OPPO: ಶಕ್ತಿಶಾಲಿ ಫೋನ್ ಬರಲಿದೆ; ಬಿಗ್ ಬ್ಯಾಟರಿ.. ಬೃಹತ್ ಸ್ಟೋರೇಜ್.. ಲಾಂಚ್ ಯಾವಾಗ?
ಒಪ್ಪೋ ಇತ್ತೀಚೆಗೆ ಭಾರತದಲ್ಲಿ ಫೈಂಡ್ X8 (OPPO Find X8) ಸರಣಿಯನ್ನು ಪರಿಚಯಿಸಿದೆ. ಇದರಲ್ಲಿ ಒಪ್ಪೋ ಫೈಂಡ್ X8 (OPPO Find X8) ಮತ್ತು ಒಪ್ಪೋ ಫೈಂಡ್ X8 ಪ್ರೊ (OPPO Find X8 Pro) ಫೋನ್‌ಗಳ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಈ ಸರಣಿಯಲ್ಲಿ ಮತ್ತೊಂದು ಶಕ್ತಿಶಾಲಿ ಮೊಬೈಲ್ ಬರುವುದು ಖಚಿತವಾಗಿದೆ. ಹೌದು, ಶೀಘ್ರದಲ್ಲೇ ಕಂಪನಿಯು ಒಪ್ಪೋ ಫೈಂಡ್ X8 ಅಲ್ಟ್ರಾ (OPPO Find X8 Ultra) ಮೊಬೈಲ್ ಬಿಡುಗಡೆ ಮಾಡಲಿದೆ. ಬನ್ನಿ ಈ ಫೋನಿನ ವಿಶೇಷತೆಗಳನ್ನು ತಿಳಿಯೋಣ.
ಒಪ್ಪೋ ಫೈಂಡ್ X8 ಅಲ್ಟ್ರಾ ಫೋನ್ ಹೊಸ ವರ್ಷಕ್ಕೆ (2025) ಬಿಡುಗಡೆಯಾಗಲಿದೆ. ಈ ಬಗ್ಗೆ ಡಿಜಿಟಲ್ ಚಾಟ್ ಸ್ಟೇಷನ್ ಮಾಹಿತಿ ನೀಡಿದೆ. ಚೀನಾದಲ್ಲಿ ಜನವರಿ 29 ರಂದು ಹೊಸ ವರ್ಷ ಆಚರಿಸಲಾಗುತ್ತದೆ. ಹೀಗಾಗಿ, ಫೆಬ್ರವರಿ ಮೊದಲ ವಾರದಲ್ಲಿ ಒಪ್ಪೋ ಫೈಂಡ್ X8 ಅಲ್ಟ್ರಾ ಲಾಂಚ್ ಆಗುವ ಸಾಧ್ಯತೆಯಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿರಲಿದೆ. ಜೊತೆಗೆ 16GB RAM, 2K ರೆಸಲ್ಯೂಶನ್ ಡಿಸ್ಪ್ಲೇ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

ಒಪ್ಪೋ ಫೈಂಡ್ X8 ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಒಪ್ಪೋ ಫೈಂಡ್ X8 ಮೊಬೈಲ್ 6.78 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು 4500 ನಿಟ್ಸ್ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಡಿಸ್ಪ್ಲೇಯು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಮತ್ತು ಗೊರಿಲ್ಲಾ ಗ್ಲಾಸ್ 7i ರಕ್ಷಣೆ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಒಪ್ಪೋ ಫೈಂಡ್ X8 ಫೋನ್ ಮೀಡಿಯಾಟೆಕ್‌ನ ಡೈಮೆನ್ಸಿಟಿ 9400 ಪ್ರೊಸೆಸರ್ ಹೊಂದಿದೆ. ಇದನ್ನು 3 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ನಿರ್ಮಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ ColorOS 15 ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಈ ಫೋನ್ 12GB RAM + 256GB ಸ್ಟೋರೇಜ್ ಮತ್ತು 16GB RAM + 512GB ಸ್ಟೋರೇಜ್ ಒಳಗೊಂಡಿದೆ.
ಕ್ಯಾಮೆರಾ ಸೆಟಪ್
ಒಪ್ಪೋ ಫೈಂಡ್ X8 ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ. ಜೊತೆಗೆ, 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಒಪ್ಪೋ ಫೈಂಡ್ X8 ಫೋನ್ 5630mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಬಂದಿದೆ. ಇದನ್ನು ಚಾರ್ಜ್ ಮಾಡಲು, 80W ಸೂಪರ್‌ವೋಕ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಜೊತೆಗೆ 50W ವೈರ್‌ಲೆಸ್ ಚಾರ್ಜ್ ಮತ್ತು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಸಹ ಲಭ್ಯವಿದೆ.
ಒಪ್ಪೋ ಫೈಂಡ್ X8 ಪ್ರೊ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಒಪ್ಪೋ ಫೈಂಡ್ X8 ಪ್ರೊ ಮೊಬೈಲ್ 6.59 ಇಂಚಿನ 1.5K ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು 4500 ನಿಟ್ಸ್ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಡಿಸ್ಪ್ಲೇಯು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಒಪ್ಪೋ ಫೈಂಡ್ X8 ಪ್ರೊ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ ColorOS 15 ನೊಂದಿಗೆ ಕೆಲಸ ನಿರ್ವಹಿಸುತ್ತದೆ.
ಕ್ಯಾಮೆರಾ ಸೆಟಪ್
ಒಪ್ಪೋ ಫೈಂಡ್ X8 ಪ್ರೊ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ. ಜೊತೆಗೆ, 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಒಪ್ಪೋ ಫೈಂಡ್ X8 ಪ್ರೊ ಫೋನ್ 5910mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಜೊತೆಗೆ 50W ವೈರ್‌ಲೆಸ್ ಚಾರ್ಜ್ ಮತ್ತು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಸಹ ಲಭ್ಯವಿದೆ.


Click it and Unblock the Notifications








