ಧೂಳೆಬ್ಬಿಸಲು ಬಂತು ದೈತ್ಯ ಫೋನ್! 50MP + 50MP ಕ್ಯಾಮೆರಾ.. 512GB ಸ್ಟೋರೇಜ್.. ಇಷ್ಟೊಂದು ದುಬಾರಿನಾ?
ಒಪ್ಪೋ ಕೊನೆಗೂ ವಿಶ್ವದ ಅತ್ಯಂತ ತೆಳುವಾದ ಫೋಲ್ಡಬಲ್ ಫೋನನ್ನು ಬಿಡುಗಡೆ ಮಾಡಿದೆ. ಇದು ಒಪ್ಪೋ ಫೈಂಡ್ N5 (OPPO Find N5) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೌದು, ಕಂಪನಿಯು ಇದನ್ನು OPPO Find N3 ಫೋನಿನ ಉತ್ತರಾಧಿಕಾರಿಯಾಗಿ ಪರಿಚಯಿಸಿದೆ. ಜೊತೆಗೆ ಇದು ಅನೇಕ ಹೊಸ ತಂತ್ರಜ್ಞಾನಗಳನ್ನು ಹೊಂದಿದೆ. ಇದಲ್ಲದೆ, ನೂತನ ಒಪ್ಪೋ ಫೈಂಡ್ N5 ಅತಿದೊಡ್ಡ ಬ್ಯಾಟರಿ ಹೊಂದಿರುವ ಫೋಲ್ಡಬಲ್ ಫೋನ್ ಆಗಿದೆ. ಬನ್ನಿ, ಈ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಒಪ್ಪೋ ಫೈಂಡ್ N5 ಮೊಬೈಲ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ 6.62 ಇಂಚಿನ ಡಿಸ್ಪ್ಲೇ ಹೊಂದಿದೆ. ಹಾಗೆಯೇ 5600mAh ಸಿಲಿಕಾನ್ ಕಾರ್ಬನ್ ಬ್ಯಾಟರಿ, 80W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಒಳಗೊಂಡಿದೆ. ಇದು ವಿಶ್ವದ ಅತ್ಯಂತ ತೆಳುವಾದ ಫೋಲ್ಡಬಲ್ ಫೋನ್ ಬಿಡುಗಡೆಯಾಗಿದೆ.

ಒಪ್ಪೋ ಫೈಂಡ್ N5 ಬೆಲೆ
ಒಪ್ಪೋ ಫೈಂಡ್ N5 ಮೊಬೈಲ್ ಕೇವಲ 16GB RAM + 512GB ಸ್ಟೋರೇಜ್ ರೂಪಾಂತರದಲ್ಲಿ ಮಾತ್ರ ಬಿಡುಗಡೆಯಾಗಿದೆ. ನೀವು ಮಿಸ್ಟಿ ವೈಟ್, ಡಸ್ಕ್ ಪರ್ಪಲ್ ಮತ್ತು ಕಾಸ್ಮಿಕ್ ಬ್ಲಾಕ್ ಬಣ್ಣಗಳಲ್ಲಿ ಖರೀದಿಸಬಹುದು. ಈ ಫೋನಿನ ಬೆಲೆ ಬರೋಬ್ಬರಿ 1,61,770 ರೂ.ಗೆ ಆಗಿದೆ. ಈ ಫೋನಿನ ಮಂಗಡ ಬುಕಿಂಗ್ ಆರ್ಡರ್ ನಾಳೆಯಿಂದ ಪ್ರಾರಂಭವಾಗುತ್ತದೆ. ಮತ್ತು ಈ ಮೊಬೈಲ್ ಫೆಬ್ರವರಿ 28 ರಿಂದ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ. ಪ್ರಸ್ತುತ, ಇದು ಚೀನಾದಲ್ಲಿ ಮಾತ್ರ ಖರೀದಿಗೆ ಲಭ್ಯವಿರುತ್ತದೆ. ಭಾರತದಲ್ಲಿ ಈ ಫೋನಿನ ಬಿಡುಗಡೆಯ ಬಗ್ಗೆ ಕಂಪನಿ ಸ್ಪಷ್ಟ ಮಾಹಿತಿ ನೀಡಿಲ್ಲ.
ಒಪ್ಪೋ ಫೈಂಡ್ N5 ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಒಪ್ಪೋ ಫೈಂಡ್ N5 ಸ್ಮಾರ್ಟ್‌ಫೋನ್ 6.62 ಇಂಚಿನ ಕವರ್ ಡಿಸ್ಪ್ಲೇ ಹೊಂದಿದೆ. ಇದು 1140 x 2616 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಹಾಗೆಯೇ 8.12 ಇಂಚಿನ ಹೊರ ಡಿಸ್ಪ್ಲೇ ಇದೆ. ಈ ಡಿಸ್ಪ್ಲೇಯು 2480 x 2248 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಈ ಫೋನಿನ ಎರಡೂ ಡಿಸ್ಪ್ಲೇಗಳು 120Hz ರಿಫ್ರೆಶ್ ದರದ ಬೆಂಬಲ ಮತ್ತು ಅಮೋಲೆಡ್ ಪ್ಯಾನೆಲ್‌ಗಳಾಗಿವೆ.
ಪ್ರೊಸೆಸರ್ ಸಾಮರ್ಥ್ಯ
ಒಪ್ಪೋ ಫೈಂಡ್ N5 ಮೊಬೈಲ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಇದು 7 ಕೋರ್ ಆವೃತ್ತಿಯಾಗಿದೆ. ಈ ಒಪ್ಪೋ ಫೋನ್ ಆಂಡ್ರಾಯ್ಡ್ 15 ಆಧಾರಿತ ColorOS 15 ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ ನಾಲ್ಕು ಓಎಸ್ ನವೀಕರಣಗಳು ಮತ್ತು ಐದು ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ಪಡೆಯುತ್ತದೆ. ಒಪ್ಪೋ ಫೈಂಡ್ N5 ಫೋನ್ 12GB ಮತ್ತು 16GB RAM ಹೊಂದಿದೆ.
ಕ್ಯಾಮೆರಾ ಸೆಟಪ್
ಒಪ್ಪೋ ಫೈಂಡ್ N5 ಸ್ಮಾರ್ಟ್‌ಫೋನ್ ಹ್ಯಾಸೆಲ್‌ಬ್ಲಾಡ್ ಬ್ರಾಂಡೆಡ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 3x ಆಪ್ಟಿಕಲ್ ಜೂಮ್‌ನೊಂದಿಗೆ 50 ಮೆಗಾಪಿಕ್ಸೆಲ್ ತೃತೀಯ (ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್) ಕ್ಯಾಮೆರಾ ಲಭ್ಯವಿದೆ. ಒಳ ಮತ್ತು ಹೊರ ಡಿಸ್ಪ್ಲೇಯಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಹ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ನೂತನ ಒಪ್ಪೋ ಫೈಂಡ್ N5 ಅತಿದೊಡ್ಡ ಬ್ಯಾಟರಿ ಹೊಂದಿರುವ ಫೋಲ್ಡಬಲ್ ಫೋನ್ ಆಗಿದೆ. ಈ ಮೊಬೈಲ್ 5600mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.


Click it and Unblock the Notifications








