Home
ಮೊಬೈಲ್

OPPO K12x 5G: ಜು.29ಕ್ಕೆ ಬರುತ್ತೆ ಹೊಸ OPPO ಫೋನ್! ಬೆಲೆ, ಫೀಚರ್ಸ್‌ ಏನು?

ಇದು ಒಪ್ಪೋಗೆ ಸಂಬಂಧಿಸಿದ ಸುದ್ದಿ. ಒಪ್ಪೋ (Oppo) ಕಂಪನಿಯು ತನ್ನ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. OPPO K ಸರಣಿಯ ಅಡಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಹೌದು, ಭಾರತದಲ್ಲಿ OPPO K12x ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಅಂದಹಾಗೆ, OPPO K12x ಈಗಾಗಲೇ ಚೀನಾದಲ್ಲಿ ಲಾಂಚ್ ಆಗಿದೆ. ಬಹುತೇಕ ಇದೇ ಫೀಚರ್ಸ್‌ಗಳೊಂದಿಗೆ ಈ ಮೊಬೈಲ್ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು OnePlus Nord CE4ಗೆ ಪೈಪೋಟಿ ನೀಡುವುದು ಖಚಿತ. ಈ ನೂತನ ಫೋನಿನ ಬೆಲೆ, ಫಿಚರ್ಸ್‌ ಬಗ್ಗೆ ತಿಳಿಯೋಣ ಬನ್ನಿ.

OPPO K12x ನೂತನ ಸ್ಮಾರ್ಟ್‌ಫೋನ್ 6.67 ಇಂಚಿನ FullHD + ಡಿಸ್ಪ್ಲೇ ಹೊಂದಿರಲಿದೆ. Qualcomm Snapdragon 695 ಚಿಪ್‌ಸೆಟ್, 50MP ಡ್ಯುಯಲ್ ಹಿಂಬದಿಯ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ. ಜೊತೆಗೆ, 5,500mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ. ಫ್ಲಿಪ್‌ಕಾರ್ಟ್ ಮೈಕ್ರೋಸೈಟ್ ಪ್ರಕಾರ OPPo K12x ಭಾರತದಲ್ಲಿ ಜುಲೈ 29 ರಂದು ಬಿಡುಗಡೆಯಾಗಲಿದೆ. ಇದು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಫೋನಿನ ಲಭ್ಯತೆಯನ್ನು ದೃಢಪಡಿಸಿದೆ.

OPPO K12x 5G: ಜು.29ಕ್ಕೆ ಬರುತ್ತೆ ಹೊಸ OPPO ಫೋನ್! ಬೆಲೆ, ಫೀಚರ್ಸ್‌ ಏನು?

OPPO K12x 5G: ಭಾರತದಲ್ಲಿ ನಿರೀಕ್ಷಿತ ಬೆಲೆ

OnePlus Nord CE 4 Lite 5G ಸ್ಮಾರ್ಟ್‌ಫೋನ್ ಭಾರತದಲ್ಲಿ 19,999 ರೂ. ನೊಂದಿಗೆ ಪ್ರಾರಂಭವಾಗುತ್ತದೆ. ಆದ್ದರಿಂದ OPPO ತನ್ನ OPPO K12x 5G ಪೋನಿಗೆ ಇದೇ ರೀತಿಯ ಬೆಲೆಯನ್ನು ನಿಗದಿಪಡಿಸುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಒಪ್ಪೋ ಕಂಪನಿಯ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇದು ಸಂಪೂರ್ಣವಾಗಿ ಊಹಾಪೋಹವಾಗಿದೆ.

OPPO K12x 5G ಫೋನಿನ ನಿರೀಕ್ಷಿತ ಫೀಚರ್ಸ್‌

ಡಿಸ್ಲ್ಪೇ: OPPO K12x ನೂತನ ಫೋನ್ 6.67 ಇಂಚಿನ FullHD + ಡಿಸ್ಪ್ಲೇ ಜೊತೆಗೆ 2400 × 1080 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 120Hz ರಿಫ್ರೆಶ್ ದರದೊಂದಿಗೆ 1200nits ಬ್ರೈಟ್‌ನೆಸ್ ಅನ್ನು ಬೆಂಬಲಿಸುವ OLED ಪ್ಯಾನೆಲ್‌ನಲ್ಲಿ ಈ ಡಿಸ್‌ಪ್ಲೇಯನ್ನು ಮಾಡಲಾಗಿದೆ. ಫೋನ್‌ನಲ್ಲಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಪ್ರೊಸೆಸರ್: ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 695 ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಹೊಂದಿರಲಿದೆ. ಇದನ್ನು Android 14 ನಲ್ಲಿ ಬಿಡುಗಡೆ ಮಾಡಲಾಗಿದೆ. ಇದು ColorOS 14 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಫೋನ್ Adreno 619 GPU ಅನ್ನು ಹೊಂದಿದೆ.

OPPO K12x 5G: ಜು.29ಕ್ಕೆ ಬರುತ್ತೆ ಹೊಸ OPPO ಫೋನ್! ಬೆಲೆ, ಫೀಚರ್ಸ್‌ ಏನು?

ಸ್ಟೋರೇಜ್: ಈ ಹೊಸ ಒಪ್ಪೋ ಮೊಬೈಲ್ ಅನ್ನು ಚೀನಾದಲ್ಲಿ 8GB RAM ಮತ್ತು 12GB RAMನೊಂದಿಗೆ ಬಿಡುಗಡೆ ಮಾಡಲಾಗಿದೆ. ಇದು 256GB ಮತ್ತು 512GB ಸ್ಟೋರೇಜ್‌ ಅನ್ನು ಹೊಂದಿದೆ. 1TB ವರೆಗಿನ ಮೆಮೊರಿ ಕಾರ್ಡ್ ಅನ್ನು ಸಹ ಫೋನ್‌ನಲ್ಲಿ ಪಡೆಯಬಹುದು. ಇದು LPDDR4x RAM + UFS 2.2 ಸ್ಟೋರೇಜ್‌ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ: ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆಯನ್ನು ಹೊಂದಿರಲಿದೆ. 50MP ಮುಖ್ಯ ಕ್ಯಾಮೆರಾ ಇರಲಿದೆ. 2MP ಡೆಪ್ತ್ ಸೆನ್ಸರ್ ಮತ್ತು ಸೆಲ್ಫಿಗಾಗಿ 16MP ಫ್ರಂಟ್ ಕ್ಯಾಮೆರಾವನ್ನು ಒಳಗೊಂಡಿರಲಿದೆ.

ಬ್ಯಾಟರಿ: Oppo K12X ಸ್ಮಾರ್ಟ್‌ಫೋನ್‌ 5,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಕಂಪನಿಯು 80W SuperVOOC ಚಾರ್ಜಿಂಗ್ ಬೆಂಬಲವನ್ನು ತನ್ನ ಹೊಸ ಮೊಬೈಲ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ.

Best Mobiles in India

English summary
OPPO K12x 5G India launch date has been officially announced. Check Expected Launch Date, Features, Specifications and More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+