ಪಾಪ್‌ಅಪ್‌ ಕ್ಯಾಮೆರಾದ ಒಪ್ಪೋ ಫೈಂಡ್‌ ಎಕ್ಸ್‌ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್ ಲಾಂಚ್‌..!

By Avinash
|

ಒಪ್ಪೋ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಮತ್ತೊಂದು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, ನ್ಯಾರೋ ಬೆಜಲ್‌ ಲೆಸ್‌ ಡಿಸ್‌ಪ್ಲೇ ಹೊಂದಿರುವ ಒಪ್ಪೋ ಫೈಂಡ್ X ಸ್ಮಾರ್ಟ್‌ಫೋನ್‌ನ್ನು ಇಂದು ಬಿಡುಗಡೆ ಮಾಡಲಾಗಿದೆ. ಕ್ಯಾಮೆರಾ ಪ್ರಿಯರನ್ನು ಹೊಸ ಒಪ್ಪೋ ಫೈಂಡ್ X ಸ್ಮಾರ್ಟ್‌ಫೋನ್ ಸೆಳೆಯುತ್ತದೆ. ಲಾಂಚ್ ಇವೆಂಟ್‌ನಲ್ಲಿ ಫೈಂಡ್‌ ಎಕ್ಸ್‌ ಸ್ಮಾರ್ಟ್‌ಫೋನ್‌ ಟಾಪ್‌ ಫೀಚರ್ಸ್‌ಗಳನ್ನು ಬಿಡುಗಡೆ ಮಾಡಲಾಯಿತು.

ಈ ಸ್ಮಾರ್ಟ್‌ಫೋನ್‌ ಆಪಲ್‌ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ಗಳಿಗಿಂತ ಸ್ಯಾಮ್‌ಸಂಗ್‌ ನೋಟ್‌ 9 ಸ್ಮಾರ್ಟ್‌ಫೋನ್ ಜತೆ ಸ್ಪರ್ಧಿಸಲಿದೆ ಎಂದು ಒಪ್ಪೋದ ಪ್ರೋಡಕ್ಟ್‌ ಮ್ಯಾನೇಜರ್‌ ಆಗಿರುವ ರಿಷಬ್ ಶ್ರೀವಾತ್ಸವ ಹೇಳಿದ್ದಾರೆ. ಒಪ್ಪೋ ಫೈಂಡ್ X ಸ್ಮಾರ್ಟ್‌ಫೋನ್‌ನಲ್ಲಿರುವ ಯಾಂತ್ರಿಕ ಕ್ಯಾಮೆರಾಗಳು ಪಾಪ್‌ ಅಪ್‌ ವೈಶಿಷ್ಟ್ಯ ಹೊಂದಿವೆ. ಫ್ರಂಟ್ ಮತ್ತು ರೇರ್ ಕ್ಯಾಮೆರಾ ಎರಡು ಕ್ಯಾಮೆರಾಗಳಿಗೂ ಪಾಪ್ ಅಪ್‌ ವೈಶಿಷ್ಟ್ಯ ಅಳವಡಿಸಲಾಗಿದೆ.

ಪಾಪ್‌ಅಪ್‌ ಕ್ಯಾಮೆರಾದ ಒಪ್ಪೋ ಫೈಂಡ್‌ ಎಕ್ಸ್‌ ಲಾಂಚ್‌..!

ಈ ವೈಶಿಷ್ಟ್ಯ ಹೊಂದಿರುವ ಯಾವುದೇ ಸ್ಮಾರ್ಟ್‌ಫೋನ್‌ಗಳು ಸದ್ಯ ಮಾರುಕಟ್ಟೆಯಲ್ಲಿ ಇಲ್ಲ ಎನ್ನುವುದು ಒಪ್ಪೋ ವಾದ. ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಏನೆಲ್ಲಾ ಫೀಚರ್ಸ್‌ ಇವೆ?, ಬೆಲೆ ಎಷ್ಟು?, ಯಾವಾಗ ಲಭ್ಯವಿವೆ ? ಎಂಬುದನ್ನು ಮುಂದೆ ನೋಡಿ.

ಪೂರ್ಣ ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇ

ಪೂರ್ಣ ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇ

ಒಪ್ಪೋ ಫೈಂಡ್‌ ಎಕ್ಸ್‌ ಸ್ಮಾರ್ಟ್‌ಫೋನ್ 6.42 ಇಂಚು ಪೂರ್ಣ ಹೆಚ್‌ಡಿ+ AMOLED ಡಿಸ್‌ಪ್ಲೇ ಹೊಂದಿದ್ದು,1080 x 2340 ಪಿಕ್ಸೆಲ್‌ ಡಿಸ್‌ಪ್ಲೇ ಆಗಿರಲಿದೆ. 19.5:9 ಆಸ್ಪೆಕ್ಟ್‌ ರೇಷಿಯೋ ಹೊಂದಿರುವ ಡಿಸ್‌ಪ್ಲೇಯನ್ನು ಶೇ. 93.8 ಸ್ಕ್ರೀನ್‌ ಟು ಬಾಡಿ ರೇಷಿಯೋ ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5ರ ರಕ್ಷಣೆ ಡಿಸ್‌ಪ್ಲೇಗಿದೆ.

ಕಾರ್ಯನಿರ್ವಹಣೆ ಮತ್ತು ಪ್ರೊಸೆಸರ್‌

ಕಾರ್ಯನಿರ್ವಹಣೆ ಮತ್ತು ಪ್ರೊಸೆಸರ್‌

ಹೊಸ ಸ್ಮಾರ್ಟ್‌ಫೋನ್ ಅಡ್ರಿನೋ 630 ಜಿಪಿಯು ಜೊತೆ ಆಕ್ಟಾಕೋರ್‌ ಸ್ನಾಪ್‌ಡ್ರಾಗನ್‌ 845 Soc ಮೂಲಕ ಕಾರ್ಯನಿರ್ವಹಿಸಲಿದೆ. ಡ್ಯುಯಲ್ ನ್ಯಾನೋ ಸಿಮ್ ಹೊಂದಿರುವ ಒಪ್ಪೋ ಫೈಂಡ್‌ ಎಕ್ಸ್‌ ಆಂಡ್ರಾಯ್ಡ್‌ 8.1 ಓರಿಯೊ ಒಎಸ್‌ ಆಧರಿಸಿದ ColorOS 5.O1ನಿಂದ ಕಾರ್ಯನಿರ್ವಹಿಸುತ್ತದೆ. ಮತ್ತು ಹೊಸ ಆಂಡ್ರಾಯ್ಡ್‌ ಪಿ ಒಎಸ್‌ಗೆ ಬೆಂಬಲಿಸುತ್ತದೆ.

ಡ್ಯುಯಲ್ ಕ್ಯಾಮೆರಾ

ಡ್ಯುಯಲ್ ಕ್ಯಾಮೆರಾ

ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಡ್ಯುಯಲ್ ಕ್ಯಾಮೆರಾ ವೈಶಿಷ್ಟ್ಯ ನೀಡಲಾಗಿದೆ. ಪ್ರೈಮರಿ ಕ್ಯಾಮೆರಾ 16MP ಸೆನ್ಸಾರ್ ಹೊಂದಿದ್ದು, OIS ಮತ್ತು f/2.0 ಅಪಾರ್ಚರ್ ಹೊಂದಿದೆ. ಸೆಕೆಂಡರಿ ಕ್ಯಾಮೆರಾ 20MP ಸೆನ್ಸಾರ್‌ ಹೊಂದಿದ್ದು, f/2.2 ಅಪಾರ್ಚರ್ ಹೊಂದಿದೆ. ಹಿಂಬದಿಯಲ್ಲಿ LED ಫ್ಲಾಶ್ ಕೂಡ ಇದೆ. ಇನ್ನು ಫ್ರಾಂಟ್‌ ಸ್ಪೋರ್ಟ್ಸ್ ಕ್ಯಾಮೆರಾ 25MP ಸೆನ್ಸಾರ್ ಹೊಂದಿದ್ದು f/2.0 ಅಪಾರ್ಚರ್ ಹೊಂದಿದೆ.

ಪಾಪ್‌ಅಪ್‌ ಕ್ಯಾಮೆರಾ

ಪಾಪ್‌ಅಪ್‌ ಕ್ಯಾಮೆರಾ

ಮೊದಲೇ ಹೇಳಿದಂತೆ ಒಪ್ಪೋ ಫೈಂಡ್ ಎಕ್ಸ್‌ ಸ್ಮಾರ್ಟ್‌ಫೋನ್ ವೈಶಿಷ್ಟ್ಯ ಎಂದರೆ ಪಾಪ್‌ ಅಪ್‌ ಕ್ಯಾಮೆರಾ. ಯಾಂತ್ರಿಕ ಸ್ಲೈಡರ್‌ನ್ನು ಎರಡು ಬದಿಯ ಕ್ಯಾಮೆರಾಗಳಿಗೂ ಅಳವಡಿಸಲಾಗಿದ್ದು, ಬೇಕಾದಾಗ ಮಾತ್ರ ಹೊರ ಬರುವ ಆಯ್ಕೆ ಹೊಂದಿವೆ.

3D ಮುಖ ಗುರುತಿಸುವಿಕೆ

3D ಮುಖ ಗುರುತಿಸುವಿಕೆ

ಒಪ್ಪೋ ಫೈಂಡ್‌ ಎಕ್ಸ್‌ ಸ್ಮಾರ್ಟ್‌ಫೋನ್‌ನಲ್ಲಿ 3D ಫೇಶಿಯಲ್ ರೆಕಾಗ್ನೈಷನ್ ವೈಶಿಷ್ಟ್ಯ ನೀಡಲಾಗಿದೆ. ಕಂಪನಿ ಹೇಳಿಕೊಳ್ಳುವಂತೆ O-Face Recognition ತಂತ್ರಜ್ಞಾನದಿಂದ 3D ಫೇಶಿಯಲ್ ರೆಕಾಗ್ನೈಷನ್ ವೈಶಿಷ್ಟ್ಯ ಕಾರ್ಯನಿರ್ವಹಿಸುತ್ತದೆ. ಮತ್ತು ಐಫೋನ್ ಎಕ್ಸ್‌ನಲ್ಲಿ ಬಳಸಿದಂತೆ ಐಆರ್ ಸಂವೇದಕ ಮತ್ತು 15,000 ಡಾಟ್ ಪ್ರೊಜೆಕ್ಷನ್ ಅನ್ನು ಮುಖ ಗುರುತಿಸಲು ಮತ್ತು ವಿಶ್ಲೇಷಿಸಲು ಅನುವು ಮಾಡಿಕೊಡುತ್ತದೆ. 3D ಸ್ಟೇಲ್ತ್‌ ಕ್ಯಾಮೆರಾ ಫಿಂಗರ್‌ಪ್ರಿಂಟ್‌ ಸೆನ್ಸಾರ್‌ಗಿಂತಲೂ ನಿಖರತೆಯನ್ನು ಹೊಂದಿದೆ. ಇದರಿಂದ ಬಳಕೆದಾರರು ತಮ್ಮ ಡಾಟಾವನ್ನು ಸಂರಕ್ಷಿಸಬಹುದು.

ಫಾಸ್ಟ್‌ ಚಾರ್ಜಿಂಗ್‌

ಫಾಸ್ಟ್‌ ಚಾರ್ಜಿಂಗ್‌

ಒಪ್ಪೋ ಫೈಂಡ್‌ ಎಕ್ಸ್‌ ಸ್ಮಾರ್ಟ್‌ಫೋನ್ VOOC ವೇಗದ ಚಾರ್ಜಿಂಗ್‌ ತಂತ್ರಜ್ಞಾನ ಹೊಂದಿದ್ದು, 3730mAh ಬ್ಯಾಟರಿ ಹೊಂದಿದೆ. ಇದರೊಂದಿಗೆ ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ 4ಜಿ ವೋಲ್ಟ್‌, ವೈ-ಫೈ 802.11 ಎಸಿ, ಬ್ಲೂಟೂತ್ 5 LE, ಮತ್ತು ಜಿಪಿಎಸ್ ಸಂಪರ್ಕ ಹೊಂದಿದೆ. 156.7x74.3x9.4mm ಗಾತ್ರ ಹೊಂದಿದ್ದು, 186 ಗ್ರಾಂ ತೂಕ ಹೊಂದಿದೆ.

ಬೆಲೆ

ಬೆಲೆ

ಹೊಸ ಒಪ್ಪೋ ಫೈಂಡ್‌ ಎಕ್ಸ್‌ ಬೆಲೆ ಭಾರತದಲ್ಲಿ 59,990 ರೂ. ಇದ್ದು, ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಲಭ್ಯವಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಎಕ್ಸಕ್ಲೂಸಿವ್ ಆಗಿ ಲಭ್ಯವಿರುವ ಒಪ್ಪೋ ಫೈಂಡ್ ಎಕ್ಸ್‌ ಸ್ಮಾರ್ಟ್‌ಫೋನ್‌ನ್ನು ಜುಲೈ 25ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಕಾಯ್ದಿರಿಸಬಹುದಾಗಿದೆ.

ಆಟೋಮೊಬಿಲಿ ಲ್ಯಾಂಬೋರ್ಗಿನಿ ಆವೃತ್ತಿ ಇಲ್ಲ

ಆಟೋಮೊಬಿಲಿ ಲ್ಯಾಂಬೋರ್ಗಿನಿ ಆವೃತ್ತಿ ಇಲ್ಲ

ಒಪ್ಪೋ ಫೈಂಡ್‌ ಎಕ್ಸ್‌ ಜೊತೆ ಒಪ್ಪೋ ಕಂಪನಿ ಮತ್ತೊಂದು ಆವೃತ್ತಿಯಾದ ಒಪ್ಪೋ ಫೈಂಡ್ ಎಕ್ಸ್‌ ಆಟೋಮೊಬಿಲಿ ಲ್ಯಾಂಬೋರ್ಗಿನಿ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿಲ್ಲ. ಈ ಮೊದಲು ಭಾರತದಲ್ಲಿ ಬಿಡುಗಡೆ ಮಾಡುವ ನಿರ್ಧಾರವನ್ನು ಕಂಪನಿ ತೆಗೆದುಕೊಂಡಿತ್ತು.

Best Mobiles in India

English summary
Oppo Find X With Stealth Camera Unveiled in India, Price in India Is Rs. 59,990: Event Highlights. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X