Home
ಮೊಬೈಲ್

ಶೀಘ್ರವೇ Oppo Find X8 ಬಿಡುಗಡೆ; ಮೂರು 50MP ಕ್ಯಾಮೆರಾಗಳು.. 100W ಚಾರ್ಜಿಂಗ್.. ಬೆಲೆ ಲೀಕ್!

ಒಪ್ಪೋ (Oppo) ಇತ್ತೀಚೆಗೆ ಚೀನಾದಲ್ಲಿ ತನ್ನ ಬಹುನಿರೀಕ್ಷಿತ ಫೈಂಡ್ X8 (OPPO Find X8) ಸರಣಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಒಪ್ಪೋ ಫೈಂಡ್ X8 (OPPO Find X8) ಮತ್ತು ಒಪ್ಪೋ ಫೈಂಡ್ X8 ಪ್ರೊ (OPPO Find X8 Pro) ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಫೋನ್‌ಗಳು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ. ಒಪ್ಪೋ ಇಂಡಿಯಾ ಅಧಿಕೃತ ವೆಬ್‌ಸೈಟ್‌ನಲ್ಲಿ ಮುಂಬರುವ ಫೋನಿನ ಬಿಡುಗಡೆಯ ಉತ್ಪನ್ನ ಪುಟವನ್ನು ಲೈವ್ ಮಾಡಲಾಗಿದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಹೌದು, ಕಂಪನಿಯು ಒಪ್ಪೋ ಫೈಂಡ್ X8 ಭಾರತದ ಬಿಡುಗಡೆಯನ್ನು ಖಚಿತಪಡಿಸಿದೆ. 'ಒಪ್ಪೋ ಫೈಂಡ್ X8 ಈಸ್ ಕಮಿಂಗ್ ಸೂನ್' ಎಂಬ ಅಡಿಬರಹದೊಂದಿಗೆ ಪೋಸ್ಟ್ ಮಾಡಿದೆ. ಕಂಪನಿಯ ಭಾರತೀಯ ವೆಬ್‌ಸೈಟ್‌ನಲ್ಲಿ ಫೋನಿಗೆ ಸಂಬಂಧಿಸಿದ ಪೇಜ್‌ ಅನ್ನು ರಚಿಸಲಾಗಿದೆ. ಆ ಮೂಲಕ ಮೊಬೈಲ್ ಬಿಡುಗಡೆಗು ಮುನ್ನವೇ ಪ್ರಚಾರ ಮಾಡಲಾಗುತ್ತಿದೆ. ಈ ಪುಟದಲ್ಲಿ, ಒಪ್ಪೋ ಫೈಂಡ್ X8 ಸರಣಿಯ ಬಗ್ಗೆ ಆಸಕ್ತಿಯನ್ನು ತೋರಿಸುವ ಗ್ರಾಹಕರಿಗೆ ಒಪ್ಪೋ ಫೈಂಡ್ X8 ಮ್ಯಾಜಿಕ್ ಬಾಕ್ಸ್‌ನ ರೂಪದಲ್ಲಿ ಉಡುಗೊರೆ ಮತ್ತು ಬಹುಮಾನಗಳನ್ನು ನೀಡಲಾಗುತ್ತಿದೆ.

ಶೀಘ್ರವೇ Oppo Find X8 ಬಿಡುಗಡೆ; ಮೂರು 50MP ಕ್ಯಾಮೆರಾಗಳು.. 100W ಚಾರ್ಜಿಂಗ್!

ಒಪ್ಪೋ ಫೈಂಡ್ X8 ಸರಣಿಯ ಬೆಲೆ

ಒಪ್ಪೋ ಫೈಂಡ್ X8 ಮತ್ತು ಒಪ್ಪೋ ಫೈಂಡ್ X8 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಚೀನಾದಲ್ಲಿ 12GB RAM ಮತ್ತು 16GB RAM ನೊಂದಿಗೆ ಬಿಡುಗಡೆ ಮಾಡಲಾಗಿದೆ. ಇದು 256GB ಮತ್ತು 1TB ವರೆಗಿನ ಸ್ಟೋರೇಜ್‌ ಹೊಂದಿದೆ. ಒಪ್ಪೋ ಫೈಂಡ್ X8 ಬೆಲೆ ಸುಮಾರು 49,500 ರೂ. ನಿಂದ ಪ್ರಾರಂಭವಾಗುತ್ತದೆ. ಒಪ್ಪೋ ಫೈಂಡ್ X8 ಪ್ರೊ ಬೆಲೆ 64,900 ರೂ. ಆಗಿದೆ. ಭಾರತದಲ್ಲಿ ಎರಡೂ ಮೊಬೈಲ್‌ಗಳನ್ನು ಚೀನಾಕ್ಕಿಂತ ಸ್ವಲ್ಪ ಕಡಿಮೆ ಬೆಲೆಗೆ ಪರಿಚಯಿಸುವ ಸಾಧ್ಯತೆಯಿದೆ.

ಒಪ್ಪೋ ಫೈಂಡ್ X8 ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಒಪ್ಪೋ ಫೈಂಡ್ X8 ಮೊಬೈಲ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ತಂತ್ರಜ್ಞಾನವನ್ನು ಹೊಂದಿದೆ. ಮತ್ತು IP68/69 ರೇಟಿಂಗ್ ಪಡೆದಿದೆ.

ಪ್ರೊಸೆಸರ್ ಸಾಮರ್ಥ್ಯ

ಒಪ್ಪೋ ಫೈಂಡ್ X8 ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್‌ 15 ಆಧಾರಿತ ColorOS 15 ಓಎಸ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನ್ LPDDR5x RAM ಮತ್ತು 1TB UFS 4.0 ಸ್ಟೋರೇಜ್‌ ಹೊಂದಿದೆ.

ಕ್ಯಾಮೆರಾ ಸೆಟಪ್

ಒಪ್ಪೋ ಫೈಂಡ್ X8 ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ JN5 ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಹೊಂದಿದೆ. ಸೆಲ್ಫಿ ಪ್ರಿಯರಿಗಾಗಿ, ಫೋನಿನಲ್ಲಿ 32 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಇದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಒಪ್ಪೋ ಫೈಂಡ್ X8 ಮೊಬೈಲ್ 5,630mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್‌ ಮಾಡಲು, 80W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಜೊತೆಗೆ, 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಸಹ ಲಭ್ಯವಿದೆ.

ಒಪ್ಪೋ ಫೈಂಡ್ X8 ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಒಪ್ಪೋ ಫೈಂಡ್ X8 ಸ್ಮಾರ್ಟ್‌ಫೋನ್ 6.78 ಇಂಚಿನ ಮೈಕ್ರೋ ಕ್ವಾಡ್ ಕರ್ವ್ಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ, 4500 ನಿಟ್ಸ್ ಬ್ರೈಟ್‌ನೆಸ್ ಮತ್ತು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ತಂತ್ರಜ್ಞಾನವನ್ನು ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಹೊಸ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್‌ 15 ಆಧಾರಿತ ColorOS 15 ಓಎಸ್‌ನಲ್ಲಿ ಕೆಲಸ ಮಾಡುತ್ತದೆ. ಈ ಸ್ಮಾರ್ಟ್‌ಫೋನ್ LPDDR5x RAM ಮತ್ತು 1TB UFS 4.0 ಸ್ಟೋರೇಜ್ ಹೊಂದಿದೆ.

ಕ್ಯಾಮೆರಾ ಸೆಟಪ್

ಈ ಫೋನ್ ಹೈಪರ್‌ಟೋನ್ ಕ್ವಾಡ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ JN5 ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಮತ್ತು 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಹೊಂದಿದೆ. ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ನೂತನ ಒಪ್ಪೋ ಮೊಬೈಲ್ 5,910mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್, 80W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

Best Mobiles in India

English summary
OPPO Find X8 smartphone is coming soon in india: Expected price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+