Home
ಮೊಬೈಲ್

Oppo ಪ್ರಿಯರಿಗೆ ಹಬ್ಬ.. ನಾಳೆ ಈ ಫೋನ್ ಬಿಡುಗಡೆ, ಭರಪೂರ ಫೀಚರ್‌!

ಒಪ್ಪೋ ಮೊಬೈಲ್‌ ಪ್ರಿಯರಿಗೆ ನಾಳೆ ಸಂಭ್ರಮದ ದಿನ. Oppo ತನ್ನ Reno 12 ಸರಣಿಯ ಮೊಬೈಲ್‌ ಅನ್ನು ಜಾಗತಿಕವಾಗಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೌದು, ಒಪ್ಪೋ ಕಂಪನಿಯು ಬಜೆಟ್‌ ಸ್ನೇಹಿ ಮೊಬೈಲ್‌ಗಳನ್ನು ಗ್ರಾಹಕರಿಗೆ ನೀಡುತ್ತಲೇ ಬಂದಿದೆ. ಇದೀಗ, Oppo ಗ್ರಾಹಕರಿಗಾಗಿ ತನ್ನ ಪ್ರಸಿದ್ದ ರೆನೋ ಸರಣಿಯ ನೂತನ ಫೋನ್‌ ಅನ್ನು ಜಾಗತಿಕವಾಗಿ ಬಿಡುಗಡೆ ಮಾಡಲು ಮುಂದಾಗಿದೆ. Oppo ತನ್ನ Reno 12 ಸರಣಿಯ ಮೊಬೈಲ್‌ ಅನ್ನು ಪರಿಚಯಿಸಲಿದೆ. Oppo Reno 12 ಸರಣಿಯನ್ನು ಈಗಾಗಲೇ ಕಳೆದ ತಿಂಗಳು ಚೀನಾದಲ್ಲಿ ಬಿಡುಗಡೆ ಮಾಡಿತ್ತು. ಇದೀಗ, ನಾಳೆ ಜಾಗತಿಕವಾಗಿ ಅನಾವರಣಗೊಳಿಸಲು ಸಿದ್ಧತೆ ನಡೆಸಿದೆ.

Oppo Reno 12 ಸರಣಿಯು AI ಪೋರ್ಟ್ರೇಟ್ ಮತ್ತು AI ಲಿಂಕ್‌ಬೂಸ್ಟ್ ಸೇರಿದಂತೆ ಹಲವಾರು ಎಐ (AI) ಫೀಚರ್‌ಗಳನ್ನು ಬೆಂಬಲಿಸಲಿದೆ. ಈ ಫೋನ್‌ಗಳು MediaTek ಡೈಮೆನ್ಶನ್ SoC ಪ್ರೊಸೆಸರ್‌ ಹೊಂದಿವೆ. Oppo Reno 12ನ ಚೀನಾ ರೂಪಾಂತರಗಳು 50MP ಟ್ರಿಪಲ್ ಹಿಂಬದಿಯ ಕ್ಯಾಮೆರಾಗಳು ಮತ್ತು ಮುಂಭಾಗದಲ್ಲಿ 50MP ಹೈ ರೆಸ್ ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿವೆ. MediaTek ಚಿಪ್‌ಸೆಟ್‌ನೊಂದಿಗೆ ಅಧ್ಭುತ OLED ಡಿಸ್‌ಪ್ಲೇ ಮತ್ತು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ದೊಡ್ಡ ಗಾತ್ರದ ಬ್ಯಾಟರಿ ಬ್ಯಾಕಪ್‌ ಪಡೆದಿವೆ.

Oppo ಪ್ರಿಯರಿಗೆ ಹಬ್ಬ.. ನಾಳೆ ಈ ಫೋನ್ ಬಿಡುಗಡೆ, ಭರಪೂರ ಫೀಚರ್‌!

ಯುರೋಪ್‌ನಲ್ಲಿ ಬೇಸ್ Reno 12 5G ಒಂದೇ 12GB RAM ಮತ್ತು 512GB ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆಯಾಗಲಿದೆ. ಇದರ ಬೆಲೆ ಅಂದಾಜು 44,673 ರೂ. ಇದು ಆಸ್ಟ್ರೋ ಸಿಲ್ವರ್ ಮತ್ತು ಬ್ಲ್ಯಾಕ್ ಬ್ರೌನ್ ಬಣ್ಣದ ಆಯ್ಕೆಗಳಲ್ಲಿ ಬರಲಿದೆ. Reno 12 Pro 5Gನ 12GB RAM ಮತ್ತು 512GB ಸ್ಟೋರೇಜ್ ವೇರಿಯಂಟ್ ಸುಮಾರು ಅಂದಾಜು 53,617 ರೂ. ಇದೆ. ಇದು ನೆಬ್ಯುಲಾ ಬ್ಲ್ಯಾಕ್ ಮತ್ತು ನೆಬ್ಯುಲಾ ಸಿಲ್ವರ್ ಶೇಡ್‌ಗಳಲ್ಲಿ ಬರಲಿದೆ.

Oppo Reno 12 ಸರಣಿಯ ಫೀಚರ್ಸ್

ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8250 (ಸ್ಟಾರ್ ಎಡಿಷನ್) ಚಿಪ್‌ಸೆಟ್‌ನಿಂದ 16GB ವರೆಗೆ LPDDR5X RAM ಮತ್ತು 512GB ವರೆಗಿನ UFS 3.1 ಸ್ಟೋರೆಜ್ ಜೊತೆಗೆ ಬರಲಿದೆ. ಇದರ 16GB ಯ LPDDR5X RAM ಮತ್ತು 512GB ವರೆಗಿನ UFS 3.1 ಸ್ಟೋರೇಜ್‌ ವೇರಿಯಂಟ್ MediaTek ಡೈಮೆನ್ಸಿಟಿ 9200+ (ಸ್ಟಾರ್ ಎಡಿಷನ್) ಚಿಪ್ ಅನ್ನು ಹೊಂದಿದೆ.

ಈ ಸರಣಿಯು 6.7-ಇಂಚಿನ ಫುಲ್ HD+ OLED ಡಿಸ್‌ಪ್ಲೇ 1,200 nits ಗರಿಷ್ಠ ಬ್ರೈಟ್‌ನೆಸ್‌ ಪಡೆದಿದೆ. ಡಿಸ್‌ಪ್ಲೇ 120Hz ರಿಫ್ರೆಶ್ ದರ ಮತ್ತು 240Hz ಟಚ್ ಮಾದರಿಯ ದರವನ್ನು ಬೆಂಬಲಿಸುತ್ತದೆ. ಫಲಕವು HDR10+ ಅನ್ನು ಬೆಂಬಲಿಸುತ್ತದೆ, ಹಾರ್ಡ್‌ವೇರ್ ಮಟ್ಟದಲ್ಲಿ ಬ್ಲೂ ಲೈಟ್ ಕಡಿತ ಮತ್ತು 2160Hz ಹೆಚ್ಚಿನ ಆವರ್ತನ PWM ಬ್ಲರ್ ಮಾಡುವ ಸಾಮರ್ಥ್ಯ ಹೊಂದಿದೆ. ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP65 ರೇಟಿಂಗ್ ಅನ್ನು ಪಡೆದಿದೆ.

Oppo Reno 12 ಬ್ಯಾಟರಿ ಬ್ಯಾಕಪ್ ಎಷ್ಟು?

Oppo Reno 12 ಸರಣಿಯ ಈ ಸ್ಮಾರ್ಟ್‌ಫೋನ್‌ಗು 80W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000 mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದೆ. ಮುಂಭಾಗದಲ್ಲಿ, Reno 12 ಸರಣಿಯು ಆಟೋಫೋಕಸ್ ಮತ್ತು f/2.0 ದ್ಯುತಿರಂಧ್ರದೊಂದಿಗೆ 50 MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ, 4G, 5G, Wi-Fi 6, ಬ್ಲೂಟೂತ್ 5.4, NFC, USB ಟೈಪ್-C ಪೋರ್ಟ್ ಮತ್ತು ಹೆಚ್ಚಿನ ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿದೆ.

ಕ್ಯಾಮೆರಾ ಸೆಟಪ್‌ನಲ್ಲಿ ಸಾಟಿಯೇ ಇಲ್ಲ!

ಈ ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾ ಸೆಟಪ್‌ ಬಗ್ಗೆ ಹೇಳುವುದಾದರೆ, Oppo Reno 12 ಮತ್ತು Reno 12 Pro ಎರಡೂ ಕೂಡ OIS ಮತ್ತು f/1.8 ದ್ಯುತಿರಂಧ್ರದೊಂದಿಗೆ 50 MP ಪ್ರಾಥಮಿಕ ಸೆನ್ಸಾರ್ ಹೊಂದಿವೆ. ಎರಡೂ ಫೋನ್‌ಗಳು 8 MP ಅಲ್ಟ್ರಾವೈಡ್ ಶೂಟರ್‌ಗಳನ್ನು ಮತ್ತು 50 MP ಟೆಲಿಫೋಟೋ ಘಟಕಗಳನ್ನು f/2.0 ದ್ಯುತಿರಂಧ್ರದೊಂದಿಗೆ ಹೊಂದಿವೆ. 60fps ವರೆಗೆ 4K ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತವೆ. Oppo Reno 12 ಸರಣಿಯು ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸಹ ಹೊಂದಿವೆ.

ಚೀನಾದಲ್ಲಿ ಈ ಫೋನ್‌ಗಳ ಬೆಲೆ ಎಷ್ಟು?

Oppo Reno 12 ಮತ್ತು Reno 12 Pro ಸ್ಮಾರ್ಟ್‌ಫನ್‌ ಅನ್ನು ಚೀನಾದ ಮಾರುಕಟ್ಟೆಯಲ್ಲಿ ಮೇ ತಿಂಗಳಲ್ಲಿ ಅನಾವರಣಗೊಳಿಸಲಾಗಿತ್ತು. ಅಲ್ಲಿ ಸುಮಾರು 31,000 ರೂ. (CNY 2,699) ಮತ್ತು ಅಂದಾಜು 39,000 ರೂ. (CNY 3,399) ಬೆಲೆಯಲ್ಲಿ ಬಿಡುಗಡೆ ಮಾಡಲಾಯಿತು. ಈ ಮುಂಬರುವ ಜಾಗತಿಕ ರೂಪಾಂತರಗಳು ಹುಡ್ ಅಡಿಯಲ್ಲಿ ಯಾವ ಫೀಚರ್‌ಗಳೊಂದಿಗೆ ಬರುತ್ತವೆ ಎಂಬುದು ನಾಳೆ ಅಧಿಕೃತವಾಗಿ ಬಹಿಂಗವಾಗಿಲಿದೆ.

ಚೀನಾದಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಈ ಸ್ಮಾರ್ಟ್‌ಫೋನ್ ಅನ್ನು ನಾಳೆ (ಜೂನ್ 18) ಸ್ಪೇನ್‌ನ ಇಬಿಜಾದಲ್ಲಿ ಜಾಗತಿಕವಾಗಿ ಲಾಂಚ್ ಮಾಡಲು ನಿರ್ಧರಿಸಲಾಗಿದೆ. Reno 12 ಸರಣಿಯ ಟೀಸರ್‌ನ ಅಧಿಕೃತ ಪೋಸ್ಟರ್ Reno 12 ಸರಣಿಯು ಕೆಲವು AI ಫೀಚರ್‌ಗಳನ್ನು ಹೊಂದಿರಲಿದೆ. ರೆನೋ 12 ಸರಣಿಯು AI ಪೋರ್ಟ್ರೇಟ್ ಮತ್ತು AI ಲಿಂಕ್‌ ಬೂಸ್ಟ್ ಅನ್ನು ನೀಡುತ್ತದೆ.

Best Mobiles in India

English summary
Oppo is all set to unveil its Reno 12 series mobile globally. Oppo Reno 12 series was launched in China last month. It is now set for a global release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+