ಭಾರತಕ್ಕೆ Oppo Find X9 ಸರಣಿ: ಆಯ್ಕೆ ಮತ್ತು ಕೊಡುಗೆಗಳ ವಿವರ ಬಹಿರಂಗ!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ Oppo ತನ್ನ ಹೊಸ ಫ್ಲಾಗ್‌ಶಿಪ್ Find X9 ಸರಣಿಯನ್ನು ಭಾರತದಲ್ಲಿ ಪರಿಚಯಿಸಲು ಬಹಳಷ್ಟು ಉತ್ಸಾಹದಿಂದ ತಯಾರಾಗುತ್ತಿದೆ.! ಈ ಬಹುನಿರೀಕ್ಷಿತ ಸರಣಿಯಲ್ಲಿ ಸ್ಟಾಂಡರ್ಡ್ Oppo Find X9 ಮತ್ತು ಪ್ರೊ ಮಾದರಿಯ Oppo Find X9 Pro ಎರಡು ಸ್ಮಾರ್ಟ್‌ಫೋನ್‌ಗಳು ಇದೇ ನವೆಂಬರ್ 18, 2025 ರಂದು ಅಧಿಕೃತವಾಗಿ ಬಿಡುಗಡೆಯಾಗಲು ಸಜ್ಜಾಗಿವೆ. ಈ ಬಿಡುಗಡೆಗೆ ಮುಂಚೆ, ಕಂಪೆನಿಯು Oppo Find X9 ಸರಣಿ ಪೋನ್‌ಗಳ ಬಣ್ಣಗಳು ಮತ್ತು ಮೆಮೊರಿ ಆಯ್ಕೆಗಳನ್ನು ಹಂಚಿಕೊಂಡಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
Oppo Find X9 ಸರಣಿ: ಬಣ್ಣಗಳು ಮತ್ತು ಮೆಮೊರಿ ಆಯ್ಕೆಗಳು
Oppo ತನ್ನ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಿರುವಂತೆ, ಭಾರತದ ಮಾರುಕಟ್ಟೆಗೆ ಬೇಸ್ Oppo Find X9 ಪೋನ್ Space Black ಮತ್ತು Titanium Grey ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಾಗಲಿದೆ. ಗ್ರಾಹಕರು ಇದನ್ನು 12GB + 256GB ಮತ್ತು 16GB + 512GB ವೇರಿಯಂಟ್‌ಗಳಲ್ಲಿ ಖರೀದಿಸಬಹುದು.ಮತ್ತೊಂದೆಡೆ, Oppo Find X9 Pro ಮಾದರಿಯು 16GB RAM + 512GB ಸ್ಟೋರೇಜ್ ಸಾಮರ್ಥ್ಯದಲ್ಲಿ ಕೇವಲ ಒಂದು ಸಂಗ್ರಹಣಾ ಆಯ್ಕೆಯೊಂದಿಲಭ್ಯವಾಗಲಿದೆ. ಈ ಪ್ರೀಮಿಯಂ ಮಾದರಿಯು Silk White ಮತ್ತು Titanium Charcoal ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ.
Oppo Find X9 ಸರಣಿ: ಆರಂಭಿಕ ಖರೀದಿದಾರರಿಗೆ 'Privilege Pack' ಆಫರ್
Oppo ಕಂಪನಿಯು Oppo Find X9 ಸ್ಮಾರ್ಟ್‌ಫೋನ್‌ಗಳನ್ನು ಮೊದಲು ಖರೀದಿಸುವ ಗ್ರಾಹಕರಿಗಾಗಿ ವಿಶೇಷ Privilege Pack ಯೋಜನೆಯನ್ನು ಈ ಮೊದಲೇ ಘೋಷಿಸಿದೆ. ಪ್ರಾರಂಭದ ದಿನಗಳಲ್ಲಿ ಈ ಫೋನ್‌ಗಳನ್ನು ಖರೀದಿಸುವವರು ಕೇವಲ ₹99 ಪಾವತಿಸಿ ಈ Privilege Pack ಪ್ಯಾಕ್ ಪಡೆಯಬಹುದು. ಇದರೊಳಗೆ ₹1,000 ಮೌಲ್ಯದ ವಿನಿಮಯ ಕೂಪನ್, ಉಚಿತ SUPERVOOC 80W ಚಾರ್ಜರ್, ಮತ್ತು 2 ವರ್ಷದ ಬ್ಯಾಟರಿ ರಕ್ಷಣೆ ಪ್ಲ್ಯಾನ್ ಕೊಡುಗೆಗಳನ್ನು ಒದಗಿಸಲಾಗಿದೆ. ಈ 99 ರೂ.ಗಳ ಕೊಡುಗೆಯನ್ನು ಖರೀದಿಸಲು ಕೊನೆಯ ದಿನಾಂಕವು Find X9 ಸರಣಿ ಬಿಡುಗಡೆ ದಿನವಾಗಿದೆ.

Oppo Find X9 ಸರಣಿ: ಪ್ರಮುಖ ವೈಶಿಷ್ಟ್ಯಗಳು ಅನಾವರಣ.
ಸ್ಟಾಂಡರ್ಡ್ Oppo Find X9 ಮತ್ತು ಪ್ರೊ ಮಾದರಿಯ Oppo Find X9 Pro ಎರಡು ಫೋನ್ ಮಾದರಿಗಳು MediaTek Dimensity 9500 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, ColorOS 16 (Android 16) ಆಧಾರಿತ ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. ಗ್ರಾಫಿಕ್ಸ್ ಕಾರ್ಯಕ್ಕಾಗಿ Arm G1-Ultra GPU ಬಳಸಲಾಗಿದೆ. ಈ ಎರಡೂ ಫೋನ್‌ಗಳು ಶೇಕಡಾ 95.5 ರಷ್ಟು ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಹೊಂದಿಕೊಳ್ಳುವ AMOLED ಪರದೆಗಳನ್ನು ಒಳಗೊಂಡಿರುತ್ತವೆ.
Oppo Find X9 ಸರಣಿಯು ಫೋಟೋಗ್ರಫಿ ಪ್ರಿಯರಿಗೆ ಖಂಡಿತವಾಗಿಯೂ ಆಕರ್ಷಕವಾದ ಆಯ್ಕೆಯಾಗಲಿದೆ. Oppo Find X9 ಮತ್ತು ಪ್ರೊ ಮಾದರಿಯ Oppo Find X9 Pro ಎರಡು ಮಾದರಿಗಳಲ್ಲಿಯೂ 50MP ಮುಖ್ಯ ಕ್ಯಾಮೆರಾ ಮತ್ತು 50MP ಅಲ್ಟ್ರಾ-ವೈಡ್ ಲೆನ್ಸ್ ಇರುತ್ತದೆ.ಆದರೆ, ಇವುಗಲ್ಲಿ ಸ್ಟಾಂಡರ್ಡ್ Oppo Find X9 ಮಾದರಿಯು 50MP ಟೆಲಿಫೋಟೋ ಕ್ಯಾಮೆರಾ ಹೊಂದಿದ್ದರೆ, Find X9 Pro ನಲ್ಲಿ ಅದಕ್ಕಿಂತ ಹೆಚ್ಚು ಶಕ್ತಿಯುತ 200MP ಟೆಲಿಫೋಟೋ ಸೆನ್ಸರ್ ನೀಡಲಾಗಿದೆ.
ಬ್ಯಾಟರಿ ವಿಭಾಗದಲ್ಲಿ, OppoFind X9 ಫೋನಿನಲ್ಲಿ 7,050mAh ಬ್ಯಾಟರಿ ಇರಲಿದೆ. ಇತ್ತ Find X9 Pro ನಲ್ಲಿ ಹೆಚ್ಚು ಸಾಮರ್ಥ್ಯದ 7,500mAh ಬ್ಯಾಟರಿ ನೀಡಲಾಗಿದೆ. ಈ ಎರಡೂ ಮಾದರಿಗಳು SUPERVOOC ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುತ್ತವೆ.ಒಟ್ಟಿನಲ್ಲಿ, Oppo Find X9 ಸರಣಿಯು ಶಕ್ತಿಶಾಲಿ ಪ್ರದರ್ಶನ, ಉನ್ನತ ಕ್ಯಾಮೆರಾ ತಂತ್ರಜ್ಞಾನ, ಮತ್ತು ದೀರ್ಘ ಬ್ಯಾಟರಿ ಸಾಮರ್ಥ್ಯದಿಂದ ಪ್ರೀಮಿಯಂ ಫ್ಲಾಗ್‌ಶಿಪ್ ವಿಭಾಗದಲ್ಲಿ ಹೊಸ ಮಾನದಂಡ ಸೃಷ್ಟಿಸಬಹುದು. ನವೆಂಬರ್ 18ರ ಲಾಂಚ್ ಬಳಿಕ ಅಧಿಕೃತ ಬೆಲೆ ಮತ್ತು ಮಾರಾಟ ದಿನಾಂಕದ ವಿವರಗಳು ಹೊರಬೀಳಲಿವೆ.


Click it and Unblock the Notifications








