ಆಕರ್ಷಕ 'ರೆಡ್ ವೆಲ್ವೆಟ್' ಬಣ್ಣದ Oppo Find X9 ಮೊದಲ ಸೇಲ್ ಆರಂಭ!
ಭಾರತದಲ್ಲಿ Oppo ತನ್ನ ಜನಪ್ರಿಯ Oppo Find X9 ಸರಣಿಯನ್ನು ಕಳೆದ ತಿಂಗಳಷ್ಟೇ ಪರಿಚಯಿಸಿತ್ತು. ನಂತರ ಇದೇ ಸರಣಿಯಲ್ಲಿ ಹೊಸದಾಗಿ ಆಕರ್ಷಕ 'ರೆಡ್ ವೆಲ್ವೆಟ್' (Velvet Red) ಬಣ್ಣದ ಫೋನ್ ಮಾದರಿಯನ್ನು ಕೆಲವು ದಿನಗಳ ಹಿಂದೆಯಷ್ಟೇ ಬಿಡುಗಡೆ ಮಾಡಿತ್ತು. ಇದೀಗ ಈ ಹೊಸ ಆವೃತ್ತಿಯ ಸ್ಟಾಂಡರ್ಡ್ Oppo Find X9 ಫೋನ್ ಮೊದಲ ಬಾರಿಗೆ ಮಾರಾಟಕ್ಕೆ ಬಂದಿದೆ. ಡಿಸೆಂಬರ್ 8 ರಿಂದ Oppo India e-Store, Flipkart ಹಾಗೂ ಅಧಿಕೃತ ರಿಟೇಲ್ ಪಾಲುದಾರರ ಮೂಲಕ ರೆಡ್ ವೆಲ್ವೆಟ್ ಬಣ್ಣದ Oppo Find X9 ಫೋನ್ ಖರೀದಿಗೆ ಲಭ್ಯವಾಗಿದೆ.
ದೇಶದಲ್ಲಿ ಈ ಹೊಸ ರೆಡ್ ವೆಲ್ವೆಟ್ ವೇರಿಯಂಟ್ ಒಂದೇ 12GB + 256GB ಮಾದರಿಯಲ್ಲಿ ಲಭ್ಯವಿದ್ದು, ಇದರ ಪ್ರಾರಂಭಿಕ ಬೆಲೆ ₹74,999 ರೂ.ಗಳಾಗಿವೆ. ಆದರೆ, ಬ್ಯಾಂಕ್ ಆಫರ್‌ಗಳು ಹಾಗೂ ಹೆಚ್ಚುವರಿ ಎಕ್ಸ್ಚೇಂಜ್ ಬೋನಸ್‌ಗಳನ್ನು ಬಳಸಿಕೊಂಡು, ಗ್ರಾಹಕರು ಇದನ್ನು ₹67,499 ರೂ. ಗಳ ಅತ್ಯಂತ ಪರಿಣಾಮಕಾರಿ ಕಡಿಮೆ ಬೆಲೆಯಲ್ಲಿ ಪಡೆಯಬಹುದು. ಇದರಲ್ಲಿ ಅರ್ಹ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿದ ಖರೀದಿಗಳಿಗೆ 10% ತ್ವರಿತ ಕ್ಯಾಶ್‌ಬ್ಯಾಕ್ ಒದಗಿಸಲಾಗುತ್ತಿದೆ. ಜೊತೆಗೆ 24 ತಿಂಗಳವರೆಗೆ No-Cost EMI ಆಯ್ಕೆ ಲಭ್ಯವಿದೆ. ಇಷ್ಟೇ ಅಲ್ಲದೆ,
Oppo ತನ್ನ Find X9 ಸರಣಿ ಗ್ರಾಹಕರಿಗೆ 180 ದಿನಗಳ ಹಾರ್ಡ್‌ವೇರ್ ರಿಪ್ಲೇಸ್ಮೆಂಟ್ ಪಾಲಿಸಿಯನ್ನೂ ನೀಡುತ್ತದೆ. ಖರೀದಿದಾರರು 3 ತಿಂಗಳ Gemini Pro ಪ್ರವೇಶವನ್ನು ಉಚಿತವಾಗಿ ಪಡೆಯಬಹುದು. Jio ಬಳಕೆದಾರರಿಗೆ ವಿಶೇಷ ಯೋಜನೆಗಳು ಇದ್ದು, ₹649 ಅಥವಾ ಹೆಚ್ಚಿನ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳಲ್ಲಿ ₹2,250 ಮೌಲ್ಯದ ಲಾಭಗಳು. ಹಾಗೂ, 18-25 ವರ್ಷ ವಯಸ್ಸಿನ ಬಳಕೆದಾರರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 18 ತಿಂಗಳ Gemini Pro ಪ್ರವೇಶ ಸಿಗಲಿದೆ. ಜೊತೆಗೆ Cashify ಮತ್ತು Servify ಮೂಲಕ ಹೆಚ್ಚುವರಿ ಎಕ್ಸ್ಚೇಂಜ್ ಬೋನಸ್‌ಗಳು ಲಭ್ಯವಾಗಲಿವೆ.

Oppo Find X9: ಪ್ರಮುಖ ಫೀಚರ್ಸ್ ಮತ್ತು ವೈಶಿಷ್ಟ್ಯಗಳು
ಈ ಸರಣಿಯ ಬೇಸ್ Oppo Find X9 ಫೋನ್( ಈಗ ಪರಿಚಯಿಸಿರುವ ರೆಡ್ ವೆಲ್ವೆಟ್' ಮಾದರಿಯು ಸೇರಿದಂತೆ) 6.59-ಇಂಚಿನ (1,256 x 2,760 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ, 460ppi ಪಿಕ್ಸೆಲ್ ಸಾಂದ್ರತೆ ಮತ್ತು 3,600 nits ವರೆಗಿನ ಗರಿಷ್ಠ ಹೊಳಪನ್ನು ಹೊಂದಿದೆ. ಡಿಸ್ಪ್ಲೇ ಮೇಲ್ಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ.
ಕಾರ್ಯಕ್ಷಮತೆಗಾಗಿ, ಈ ಫೋನ್ 3nm ಮೀಡಿಯಾ ಟೆಕ್ ಡೈಮೆನ್ಸಿಟಿ 9500 ಚಿಪ್‌ಸೆಟ್ ಅನ್ನು ಹೊಂದಿದ್ದು, ಇದರನ್ನು 16GB ವರೆಗಿನ LPDDR5X RAM ಮತ್ತು 512GB ವರೆಗಿನ UFS 4.1 ಆನ್‌ಬೋರ್ಡ್ ಸ್ಟೋರೇಜ್ಜೊತೆಗೆ ಜೋಡಿಸಲಾಗಿದೆ. ಇದರಲ್ಲಿ 32,052.5 ಚದರ ಮಿಮೀ ಒಟ್ಟು ಡಿಸ್ಸಿಪೇಷನ್ ಪ್ರದೇಶದೊಂದಿಗೆ VC ಕೂಲಿಂಗ್ ವ್ಯವಸ್ಥೆಯನ್ನು ನೀಡಲಾಗಿದೆ. ಹಾಗೆಯೇ, ಹ್ಯಾಪ್ಟಿಕ್ಸ್‌ಗಾಗಿ X-ಆಕ್ಸಿಸ್ ಲೀನಿಯರ್ ಮೋಟಾರ್ ಕೂಡ ಇದೆ.
ಕ್ಯಾಮೆರಾ ವಿಭಾಗದಲ್ಲಿ, Hasselblad ಟ್ಯೂನ್ ಮಾಡಿದ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಇದೆ. ಇದರಲ್ಲಿ OIS ಜೊತೆಗೆ 50MP Sony LYT-808 ಮುಖ್ಯ ಕ್ಯಾಮೆರಾ (f/1.6) OIS ಜೊತೆಗೆ 50-ಮೆಗಾಪಿಕ್ಸೆಲ್ (f/2.0) ಅಲ್ಟ್ರಾವೈಡ್ ಕ್ಯಾಮೆರಾ ಮತ್ತು OIS ಜೊತೆಗೆ 50-ಮೆಗಾಪಿಕ್ಸೆಲ್ (f/2.6) ಸೋನಿ LYT-600 ಟೆಲಿಫೋಟೋ ಕ್ಯಾಮೆರಾಗಳಿವೆ. ಸೆಲ್ಫಿಗಳಿಗಾಗಿ, 32-ಮೆಗಾಪಿಕ್ಸೆಲ್ ಸೋನಿ IMX615 ಕ್ಯಾಮೆರಾ ಇದೆ.
ಈ ಕ್ಯಾಮೆರಾ ವ್ಯವಸ್ಥೆಯು ಒಪ್ಪೋದ ಹೊಸ ಲುಮೋ ಇಮೇಜಿಂಗ್ ಎಂಜಿನ್‌ನಿಂದ ಚಾಲಿತವಾಗಿದೆ, ಇದು ಕಂಪ್ಯೂಟೇಶನಲ್ ಫೋಟೋಗ್ರಫಿಯನ್ನು ಬಳಸುತ್ತದೆ. ಬ್ಯಾಟರಿ ವಿಭಾಗದಲ್ಲಿ, ಈ Oppo Find X9 7,025mAh ಸಿಲಿಕಾನ್-ಕಾರ್ಬನ್ ಬ್ಯಾಟರಿಯನ್ನು ಹೊಂದಿದೆ. ಇದು 80W ವೈರ್ಡ್ ಫಾಸ್ಟ್ ಚಾರ್ಜಿಂಗ್, 50W AirVOOC ವೈರ್‌ಲೆಸ್ ಚಾರ್ಜಿಂಗ್ ಮತ್ತು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಇನ್ನುಳಿದಂತೆ, ಸಂಪರ್ಕ ಆಯ್ಕೆಗಳಲ್ಲಿ ಬ್ಲೂಟೂತ್ 6.0, ವೈ-ಫೈ 7, NFC, ಒಪ್ಪೋ RF ಚಿಪ್‌ನೊಂದಿಗೆ AI ಲಿಂಕ್‌ಬೂಸ್ಟ್, USB 3.2 Gen 1 ಟೈಪ್-C ಪೋರ್ಟ್, GPS, GLONASS, QZSS ಮತ್ತು ಗೆಲಿಲಿಯೊ ಸೇರಿವೆ. ಭದ್ರತೆಗಾಗಿ 3D ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಕ್ವಾಡ್-ಮೈಕ್ರೊಫೋನ್ ಸೆಟಪ್ ಇದೆ. ಧೂಳು ಮತ್ತು ನೀರಿನ ಒಳಹರಿವಿನ ವಿರುದ್ಧ IP66 + IP68 + IP69 ರೇಟಿಂಗ್‌ಗಳು ಹಾಗೂ ಫೈವ್‌ಸ್ಟಾರ್ SGS ಡ್ರಾಪ್ ರೆಸಿಸ್ಟೆನ್ಸ್ ಹೊಂದಿದೆ.
ಸಾಫ್‌ವೇರ್ ವಿಭಾಗದಲ್ಲಿ, ಆಂಡ್ರಾಯ್ಡ್ 16 ಆಧಾರಿತ ಕಲರ್‌ಓಎಸ್ 16 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 5 ಆಪರೇಟಿಂಗ್ ಸಿಸ್ಟಮ್ (OS) ಅಪ್‌ಗ್ರೇಡ್‌ಗಳು ಮತ್ತು ಆರು ವರ್ಷಗಳ SMR ನವೀಕರಣಗಳನ್ನು ಪಡೆಯುವ ಭರವಸೆ ಇದೆ. ಆಯಾಮಗಳ ವಿಷಯದಲ್ಲಿ 156.98 × 73.93 × 7.99mm ಅಳತೆ ಮಾಡುತ್ತದೆ ಮತ್ತು ಮತ್ತು ಕೇವಲ 203g ತೂಕವನ್ನು ಹೊಂದಿದೆ.


Click it and Unblock the Notifications








