ಭಾರತಕ್ಕೆ Oppo Find X9 ಸರಣಿ ಆಗಮನ ಖಚಿತ; ಇಲ್ಲಿದೆ ಸಂಪೂರ್ಣ ಮಾಹಿತಿ!
ಭಾರತದಲ್ಲಿ Oppo Find X9 ಸರಣಿ ಸ್ಮಾರ್ಟ್‌ಫೋನ್‌ಗಳು ಶೀಘ್ರದಲ್ಲೇ ಬಿಡುಗಡೆಯಾಗುವ ಸಿಹಿಸುದ್ದಿಯ ಸೂಚನೆ ದೊರೆತಿದೆ. ಕಳೆದ ಅಕ್ಟೋಬರ್ ಮಧ್ಯಭಾಗದಲ್ಲಿ ಚೀನಾದಲ್ಲಿ Oppo Find X9 ಸರಣಿಯಯನ್ನು ಪರಿಚಯಿಸಲಾಗಿತ್ತು. ಈ ಸರಣಿಯಲ್ಲಿ ಬೇಸ್ Oppo Find X9 ಮತ್ತು Oppo Find X9 Pro ಎಂಬ ಎರಡು ಫೋನ್‌ಗಳು ಬಿಡುಗಡೆಯಾಗಿದ್ದವು. ನಂತರ ಜಾಗತಿಕ ಮಾರುಕಟ್ಟೆಯಲ್ಲೂ ಫೋನ್‌ಗಳಿಗೆ ಬಿಡುಗಡೆ ಭಾಗ್ಯ ದೊರೆತಿತ್ತು. ಇದೀಗ Oppo ಕಂಪೆನಿಯು ಭಾರತದಲ್ಲಿ Oppo Find X9 ಸರಣಿ ಬಿಡುಗಡೆಯ ಕುರಿತು ಟೀಸರ್ ಬಿಡುಗಡೆ ಮಾಡಿದೆ.
Oppo ತನ್ನ ಅಧಿಕೃತ ಇ-ಸ್ಟೋರ್ ಜೊತೆಗೆ, ಒಪ್ಪೋ ಫೈಂಡ್ X9 ಸರಣಿಯು ಫ್ಲಿಪ್‌ಕಾರ್ಟ್ ಮೂಲಕ ಭಾರತದಲ್ಲಿ ಬಿಡುಗಡೆಯಾಗುವುದನ್ನು ದೃಢಪಡಿಸಲಾಗಿದೆ. Oppo Find X9 ಸರಣಿಗೆ ಮೀಸಲಾದ ಮೈಕ್ರೋಸೈಟ್ ಈಗ ಲೈವ್ ಆಗಿದ್ದು, ಬೇಸ್ Oppo Find X9 ಟೈಟಾನಿಯಂ ಗ್ರೇ ಮತ್ತು ಸ್ಪೇಸ್ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳಲ್ಲಿ ಬರಲಿದ್ದು, ಪ್ರೊ ರೂಪಾಂತರವು ಸಿಲ್ಕ್ ವೈಟ್ ಮತ್ತು ಟೈಟಾನಿಯಂ ಚಾರ್ಕೋಲ್ ಬಣ್ಣಗಳಲ್ಲಿ ಬರಲಿದೆ. ಇದರ ಜೊತೆಗೆ Oppo ಭಾರತದಲ್ಲಿ Find X9 ಸರಣಿಯ ಬಿಡುಗಡೆಗೆ ಸಂಬಂಧಿಸಿದಂತೆ ಕೆಲವು ಕೊಡುಗೆಗಳನ್ನು ಘೋಷಿಸಿದೆ.!
ಇದರಲ್ಲಿ ಪ್ರೀಮಿಯಂ ಗಿಫ್ಟ್ ಬಾಕ್ಸ್, ರೂ. 99 "ಪ್ರಿವಿಲೇಜ್ ಪ್ಯಾಕ್", 80W ಸೂಪರ್‌ವಿಒಸಿ ಅಡಾಪ್ಟರ್, ರೂ. 1,000 ಎಕ್ಸ್‌ಚೇಂಜ್ ಬೋನಸ್ ಮತ್ತು ಎರಡು ವರ್ಷಗಳ ಬ್ಯಾಟರಿ ರಕ್ಷಣೆ ಯೋಜನೆ ಸೇರಿವೆ. ಪ್ಯಾಕ್ ಇಲ್ಲದಿದ್ದರೂ, ಖರೀದಿದಾರರು ಉಡುಗೊರೆ ಪೆಟ್ಟಿಗೆಯನ್ನು ಪಡೆಯುತ್ತಾರೆ. ಜೊತೆಗೆ, ಕಂಪನಿಯು ವಿನಿಮಯ ಕಾರ್ಯಕ್ರಮವನ್ನು ಪರಿಚಯಿಸಿದೆ. ಬಳಕೆದಾರರು ಮೊದಲೇ ತಮ್ಮ ಹಳೆಯ ಫೋನ್‌ನ ಮೌಲ್ಯವನ್ನು ಪರಿಶೀಲಿಸಬಹುದು. ಭಾರತದಲ್ಲಿ Oppo Find X9 ಸರಣಿ ಕುರಿತಂತೆ ಪ್ರಸ್ತುತ ಇಷ್ಟು ಮಾಹಿತಿ ದೊರೆತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಮಾಹಿತಿಗಳು ಬಹಿರಂಗವಾಗುವ ನಿರೀಕ್ಷೆ ಇದೆ.
ಇದಕ್ಕೂ ಮೊದಲೇ ನೀವು Oppo Find X9 Pro ಮತ್ತು Oppo Find X9 ಪೋನ್‌ಗಳು ಹೇಗಿವೆ?, ಫೀಚರ್ಸ್ ಯಾವುವು ಎಂಬುದನ್ನು ತಿಳಿಯಲು ಚೀನಾದಲ್ಲಿ ಪರಿಚಯಗೊಂಡಿರುವ Oppo Find X9 ಸರಣಿ ಸ್ಮಾರ್ಟ್‌ಫೋನ್‌ಗಳ ಕುರಿತು ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.
Oppo Find X9 Pro ಮತ್ತು Oppo Find X9 : ವಿನ್ಯಾಸ
Oppo Find X9 ಮತ್ತು Find X9 Pro ಎರಡೂ ಒಂದೇ ರೀತಿಯ ಡಿಸೈನ್ ಅನ್ನು ಹೊಂದಿವೆ, ಇದು ತುಂಬಾ ಆಕರ್ಷಕವಾಗಿದೆ. ಈ ಸ್ಮಾರ್ಟ್‌ಫೋನ್‌ಗಳಲ್ಲಿ ಫ್ಲಾಟ್ AMOLED ಡಿಸ್ಪ್ಲೇ, ಸಮಾನ ಅಳತೆಯ ಸುಂದರ ಬೇಸೆಲ್‌ಗಳು ಮತ್ತು ಎಡಮೇಲ್ಭಾಗದಲ್ಲಿ ಹಾಸೆಲ್‌ಬ್ಲಾಡ್ ಬ್ರಾಂಡಿಂಗ್ ಇರುವ ಚೌಕಾಕಾರದ ಕ್ಯಾಮೆರಾ ಮೋಡ್ಯೂಲ್ ಇದೆ. ಹಿಂಭಾಗದ ವಿನ್ಯಾಸವು ಸರಳವಾಗಿದ್ದರೂ, ಪ್ರೀಮಿಯಂ ಲುಕ್ ಅನ್ನು ನೀಡುತ್ತದೆ. ಅಲ್ಯೂಮಿನಿಯಂ ಫ್ರೇಮ್ ಮತ್ತು ಮ್ಯಾಟ್ ಗ್ಲಾಸ್ ಫಿನಿಷ್‌ಗಳೊಂದಿಗೆ, ಈ ಫೋನ್‌ಗಳನ್ನು ಹಿಡಿದಾಗ ತುಂಬಾ ಸುಲಭ ಮತ್ತು ಆರಾಮದಾಯಕ ಅನುಭವವನ್ನು ನೀಡುತ್ತವೆ!
ಆದರೆ, Find X9 Pro ಮಾದರಿಯಲ್ಲಿ ಕೆಲವು ಪ್ರೀಮಿಯಂ ಟಚ್‌ಗಳು ಇವೆ. ಇದು ಗ್ಲಾಸ್ ಜೊತೆಗೆ ವೀಗನ್ ಲೆದರ್ ಬ್ಯಾಕ್ ಆಯ್ಕೆಯನ್ನೂ ನೀಡುತ್ತದೆ ಮತ್ತು ಕ್ಯಾಮೆರಾ ಮೋಡ್ಯೂಲ್‌ನ ಸುತ್ತಲೂ ಮೆಟಾಲಿಕ್ ಗ್ಲೋಸಿ ರಿಂಗ್ ಇದೆ. ಫ್ರೇಮ್ ಹೆಚ್ಚು ಹೊಳೆಯುವ ಅಲ್ಯೂಮಿನಿಯಂ ಅಥವಾ ಟೈಟೇನಿಯಂ ಮಿಶ್ರಲೋಹದಿಂದ ತಯಾರಾಗಿದೆ, ಜೊತೆಗೆ IP69 ರೇಟಿಂಗ್‌ನಿಂದ ಹೆಚ್ಚಿನ ನೀರು ಮತ್ತು ಧೂಳಿನ ರಕ್ಷಣೆ ದೊರೆಯುತ್ತದೆ. Find X9 ಮಾದರಿ ಸ್ವಲ್ಪ ಹಗುರವಾಗಿದ್ದು (ಸುಮಾರು 203 ಗ್ರಾಂ), ಪ್ರೋ ಮಾದರಿ ಹೆಚ್ಚು ಗಟ್ಟಿಯಾದ ಮತ್ತು ಪ್ರೀಮಿಯಂ ಹ್ಯಾಂಡ್‌ಫೀಲ್ ನೀಡುತ್ತದೆ.
Oppo Find X9 Pro ಮತ್ತು Oppo Find X9 : ಸಂಪೂರ್ಣ ವೈಶಿಷ್ಟ್ಯಗಳು
Oppo Find X9 Pro ಮತ್ತು Find X9 ಎರಡು ಫೋನ್‌ಗಳು ಪ್ರೀಮಿಯಂ AMOLED ಡಿಸ್ಪ್ಲೇ ಹೊಂದಿವೆ. ಇವುಗಳಲ್ಲಿ Find X9 Pro 6.78-ಇಂಚಿನ LTPO ಡಿಸ್‌ಪ್ಲೇ ಹೊಂದಿದ್ದರೆ, Find X9 6.59-ಇಂಚಿನ ಡಿಸ್‌ಪ್ಲೇ ಹೊಂದಿದೆ. ಎರಡೂ ಡಿಸ್‌ಪ್ಲೇಗಳು 1.5K ರೆಸಲ್ಯೂಷನ್ (Find X9 Pro 2772×1272 ಪಿಕ್ಸೆಲ್, Find X9: 2760×1256 ಪಿಕ್ಸೆಲ್) ಅನ್ನು ನೀಡುತ್ತವೆ. ಡಿಸ್‌ಪ್ಲೇಗಳು HDR10+, Dolby Vision ಮತ್ತು HDR Vivid ಅನ್ನು ಬೆಂಬಲಿಸುತ್ತವೆ.
ProXDR ತಂತ್ರಜ್ಞಾನದಿಂದ ಚಿತ್ರಗಳು ಮತ್ತು ವಿಡಿಯೋಗಳು ಹೆಚ್ಚು ಬಾಳಿಕೆ ಹಾಗೂ ಸ್ಪಷ್ಟತೆಯನ್ನು ಹೊಂದಿರುತ್ತವೆ. ಇನ್ನು 120Hz ರಿಫ್ರೆಶ್ ರೇಟ್ ಸ್ಮೂತ್ ಸ್ಕ್ರೋಲಿಂಗ್ ಮತ್ತು ಗೇಮಿಂಗ್‌ಗೆ ಉತ್ತಮ ಅನುಭವವನ್ನು ನೀಡುತ್ತದೆ. 1800nits ಜಾಗತಿಕ ಗರಿಷ್ಠ ಹೊಳಪು ಮತ್ತು 3600nits ಸ್ಥಳೀಯ ಗರಿಷ್ಠ ಹೊಳಪು ಎಂದರೆ ಬಾಹ್ಯ ಪ್ರಕಾಶದಲ್ಲಿಯೂ ಸ್ಪಷ್ಟವಾಗಿ ನೋಡಬಹುದು. ಹಾಗೆಯೇ Always-On Display (AOD) ಮೂಲಕ ಅಗತ್ಯ ಮಾಹಿತಿಯನ್ನು ಪರದೆಯ ಮೇಲೆಯೇ ನಿರಂತರವಾಗಿ ತೋರಿಸಲು ಸಾಧ್ಯ.

Oppo Find X9 Pro ಮತ್ತು Find X9 ಎರಡು ಫೋನ್‌ಗಳಲ್ಲಿ MediaTek Dimensity 9500 ಚಿಪ್‌ಸೆಟ್ ಬಳಸಲಾಗಿದೆ, ಇದು ಅತ್ಯಂತ ಶಕ್ತಿಶಾಲಿ 5G ಪ್ರೊಸೆಸರ್ ಆಗಿದೆ. ಇದಕ್ಕೆ ಪೂರಕವಾಗಿ 16GB ವರೆಗೆ RAM 1TB ವರೆಗೆ ಸ್ಟೋರೆಜ್ ಇದೆ. Find X9 Pro ನಲ್ಲಿ ದೊಡ್ಡದಾದ 7500mAh ಬ್ಯಾಟರಿ ಇದೆ, Find X9 ನಲ್ಲಿ 7025mAh ಬ್ಯಾಟರಿ ನೀಡಲಾಗಿದೆ. ಇವೆರಡೂ ಬಳಕೆದಾರರಿಗೆ 1.5 ದಿನದಷ್ಟು ಬ್ಯಾಟರಿ ಬ್ಯಾಕಪ್ ನೀಡುವ ಸಾಮರ್ಥ್ಯ ಹೊಂದಿವೆ. ಎರಡೂ ಮಾದರಿಗಳೂ 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿವೆ.
ಕ್ಯಾಮೆರಾ ವಿಭಾಗದಲ್ಲಿ, Find X9 Pro ಮತ್ತು Find X9 ಎರಡೂ ಅತ್ಯುತ್ತಮವಾಗಿವೆ. Find X9 Pro ನಲ್ಲಿ 50MP Sony LYT-828 ಪ್ರಾಥಮಿಕ ಕ್ಯಾಮೆರಾ, 50MP Samsung JN5 ಅಲ್ಟ್ರಾ-ವೈಡ್ ಮತ್ತು 200MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ (3x ಡಿಜಿಟಲ್ ಜೂಮ್) ಇವೆ. ಈ ಕ್ಯಾಮೆರಾ ಸೆಟಪ್‌ಗಳು ಹೆಚ್ಚು ನಿಖರವಾದ, ವೈಶಿಷ್ಟ್ಯಪೂರ್ಣ ಝೂಮ್ ಮತ್ತು ವಿಶಾಲ ಫೋಟೋಗಳನ್ನು ತೆಗೆಯಲು ಸಹಕಾರಿಯಾಗುತ್ತವೆ. ಮುಂಭಾಗದಲ್ಲಿ, ಈ ಫೋನ್ 50MP ಸೆಲ್ಫಿ ಕ್ಯಾಮೆರಾ ಹೊಂದಿದೆ.
ಇತ್ತ Oppo Find X9 ಮಾದರಿಯಲ್ಲೂ 50MP ಮುಖ್ಯ ಕ್ಯಾಮೆರಾ (Sony LYT-828), 50MP ಪೆರಿಸ್ಕೋಪ್ ಟೆಲಿಫೋಟೋ (Sony LYT-600), ಮತ್ತು 50MP ಅಲ್ಟ್ರಾ-ವೈಡ್ ಕ್ಯಾಮೆರಾ (Samsung JN5) ಇವೆ. ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ಇದೆ. ಸಂಪರ್ಕ ಆಯ್ಕೆಗಳಲ್ಲಿ 5G, 4G LTE, Wi-Fi, Bluetooth, GPS ಮತ್ತು USB Type-C ವೈಶೀಷ್ಟ್ಯಗಳುವೆ, ಎರಡೂ ಫೋನ್‌ಗಳು IP66, IP68 ಮತ್ತು IP69 ಪ್ರಮಾಣಿತ ಧೂಳು ಮತ್ತು ನೀರಿನಿಂದ ರಕ್ಷಣೆ ಹೊಂದಿವೆ ಮತ್ತು Android 16 ಆಧಾರಿತ ColorOS 16 ನಲ್ಲಿ ಕಾರ್ಯನಿರ್ವಹಿಸಲಿವೆ.
Oppo Find X9 Pro ಮತ್ತು Oppo Find X9 :ಬೆಲೆಗಳು ಎಷ್ಟು?
Oppo Find X9 ಮತ್ತು Oppo Find X9 Pro ಎರಡೂ ಪೋನ್‌ಗಳು ಪ್ರಸ್ತುತ ಚೀನಾದಲ್ಲಿ ಮತ್ತು ಜಾಗತಿವಾಗಿ ಬಿಡುಗಡೆಯಾಗಿವೆ. ಚೀನಾದಲ್ಲಿ ಫೋನ್ ಬೆಲೆಗಳು ಈ ಕೆಳಕಂಡಂತಿವೆ,
Oppo Find X9 ಬೆಲೆಗಳು
12GB + 256GB - CNY 4,399 (ಅಂದಾಜು ₹54,000)
16GB + 256GB - CNY 4,699 (ಅಂದಾಜು ₹58,000)
12GB + 512GB - CNY 4,999 (ಅಂದಾಜು ₹61,000)
16GB + 512GB - CNY 5,299 (ಅಂದಾಜು ₹65,000)
16GB + 1TB - CNY 5,799 (ಅಂದಾಜು ₹71,000)
Oppo Find X9 Pro ಬೆಲೆಗಳು
12GB + 256GB - CNY 5,299 (ಅಂದಾಜು ₹65,000)
12GB + 512GB - CNY 5,699 (ಅಂದಾಜು ₹70,000)
16GB + 512GB - CNY 5,999 (ಅಂದಾಜು ₹74,000)
16GB + 1TB - CNY 6,699 (ಅಂದಾಜು ₹82,000)
ದೇಶದಲ್ಲಿ ಸ್ಟಾಂಡರ್ಡ್ Oppo Find X9 ಮತ್ತು Oppo Find X9 Pro ಫೋನ್‌ಗಳು ನವೆಂಬರ್ ಮೂರನೇ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.ಸೋರಿಕೆಗಳು ನಿಜವೆಂದು ನಂಬಿದರೆ, Find X9 ಸರಣಿಯು ನವೆಂಬರ್ 18 ರಂದು ಪ್ರಾರಂಭವಾಗಬಹುದು. ಜನಪ್ರಿಯ ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಅವರನ್ನು ಮೂಲವಾಗಿ ಉಲ್ಲೇಖಿಸಿರುವ ಕೆಲವು ವರದಿಗಳು, Oppo Find X9 ಸರಣಿಯು ನವೆಂಬರ್ 18 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಬಹಿರಂಗಪಡಿಸಿವೆ. ಆದರೆ, ಈ ಸುದ್ದಿ ಇನ್ನೂ ಅಧಿಕೃತವಾಗಿಲ್ಲ ಎಂಬುದನ್ನು ಗಮನಿಸಿ.


Click it and Unblock the Notifications








