Home
ಮೊಬೈಲ್

ಮುಗಿಬಿದ್ದ ಗ್ರಾಹಕರು! 7000mAh ಬ್ಯಾಟರಿ.. 50MP ಕ್ಯಾಮೆರಾ.. OPPO K13 5G ಸೇಲ್ ಶುರು; ಬೆಲೆ ಇಷ್ಟೇನಾ?

ಒಪ್ಪೋ ಭಾರತೀಯ ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಿದೆ. ಅಧಿಕೃತವಾಗಿ ತನ್ನ ಹೊಸ 5G ಫೋನಿನ ಮಾರಾಟವನ್ನು ಶುರು ಮಾಡಿದೆ. ಒಪ್ಪೋ ನೀಡಿರುವ ಆಫರ್ ಪಡೆಯಲು ಮೊಬೈಲ್‌ ಪ್ರಿಯರು ಮುಗಿ ಬಿದ್ದಿದ್ದಾರೆ. ಹೌದು, ಬಹುನಿರೀಕ್ಷಿತ ಒಪ್ಪೋ K13 5G (OPPO K13 5G) ಸ್ಮಾರ್ಟ್‌ಫೋನ್ ಇದೀಗ ಭಾರತದಲ್ಲಿ ಖರೀದಿಗೆ ಲಭ್ಯವಿದೆ. ಕಡಿಮೆ ಬಜೆಟ್‌ನ ಸ್ಮಾರ್ಟ್‌ಫೋನ್ ಪ್ರಿಯರು ಹಾಗೂ ದೊಡ್ಡ ಬ್ಯಾಟರಿ ಬ್ಯಾಕಪ್ ಇಷ್ಟಪಡುವವರು ಈ ಒಪ್ಪೋ 5G ಫೋನನ್ನು ನಿಸ್ಸಂದೇಹವಾಗಿ ಖರೀದಿಸಬಹುದು. ಕಂಪನಿಯ ಈ ಫೋನಿಗೆ ಯಾವೆಲ್ಲಾ ಆಫರ್ ನೀಡುತ್ತಿದೆ? ಎಲ್ಲಿ ಖರೀದಿಸಬೇಕು? ಎನ್ನುವುದನ್ನು ತಿಳಿಯೋಣ ಬನ್ನಿ.

OPPO K13 5G ಸೇಲ್ ಶುರು; 7000mAh ಬ್ಯಾಟರಿ, 50MP ಕ್ಯಾಮೆರಾ; ಬೆಲೆ ಇಷ್ಟು!

ಒಪ್ಪೋ K13 5G ಡಿಸ್ಪ್ಲೇ

ಒಪ್ಪೋ K13 5G ಫೋನ್ 6.67 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2400 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ದರ, 1200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ ಮತ್ತು ಇನ್ಫ್ರಾರೆಡ್ ಸೆನ್ಸರ್ ತಂತ್ರಜ್ಞಾನ ಹೊಂದಿದೆ.

ಒಪ್ಪೋ K13 5G ಕಾರ್ಯಕ್ಷಮತೆ

ಒಪ್ಪೋ K13 5G ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 6 ಜೆನ್ 4 ಆಕ್ಟಾ-ಕೋರ್ ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್ 15 ಆಧಾರಿತ Color OS 15 ನೊಂದಿಗೆ ಕೆಲಸ ಮಾಡುತ್ತದೆ. ಇದು ಗ್ರಾಫಿಕ್ಸ್‌ಗಾಗಿ, ಅಡ್ರಿನೊ 810 ಜಿಪಿಯು ಹೊಂದಿದೆ. ಈ ಫೋನ್ 8GB RAM, 128GB ಮತ್ತು 256GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ.

ಒಪ್ಪೋ K13 5G ಕ್ಯಾಮೆರಾ

ಒಪ್ಪೋ K13 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ.

ಒಪ್ಪೋ K13 5G ಬ್ಯಾಟರಿ

ಒಪ್ಪೋ K13 5G ಫೋನ್‌ 7000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ SuperVOOC ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಫೋನ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗೆ IP65 ರೇಟಿಂಗ್‌ ಪಡೆದಿದೆ. ಇದಲ್ಲದೆ ಬ್ಲೂಟೂತ್ 5.2, ಐಆರ್ ಬ್ಲಾಸ್ಟರ್ ಹೊಂದಿದೆ.

OPPO K13 5G ಸೇಲ್ ಶುರು; 7000mAh ಬ್ಯಾಟರಿ, 50MP ಕ್ಯಾಮೆರಾ; ಬೆಲೆ ಇಷ್ಟು!

ಒಪ್ಪೋ K13 5G ಬೆಲೆ ಮತ್ತು ಆಫರ್

ಒಪ್ಪೋ K13 5G ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರವನ್ನು 17,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು 8GB RAM + 256GB ಸ್ಟೋರೇಜ್ ವೇರಿಯಂಟ್ 19,999 ರೂ.ಗೆ ಲಭ್ಯವಿದೆ. ಇದು ಫ್ಲಿಪ್‌ಕಾರ್ಟ್, ಒಪ್ಪೋ ಇಂಡಿಯಾ ಆನ್‌ಲೈನ್ ಸ್ಟೋರ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಮಾರಾಟ ಪ್ರಾರಂಭಿಸಿದೆ. ಆರಂಭಿಕ ಮಾರಾಟ ಪ್ರಯುಕ್ತ ಕಂಪನಿಯು ಸಖತ್ ಆಫರ್ ನೀಡುತ್ತಿದೆ. ಬ್ಯಾಂಕ್ ಕಾರ್ಡ್‌ಗಳ ವಹಿವಾಟಿನ ಮೇಲೆ, 1000 ರೂ. ರಿಯಾಯಿತಿ ಅಥವಾ 1000 ರೂ. ಎಕ್ಸ್‌ಚೇಂಜ್ ಬೋನಸ್ ಲಭ್ಯವಿದೆ. ಜೊತೆಗೆ 6 ತಿಂಗಳ ನೋ ಕಾಸ್ಟ್ ಇಎಂಐ ಆಯ್ಕೆ ನೀಡಲಾಗುತ್ತಿದೆ. ಈ ಫೋನ್ ಐಸಿ ಪರ್ಪಲ್ ಮತ್ತು ಪ್ರಿಸ್ಮ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ. ಈ ಫೋನ್ ಖರೀದಿಸಲು ಈ ಲಿಂಕ್ ಕ್ಲಿಕ್ ಮಾಡಿ.

Best Mobiles in India

English summary
Oppo K13 5G sale starts in India with launch offers: Check price, availability, Specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+