Home
ಮೊಬೈಲ್

ನಾಳೆ OPPO Find X8 ಫಸ್ಟ್ ಸೇಲ್; 10,000 ಡಿಸ್ಕೌಂಟ್.. 512GB ಸ್ಟೋರೇಜ್‌.. ಬೆಲೆ ಎಷ್ಟು ಗೊತ್ತಾ?

ಒಪ್ಪೋ ಇತ್ತೀಚೆಗೆ ಭಾರತದಲ್ಲಿ ತನ್ನ ಒಪ್ಪೋ ಫೈಂಡ್ X8 (OPPO Find X8) ಸರಣಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಹೊಸ ಒಪ್ಪೋ ಫೈಂಡ್ X8 (OPPO Find X8) ಮೊಬೈಲ್‌ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಅಂದಹಾಗೆ, ಈ ಫೋನ್‌ ನಾಳೆಯಿಂದ (ಡಿಸೆಂಬರ್ 3) ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ. ಈಗಾಗಲೇ, ಫ್ಲಿಪ್‌ಕಾರ್ಟ್‌ನಲ್ಲಿ ಪ್ರಿ-ಬುಕ್ಕಿಂಗ್ ಪ್ರಾರಂಭವಾಗಿದೆ. ಶೇ.12 ರಷ್ಟು ರಿಯಾಯಿತಿ ಮತ್ತು ಹಲವು ಬ್ಯಾಂಕ್ ಆಫರ್‌ಗಳು ಲಭ್ಯವಿದೆ. ಬನ್ನಿ, ಈ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಕಂಪನಿಯು ಅದ್ಭುತ ಕ್ಯಾಮೆರಾ ಮತ್ತು ಎಐ ವೈಶಿಷ್ಟ್ಯಗಳಿಗೆ ಒತ್ತು ನೀಡುವ ಮೂಲಕ ಆಪಲ್, ಸ್ಯಾಮ್‌ಸಂಗ್ ಮತ್ತು ಗೂಗಲ್‌ಗೆ ಪೈಪೋಟಿ ನೀಡಲು ಒಪ್ಪೋ ಫೈಂಡ್ X8 ಫೋನನ್ನು ಬಿಡುಗಡೆ ಮಾಡಿದೆ. ಇದು ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್‌ ಹೊಂದಿದೆ. ಫೋನಿನಲ್ಲಿ ಮೂರು 50 ಮೆಗಾಪಿಕ್ಸೆಲ್ ಕ್ಯಾಮೆರಾಗಳು ಲಭ್ಯವಿದೆ. ಜೊತೆಗೆ 6.59 ಇಂಚಿನ ದೊಡ್ಡ ಡಿಸ್ಪ್ಲೇ, 5630mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ನಾಳೆ OPPO Find X8 ಫಸ್ಟ್ ಸೇಲ್; 10,000 ಡಿಸ್ಕೌಂಟ್.. ಬೆಲೆ ಎಷ್ಟು ಗೊತ್ತಾ?

ಒಪ್ಪೋ ಫೈಂಡ್ X8 ಫೋನಿನ ಬೆಲೆ

12GB RAM + 256GB ಸ್ಟೋರೇಜ್ ಬೆಲೆ = 69,999 ರೂ.
16GB RAM + 512GB ಸ್ಟೋರೇಜ್ ಬೆಲೆ = 79,999 ರೂ.

ಒಪ್ಪೋ ಫೈಂಡ್ X8 ಫೋನಿನ 12GB RAM ರೂಪಾಂತರವು 69,999 ರೂ.ಗೆ ಬಿಡುಗಡೆಯಾಗಿದೆ. 16GB RAM ಮತ್ತು 512GB ಸ್ಟೋರೇಜ್ ರೂಪಾಂತರವು 79,999 ರೂ.ಗೆ ಲಭ್ಯವಿದೆ. ನೀವು, ಸ್ಟಾರ್ ಗ್ರೇ ಮತ್ತು ಸ್ಪೇಸ್ ಬ್ಲಾಕ್ ಬಣ್ಣಗಳಲ್ಲಿ ಈ ಫೋನನ್ನು ಖರೀದಿಸಬಹುದು. ಕಂಪನಿಯು ಶೇ.12 ರಷ್ಟು ರಿಯಾಯಿತಿ, ಹಲವು ಬ್ಯಾಂಕ್ ಆಫರ್‌ಗಳು ಕ್ಯಾಶ್‌ಬ್ಯಾಕ್ ಮತ್ತು ನೋ ಕಾಸ್ಟ್ ಇಎಂಐ ಸೌಲಭ್ಯ ನೀಡುತ್ತದೆ.

ನೀವು ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಾವತಿ ಮೇಲೆ 6,999 ರೂ.ವರೆಗೆ ರಿಯಾಯಿತಿ ಪಡೆಯಬಹುದು. ಜೊತೆಗೆ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆಯೂ ಈ ರಿಯಾಯಿತಿ ಲಭ್ಯವಿದೆ. ಫ್ಲಿಪ್‌ಕಾರ್ಟ್ ಲಿಂಕ್ ಮಾಡಿದ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಪಾವತಿಸಿದರೆ 10,000 ಸಾವಿರ ರೂ. ಡಿಸ್ಕೌಂಟ್ ಸಿಗುತ್ತದೆ.

ಫೆಡರಲ್ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್‌ ಪಾವತಿ ಮೇಲೆ ನೀವು, 7,000 ರೂ. ವರೆಗೆ ರಿಯಾಯಿತಿ ಪಡೆಯಬಹುದು. ಈ ಎಲ್ಲಾ ಆಫರ್‌ಗಳ ಹೊರತಾಗಿ, ನೀವು ಹೊಸಒಪ್ಪೋ ಫೈಂಡ್ X8 5G ಫೋನನ್ನು 59,000 ರೂ.ಗೆ ಖರೀದಿಸಬಹುದು. ಈ ಫೋನ್‌ ನಾಳೆಯಿಂದ (ಡಿಸೆಂಬರ್ 3) ಒಪ್ಪೋ ಇ-ಸ್ಟೋರ್, ಫ್ಲಿಪ್‌ಕಾರ್ಟ್, ಆನ್‌ಲೈನ್ ಮತ್ತು ಆಫ್‌ಲೈನ್ ಚಿಲ್ಲರೆ ಮಳಿಗೆಗಳ ಮೂಲಕ ಮಾರಾಟವಾಗಲಿದೆ.

ಒಪ್ಪೋ ಫೈಂಡ್ X8: ಟಾಪ್ 5 ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ಒಪ್ಪೋ ಫೈಂಡ್ X8 ಫೋನ್ 6.59 ಇಂಚಿನ 1.5K ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಪ ಪಡೆದಿದೆ. ಇದು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ಸಂ ವೇದಕವನ್ನು ಹೊಂದಿದೆ.

ಪ್ರೊಸೆಸರ್ ಯಾವುದು

ಒಪ್ಪೋ ಫೈಂಡ್ X8 ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಈ ಪ್ರೊಸೆಸರ್ ಅನ್ನು 3 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ ColorOS 15 ನಲ್ಲಿ ಕೆಲಸ ಮಾಡುತ್ತದೆ. ಈ ಫೋನ್ 12GB RAM + 256GB ಸ್ಟೋರೇಜ್ ಮತ್ತು 16GB RAM + 512GB ಸ್ಟೋರೇಜ್‌ ಹೊಂದಿದೆ.

ಮೂರು 50MP ಕ್ಯಾಮೆರಾಗಳು

ಒಪ್ಪೋ ಫೈಂಡ್ X8 ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಸೋನಿ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಜೊತೆಗೆ, 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.

ಶಕ್ತಿಶಾಲಿ ಬ್ಯಾಟರಿ

ಒಪ್ಪೋ ಫೈಂಡ್ X8 ಮೊಬೈಲ್ 5630mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ಸೂಪರ್‌ವೋಕ್ ಚಾರ್ಜಿಂಗ್, 50W AIRVOOC ವೈರ್‌ಲೆಸ್ ಚಾರ್ಜ್ ಮತ್ತು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರ ವೈಶಿಷ್ಟ್ಯಗಳು

ಒಪ್ಪೋ ಫೈಂಡ್ X8 ಸ್ಮಾರ್ಟ್‌ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP69 ರೇಟಿಂಗ್‌ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, ವೈ-ಫೈ 7, ಯುಎಸ್‌ಬಿ ಟೈಪ್ ಸಿ ಪೋರ್ಟ್ ಮತ್ತು ಎನ್‌ಎಫ್‌ ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+