ಮಾರ್ಚ್ 8ರವರೆಗೆ OPPO ಹೋಳಿ ಸೇಲ್: ಸ್ಮಾರ್ಟ್‌ಫೋನ್ ಖರೀದಿಗೆ ಭರ್ಜರಿ ಆಫರ್!
ಹೋಳಿ ಹಬ್ಬದ ಸಂಭ್ರಮದ ನಡುವೆ ಹೊಸ ಸ್ಮಾರ್ಟ್‌ಫೋನ್ ಒಂದನ್ನು ಖರೀದಿಸಲು ಯೋಜಿಸಿದ್ದೀರಾ? ಹಾಗಾದರೆ, ನಿಮಗೆ OPPO ದಿಂದ ಈಗ ಆಕರ್ಷಕ ಹಬ್ಬದ ಆಫರ್ ಲಭ್ಯವಾಗುತ್ತಿದೆ. ಇದೇ ಮಾರ್ಚ್ 1ರಿಂದ ಮಾರ್ಚ್ 8, 2026 ರವರೆಗೆ OPPO ವಿಶೇಷ ಕೊಡುಗೆಗಳನ್ನು ಘೋಷಿಸಿದ್ದು, ಈ ಸೀಮಿತ ಅವಧಿಯಲ್ಲಿ ರಿಯಾಯಿತಿ ದರ, ಕ್ಯಾಶ್‌ಬ್ಯಾಕ್ ಹಾಗೂ ಶೂನ್ಯ ಬಡ್ಡಿದರ EMI ಸೌಲಭ್ಯಗಳು ಸೇರಿದಂತೆ ಹಲವಾರು ಪ್ರಯೋಜನಗಳನ್ನು OPPO ಗ್ರಾಹಕರು ಆನಂದಿಸಬಹುದು ಎಂದು ಕಂಪೆನಿಯು ತಿಳಿಸಿದೆ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್ ಖರೀದಿಯು ಸುಲಭವಾಗುತ್ತದೆ.
Reno15 ಸರಣಿಗೆ ವಿಶೇಷ ಹಬ್ಬದ ಬೆಲೆ
ಈ ಹಬ್ಬದ ಆಫರ್‌ನಲ್ಲಿ OPPO Reno15 ವಿಶೇಷ ಆರಂಭಿಕ ₹41,399 ರೂ. ಬೆಲೆಯಲ್ಲಿ ಲಭ್ಯವಿದೆ. ಜೊತೆಗೆ OPPO Reno15 Pro Mini ₹53,999ರಿಂದ ಆರಂಭವಾಗುತ್ತದೆ. ಕ್ಯಾಮೆರಾ ಹಾಗೂ ಡಿಸೈನ್‌ಗೆ ಒತ್ತು ನೀಡುವ ಈ ಸರಣಿ, ಪ್ರೀಮಿಯಂ ಅನುಭವವನ್ನು ಬಯಸುವ ಬಳಕೆದಾರರಿಗೆ ಸೂಕ್ತ ಆಯ್ಕೆ ಈ ಎರಡೂ ಮಾದರಿಗಳಿಗೆ 24 ತಿಂಗಳವರೆಗೆ ಶೂನ್ಯ ಬಡ್ಡಿದರ EMI ಸೌಲಭ್ಯ ಲಭ್ಯವಿದೆ. ಪೇಪರ್ ಫೈನಾನ್ಸ್ ಗ್ರಾಹಕ ಸಾಲ ಆಯ್ಕೆಯಡಿಯಲ್ಲಿ ಕೋಟಕ್ ಬ್ಯಾಂಕ್ ಮತ್ತು ICICI ಬ್ಯಾಂಕ್ ಮೂಲಕ ಸುಲಭವಾಗಿ EMI ಸೇವೆ ಪಡೆಯಬಹುದು. ಇದರಿಂದ ಒಮ್ಮೆಲೇ ಸಂಪೂರ್ಣ ಮೊತ್ತ ಪಾವತಿಸುವ ಅಗತ್ಯವಿಲ್ಲ.

OPPO Find X9 ಮೇಲೆ ಪ್ರೀಮಿಯಂ ಆಫರ್
ಇನ್ನು ಫ್ಲಾಗ್‌ಶಿಪ್ OPPO Find X9 ಈಗ ₹69,499 ರ ವಿಶೇಷ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ ಮತ್ತು 24 ತಿಂಗಳವರೆಗೆ ಶೂನ್ಯ-ಬಡ್ಡಿ EMI ನಲ್ಲಿ ಖರೀದಿಗೆ ದೊರೆಯುತ್ತಿದೆ. ಮತ್ತೊಂದು ವಿಷಯವೆಂದರೆ, ಗ್ರಾಹಕರು OPPO Reno15 ಮತ್ತು OPPO Find X9 ಎರಡೂ ಮಾದರಿಗಳಲ್ಲಿ UPI ವಹಿವಾಟುಗಳ ಮೇಲೆ ಶೇಕಡಾ 10 ರಷ್ಟು ಕ್ಯಾಶ್‌ಬ್ಯಾಕ್ ಪ್ರಯೋಜನಗಳನ್ನು ಸಹ ಪಡೆಯಬಹುದು. ಪ್ರೀಮಿಯಂ ಫ್ಲಾಗ್‌ಶಿಪ್ ವಿಭಾಗದಲ್ಲಿರುವ OPPO Find X9 ಈಗ ಕೈಗೆಟುಕುವಂತಹ ₹69,499 ಬೆಲೆಯಲ್ಲಿ ಲಭ್ಯವಿರುವುದರಿಂದ ಫ್ಲ್ಯಾಗ್‌ಶಿಪ್ ವೈಶಿಷ್ಟ್ಯಗಳನ್ನು ಬಯಸುವವರಿಗೆ ಇದು ಒಂದು ಆಕರ್ಷಕ ಆಯ್ಕೆಯಾಗಿದೆ.
ಬಜೆಟ್ ವಿಭಾಗಕ್ಕೂ ಲಾಭ
ನೀವು ಮಧ್ಯಮ ಹಾಗೂ ಬಜೆಟ್ ವಿಭಾಗದ ಗ್ರಾಹಕರಾಗಿದ್ದರೆ, 20 ಸಾವಿರ ರೂ. ಬೆಲೆ ವಿಭಾಗದಲ್ಲಿರುವ ಜನಪ್ರಿಯ OPPO A6 Pro ಮತ್ತು OPPO A6 ಸ್ಮಾರ್ಟ್‌ಫೋನ್‌ಗಳ ಮೇಲೆಯೂ EMI ಹಾಗೂ ಕ್ಯಾಶ್‌ಬ್ಯಾಕ್ ಸೌಲಭ್ಯಗಳನ್ನು ಪಡೆಯಬಹುದು. ಈ ಎರಡೂ ಮಾದರಿಗಳಿಗೆ ಗರಿಷ್ಠ 8 ತಿಂಗಳವರೆಗೆ EMI ಆಯ್ಕೆ ಲಭ್ಯವಿದೆ ಎಂದು ಕಂಪೆನಿ ತಿಳಿಸಿದೆ. ಹೀಗಾಗಿ ಕಡಿಮೆ ಮೊತ್ತದಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವವರಿಗೆ ಇದು ಒಳ್ಳೆಯ ಅವಕಾಶ ಎನ್ನಬಹುದು.
ಬ್ಯಾಂಕ್ ಕಾರ್ಡ್ ಮತ್ತು UPI ಕ್ಯಾಶ್‌ಬ್ಯಾಕ್ ಲಾಭ
ಈ ಹಬ್ಬದ ಮಾರಾಟದ ಅವಧಿಯಲ್ಲಿ ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಗರಿಷ್ಠ 10% ವರೆಗೆ ಕ್ಯಾಶ್‌ಬ್ಯಾಕ್ ಸೌಲಭ್ಯ ಒದಗಿಸಲಾಗಿದೆ ಹಾಗೂ ಕಾರ್ಡ್‌ಗಳ ಮೂಲಕ ಈ ಲಾಭ ಪಡೆಯಬಹುದು. ಆದರೆ, Reno15 ಸರಣಿ ಮತ್ತು OPPO Find X9 ಖರೀದಿಸುವವರು UPI ವ್ಯವಹಾರಗಳ ಮೇಲೆ 10% ವರೆಗೆ ಕ್ಯಾಶ್‌ಬ್ಯಾಕ್ ಪಡೆಯುವ ಅವಕಾಶವಿರುವುದು ಗಮನಾರ್ಹವಾಗಿ ಕಣ್ಣು ಸೆಳೆಯುವ ಕೊಡುಗೆ ಎನ್ನಬಹುದು.
ಸೀಮಿತ ಅವಧಿ: ಮಾರ್ಚ್ 8ರವರೆಗೆ ಮಾತ್ರ
ಈ ಹೋಳಿ ಹಬ್ಬದ ವಿಶೇಷ ಆಫರ್‌ಗಳು ಮಾರ್ಚ್ 8, 2026ರವರೆಗೆ ಮಾತ್ರ ಮಾನ್ಯ. ಹಬ್ಬದ ಸಂಭ್ರಮದ ಜೊತೆಗೆ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿರುವವರು ಈ ಸೀಮಿತ ಅವಧಿಯ ಲಾಭಗಳನ್ನು ತಪ್ಪಿಸಿಕೊಳ್ಳಬಾರದು ಎಂಬುದು ನಮ್ಮ ಅಭಿಪ್ರಾಯ. ಖರೀದಿಗೆ ಮುನ್ನ ಸಮೀಪದ ಅಧಿಕೃತ ಅಂಗಡಿ ಅಥವಾ ಇ-ಕಾಮರ್ಸ್ ವೇದಿಕೆಯಲ್ಲಿ ಆಫರ್ ವಿವರಗಳನ್ನು ಪರಿಶೀಲಿಸುವುದು ಒಳಿತು.


Click it and Unblock the Notifications