಯಾಟರಿಯನ್ನು ಇದು ಹೊಂದಿದೆ. ಈ ಹ್ಯಾಂಡ್‌ಸೆಟ್‌ನ 3GB RAM / 64GB ಮೆಮೊರಿ ಆವೃತ್ತಿ 11,490 ರೂ.ಗೆ ದೊರೆಯುತ್ತದೆ.

ಒಪ್ಪೋ ಎ9 2020

ಒಪ್ಪೋ ಎ9 2020

ಈ ಸ್ಮಾರ್ಟ್‌ಫೋನ್ 16MP ಫ್ರಂಟ್ ಕ್ಯಾಮೆರಾ, 48MP ಕ್ವಾಡ್ ರಿಯರ್ ಕ್ಯಾಮೆರಾ ಮತ್ತು 5000 mAh ಬ್ಯಾಟರಿ ಹೊಂದಿದೆ. ನೀವು ಈ ಸಾಧನವನ್ನು ಶೇ.15ರಷ್ಟು ರಿಯಾಯಿತಿಯೊಂದಿಗೆ 15,990 ರೂ.ಗೆ ಖರೀದಿಸಬಹುದು.

ಒಪ್ಪೋ ರೆನೋ2 ಎಫ್

ಒಪ್ಪೋ ರೆನೋ2 ಎಫ್

48MP ಕ್ವಾಡ್ ರಿಯರ್ ಕ್ಯಾಮೆರಾ, 4000 mAh ಬ್ಯಾಟರಿ ಮತ್ತು 6.5 ಇಂಚಿನ ಡಿಸ್‌ಪ್ಲೇ ಹ್ಯಾಂಡ್‌ಸೆಟ್‌ನ ಪ್ರಮುಖ ಲಕ್ಷಣವಾಗಿದೆ. 8GB RAM ಮತ್ತು 128 GB ಮೆಮೊರಿ ಆಯ್ಕೆ 21,990 ರೂ. ಲಭ್ಯವಿದೆ.

ಒಪ್ಪೋ ಎ1ಕೆ

ಒಪ್ಪೋ ಎ1ಕೆ

ಇದು 5 MP ಫ್ರಂಟ್‌ ಕ್ಯಾಮೆರಾ ಹೊಂದಿದ್ದು, ನೀವು ವಿಶಾಲ ಗುಂಪಿನ ಚಿತ್ರಗಳನ್ನು ಹೆಚ್ಚಿನ ನಿಖರತೆಯೊಂದಿಗೆ ಸೆರೆಹಿಡಿಯಬಹುದು. 2GB RAM ಮತ್ತು 32GB ಮೆಮೊರಿಯ ಮೂಲ ಆವೃತ್ತಿಯ ಬೆಲೆ 7,490 ರೂ. ಆಗಿದೆ.

ಒಪ್ಪೋ A5s

ಒಪ್ಪೋ A5s

ಈ ಮೊಬೈಲ್ ಫೋನ್ 4230 mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. 2GB RAM ಮತ್ತು 32GB ಮೆಮೊರಿಯ ಆವೃತ್ತಿ 8,490 ರೂ.ಗೆ ಸಿಗುತ್ತದೆ.

ಒಪ್ಪೋ ಎಫ್9

ಒಪ್ಪೋ ಎಫ್9

4GB RAM ಮತ್ತು 64GB ಮೆಮೊರಿಯ ಈ ಹ್ಯಾಂಡ್‌ಸೆಟ್ 21,990 ರೂ.ಗೆ ಲಭ್ಯವಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಸಾಧನವನ್ನು ಖರೀದಿಸಿದಾಗ ವಿನಿಮಯದಲ್ಲಿ 14,050 ರೂ. ರಿಯಾಯಿತಿ ಪಡೆಯುತ್ತಿರಿ. ಫೋನ್‌ಗಾಗಿ ಇಎಂಐ ಸೌಲಭ್ಯವು ಇದ್ದು, 1,833 ರೂ. ಪ್ರಾರಂಭವಾಗುತ್ತದೆ.

ಒಪ್ಪೋ ಎಫ್9 ಪ್ರೊ

ಒಪ್ಪೋ ಎಫ್9 ಪ್ರೊ

ಇದು 3500 mAh ಬ್ಯಾಟರಿ, ಡ್ಯುಯಲ್ ರಿಯರ್ ಕ್ಯಾಮೆರಾ, 25MP ಫ್ರಂಟ್ ಕ್ಯಾಮೆರಾ ಮತ್ತು ಸಂಪೂರ್ಣ ಹೆಚ್‌ಡಿ ಡಿಸ್‌ಪ್ಲೇಯೊಂದಿಗೆ ರವಾನೆಯಾಗಿದೆ. 6GB RAM ಮತ್ತು 64GB ಮೆಮೊರಿ ಆಯ್ಕೆಗೆ 17,990 ರೂ. ಬೆಲೆ ನಿಗದಿಯಾಗಿದೆ. ನಿಮಗೆ ಹೆಚ್ಚುವರಿಯಾಗಿ ಈ ಫೋನ್‌ನ ಮೇಲೆ 8,000 ರೂ. ರಿಯಾಯಿತಿ ದೊರೆಯುತ್ತದೆ.

Best Mobiles in India

English summary
Oppo Fantastic Days scheme by Flipkart is back with yet more lucrative offers, this year. Scheduled to run from February 24th to February 27th, the sales provide many great offers on many Oppo handsets.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+