Home
ಮೊಬೈಲ್

ಭಾರತದಲ್ಲಿ Oppo Find X9 ಸರಣಿ ಬಿಡುಗಡೆ ದಿನಾಂಕ ಲೀಕ್!

ಚೀನಾದ ಜನಪ್ರಿಯ ಮೊಬೈಲ್ ಬ್ರ್ಯಾಂಡ್ Oppo ತನ್ನ ಹೊಸ Find X9 ಸ್ಮಾರ್ಟ್‌ಫೋನ್ ಸರಣಿಯನ್ನು ಇದೇ ಅಕ್ಟೋಬರ್ 16 ರಂದು ಚೀನಾದಲ್ಲಿ ಬಿಡುಗಡೆ ಮಾಡುತ್ತಿರುವ ವಿಷಯವು ನಿಮಗೆಲ್ಲಾ ತಿಳಿದಿರಬಹುದು. ಇದೀಗ ಈ ಸರಣಿಯು ಭಾರತಕ್ಕೆ ಯಾವಾಗ ಬರಲಿದೆ ಎಂಬ ಸೂಚನೆ ದೊರೆತಿದೆ. ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಮತ್ತು ಸ್ಮಾರ್ಟ್‌ಪ್ರಿಕ್ಸ್ (SmartPrix) ಸಹಯೋಗದೊಂದಿಗೆ ಹೊರಬಿದ್ದ ಮಾಹಿತಿಯ ಪ್ರಕಾರ, Oppo Find X9 ಸರಣಿಯ ಫೋನ್‌ಗಳು ಮುಂದಿನ ನವೆಂಬರ್ 18 ರಂದು ಭಾರತದಲ್ಲಿ ಅನಾವರಣಗೊಳ್ಳುವ ಸಾಧ್ಯತೆ ಇದೆ.!

ಹೌದು, Oppo ಈ ಹಿಂದೆ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) 2025 ರಲ್ಲಿ, Find X9 ಸರಣಿಯು ನವೆಂಬರ್‌ನಲ್ಲಿ ಭಾರತಕ್ಕೆ ಬರಲಿದೆ ಎಂದು ಘೋಷಿಸಿತ್ತಾದರೂ, ನಿಖರ ದಿನಾಂಕವನ್ನು ಬಹಿರಂಗಪಡಿಸಿರಲಿಲ್ಲ. ಇದೀಗ ಜನಪ್ರಿಯ ಟಿಪ್‌ಸ್ಟಾರ್ ಯೋಗೇಶ್ ಬ್ರಾರ್ ಅವರು ಉದ್ಯಮ ಲೋಕದ ಈ ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಹಾಗಾದರೆ, ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸುವ ನಿರೀಕ್ಷೆಯಿರುವ ಹೊಸ Oppo Find X9 ಸರಣಿ ಸ್ಮಾರ್ಟ್‌ಫೋನ್‌ಗಳು ಹೇಗಿರಲಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿ.

Oppo Find X9 ಸರಣಿ: ಏನೆಲ್ಲಾ ವಿಶೇಷತೆಗಳು?
ಮುಂಬರಲಿರುವ Oppo Find X9 ಸರಣಿಯು Oppo Find X9 ಮತ್ತು Oppo Find X9 Pro ಎರಡು ಫೋನ್‌ಗಳನ್ನು ಹೊಂದಿರುವುದು ಖಚಿತವಾಗಿದೆ. ಇದೇ ರೀತಿ, ಎರಡೂ ಫೋನ್‌ಗಳು ಇತ್ತೀಚಿನ ಮತ್ತು ಶಕ್ತಿಶಾಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 9500 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿವೆ. ಭಾರತದಲ್ಲಿಯೂ ಇದೇ ಚಿಪ್‌ಸೆಟ್ ಇರುವುದು ದೃಢಪಟ್ಟಿದೆ. ಇದೀಗ ಚೀನಾದ ಆವೃತ್ತಿಯು Arm G1-Ultra GPU ಜೊತೆಗೆ 4.21GHz ಪೀಕ್ ಕ್ಲಾಕ್ ವೇಗದಲ್ಲಿ ಬರಲಿದ್ದು, ಇದು ಹಿಂದಿನ ಮಾದರಿಗಳಿಗಿಂತ 33% ವೇಗದ ಗ್ರಾಫಿಕ್ಸ್ ಕಾರ್ಯಕ್ಷಮತೆ ಮತ್ತು 42% ಉತ್ತಮ ವಿದ್ಯುತ್ ದಕ್ಷತೆಯನ್ನು ನೀಡುತ್ತದೆ ಎನ್ನಲಾಗಿದೆ. ಈ ಫೋನ್‌ಗಳು ಆಂಡ್ರಾಯ್ಡ್ 16 ಆಧಾರಿತ ಕಲರ್‌ಓಎಸ್ 16 (ColorOS 16) ನಲ್ಲಿ ರನ್ ಆಗಲಿವೆ.

ಭಾರತದಲ್ಲಿ Oppo Find X9 ಸರಣಿ ಬಿಡುಗಡೆ ದಿನಾಂಕ ಲೀಕ್!

ಡಿಸ್‌ಪ್ಲೇ ಮತ್ತು ಮೆಮೊರಿ
ಡಿಸ್‌ಪ್ಲೇ ವಿಭಾಗದಲ್ಲಿ, ಪ್ರೀಮಿಯಂ Find X9 Pro ಮಾದರಿಯು 6.78-ಇಂಚಿನ ಫ್ಲಾಟ್ OLED ಡಿಸ್ಪ್ಲೇಯನ್ನು ಹೊಂದಿದ್ದು, 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್‌ನೊಂದಿಗೆ ಬರಲಿದೆ. ಇದರ ಉನ್ನತ ಶ್ರೇಣಿಯ ಆಯ್ಕೆಯಲ್ಲಿ 16GB RAM ಮತ್ತು 512GB ಸಂಗ್ರಹಣೆ ಲಭ್ಯವಿರಲಿದೆ. ಅಚ್ಚರಿಯೆಂದರೆ, ಇತ್ತ ಸ್ಟ್ಯಾಂಡರ್ಡ್ Find X9 ಮಾದರಿಯು 6.59-ಇಂಚಿನ LTPO OLED ಡಿಸ್ಪ್ಲೇಯನ್ನು ಹೊಂದಿದ್ದು, ಇದು ಹೆಚ್ಚಿನ 2K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್‌ನೊಂದಿಗೆ ಬರುತ್ತದೆ. ಈ ಎರಡೂ ಡಿಸ್ಪ್ಲೇಗಳು 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತವೆ. ಆದರೆ, ಸ್ಟ್ಯಾಂಡರ್ಡ್ Find X9 ಮಾದರಿಯು Pro ಮಾದರಿಗಿಂತ ಹೆಚ್ಚಿನ 2K ರೆಸಲ್ಯೂಶನ್ ಅನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ. ಇದು ಆಸ್ಚರ್ಯಕರ ವಿಷಯವಾಗಿದೆ.

200MP ಟೆಲಿಫೋಟೋ ಲೆನ್ಸ್ ಹ್ಯಾಸಲ್‌ಬ್ಲಾಡ್ ಟ್ಯೂನಿಂಗ್!
ಕ್ಯಾಮೆರಾ ವಿಭಾಗದಲ್ಲಿ, Find X9 Pro ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಸೋನಿ LYT-828 ಮುಖ್ಯ ಕ್ಯಾಮೆರಾ, 50-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು 200-ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ HP5 ಟೆಲಿಫೋಟೋ ಪೆರಿಸ್ಕೋಪ್ ಸೆನ್ಸಾರ್ ಅನ್ನು ಒಳಗೊಂಡಿರಲಿದೆ. ಈ 200MP ಟೆಲಿಫೋಟೋ ಲೆನ್ಸ್ ಹ್ಯಾಸಲ್‌ಬ್ಲಾಡ್ ಟ್ಯೂನಿಂಗ್ ಅನ್ನು ಹೊಂದಿರುವುದು ದೃಢಪಟ್ಟಿದೆ. ಇತ್ತ ಪಸ್ಟ್ಯಾಂಡರ್ಡ್ Find X9 ಮಾದರಿಯು 50-ಮೆಗಾಪಿಕ್ಸೆಲ್ ಸೋನಿ LYT-808 (OIS ಜೊತೆಗೆ) ಪ್ರೈಮರಿ ಕ್ಯಾಮೆರಾ ಜೊತೆಗೆ 50-ಮೆಗಾಪಿಕ್ಸೆಲ್ ಅಲ್ಟ್ರಾವೈಡ್, 50-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಕ್ಯಾಮೆರಾ ಸೆಟಪ್ ಹೊಂದಿರಬಹುದು. ಇನ್ನು ಈ ಎರಡೂ ಫೋನ್‌ಗಳು 50-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿರುವ ಸೂಚನೆಗಳಿವೆ, ಆದರೆ, ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಭಾರತದಲ್ಲಿ ಬೆಲೆ ಎಷ್ಟಿರಬಹುದು?
Oppo Find X9 ಸರಣಿ ಫೋನ್‌ಗಳು ಇನ್ನೂ ಬಿಡುಗಡೆಯಾಗಿಲ್ಲ. ಆದರೆ, ಭಾರತೀಯ ಮಾರುಕಟ್ಟೆಯಲ್ಲಿ ಈ ಸರಣಿಯ ನಿರೀಕ್ಷಿತ ಬೆಲೆಯು ಪ್ರೀಮಿಯಂ ವಿಭಾಗದಲ್ಲಿರುತ್ತದೆ. Find X9 Pro ಮಾದರಿಯು ₹1,00,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ನಿರೀಕ್ಷೆಯಿದ್ದರೆ, Find X9 ಸುಮಾರು ₹65,000 ಬೆಲೆಯಲ್ಲಿ ಬಿಡುಗಡೆಯಾಗಬಹುದು. ಒಟ್ಟಾರೆಯಾಗಿ, ಈ ಫೋನ್‌ಗಳ ಪ್ರಮುಖ ಆಕರ್ಷಣೆ ಎಂದರೆ, ಈ ಸರಣಿಯ ಅತಿ ವೇಗದ ಚಿಪ್‌ಸೆಟ್, 200MP ಕ್ಯಾಮೆರಾ ಸಾಮರ್ಥ್ಯ, ಮತ್ತು ಪ್ರೀಮಿಯಂ ಡಿಸ್ಪ್ಲೇ ಗುಣಮಟ್ಟಗಳು, ಇದನ್ನು ಭಾರತದ ಫ್ಲಾಗ್‌ಶಿಪ್ ವಿಭಾಗದಲ್ಲಿ ಅತ್ಯಂತ ಸ್ಪರ್ಧಾತ್ಮಕ ಮತ್ತು ಹೆಚ್ಚು ಗಮನ ಸೆಳೆಯುವ ಆಯ್ಕೆಯನ್ನಾಗಿ ಮಾಡಬಹುದು. Oppo Find X9 ಸರಣಿ ಫೋನ್‌ಗಳು ಬಿಡುಗಡೆ ದಿನಾಂಕ ಹತ್ತಿರವಾಗುತ್ತಿರುವಂತೆ, ಮತ್ತಷ್ಟು ಮಹತ್ವದ ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ. ಹೆಚ್ಚಿನ ಅಪ್‌ಡೆಟ್‌ಗಳಿಗಾಗಿ ಕನ್ನಡ ಗಿಜ್‌ಬಾಟ್‌ನಲ್ಲಿ ಲೈವ್ ಆಗಿರಿ.

Best Mobiles in India

English summary
Oppo’s upcoming Find X9 Series is reportedly set to launch in India soon, with leaks revealing its launch date, powerful Snapdragon chip, and premium pricing. check here for all the details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+