ಫೆ.20ಕ್ಕೆ ದೈತ್ಯ ಫೋನ್ ಲಾಂಚ್; 50MP + 50MP ಕ್ಯಾಮೆರಾಗಳು.. 1TB ಸ್ಟೋರೇಜ್.. ಯಾವುದು, ಬೆಲೆ ಎಷ್ಟು?
ಒಪ್ಪೋ ತನ್ನ ಹೊಸ ಫೋನಿನ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಇದು ಒಪ್ಪೋ ಫೈಂಡ್ N5 (OPPO Find N5) ಎಂಬ ಹೆಸರಿನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಹೌದು, ಇದೇ ಫೆಬ್ರವರಿ 20 ರಂದು ಒಪ್ಪೋ ಫೈಂಡ್ N5 ಮೊಬೈಲ್ ಲೋಕಾರ್ಪಣೆಗೊಳ್ಳಲಿದೆ. ಬಿಡುಗಡೆಗೂ ಮುನ್ನವೇ ಈ ಫೋನಿನ ವಿಶೇಷತೆಗಳು ಬಹಿರಂಗಗೊಂಡಿವೆ. ಇದು ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗುತ್ತಿರುವ ಮೊದಲ ಫೋಲ್ಡಬಲ್ ಫೋನ್ ಆಗಿದೆ. ಮುಂಬರುವ ಒಪ್ಪೋ ಸ್ಮಾರ್ಟ್‌ಫೋನ್ 5600mAh ಬ್ಯಾಟರಿ ಹೊಂದಿರುತ್ತದೆ. ಬನ್ನಿ, ಈ ಹೊಸ ಫೋನಿನ ಮತ್ತಷ್ಟು ವೈಶಿಷ್ಟ್ಯಗಳನ್ನು ತಿಳಿಯೋಣ.
ಕಂಪನಿಯು ಒಪ್ಪೋ ಫೈಂಡ್ N5 ಫೋನಿನ ವಿನ್ಯಾಸ ಸೇರಿದಂತೆ ಹಲವು ವಿವರಗಳನ್ನು ಬಹಿರಂಗಪಡಿಸಿದೆ. ಬಿಡುಗಡೆಗೂ ಮುನ್ನವೇ, ಈ ಮೊಬೈಲ್ ಚೀನಾದ TENAA ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದೆ. ಇದು ಫೋಲ್ಡಬಲ್ ಫೋನಿನ ನಿಯಮಿತ ಆವೃತ್ತಿಯಾಗಿದೆ. ಮತ್ತು ಇದರ ಜೊತೆಗೆ ಒಪ್ಪೋ ಉಪಗ್ರಹ ಆವೃತ್ತಿ ಸಹ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇದು ಗಾಜಿನ ಹಿಂಭಾಗದೊಂದಿಗೆ ಜೇಡ್ ವೈಟ್ ಮತ್ತು ಸ್ಯಾಟಿನ್ ಬ್ಲಾಕ್ ಬಣ್ಣಗಳಲ್ಲಿ ಮತ್ತು ಚರ್ಮದ ಹಿಂಭಾಗದೊಂದಿಗೆ ಟ್ವಿಲೈಟ್ ಪರ್ಪಲ್ ಬಣ್ಣಗಳಲ್ಲಿ ಲಭ್ಯವಿರುತ್ತದೆ.

ಭಾರತದಲ್ಲಿ ಒನ್‌ಪ್ಲಸ್ ಫೈಂಡ್ 2 ಆಗಿ ಬಿಡುಗಡೆ
ಒಪ್ಪೋ ಫೈಂಡ್ N5 ಮೊಬೈಲ್ 3D ಮುದ್ರಿತ ಟೈಟಾನಿಯಂ ಮಿಶ್ರಲೋಹ ಹಿಂಜ್ ಒಳಗೊಂಡಿರುವ ಮೊದಲ ಫೋಲ್ಡಬಲ್ ಸ್ಮಾರ್ಟ್‌ಫೋನ್ ಎಂದು ಹೇಳಲಾಗುತ್ತದೆ. ಈ ಒಪ್ಪೋ ಫೋನ್ ಅಲರ್ಟ್ ಸ್ಲೈಡರ್ ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP6X, IPX8 ಮತ್ತು IPX9 ರೇಟಿಂಗ್ ಸಹ ಹೊಂದಿದೆ. ಈ ಸ್ಮಾರ್ಟ್‌ಫೋನ್ ಜಾಗತಿಕವಾಗಿ ಮತ್ತು ಭಾರತದಲ್ಲಿ ಒನ್‌ಪ್ಲಸ್ ಫೈಂಡ್ 2 ಹೆಸರಿನೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿತ್ತು. ಆದರೆ, ಒನ್‌ಪ್ಲಸ್ ಈ ವರ್ಷ ಫೋಲ್ಡಬಲ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದಿಲ್ಲ ಎಂದು ಖಚಿತಪಡಿಸಿದೆ. ಹೀಗಾಗಿ, ಇದು ಮುಂದಿನ ವರ್ಷ ಲಾಂಚ್ ಆಗುವ ಸಾಧ್ಯತೆಯಿದೆ.
ಒಪ್ಪೋ ಫೈಂಡ್ N5 ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಒಪ್ಪೋ ಫೈಂಡ್ N5 ಸ್ಮಾರ್ಟ್‌ಫೋನ್ 6.62 ಇಂಚಿನ ಕವರ್ ಡಿಸ್ಪ್ಲೇ ಹೊಂದಿರಲಿದೆ. ಇದು 1140 x 2616 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಹಾಗೆಯೇ 8.12 ಇಂಚಿನ ಹೊರ ಡಿಸ್ಪ್ಲೇ ಇರುತ್ತದೆ. ಇದು 2480 x 2248 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುತ್ತದೆ. ಈ ಫೋನಿನ ಎರಡೂ ಡಿಸ್ಪ್ಲೇಗಳು 120Hz ರಿಫ್ರೆಶ್ ದರದ ಬೆಂಬಲ ಪಡೆದಿವೆ.
ಪ್ರೊಸೆಸರ್ ಸಾಮರ್ಥ್ಯ
ಒಪ್ಪೋ ಫೈಂಡ್ N5 ಮೊಬೈಲ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಕಂಪನಿಯು ಪ್ರೊಸೆಸರ್ ಬಗ್ಗೆ ಮಾಹಿತಿ ಬಹಿರಂಗಪಡಿಸಿದೆ. ಇದು 7 ಕೋರ್ ಆವೃತ್ತಿಯಾಗಿದೆ. ಈ ಒಪ್ಪೋ ಫೋನ್ ಆಂಡ್ರಾಯ್ಡ್ 15 ಆಧಾರಿತ ColorOS 15 ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ.

RAM ಮತ್ತು ಸ್ಟೋರೇಜ್
ಒಪ್ಪೋ ಫೈಂಡ್ N5 ಫೋನ್ 12GB ಮತ್ತು 16GB RAM ಹೊಂದಿರುತ್ತದೆ. ಈ ಫೋನಿನಲ್ಲಿ 256GB, 512GB ಮತ್ತು 1TB ಸ್ಟೋರೇಜ್ ಆಯ್ಕೆ ಲಭ್ಯವಿರುತ್ತದೆ.
ಕ್ಯಾಮೆರಾ ಸೆಟಪ್
ಒಪ್ಪೋ ಫೈಂಡ್ N5 ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿರುತ್ತದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 3x ಆಪ್ಟಿಕಲ್ ಜೂಮ್‌ನೊಂದಿಗೆ 50 ಮೆಗಾಪಿಕ್ಸೆಲ್ ತೃತೀಯ (ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್) ಕ್ಯಾಮೆರಾ ಲಭ್ಯವಿದೆ. ಒಳ ಮತ್ತು ಹೊರ ಡಿಸ್ಪ್ಲೇಯಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಒಪ್ಪೋ ಫೈಂಡ್ N5 ಫೋಲ್ಡಬಲ್ ಮೊಬೈಲ್ 5600mAh ಸಾಮರ್ಥ್ಯದ ಬ್ಯಾಟರಿ ಹೊಂದಿರುವುದು ಖಚಿತವಾಗಿದೆ. ಈ ಫೋನ್ ಅತ್ಯಂತ ತೆಳುವಾದ ಫೋಲ್ಡಬಲ್ ಫೋನ್ ಆಗಿರುತ್ತದೆ ಎಂದು ಕಂಪನಿ ಹೇಳಿದೆ. ಇದು OPPO Find N ಫೋಲ್ಡಬಲ್‌ಗಿಂತ ಹಗುರವಾಗಿರುತ್ತದೆ.


Click it and Unblock the Notifications








