ಸದ್ದಿಲ್ಲದೆ Oppo K12 Plus ರಿಲೀಸ್; 6400mAh ಬ್ಯಾಟರಿ.. 512GB ಸ್ಟೋರೇಜ್.. ಇಷ್ಟೆನಾ ಬೆಲೆ?
ಒಪ್ಪೋ (Oppo) ತನ್ನ 'K' ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಸರಣಿಯ ಅಡಿಯಲ್ಲಿ, ಒಪ್ಪೋ K12 ಪ್ಲಸ್ (Oppo K12 Plus) ಅನ್ನು ಚೀನಾ ಮಾರುಕಟ್ಟೆಗೆ ಪರಿಚಯಿಸಿದೆ. ಇದು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಆಗಿದ್ದು, ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೂ ಲಗ್ಗೆ ಇಡಲಿದೆ. ಇದು, 6400mAh ಸಾಮರ್ಥ್ಯದ ದೊಡ್ಡ ಬ್ಯಾಟರಿ, 6.7 ಇಂಚಿನ ಅಮೋಲೆಡ್ ಡಿಸ್ಪ್ಲೇ, 12GB RAM ಮತ್ತು 50 ಮೆಗಾಪಿಕ್ಸೆಲ್ ಕ್ಯಾಮೆರಾ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ನೂತನ ಒಪ್ಪೋ K12 ಪ್ಲಸ್ ಫೋನ್ ಹಿಂದಿನ ಪ್ಯಾನೆಲ್‌ನಲ್ಲಿ ಟೆಕ್ಸ್ಚರ್ಡ್ ಲುಕ್ ಹೊಂದಿದೆ. ಇದು ಸ್ನೋ ಪೀಕ್ ವೈಟ್ ಮತ್ತು ಬ್ಲಾಕ್ ಬಸಾಲ್ಟ್ ಬಣ್ಣಗಳಲ್ಲಿ ಬರುತ್ತದೆ. ಮುಂಭಾಗದಲ್ಲಿ ಪಂಚ್ ಹೋಲ್ ಡಿಸ್ಪ್ಲೇ ಇದೆ. ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP54 ರೇಟಿಂಗ್ ಪಡೆದಿದೆ. ಫೋನಿನ ಪ್ರಮುಖ ಭಾಗಗಳ ಸುರಕ್ಷತೆಯನ್ನು ಹೆಚ್ಚಿಸಲು ಡೈಮಂಡ್ ಆಘಾತ ಹೀರಿಕೊಳ್ಳುವ ರಚನೆ ಮತ್ತು ಏರ್‌ಬ್ಯಾಗ್ ವಿನ್ಯಾಸವನ್ನು ಹೊಂದಿದೆ. ಮದರ್‌ಬೋರ್ಡ್‌ಗೆ ಹಾನಿಯನ್ನು ಕಡಿಮೆ ಮಾಡಲು, ಮದರ್‌ಬೋರ್ಡ್ ಬಲವರ್ಧನೆಯ ವಿನ್ಯಾಸ ಮತ್ತು ಆಘಾತ ಹೀರಿಕೊಳ್ಳುವ ತಂತ್ರಜ್ಞಾನವನ್ನು ಹೊಂದಿದೆ.

ಒಪ್ಪೋ K12 ಪ್ಲಸ್ ಬೆಲೆ ಮತ್ತು ಲಭ್ಯತೆ
ಒಪ್ಪೋ K12 ಪ್ಲಸ್ ಮೊಬೈಲ್ ಚೀನಾದಲ್ಲಿ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಫೋನಿನ 8GB+256GB ಸ್ಟೋರೇಜ್ ರೂಪಾಂತರದ ಬೆಲೆ 22,600 ರೂ. (1,899 ಯುವಾನ್) ಆಗಿದೆ. 12GB+256GB ಬೆಲೆ 24,900 ರೂ. (2099 ಯುವಾನ್) ಇದೆ. 12GB + 512GB ಸ್ಟೋರೇಜ್ ವೇರಿಯಂಟ್ ಅನ್ನು 29,700 ರೂ.ಗೆ (2499 ಯುವಾನ್) ಬಿಡುಗಡೆ ಮಾಡಲಾಗಿದೆ. ಈಗಾಗಲೇ ಮುಂಗಡ ಬುಕಿಂಗ್ ಕೋರಿಕೆ ಪ್ರಾರಂಭವಾಗಿದೆ. ಅಕ್ಟೋಬರ್ 15 ರಿಂದ ಅಧಿಕೃತವಾಗಿ ಮಾರಾಟ ಆರಂಭವಾಗಲಿದೆ.
ಒಪ್ಪೋ K12 ಪ್ಲಸ್ ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಒಪ್ಪೋ K12 ಪ್ಲಸ್ ಮೊಬೈಲ್ 6.7 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು, 120Hz ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 1100 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಇದರೊಂದಿಗೆ, ಡಿಸ್ಪ್ಲೇಯು P3 ವೈಡ್ ಕಲರ್ ಗ್ಯಾಮಟ್ ಸಹ ಬೆಂಬಲಿಸುತ್ತದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಒಪ್ಪೋ K12 ಪ್ಲಸ್ ಫೋನನ್ನು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜೆನ್ 3 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಇದು ಗೇಮಿಂಗ್‌ಗೆ ಉತ್ತಮ ಚಿಪ್‌ಸೆಟ್ ಆಗಿದೆ. ಇದು ಆಂಡ್ರಾಯ್ಡ್ 14 ಆಧಾರಿತ ColorOS 14 ನೊಂದಿಗೆ ಕೆಲಸ ನಿರ್ವಹಿಸಲಿದೆ. ಇದು 8GB + 256GB ನಿಂದ 12GB + 512GB ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ.
ಕ್ಯಾಮೆರಾ ಸೆಟಪ್
ನೂತನ ಒಪ್ಪೋ ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೋನಿ ಅಲ್ಟ್ರಾವೈಡ್ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಪ್ರಿಯರಿಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಕಂಪನಿಯು ಈ ಫೋನ್ನು 6400mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಇದು 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 10W ವೈರ್ಡ್ ರಿವರ್ಸ್ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ.
ಇತರೆ ವೈಶಿಷ್ಟ್ಯಗಳು
ಒಪ್ಪೋ K12 ಪ್ಲಸ್ ಮೊಬೈಲ್ 162.47 × 75.33 × 8.37 ಎಂಎಂ ಮತ್ತು 192 ಗ್ರಾಂ ತೂಕ ಹೊಂದಿದೆ. ಇದು ವೈ-ಫೈ 6, ಬ್ಲೂಟೂತ್ 5.4 ಮತ್ತು NFC ಜೊತೆಗೆ 5G, 4G VoLTE ಸಪೋರ್ಟ್ ಒಳಗೊಂಡಿದೆ. ಜೊತೆಗೆ, ಯುಎಸ್‌ಬಿ ಟೈಪ್ ಸಿ ಪೋರ್ಟ್ ಮತ್ತು ಅಂಡರ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ.


Click it and Unblock the Notifications








