Home
ಮೊಬೈಲ್

ಒಪ್ಪೊ ಹೊಸ ಫೋನಿನಲ್ಲಿ 10 GB RAM - 5G ಕನೆಕ್ಷನ್..!

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೊಸ ಮಾದರಿಯಲ್ಲಿ ಸಾಧ್ಯತೆಯನ್ನು ತೋರಿಸಿಕೊಡುತ್ತಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಒಪ್ಪೋ, ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ 10 RAM ಹೊಂದಿರುವ ಸ್ಮಾರ್ಟ್‌ಫೋನ್ ವೊಂದನ್ನು ಲಾಂಚ್ ಮಾಡುತ್ತಿದೆ. ಇದು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸಂಚಲನವನ್ನು ಮೂಡಿಸಲಿದೆ.

ಒಪ್ಪೊ ಹೊಸ ಫೋನಿನಲ್ಲಿ 10 GB RAM - 5G ಕನೆಕ್ಷನ್..!

ಈಗಾಗಲೇ ಮಾರುಕಟ್ಟೆಯಲ್ಲಿ 8 GB RAM ಹೊಂದಿರುವ ಒಪ್ಪೋ ಫೈಂಡ್ X ಸ್ಮಾರ್ಟ್‌ಫೋನ್‌ ಲಾಂಚ್ ಆಗಿದೆ. ಇದೇ ಸ್ಮಾರ್ಟ್‌ಫೋನ್‌ 10 GB RAM ಆವೃತ್ತಿಯೂ ಲಾಂಚ್ ಆಗಲಿದೆ. ಈ ಕುರಿತು ಮಾಹಿತಿಯೂ ಲೀಕ್ ಆಗಿದೆ. ಸದ್ಯ ಮಾರುಕಟ್ಟೆಯಲ್ಲಿ 8 GB RAM ಫೋನ್‌ಗಳು ಕಡಿಮೆ ಬೆಲೆಗೆ ಕಾಣಿಸಿಕೊಳ್ಳುತ್ತಿದ್ದು, ಒಪ್ಪೋ ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಹೊಸ ಸಾಹಸಕ್ಕೆ ಮುಂದಾಗಿದೆ. ಇದರಿಂದಾಗಿ ಇನ್ನು ಮುಂದೆ ನೀವು 10 GB RAM ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ನೀವು ಬಳಕೆ ಮಾಡಬಹುದಾಗಿದೆ.

ವಿಶ್ವದ ಮೊದಲ ಫೋನ್:

ವಿಶ್ವದ ಮೊದಲ ಫೋನ್:

ಒಪ್ಪೋ ಫೈಂಡ್ X ಸ್ಮಾರ್ಟ್‌ಫೋನ್ ವಿಶ್ವದಲ್ಲಿಯೇ ಮೊದಲ ಬಾರಿಗೆ10 GB RAM ಹೊಂದಿರುವ ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಳ್ಳಲಿದೆ. ಸದ್ಯ ಮಾರುಕಟ್ಟೆಯಲ್ಲಿ ರೂ.17,999ಕ್ಕೆ ರಿಯಲ್ ಮಿ 2 ಪ್ರೋ ಸ್ಮಾರ್ಟ್‌ಫೋನ್ 8 GB RAM ಅನ್ನು ಹೊಂದಿರುವ ಹಿನ್ನಲೆಯಲ್ಲಿ 10 GB RAM ಹೊಸ ಟ್ರೆಂಡ್ ಆಗಲಿದೆ.

ಡಿಸ್‌ಪ್ಲೇ:

ಡಿಸ್‌ಪ್ಲೇ:

ಒಪ್ಪೋ ಫೈಂಡ್ X ಸ್ಮಾರ್ಟ್‌ಫೋನಿನಲ್ಲಿ 10 GB RAM ಮತ್ತು 256 GB ಇಂಟರ್ನಲ್ ಮೆಮೊರಿಯನ್ನು ಹೊಂದಿರಲಿದ್ದು, FHD+ ಗುಣಮಟ್ಟದ ಡಿಸ್‌ಪ್ಲೇಯನ್ನು ಇದರಲ್ಲಿ ಕಾಣಬಹುದಾಗಿದೆ. ಅಲ್ಲದೇ ಸ್ನಾಪ್‌ಡ್ರಾಗನ್ 845 ಪ್ರೋಸೆಸರ್ ಅನ್ನು ಇದರಲ್ಲಿ ನೀಡಲಾಗಿದೆ.

5G ನೆಟ್‌ವರ್ಕ್

5G ನೆಟ್‌ವರ್ಕ್

ಇದಲ್ಲದೇ ಒಪ್ಪೋ ಹೊಸದಾಗಿ ಲಾಂಚ್ ಮಾಡುವ ಸ್ಮಾರ್ಟ್‌ಫೋನ್ ನಲ್ಲಿ 10 GB RAM ಮಾತ್ರವಲ್ಲದೇ ಮುಂದಿನ ತಲೆಮಾರಿನ ನೆಟ್‌ವರ್ಕ್ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಶೀಘ್ರವೇ ಈ ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದ್ದು, ಈ ಸ್ಮಾರ್ಟ್‌ಫೋನ್ ಕುರಿತ ಫೋಟೋವೊಂದು ಲೀಕ್ ಆಗಿದ್ದು, ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

10 GB RAM ಹೊಂದಿರುವ ಒಪ್ಪೋ ಫೈಂಡ್ X ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದೆ. 16 MP + 20 MP ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದರೊಂದಿಗೆ 25 MP ಸೆಲ್ಪಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಲ್ಲದೇ ಆಂಡ್ರಾಯ್ಡ್ 8.1 ಹಾಗೂ ಕಲರ್ OS 5.1 ಅನ್ನು ನೋಡಬಹುದು.

Best Mobiles in India

English summary
Oppo Find X could be world's first 10GB RAM phone, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+