Home
ಮೊಬೈಲ್

'ಐಫೋನ್ ಎಕ್ಸ್'ಗಿಂತಲೂ ದುಬಾರಿ ಫೋನ್ ಚೀನಾ ಕಂಪೆನಿಯಿಂದ ಲಾಂಚ್!..ಬೆಚ್ಚಿ ಬೀಳಿಸುವ ಫೀಚರ್ಸ್!!

By Bhaskar N J

ಆಪಲ್ ಐಫೋನ್ ಎಕ್ಸ್‌ಗೆ ಸೆಡ್ಡುಹೊಡೆಯಲು ಸ್ಯಾಮ್‌ಸಂಗ್ ಕಂಪೆನಿ ಮಾತ್ರ ಸ್ಮಾರ್ಟ್‌ಫೋನ್ ಒಂದನ್ನು ಹೊರತರಲು ಸಾಧ್ಯ ಎಂದು ಯೋಚಿಸಿದ್ದ ಮೊಬೈಲ್ ಮಾರುಕಟ್ಟೆಗೆ ಓಪ್ಪೋ ಮೊಬೈಲ್ ಕಂಪೆನಿ ಶಾಕ್ ನೀಡಿದೆ. ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ಜಾಗತಿಕವಾಗಿ ಬಳಕೆಗೆ ಅತಿ ಹೆಚ್ಚು ಬೆಲೆಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.

ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಯೊಂದು ಇಷ್ಟೊಂದು ಬೆಲೆಯನ್ನು ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿ ಆಶ್ಚರ್ಯಗೊಳಿಸಿದ್ದು, ಪ್ಯಾರಿಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಓಪ್ಪೋ 'ಫೈಂಡ್ ಎಕ್ಸ್' ಎಂಬ ಸ್ಪೆಷಲ್ ರಾಯಲ್ ಸ್ಮಾರ್ಟ್‌ಫೋನ್ ಒಂದು ಕೇವಲ 1,34,470 ರೂಪಾಯಿಗಳಿಗೆ ವಿಶ್ವ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟದೆ.!

'ಐಫೋನ್ ಎಕ್ಸ್'ಗಿಂತಲೂ ದುಬಾರಿ ಫೋನ್ ಲಾಂಚ್!..ಬೆಚ್ಚಿ ಬೀಳಿಸುವ ಫೀಚರ್ಸ್!!

ಓಪ್ಪೋ 'ಫೈಂಡ್ ಎಕ್ಸ್' ಸ್ಮಾರ್ಟ್‌ಫೋನಿನ ಸ್ಪೆಷಲ್ ಎಡಿಷನ್ ಆಗಿ ಹೊರಬಂದಿರುವ ಓಪ್ಪೋ ಫೈಂಡ್ ಎಕ್ಸ್ ಲಂಬೋರ್ಗಿನಿ ಸೀಮಿತ ಆವೃತ್ತಿ 1,34,470 ರೂಪಾಯಿಗಳ ಬೆಲೆ ಹೊಂದಿದೆ. ಹಾಗಾದರೆ, ಜಾಗತಿಕ ಪ್ರವೇಶ ಪಡೆದಿರುವ ಓಪ್ಪೋ ಫೈಂಡ್ ಎಕ್ಸ್ ಐಶಾರಾಮಿ ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ತಿಳಿಯಿರಿ.

ಡಿಸ್‌ಪ್ಲೇ ಮತ್ತು ವಿನ್ಯಾಸ!

ಡಿಸ್‌ಪ್ಲೇ ಮತ್ತು ವಿನ್ಯಾಸ!

ಐಶಾರಾಮಿ ಸ್ಮಾರ್ಟ್‌ಫೋನ್ ಓಪ್ಪೋ ಫೈಂಡ್ ಎಕ್ಸ್ ಸಂಪೂರ್ಣ ಬೆಜೆಲ್‌ಲೆಸ್ ವಿನ್ಯಾಸದಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಇರುವ ಕಟ್ ಎಡ್ಜ್ ಡಿಸ್‌ಪ್ಲೇ ಸ್ಮಾರ್ಟ್‌ಫೋನಿಗೆ ಐಶಾರಾಮಿ ಲುಕ್ ತಂದುಕೊಟ್ಟಿದೆ. 1080x2340 ಪಿಕ್ಸೆಲ್ ರೆಸೊಲ್ಯೂಷನ್ 6.4 ಇಂಚುಗಳ OLED HD+ ಡಿಸ್‌ಪ್ಲೇ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.

ಪ್ರೊಸೆಸರ್ ಮತ್ತು RAM?

ಪ್ರೊಸೆಸರ್ ಮತ್ತು RAM?

ಓಪ್ಪೋ 'ಫೈಂಡ್ ಎಕ್ಸ್' ಸ್ಮಾರ್ಟ್‌ಫೋನ್ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 845 ಎಸ್‌ಒಸಿ ಪ್ರೊಸೆಸರ್ ಅನ್ನು ಹೊಂದಿದೆ. 8GB RAM ಹಾಗೂ 256GB ಮತ್ತು 512GB ಮೆಮೊರಿಯ ಎರಡು ವೆರಿಯಂಟ್‌ಗಲ್ಲಿ ಮಾರುಕಟ್ಟೆಗೆ ಕಾಲಿಟ್ಟಿರುವ ಐಶಾರಾಮಿ ಸ್ಮಾರ್ಟ್‌ಫೋನ್, ಓಪ್ಪೋ ಫೈಂಡ್ ಎಕ್ಸ್ ಆಂಡ್ರಾಯ್ಡ್ ಓರಿಯೋ ಜತೆ ಸಂಸ್ಥೆಯ ಕಸ್ಟಮೈಸೇಷನ್ ಹೊಂದಿದೆ.

ಕ್ಯಾಮೆರಾ ತಂತ್ರಜ್ಞಾನ ಹೇಗಿದೆ?

ಕ್ಯಾಮೆರಾ ತಂತ್ರಜ್ಞಾನ ಹೇಗಿದೆ?

ಐಶಾರಾಮಿ ಸ್ಮಾರ್ಟ್‌ಫೋನ್ ಆಗಿರುವ ಓಪ್ಪೋ 'ಫೈಂಡ್ ಎಕ್ಸ್' ಸ್ಮಾರ್ಟ್‌ಫೋನ್ ನಿರೀಕ್ಷಿಗೆ ತಕ್ಕಂತೆ ಕ್ಯಾಮೆರಾ ತಂತ್ರಜ್ಞಾನವನ್ನು ಹೊಂದಿದೆ. 16MP ಮತ್ತು 20MP ಸಾಮರ್ಥ್ಯದ ಸ್ಲೈಡಿಂಗ್ ಕ್ಯಾಮೆರಾ ಮತ್ತು 25MP ಸೆಲ್ಫಿ ಕ್ಯಾಮೆರಾವನ್ನು ಫೈಂಡ್ ಎಕ್ಸ್' ಸ್ಮಾರ್ಟ್‌ಫೋನನಿನಲ್ಲಿ ನೀಡಲಾಗಿದೆ. 3D ಎಮೋಜಿ ಬೆಂಬಲದ AI ತಂತ್ರಜ್ಞಾನವು ಇದನ್ನು ಭವಿಷ್ಯದ ಫೋನನ್ನಾಗಿಸಿದೆ.!

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ಐಫೋನ್ ಎಕ್ಸ್ ರೀತಿಯ ಕೃತಕ ಬುದ್ದಿಮತ್ತೆ ಫೇಸ್‌ ಅನ್‌ಲಾಕ್ ಫೀಚರ್, 3,730mAh ಬ್ಯಾಟರಿ , VOOC ಫಾಸ್ಟ್ ಚಾರ್ಜಿಂಗ್ ತಂತ್ರಗಾರಿಕೆ , 4G ವೋಲ್ಟ್, ಟೈಪ್ ಸಿ ಪೋರ್ಟ್, ಬ್ಲೂಟೂತ್ 5ಎಲ್‌ಇ, ಅಡ್ರಿನೊ 630ಜಿಪಿಯು, 15,0000 ಫೇಸ್ ರೆಕಗ್ನೈಸ್ ಡಾಟ್ ಹೀಗೆ ಅಸಮಾನ್ಯ ಅನಿಸುವಂತಹ ಇತರೆ ಫೀಚರ್ಸ್‌ಗಳನ್ನು ನಾವು ಈ ಫೋನಿನಲ್ಲಿ ನೋಡಬಹುದಾಗಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಐಫೋನ್ ಎಕ್ಸ್ 256GB ವೆರಿಯಂಟ್ ಬರೋಬ್ಬರಿ 1,03,333 ರೂ.ಗಳಷ್ಟು ದುಬಾರಿಯೆನಿಸಿದರೆ, ಇದೀಗ ಬಿಡುಗಡೆಯಾಗಿರುವ ಓಪ್ಪೋ ಫೈಂಡ್ ಎಕ್ಸ್ ಲಂಬೋರ್ಗಿನಿ ಸೀಮಿತಿ ಆವೃತ್ತಿ ಬೆಲೆ (512GB): ಅಂದಾಜು 1,34,470 ರೂ. (1699 Euros) ರೂಪಾಯಿಗಳಾಗಿವೆ. ಓಪ್ಪೋ ಫೈಂಡ್ ಎಕ್ಸ್ ಸಾಮನ್ಯ ಬೆಲೆ ಅಂದಾಜು 78,500 (999 Euros) ರೂಪಾಯಿಗಳಾಗುತ್ತವೆ.

Best Mobiles in India

English summary
Oppo Find X With Camera Slider, 8GB RAM, 3D Face Unlock Launched: Price, Specifications. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+