Home
ಮೊಬೈಲ್

ಭಾರತದಲ್ಲಿ Oppo Find X9 ಸರಣಿ ಫೋನ್‌ಗಳು ಬಿಡುಗಡೆ!..ಖರೀದಿಗೆ ಕ್ಯೂ ಗ್ಯಾರಂಟಿ?

ಭಾರತದ ಮೊಬೈಲ್ ಮಾರುಕಟ್ಟೆಯು ಬಹುದಿನಗಳಿಂದ ಎದುರುನೋಡುತ್ತಿದ್ದ Oppo Find X9 ಫ್ಲಾಗ್‌ಶಿಪ್ ಸರಣಿ ಇಂದು ಭರ್ಜರಿಯಾಗಿ ಬಿಡುಗಡೆಯಾಗಿದೆ. ದೇಶದಲ್ಲಿ ಇಂದು (18, ಮಂಗಳವಾರ) Oppo ಕಂಪೆನಿಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, Oppo Find X9 ಮತ್ತು Oppo Find X9 Pro ಎರಡೂ ಸ್ಮಾರ್ಟ್‌ಫೋನ್‌ಗಳು ಪರಿಚಯಗೊಂಡಿದ್ದು, ನಿರೀಕ್ಷೆಯಂತೆಯೇ ಮೀಡಿಯಾಟೆಕ್‌ನ ಪ್ರಮುಖ ಡೈಮೆನ್ಸಿಟಿ 9500 ಚಿಪ್‌ಸೆಟ್‌ನಿಂದ ಚಾಲಿತವಾಗಿವೆ. ಇನ್ನೂ ಹೆಚ್ಚಿನ ವಿಶೇಷತೆ ಎಂದರೆ, ದೇಶದಲ್ಲಿ Oppo Find X9 ಬೆಲೆ ಕೇವಲ 74,999 ರಿಂದ ಪ್ರಾರಂಭವಾಗಿದೆ. ಹಾಗಾದರೆ, ದೇಶದ ಮಾರುಕಟ್ಟೆಗೆ ಹೊಸದಾಗಿ ಪರಿಚಯಗೊಂಡಿರುವ Oppo Find X9 ಮತ್ತು Find X9 Pro ಎರಡೂ ಸ್ಮಾರ್ಟ್‌ಫೋನ್‌ಗಳು ಹೇಗಿವೆ?, ಸಂಪೂರ್ಣ ಫೀಚರ್ಸ್ ಯಾವುವು? ಹಾಗೂ ಬೆಲೆಗಳು ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.

Oppo Find X9: ಪ್ರಮುಖ ಫೀಚರ್ಸ್ ಮತ್ತು ವೈಶಿಷ್ಟ್ಯಗಳು
ಈ ಸರಣಿಯ ಬೇಸ್ Oppo Find X9 ಫೋನ್ 6.59-ಇಂಚಿನ (1,256 x 2,760 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ, 460ppi ಪಿಕ್ಸೆಲ್ ಸಾಂದ್ರತೆ ಮತ್ತು 3,600 nits ವರೆಗಿನ ಗರಿಷ್ಠ ಹೊಳಪನ್ನು ಹೊಂದಿದೆ. ಡಿಸ್ಪ್ಲೇ ಮೇಲ್ಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ. ಕಾರ್ಯಕ್ಷಮತೆಗಾಗಿ, ಈ ಫೋನ್ 3nm ಮೀಡಿಯಾ ಟೆಕ್ ಡೈಮೆನ್ಸಿಟಿ 9500 ಚಿಪ್‌ಸೆಟ್ ಅನ್ನು ಹೊಂದಿದ್ದು, ಇದರನ್ನು 16GB ವರೆಗಿನ LPDDR5X RAM ಮತ್ತು 512GB ವರೆಗಿನ UFS 4.1 ಆನ್‌ಬೋರ್ಡ್ ಸ್ಟೋರೇಜ್ಜೊತೆಗೆ ಜೋಡಿಸಲಾಗಿದೆ. ಇದರಲ್ಲಿ 32,052.5 ಚದರ ಮಿಮೀ ಒಟ್ಟು ಡಿಸ್ಸಿಪೇಷನ್ ಪ್ರದೇಶದೊಂದಿಗೆ VC ಕೂಲಿಂಗ್ ವ್ಯವಸ್ಥೆಯನ್ನು ನೀಡಲಾಗಿದೆ. ಹಾಗೆಯೇ, ಹ್ಯಾಪ್ಟಿಕ್ಸ್‌ಗಾಗಿ X-ಆಕ್ಸಿಸ್ ಲೀನಿಯರ್ ಮೋಟಾರ್ ಕೂಡ ಇದೆ.

ಭಾರತದಲ್ಲಿ Oppo Find X9 ಸರಣಿ ಫೋನ್‌ಗಳು ಬಿಡುಗಡೆ!..ಖರೀದಿಗೆ ಕ್ಯೂ ಗ್ಯಾರಂಟಿ?

ಕ್ಯಾಮೆರಾ ವಿಭಾಗದಲ್ಲಿ, Hasselblad ಟ್ಯೂನ್ ಮಾಡಿದ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಇದೆ. ಇದರಲ್ಲಿ OIS ಜೊತೆಗೆ 50MP Sony LYT-808 ಮುಖ್ಯ ಕ್ಯಾಮೆರಾ (f/1.6) OIS ಜೊತೆಗೆ 50-ಮೆಗಾಪಿಕ್ಸೆಲ್ (f/2.0) ಅಲ್ಟ್ರಾವೈಡ್ ಕ್ಯಾಮೆರಾ ಮತ್ತು OIS ಜೊತೆಗೆ 50-ಮೆಗಾಪಿಕ್ಸೆಲ್ (f/2.6) ಸೋನಿ LYT-600 ಟೆಲಿಫೋಟೋ ಕ್ಯಾಮೆರಾಗಳಿವೆ. ಸೆಲ್ಫಿಗಳಿಗಾಗಿ, 32-ಮೆಗಾಪಿಕ್ಸೆಲ್ ಸೋನಿ IMX615 ಕ್ಯಾಮೆರಾ ಇದೆ. ಈ ಕ್ಯಾಮೆರಾ ವ್ಯವಸ್ಥೆಯು ಒಪ್ಪೋದ ಹೊಸ ಲುಮೋ ಇಮೇಜಿಂಗ್ ಎಂಜಿನ್‌ನಿಂದ ಚಾಲಿತವಾಗಿದೆ, ಇದು ಕಂಪ್ಯೂಟೇಶನಲ್ ಫೋಟೋಗ್ರಫಿಯನ್ನು ಬಳಸುತ್ತದೆ. ಬ್ಯಾಟರಿ ವಿಭಾಗದಲ್ಲಿ, ಈ Oppo Find X9 7,025mAh ಸಿಲಿಕಾನ್-ಕಾರ್ಬನ್ ಬ್ಯಾಟರಿಯನ್ನು ಹೊಂದಿದೆ. ಇದು 80W ವೈರ್ಡ್ ಫಾಸ್ಟ್ ಚಾರ್ಜಿಂಗ್, 50W AirVOOC ವೈರ್‌ಲೆಸ್ ಚಾರ್ಜಿಂಗ್ ಮತ್ತು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಇನ್ನುಳಿದಂತೆ, ಸಂಪರ್ಕ ಆಯ್ಕೆಗಳಲ್ಲಿ ಬ್ಲೂಟೂತ್ 6.0, ವೈ-ಫೈ 7, NFC, ಒಪ್ಪೋ RF ಚಿಪ್‌ನೊಂದಿಗೆ AI ಲಿಂಕ್‌ಬೂಸ್ಟ್, USB 3.2 Gen 1 ಟೈಪ್-C ಪೋರ್ಟ್, GPS, GLONASS, QZSS ಮತ್ತು ಗೆಲಿಲಿಯೊ ಸೇರಿವೆ. ಭದ್ರತೆಗಾಗಿ 3D ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಕ್ವಾಡ್-ಮೈಕ್ರೊಫೋನ್ ಸೆಟಪ್ ಇದೆ. ಧೂಳು ಮತ್ತು ನೀರಿನ ಒಳಹರಿವಿನ ವಿರುದ್ಧ IP66 + IP68 + IP69 ರೇಟಿಂಗ್‌ಗಳು ಹಾಗೂ ಫೈವ್‌ಸ್ಟಾರ್ SGS ಡ್ರಾಪ್ ರೆಸಿಸ್ಟೆನ್ಸ್ ಹೊಂದಿದೆ. ಸಾಫ್‌ವೇರ್ ವಿಭಾಗದಲ್ಲಿ, ಆಂಡ್ರಾಯ್ಡ್ 16 ಆಧಾರಿತ ಕಲರ್‌ಓಎಸ್ 16 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 5 ಆಪರೇಟಿಂಗ್ ಸಿಸ್ಟಮ್ (OS) ಅಪ್‌ಗ್ರೇಡ್‌ಗಳು ಮತ್ತು ಆರು ವರ್ಷಗಳ SMR ನವೀಕರಣಗಳನ್ನು ಪಡೆಯುವ ಭರವಸೆ ಇದೆ. ಆಯಾಮಗಳ ವಿಷಯದಲ್ಲಿ 156.98 × 73.93 × 7.99mm ಅಳತೆ ಮಾಡುತ್ತದೆ ಮತ್ತು ಮತ್ತು ಕೇವಲ 203g ತೂಕವನ್ನು ಹೊಂದಿದೆ.

ಭಾರತದಲ್ಲಿ Oppo Find X9 ಸರಣಿ ಫೋನ್‌ಗಳು ಬಿಡುಗಡೆ!..ಖರೀದಿಗೆ ಕ್ಯೂ ಗ್ಯಾರಂಟಿ?

Oppo Find X9 Pro: ಪ್ರಮುಖ ಫೀಚರ್ಸ್ ಮತ್ತು ವೈಶಿಷ್ಟ್ಯಗಳು
ಬೇಸ್ Oppo Find X9 ಫೋನನ್‌ಗೆ ಹೋಲಿಸಿದರೆ, ಪ್ರೊ ಮಾದರಿಯ Oppo Find X9 Pro ದೊಡ್ಡದಾದ 6.78-ಇಂಚಿನ 1,272×2,772 ಪಿಕ್ಸೆಲ್‌ಗಳ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ವರೆಗೆ ರಿಫ್ರೆಶ್ ದರ, 20:9 ಆಕಾರ ಅನುಪಾತ, 3,600 nits ಗರಿಷ್ಠ ಹೊಳಪು ಮತ್ತು 450 ppi ಪಿಕ್ಸೆಲ್ ಸಾಂದ್ರತೆಯೊಂದಿಗೆ ಅದೇ ಡಿಸ್‌ಪ್ಲೇ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.ಈ Oppo Find X9 Pr ಮಾದರಿಯು ಸಹ Oppo Find X9 ನಂತೆಯೇ ಚಿಪ್‌ಸೆಟ್, ಸಂಗ್ರಹಣೆ ಮತ್ತು ಸಾಫ್ಟ್‌ವೇರ್ ಬೆಂಬಲವನ್ನು ಹೊಂದಿದೆ. ಇದ 16GB LPDDR5X RAM ನೊಂದಿಗೆ ಬರುತ್ತದೆ. ಇದರಲ್ಲೂ ಸಹ 36,344.4 ಚದರ ಮಿಮೀ ಒಟ್ಟು ಡಿಸ್ಸಿಪೇಷನ್ ಪ್ರದೇಶದೊಂದಿಗೆ VC ಕೂಲಿಂಗ್ ವ್ಯವಸ್ಥೆ ಇದೆ. ಹಾಗೆಯೇ, ಕನೆಕ್ಟಿವಿಟಿ ವೈಶಿಷ್ಟ್ಯಗಳು ಸ್ಟ್ಯಾಂಡರ್ಡ್ ಮಾದರಿಗೆ ಹೋಲುತ್ತವೆ. ಆದರೆ, ಕ್ಯಾಮೆರಾ ಮತ್ತು ಬ್ಯಾಟರಿ ವಿಭಾಗದಲ್ಲಿ ಭಾರೀ ಬದಲಾವಣೆಗಳಿವೆ.

ಕ್ಯಾಮೆರಾ ವಿಭಾಗದಲ್ಲಿ, Oppo Find X9 Pro ಪ್ರೀಮಿಯಂ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ 50-ಮೆಗಾಪಿಕ್ಸೆಲ್ (f/1.5) ಸೋನಿ LYT-828 ಪ್ರಾಥಮಿಕ ಕ್ಯಾಮೆರಾ ಇದ್ದು, ಇದು 1/1.28-ಇಂಚಿನ ಸೆನ್ಸರ್, 23mm ಫೋಕಲ್ ಲೆಂತ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಹೊಂದಿದೆ. ಜೊತೆಗೆ 15mm ಫೋಕಲ್ ಲೆಂತ್ 50-ಮೆಗಾಪಿಕ್ಸೆಲ್ (f/2.0) Samsung ISOCELL 5KJN5 ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು OIS ಜೊತೆಗೆ 70mm ಫೋಕಲ್ ಲೆಂತ್ 200-ಮೆಗಾಪಿಕ್ಸೆಲ್ (f/2.1) ಟೆಲಿಫೋಟೋ ಕ್ಯಾಮೆರಾಗಳಿವೆ. ಮುಂಭಾಗದಲ್ಲಿ, ಇದು 50-ಮೆಗಾಪಿಕ್ಸೆಲ್ (f/2.0) Samsung 5KJN5 ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಬ್ಯಾಟರಿ ವಿಭಾಗದಲ್ಲಿ, ಈ ಫೋನ್ 7,500mAh ಸಿಲಿಕಾನ್-ಕಾರ್ಬನ್ ಬ್ಯಾಟರಿಯನ್ನು 80W SuperVOOC ವೈರ್ಡ್ ಮತ್ತು 50W AirVOOC ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ, 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಬೆಂಬಲವೂ ಇದೆ.

Oppo Find X9 ಮತ್ತು Oppo Find X9 Pro: ಭಾರತದಲ್ಲಿ ಬೆಲೆ ಮತ್ತು ಲಭ್ಯತೆ
Oppo Find X9
12GB + 256GB ಮಾದರಿ: ₹74,999
16GB + 512GB ಮಾದರಿ: ₹84,999
ಲಭ್ಯವಿರುವ ಬಣ್ಣಗಳು: Space Black, Titanium Grey

Oppo Find X9 Pro
ಒಂದೇ 16GB + 512GB ಮಾದರಿ: ₹1,09,999
ಲಭ್ಯವಿರುವ ಬಣ್ಣಗಳು: Silk White, Titanium Charcoal

ಈ ಎರಡೂ ಫೋನ್‌ಗಳು ನವೆಂಬರ್ 21ರಿಂದ Oppo India Store, Flipkart ಮತ್ತು Amazon ನಲ್ಲಿ ಖರೀದಿಗೆ ಲಭ್ಯವಾಗಲಿವೆ. ಈ ಫೋನ್‌ಗಳ ಜೊತೆಗೆ ಬಂದಿರುವ Oppo Hasselblad ಟೆಲಿಕಾನ್ವರ್ಟರ್ ಕಿಟ್ ₹29,999ಕ್ಕೆ ಬಿಡುಗಡೆಯಾಗಿದೆ. ಈ ಸಾಧನದ ಕುರಿತು ಮತ್ತೊಂದು ಲೇಖನದಲ್ಲಿ ನೋಡೋಣ.

Best Mobiles in India

English summary
Oppo today (Tuesday, 18) launched its new Oppo Find X9 and Oppo Find X9 Pro smartphones in the country. As expected, both models are powered by MediaTek’s flagship Dimensity 9500 chipset. Notably, the Oppo Find X9 starts at a price of just ₹74,999.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+