OnePlusಗೆ ಪೈಪೋಟಿ ಶುರು..! ಮಾರುಕಟ್ಟೆಗೆ ಬಂದೇ ಬಿಡ್ತು ಹೊಸ OPPO ಫೋನ್: ಹೇಗಿದೆ ಗೊತ್ತಾ?
ಒಪ್ಪೋ ಅಭಿಮಾನಿಗಳ ಕಾಯುವಿಕೆ ಮುಗಿಯಿತು..! ಅಂತೂ ಇಂತೂ ಒಪ್ಪೋ (Oppo) ಕಂಪನಿಯು ತನ್ನ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿಯೊಂದನ್ನು ನೀಡಿದೆ. OPPO 'K' ಸರಣಿಯ ಅಡಿಯಲ್ಲಿ ಹೊಸ ಮೊಬೈಲ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೌದು, ಒಪ್ಪೋ ಸದ್ದಿಲ್ಲದೇ ಹೊಸ OPPO K12x 5G ಫೋನನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈಗಾಗಲೇ ಚೀನಾದಲ್ಲಿ OPPO K12x ಲಾಂಚ್ ಆಗಿದೆ. ಬಹುತೇಕ ಇದೇ ಫೀಚರ್ಸ್‌ಗಳೊಂದಿಗೆ ಈ ಫೋನ್ ಭಾರತಕ್ಕೆ ಎಂಟ್ರಿ ಕೊಟ್ಟಿದೆ. ಇದು OnePlus Nord CE4ಗೆ ಪೈಪೋಟಿ ನೀಡುವುದು ಖಚಿತ.
OPPO K12x ಫೋನ್ 6.67 ಇಂಚಿನ FullHD+ ಡಿಸ್ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಹೊಂದಿದೆ. 32MP ಮುಖ್ಯ ಕ್ಯಾಮೆರಾ, 5,500mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಸಪೋರ್ಟ್ ಪಡೆದಿದೆ. ಧೂಳು ಮತ್ತು ಸ್ಪ್ಲಾಶ್ ಪ್ರೂಫ್ IP54 ರೇಟಿಂಗ್, 360 ಡಿಗ್ರಿ ಡ್ಯಾಮೇಜ್ ಪ್ರೂಫ್ ಬಾಡಿ, 7.68mm ಅಲ್ಟ್ರಾ ಥಿನ್ ವಿನ್ಯಾಸದಂತಹ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬನ್ನಿ, ಈ ಹೊಸ ಫೋನಿನ ಫಿಚರ್ಸ್, ಬೆಲೆ ಮತ್ತು ಆಫರ್ ಬಗ್ಗೆ ತಿಳಿಯೋಣ.

OPPO K12x ಫೋನಿನ ಬೆಲೆ ಮತ್ತು ಲಭ್ಯತೆ
ಹೊಸ OPPO K12x ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬರಲಿದೆ. ಬ್ರೀಜ್ ಬ್ಲೂ ಮತ್ತು ಮಿಡ್ನೈಟ್ ವೈಲೆಟ್ ಬಣ್ಣಗಳಲ್ಲಿ ಬಿಡುಗಡೆಯಾಗಿದೆ. ಇದರ 6GB + 128GB ಸ್ಟೋರೇಜ್‌ನ ಬೆಲೆ 12,999 ರೂ. ಇದೆ. ಮತ್ತು 8GB + 256GB ಸ್ಟೋರೇಜ್ ಮಾದರಿಯ ಬೆಲೆ 15,999 ರೂ. ಆಗಿದೆ.
ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್, OPPO ಇಂಡಿಯಾ ಆನ್‌ಲೈನ್ ಸ್ಟೋರ್‌ಗಳು ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಆಗಸ್ಟ್ 2 ರಿಂದ ಮೊದಲ ಮಾರಾಟ ಪ್ರಾರಂಭಿಸಲಿದೆ. ಎಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ ಮತ್ತು ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳೊಂದಿಗೆ 1,000 ರೂ. ಡಿಸ್ಕೌಂಟ್ ಪಡೆಯಬಹುದು. ಜೊತೆಗೆ 3 ತಿಂಗಳವರೆಗೆ ನೋ ಕಾಸ್ಟ್ EMI ಸೌಲಭ್ಯ ನೀಡಲಾಗುತ್ತದೆ.
OPPO K12x 5G ಫೋನಿನ ವಿಶೇಷತೆಗಳು
ಡಿಸ್ಲ್ಪೇ: ಕಂಪನಿಯು Oppo K12x 5G ಫೋನನ್ನು 6.67 ಇಂಚಿನ (1604 × 720 ಪಿಕ್ಸೆಲ್) HD+ ಡಿಸ್ಲ್ಪೇನೊಂದಿಗೆ ಪರಿಚಯಿಸಿದೆ. ಡಿಸ್ಲ್ಪೇಯು 120Hz ರಿಫ್ರೆಶ್ ರೇಟ್, 1000 nits ಗರಿಷ್ಠ ಬ್ರೈಟ್‌ನೆಸ್ ಮತ್ತು ಪಾಂಡಾ ಗ್ಲಾಸ್ ರಕ್ಷಣೆ ಹೊಂದಿದೆ.
ಪ್ರೊಸೆಸರ್: ಒಪ್ಪೋನ ಈ ಹೊಸ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 6nm ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ.
RAM ಮತ್ತು ಸ್ಟೋರೇಜ್: ಹೊಸ ಒಪ್ಪೋ ಫೋನ್ ಅನ್ನು 6GB + 128GB ಮತ್ತು 8GB + 256GB ಸ್ಟೋರೇಜ್ ವೇರಿಯಂಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಫೋನ್ UFS 2.2 ಸ್ಟೋರೇಜ್, ಮೈಕ್ರೊ SD ಜೊತೆಗೆ 1TB ವರೆಗೆ ವಿಸ್ತರಿಸಬಹುದಾದ ಮೆಮೊರಿಯೊಂದಿಗೆ ಬರುತ್ತದೆ.
ಕ್ಯಾಮೆರಾ: Oppo K12x 5G ಸ್ಮಾರ್ಟ್‌ಫೋನ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದೆ. 32MP ಮುಖ್ಯ, 2MP ಪೋರ್ಟ್ರೇಟ್ ಕ್ಯಾಮೆರಾ ಮತ್ತು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8MP ಫ್ರಂಟ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ: ಒಪ್ಪೋ ಫೋನ್ 5100mAh ಸಾಮರ್ಥ್ಯದ ಬ್ಯಾಟರಿ ಮತ್ತು 45W SuperVOOC ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯದೊಂದಿಗೆ ಬರುತ್ತದೆ. ಇದು ಧೂಳು ಮತ್ತು ನೀರು ನಿರೋಧಕ (IP54) ಆಗಿದೆ.
ಇತರೆ ಫೀಚರ್ಸ್: ಈ ಫೋನ್ 76.14×165.79×7.68 mm ಅಳತೆ ಮತ್ತು 186 ಗ್ರಾಂ ತೂಕವಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್, 5G NA/NSA, ಡ್ಯುಯಲ್ 4G VoLTE, Wi-Fi 802.11 ac (2.4GHz + 5GHz), ಬ್ಲೂಟೂತ್ 5.1, GPS + GLONASS, USB ಟೈಪ್-C ನಂತಹ ಸೌಲಭ್ಯ ಒಳಗೊಂಡಿದೆ.


Click it and Unblock the Notifications








