ಅಬ್ಬರಿಸಲು ಬಂತು OPPO Find X8 ಫೋನ್; ಮೂರು 50MP ಕ್ಯಾಮೆರಾಗಳು.. ಬೆಲೆ ನೋಡಿ
ಒಪ್ಪೋ (Oppo) ಸದ್ದಿಲ್ಲದೆ ಹೊಸ ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಒಪ್ಪೋ ಫೈಂಡ್ X8 (OPPO Find X8) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಜೊತೆಗೆ, ಒಪ್ಪೋ ಫೈಂಡ್ X8 ಪ್ರೊ (OPPO Find X8 Pro) ಕೂಡ ಲಾಂಚ್ ಆಗಿದೆ. ಒಪ್ಪೋ ಫೈಂಡ್ X8 ಮೊಬೈಲ್ ಸ್ಟೈಲಿಶ್ ಡಿಸೈನ್, ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಫೋನಿನಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಬನ್ನಿ, ಹೊಸ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಕಂಪನಿಯು ಬಹುನಿರೀಕ್ಷಿತ ಒಪ್ಪೋ ಫೈಂಡ್ X8 (OPPO Find X8) ಸರಣಿಯನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಈ ಪೈಕಿ ಒಪ್ಪೋ ಫೈಂಡ್ X8 ಮೊಬೈಲ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್ ಹೊಂದಿದೆ. ಫೋನಿನಲ್ಲಿ ಮೂರು 50 ಮೆಗಾಪಿಕ್ಸೆಲ್ ಕ್ಯಾಮೆರಾಗಳು ಲಭ್ಯವಿದೆ. ಜೊತೆಗೆ 6.59 ಇಂಚಿನ ದೊಡ್ಡ ಡಿಸ್ಪ್ಲೇ, 5630mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಒಪ್ಪೋ ಫೈಂಡ್ X8 ಫೋನಿನ ಬೆಲೆ
12GB RAM + 256GB ಸ್ಟೋರೇಜ್ ಬೆಲೆ = 69,999 ರೂ.
16GB RAM + 512GB ಸ್ಟೋರೇಜ್ ಬೆಲೆ = 79,999 ರೂ.
ಕಂಪನಿಯು ಒಪ್ಪೋ ಫೈಂಡ್ X8 ಫೋನಿನ 12GB RAM ರೂಪಾಂತರವನ್ನು 69,999 ರೂ.ಗೆ ಬಿಡುಗಡೆ ಮಾಡಿದೆ. 16GB RAM ಮತ್ತು 512GB ಸ್ಟೋರೇಜ್ ರೂಪಾಂತರದ ಬೆಲೆ 79,999 ರೂ. ಆಗಿದೆ. ಈ ಫೋನ್ ಡಿಸೆಂಬರ್ 3 ರಿಂದ ಮಾರಾಟವಾಗಲಿದೆ. ಕಂಪನಿಯು ಶೇ.10 ರಷ್ಟು ಕ್ಯಾಶ್‌ಬ್ಯಾಕ್ ಮತ್ತು 24 ತಿಂಗಳ ನೋ ಕಾಸ್ಟ್ ಇಎಂಐ ಸೌಲಭ್ಯ ನೀಡುತ್ತದೆ. ನೀವು, ಈ ಫೋನನ್ನು ಸ್ಟಾರ್ ಗ್ರೇ ಮತ್ತು ಸ್ಪೇಸ್ ಬ್ಲಾಕ್ ಬಣ್ಣಗಳಲ್ಲಿ ಖರೀದಿಸಬಹುದು.
ಒಪ್ಪೋ ಫೈಂಡ್ X8 ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಒಪ್ಪೋ ಫೈಂಡ್ X8 ಮೊಬೈಲ್ 6.59 ಇಂಚಿನ ಫ್ಲಾಟ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 1.5K ರೆಸಲ್ಯೂಶನ್ ಹೊಂದಿದೆ. ಡಿಸ್ಪ್ಲೇಯು 120Hz ರಿಫ್ರೆಶ್ ದರ, 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್, ಡಾಲ್ಬಿ ವಿಷನ್ ಮತ್ತು 2160Hz PWM ಡಿಮ್ಮಿಂಗ್ ತಂತ್ರಜ್ಞಾನವನ್ನು ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಒಪ್ಪೋ ಫೈಂಡ್ X8 ಫೋನನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಈ ಪ್ರೊಸೆಸರ್ ಅನ್ನು 3 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಈ ಮೊಬೈಲ್ ಆಂಡ್ರಾಯ್ಡ್ 15 ಆಧಾರಿತ ColorOS 15 ನೊಂದಿಗೆ ಕೆಲಸ ನಿರ್ವಹಿಸುತ್ತದೆ.
ಸ್ಟೋರೇಜ್ ಆಯ್ಕೆ
ನೂತನ ಒಪ್ಪೋ ಫೈಂಡ್ X8 ಸ್ಮಾರ್ಟ್‌ಫೋನ್ LPDDR5X RAM ಮತ್ತು UFS4.0 ಸ್ಟೋರೇಜ್ ಹೊಂದಿದೆ. ಫೋನಿನ ಮೂಲ ರೂಪಾಂತರವು 12GB RAM + 256GB ಸ್ಟೋರೇಜ್ ಒಳಗೊಂಡಿದೆ. ಟಾಪ್ ವೇರಿಯಂಟ್ 16GB RAM + 512GB ಸ್ಟೋರೇಜ್ ಹೊಂದಿದೆ.

ಕ್ಯಾಮೆರಾ ಸೆಟಪ್
ಒಪ್ಪೋ ಫೈಂಡ್ X8 ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಪ್ರಾಥಮಿಕ ಕ್ಯಾಮೆರಾ ಇದೆ. ಜೊತೆಗೆ, 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಹೊಸ ಒಪ್ಪೋ ಫೈಂಡ್ X8 ಫೋನ್ 5630mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ಸೂಪರ್‌ವೋಕ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಜೊತೆಗೆ, 50W AIRVOOC ವೈರ್‌ಲೆಸ್ ಚಾರ್ಜ್ ಮತ್ತು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಸಹ ಲಭ್ಯವಿದೆ.
ಇತರ ವೈಶಿಷ್ಟ್ಯಗಳು
ಒಪ್ಪೋ ಫೈಂಡ್ X8 ಮೊಬೈಲ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ. ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP69 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ವೈ-ಫೈ 7, ಯುಎಸ್‌ಬಿ ಟೈಪ್ ಸಿ ಪೋರ್ಟ್ ಮತ್ತು ಎನ್‌ಎಫ್ ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








