Oppo Find X9 vs OnePlus 15: ಯಾವ ಕಾಂಪ್ಯಾಕ್ಟ್ ಫ್ಲಾಗ್‌ಶಿಪ್ ಉತ್ತಮ?
ಭಾರತದ ಪ್ರೀಮಿಯಂ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇದೀಗ ಕಾಂಪ್ಯಾಕ್ಟ್ ಫೋನ್‌ಗಳ ಸ್ಪರ್ಧೆ ತೀವ್ರವಾಗಿದೆ. ಅದರಲ್ಲೂ Oppo ಮತ್ತು OnePlus ಕಂಪನಿಗಳು ಇತ್ತೀಚಿಗಷ್ಟೇ ಪರಿಚಯಿಸಿರುವ Oppo Find X9 ಮತ್ತು OnePlus 15 ಫೋನ್‌ಗಳು ಮೊಬೈಲ್ ಪ್ರಿಯರ ಆಕರ್ಷಣೆಯಾಗಿವೆ. ಇದಕ್ಕೆ ಕಾರಣ, ಈ ಎರಡೂ ಫೋನ್‌ಗಳು ಹೈಎಂಡ್ ಬಳಕೆದಾರರ ಗಮನ ಸೆಳೆಯುವಂತಹ ಕ್ಯಾಮೆರಾ ಗುಣಮಟ್ಟ, ವೇಗದ ಕಾರ್ಯಕ್ಷಮತೆ, ದೀರ್ಘ ಬ್ಯಾಟರಿ ಲೈಫ್ ಮತ್ತು ಪ್ರೀಮಿಯಂ ಡಿಸೈನ್ ಹೊಂದಿವೆ. ಹಾಗಾದರೆ, Oppo Find X9 ಮತ್ತು OnePlus 15 ಫೋನ್‌ಗಳಲ್ಲಿ ಯಾವುದು ಉತ್ತಮ?. ಇಂದಿನಿ ಲೇಖನದಲ್ಲಿ ಒಂದು ಸರಳ ಹೋಲಿಕೆಯ ಸಹಾಯದಿಂದ ಈ ಬಗ್ಗೆ ತಿಳಿಯೋಣ ಬನ್ನಿ.
Oppo Find X9 VS OnePlus 15 : ಡಿಸ್‌ಪ್ಲೇ
Oppo Find X9 ನಲ್ಲಿ 6.59 ಇಂಚಿನ AMOLED ಡಿಸ್ಪ್ಲೇ ನೀಡಲಾಗಿದ್ದು, 120Hz ರಿಫ್ರೆಶ್ ರೇಟ್ ಮತ್ತು 1256 x 2760 ಪಿಕ್ಸೆಲ್ ರೆಸಲ್ಯೂಷನ್ ಹೊಂದಿದೆ. ದಿನನಿತ್ಯದ ಬಳಕೆ, ಸೋಶಿಯಲ್ ಮೀಡಿಯಾ ಸ್ಕ್ರೋಲಿಂಗ್ ಮತ್ತು ವೀಡಿಯೊ ವೀಕ್ಷಣೆಗೆ ಇದು ಸಾಕಷ್ಟು ಸ್ಮೂತ್ ಅನುಭವ ನೀಡುತ್ತದೆ. ಇದರ ಮೇಲೆ Corning Gorilla Glass 7i ರಕ್ಷಣೆ ಇದೆ.
ಇತ್ತ OnePlus 15 ನಲ್ಲಿ 6.78 ಇಂಚಿನ ದೊಡ್ಡ AMOLED ಡಿಸ್ಪ್ಲೇ ದೊರೆಯುತ್ತದೆ. ಇದು 165Hz ರಿಫ್ರೆಶ್ ರೇಟ್ ಹೊಂದಿರುವುದರಿಂದ ಗೇಮಿಂಗ್ ಮತ್ತು ಹೈ-ಫ್ರೇಮ್ ಕಂಟೆಂಟ್‌ಗೆ ಅತ್ಯುತ್ತಮವಾಗಿದೆ. 1272 x 2772 ರೆಸಲ್ಯೂಷನ್ ಮತ್ತು Gorilla Glass Victus 2 ರಕ್ಷಣೆ ಈ ಫೋನ್‌ನ್ನು ಹೆಚ್ಚು ಪ್ರೀಮಿಯಂ ಅನುಭವಕ್ಕೆ ತರುತ್ತದೆ. ದೊಡ್ಡ ಪರದೆ ಮತ್ತು ಹೆಚ್ಚಿನ ರಿಫ್ರೆಶ್ ರೇಟ್ ಬೇಕಾದವರಿಗೆ OnePlus 15 ಹೆಚ್ಚು ಆಕರ್ಷಕ ಆಯ್ಕೆ.
Oppo Find X9 VS OnePlus 15 : ಪ್ರೊಸೆಸರ್ ಮತ್ತು ಕಾರ್ಯಕ್ಷಮತೆ
Oppo Find X9 ನಲ್ಲಿ MediaTek Dimensity 9500 ಪ್ರೊಸೆಸರ್ ಬಳಕೆಯಲ್ಲಿದ್ದು, ಇದು 4.21GHz ವೇಗದ ಆಕ್ಟಾ-ಕೋರ್ ಚಿಪ್‌ಸೆಟ್ ಆಗಿದೆ. ಮಲ್ಟಿಟಾಸ್ಕಿಂಗ್, ಹೆವಿ ಆಪ್ ಬಳಕೆ ಮತ್ತು ಕ್ಯಾಮೆರಾ ಪ್ರೊಸೆಸಿಂಗ್‌ನಲ್ಲಿ ಇದು ಉತ್ತಮ ಪ್ರದರ್ಶನ ನೀಡುತ್ತದೆ.
OnePlus 15 ನಲ್ಲಿ Qualcomm Snapdragon 8 Elite Gen 5 ಪ್ರೊಸೆಸರ್ ಇದೆ. 4.6GHz ವೇಗದ ಈ ಚಿಪ್‌ಸೆಟ್ ಗೇಮಿಂಗ್, AI ಕಾರ್ಯಗಳು ಮತ್ತು ಭಾರಿ ಅಪ್ಲಿಕೇಶನ್‌ಗಳಲ್ಲಿ ಹೆಚ್ಚು ಶಕ್ತಿ ಹಾಗೂ ದಕ್ಷತೆಯನ್ನು ಒದಗಿಸುತ್ತದೆ.

Oppo Find X9 VS OnePlus 15 : ಬ್ಯಾಟರಿ ಮತ್ತು ಚಾರ್ಜಿಂಗ್
Oppo Find X9 ನಲ್ಲಿ 7025mAh ದೊಡ್ಡ ಬ್ಯಾಟರಿ ನೀಡಲಾಗಿದ್ದು, ಇದು ಒಂದು ದಿನಕ್ಕಿಂತ ಹೆಚ್ಚು ಬ್ಯಾಟರಿ ಬ್ಯಾಕಪ್ ನೀಡುವ ಸಾಮರ್ಥ್ಯ ಹೊಂದಿದೆ. 80W SUPERVOOC ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಇದೆ.
OnePlus 15 ನಲ್ಲಿ 7300mAh ಬ್ಯಾಟರಿ ಇದ್ದು, ಇದು ಇನ್ನೂ ದೊಡ್ಡ ಸಾಮರ್ಥ್ಯ ಹೊಂದಿದೆ. ಇದರ ಪ್ರಮುಖ ಹೈಲೈಟ್ 120W SUPERVOOC ಫಾಸ್ಟ್ ಚಾರ್ಜಿಂಗ್. ಕಡಿಮೆ ಸಮಯದಲ್ಲಿ ಫೋನ್ ಸಂಪೂರ್ಣ ಚಾರ್ಜ್ ಆಗುವುದು ಇದರ ದೊಡ್ಡ ಪ್ಲಸ್ ಪಾಯಿಂಟ್. ವೈರ್‌ಲೆಸ್ ಚಾರ್ಜಿಂಗ್ ಕೂಡ 50W ವರೆಗೆ ಸಪೋರ್ಟ್ ಮಾಡುತ್ತದೆ. ವೇಗದ ಚಾರ್ಜಿಂಗ್ ಬೇಕಾದವರಿಗೆ OnePlus 15 ಹೆಚ್ಚು ಅನುಕೂಲಕರ.
Oppo Find X9 VS OnePlus 15: ಕ್ಯಾಮೆರಾ ಸಾಮರ್ಥ್ಯ
Oppo Find X9 ನಲ್ಲಿ ಟ್ರಿಪಲ್ 50MP ಕ್ಯಾಮೆರಾ ಸೆಟ್‌ಅಪ್ ಇದೆ-ವೈಡ್, ಪೆರಿಸ್ಕೋಪ್ ಟೆಲಿಫೋಟೋ ಮತ್ತು ಅಲ್ಟ್ರಾವೈಡ್ ಲೆನ್ಸ್‌ಗಳು. Hasselblad ಕಲರ್ ಕ್ಯಾಲಿಬ್ರೇಷನ್ ಇದರ ಪ್ರಮುಖ ವೈಶಿಷ್ಟ್ಯ. ನ್ಯಾಚುರಲ್ ಕಲರ್ ಟೋನ್‌ಗಳು, ಉತ್ತಮ ಡೈನಾಮಿಕ್ ರೇಂಜ್ ಮತ್ತು ಸ್ಟೇಬಲ್ ಫೋಟೋಗಳಿಗೆ OIS ಬೆಂಬಲವಿದೆ. 4K ವೀಡಿಯೊ ರೆಕಾರ್ಡಿಂಗ್ ಸಪೋರ್ಟ್ ಮಾಡುತ್ತದೆ.
OnePlus 15 ಕೂಡ ಟ್ರಿಪಲ್ 50MP ಕ್ಯಾಮೆರಾ ಹೊಂದಿದ್ದು, OIS ಜೊತೆಗೆ 8K ವೀಡಿಯೊ ರೆಕಾರ್ಡಿಂಗ್ ಸಪೋರ್ಟ್ ನೀಡುತ್ತದೆ. ನೈಟ್ ಮೋಡ್ ಮತ್ತು ಪೋರ್ಟ್ರೇಟ್ ಮೋಡ್‌ಗಳಲ್ಲಿ ಉತ್ತಮ ಸಾಫ್ಟ್‌ವೇರ್ ಪ್ರೊಸೆಸಿಂಗ್ ಕಾಣಬಹುದು. ಫೋಟೋಗ್ರಫಿಯಲ್ಲಿ Oppo ನ್ಯಾಚುರಲ್ ಲುಕ್‌ಗಾಗಿ ಹೆಸರುವಾಸಿಯಾಗಿದ್ದರೆ, OnePlus ಡಿಟೇಲ್ ಮತ್ತು ಶಾರ್ಪ್ ಔಟ್‌ಪುಟ್‌ಗೆ ಒತ್ತು ನೀಡುತ್ತದೆ.
Oppo Find X9 VS OnePlus 15: ಭಾರತದಲ್ಲಿ ಬೆಲೆ ಮತ್ತು ಲಭ್ಯತೆ
Oppo Find X9 ಭಾರತದಲ್ಲಿ ₹74,999 ರಿಂದ ಆರಂಭವಾಗುತ್ತದೆ (12GB RAM + 256GB ಸ್ಟೋರೇಜ್).
OnePlus 15 ₹72,999 ರಿಂದ ಆರಂಭವಾಗಿದ್ದು, ಅದೇ RAM ಮತ್ತು ಸ್ಟೋರೇಜ್ ಕಾನ್ಫಿಗರೇಷನ್ ನೀಡುತ್ತದೆ. ಸ್ವಲ್ಪ ಕಡಿಮೆ ಬೆಲೆಯಲ್ಲಿ ಹೆಚ್ಚು ಪವರ್ ನೀಡುವುದರಿಂದ OnePlus 15 ಬೆಲೆ ವಿಚಾರದಲ್ಲಿ ಲಾಭದಲ್ಲಿದೆ.
ಅಂತಿಮ ನಿರ್ಣಯ: ಯಾವ ಫೋನ್ ಸೂಕ್ತ?
ಒಟ್ಟಾರೆಯಾಗಿ ನೋಡಿದರೆ, OnePlus 15 ಡಿಸ್ಪ್ಲೇ, ಪ್ರೊಸೆಸರ್ ಮತ್ತು ಚಾರ್ಜಿಂಗ್ ವೇಗದಲ್ಲಿ ಮುಂಚಿತದಲ್ಲಿದೆ. OxygenOS ಅನುಭವ, ಗೇಮಿಂಗ್ ಮತ್ತು ಹೈ ಪರ್ಫಾರ್ಮೆನ್ಸ್ ಬೇಕಾದ ಬಳಕೆದಾರರಿಗೆ ಇದು ಉತ್ತಮ ಆಯ್ಕೆ. ಇನ್ನೊಂದೆಡೆ, Oppo Find X9 Hasselblad ಕ್ಯಾಮೆರಾ ಟ್ಯೂನಿಂಗ್, ವಿಶ್ವಾಸಾರ್ಹ ಬ್ಯಾಟರಿ ಮತ್ತು ಬ್ಯಾಲೆನ್ಸ್‌ಡ್ ಕಾರ್ಯಕ್ಷಮತೆಯಿಂದ ಫೋಟೋಗ್ರಫಿ ಪ್ರಿಯರನ್ನು ಸೆಳೆಯುತ್ತದೆ. ನಿಮ್ಮ ಆದ್ಯತೆಗಳ ಆಧಾರದಲ್ಲಿ,ಪವರ್ ಮತ್ತು ವೇಗಕ್ಕೆ OnePlus 15, ಕ್ಯಾಮೆರಾ ಮತ್ತು ದೀರ್ಘ ಬಳಕೆಗೆ Oppo Find X ಎರಡೂ ಫ್ಲಾಗ್‌ಶಿಪ್‌ಗಳು ತಮ್ಮದೇ ಆದ ಶಕ್ತಿಶಾಲಿ ಆಯ್ಕೆಗಳು.


Click it and Unblock the Notifications








