360-ಡಿಗ್ರಿ ಡ್ಯಾಮೇಜ್-ಪ್ರೂಫ್ ಆರ್ಮರ್ ಬಾಡಿಯೊಂದಿಗೆ ಬರುತ್ತಿದೆ Oppo K13x 5G!
ಭಾರತದಲ್ಲಿ Oppo ತನ್ನ ಹೊಸ K13x 5G ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ಧವಾಗಿದೆ. ಹಲವಾರು ಟೀಸರ್‌ಗಳ ಮೂಲಕ, ಈಗಾಗಲೇ ಈ ಫೋನ್‌ನ ಬಣ್ಣ ಸೇರಿದಂತೆ ಹಲವಾರು ಮಾಹಿತಿಗಳನ್ನು ದೃಢಪಡಿಸಿರುವ Oppo, ಇದೀಗ ಅದರ ನಿರ್ಮಾಣದ ವಿವರಗಳು ಮತ್ತು ಬಾಳಿಕೆ ಪ್ರಮಾಣೀಕರಣಗಳ ಬಗ್ಗೆ ಪ್ರಮುಖ ಮಾಹಿತಿಗಳನ್ನು ಬಹಿರಂಗಪಡಿಸಿದೆ. ನಿರೀಕ್ಷೆಯಂತೆಯೇ, Oppo K13x 5G ಫೋನ್ "360-ಡಿಗ್ರಿ ಡ್ಯಾಮೇಜ್-ಪ್ರೂಫ್ ಆರ್ಮರ್ ಬಾಡಿ" ಮತ್ತು "ಸ್ಪಾಂಜ್ ಬಯೋಮಿಮೆಟಿಕ್ ಶಾಕ್ ಅಬ್ಸಾರ್ಪ್ಷನ್ ಸಿಸ್ಟಮ್" ನಿರ್ಮಾಣವನ್ನು ಹೊಂದಿದೆ ಎಂದು ತಿಳಿಸಲಾಗಿದೆ. ಈ ಕುರಿತ ಸಂಪೂರ್ಣ ವಿವರಗಳು ಈ ಕೆಳಕಂಡಂತಿವೆ.
ಅತ್ಯುತ್ತಮ ಬಾಳಿಕೆಗಾಗಿ ವಿಶಿಷ್ಟ ವಿನ್ಯಾಸ
Oppo K13x 5G ಯ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಬಾಳಿಕೆ. ಕಂಪನಿಯು ಈ ಫೋನ್ ತಯಾರಿಕೆಯಲ್ಲಿ "ಸ್ಪಾಂಜ್ ಬಯೋಮಿಮೆಟಿಕ್ ಶಾಕ್ ಅಬ್ಸಾರ್ಪ್ಷನ್ ಸಿಸ್ಟಮ್" ಅನ್ನು ಬಳಸಿದೆ ಎಂದು ತಿಳಿಸಿದೆ. ಇದು ಸಮುದ್ರ ಸ್ಪಂಜುಗಳಿಂದ ಸ್ಫೂರ್ತಿ ಪಡೆದಿದ್ದು, ಈ ವ್ಯವಸ್ಥೆಯು ಆಂತರಿಕ ಭಾಗಗಳನ್ನು ಹಾನಿಯಿಂದ ರಕ್ಷಿಸಲು ಸ್ಪಂಜಿನಂತಹ ಪದರಗಳನ್ನು ಹೊಂದಿರುವ ಹೊಂದಿಕೊಳ್ಳುವ, ಆಘಾತ-ಹೀರಿಕೊಳ್ಳುವ ವಸ್ತುಗಳನ್ನು ಬಳಸುತ್ತದೆ. ಇದರ ಜೊತೆಗೆ, Oppo K13x 5G ಫೋನ್ AM04 ಹೆಚ್ಚಿನ ಸಾಮರ್ಥ್ಯದ ಅಲ್ಯೂಮಿನಿಯಂ ಮಿಶ್ರಲೋಹದ ಒಳ ಚೌಕಟ್ಟನ್ನು ಹೊಂದಿದೆ. ಇದು ಇತರ ಮಿಶ್ರಲೋಹಗಳಿಗಿಂತ 10 ಪ್ರತಿಶತ ಹೆಚ್ಚು ಬಾಳಿಕೆ ಬರುವಂತಹದ್ದಾಗಿದೆ. ಈ ಫೋನ್ ಬಾಕ್ಸ್‌ನಲ್ಲೇ ಆಂಟಿ-ಡ್ರಾಪ್ ಶೀಲ್ಡ್ ಕೇಸ್‌ನೊಂದಿಗೆ ಬರುವುದು ಇನ್ನೊಂದು ಉತ್ತಮ ಅಂಶವಾಗಿದೆ.

ಒಟ್ಟಾರೆಯಾಗಿ, ಈ Oppo K13x 5G ಫೋನ್ IP65 ರೇಟಿಂಗ್ ಜೊತೆಗೆ 360-ಡಿಗ್ರಿ ಡ್ಯಾಮೇಜ್-ಪ್ರೂಫ್ ಆರ್ಮರ್ ಬಾಡಿ" ಯನ್ನು ಹೊಂದಿರುತ್ತದೆ. ಇದು SGS ಗೋಲ್ಡ್ ಡ್ರಾಪ್-ರೆಸಿಸ್ಟೆನ್ಸ್, SGS ಮಿಲಿಟರಿ ಸ್ಟ್ಯಾಂಡರ್ಡ್, ಮತ್ತು MIL-STD 810-H ಶಾಕ್ ರೆಸಿಸ್ಟೆನ್ಸ್ ಗಳೊಂದಿಗೆ ಬರುತ್ತದೆ. ಡಿಸ್‌ಪ್ಲೇ "ಕ್ರಿಸ್ಟಲ್ ಶೀಲ್ಡ್ ಗ್ಲಾಸ್" ರಕ್ಷಣೆಯನ್ನು ಹೊಂದಿದೆ ಎಂದು ಕಂಪೆನಿ ತಿಳಿಸಿದೆ. ಇದು ಪರದೆಯನ್ನು ಗೀರುಗಳು ಮತ್ತು ಹಾನಿಯಿಂದ ಕಾಪಾಡುತ್ತದೆ. ಈ ಸ್ಕ್ರೀನ್ 'ಸ್ಪ್ಲಾಶ್ ಟಚ್' ಮತ್ತು 'ಗ್ಲೋವ್ ಟಚ್' ಮೋಡ್‌ಗಳನ್ನು ಬೆಂಬಲಿಸುತ್ತದೆ. ಇದರರ್ಥ ಬಳಕೆದಾರರು ತಮ್ಮ ಕೈಗಳು ಒದ್ದೆಯಾಗಿದ್ದರೂ, ಜಿಡ್ಡಾಗಿದ್ದರೂ ಅಥವಾ ಕೈಗವಸುಗಳನ್ನು ಧರಿಸಿದ್ದರೂ ಸಹ ಫೋನ್ ಅನ್ನು ಸುಲಭವಾಗಿ ಬಳಸಬಹುದು ಇದು ದೈನಂದಿನ ಬಳಕೆಗೆ ಬಹಳ ಅನುಕೂಲಕರ ವೈಶಿಷ್ಟ್ಯವಾಗಿದೆ.
ಬಣ್ಣ ಆಯ್ಕೆಗಳು ಮತ್ತು ನಿರೀಕ್ಷಿತ ಬೆಲೆ ಮತ್ತು ಲಭ್ಯತೆ
Oppo K13x 5G ಫೋನ್ "ಮಿಡ್‌ನೈಟ್ ವೈಲೆಟ್" ಮತ್ತು "ಸನ್‌ಸೆಟ್ ಪೀಚ್" ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ ಎಂದು ಕಂಪನಿ ಈಗಾಗಲೇ ಬಹಿರಂಗಪಡಿಸಿದೆ. ಈ ವಿನ್ಯಾಸವು ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಘಟಕವನ್ನು ಹೊಂದಿರುತ್ತದೆ ಎಂದು ಸೂಚಿಸುತ್ತದೆ. ಫ್ಲಿಪ್‌ಕಾರ್ಟ್ ಮೈಕ್ರೋಸೈಟ್ ಮೂಲಕ ಈ ಹ್ಯಾಂಡ್‌ಸೆಟ್ ಇ-ಕಾಮರ್ಸ್ ಸೈಟ್‌ನಲ್ಲಿ ಲಭ್ಯವಿರುತ್ತದೆ ಎಂದು ದೃಢಪಡಿಸಲಾಗಿದೆ. ಆದರೆ, ಭಾರತದಲ್ಲಿ Oppo K13x 5G ಫೋನ್ ಬಿಡುಗಡೆಯಾಗುವ ದಿನಾಂಕದ ಬಗ್ಗೆ ಅಧಿಕೃತ ಮಾಹಿತಿಯನ್ನು ಒದಗಿಸಿಲ್ಲ. ಇತ್ತೀಚಿನ ವರದಿಗಳ ಪ್ರಕಾರ, Oppo K13x 5G ಜೂನ್ ಕೊನೆಯ ವಾರದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದರ ಬೆಲೆ 15,999 ರೂ.ಗಿಂತ ಕಡಿಮೆಯಿರಬಹುದು ಎಂದು ಅಂದಾಜಿಸಲಾಗಿದೆ.
Oppo K13x 5G ಫೋನ್: ಇತರೆ ವೈಶಿಷ್ಟ್ಯಗಳು,
ಇನ್ನು, ಈ Oppo K13x 5G ಫೋನ್ MediaTek Dimensity 6300 SoC ಪ್ರೊಸೆಸರ್, 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಬ್ಯಾಟರಿ, 50-ಮೆಗಾಪಿಕ್ಸೆಲ್ ಮುಖ್ಯ ಹಿಂಭಾಗದ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಹೊಂದಿರಬಹುದು ಎಂದು ಕೆಲವು ವರದಿಗಳು ಹೇಳಿವೆ. ಆದಾಗ್ಯೂ, ಈ ವಿಶೇಷಣಗಳ ಬಗ್ಗೆ ಕಂಪನಿಯು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂಬುದನ್ನು ಗಮನಿಸಬೇಕು. ಒಟ್ಟಾರೆಯಾಗಿ, Oppo K13x 5G ತನ್ನ ಆಕರ್ಷಕ ವಿನ್ಯಾಸ, ಬಾಳಿಕೆ ಬರುವ ನಿರ್ಮಾಣ ಮತ್ತು ಮಧ್ಯಮ ಶ್ರೇಣಿಯ ಬೆಲೆಯೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಗಮನ ಸೆಳೆಯುವ ನಿರೀಕ್ಷೆಯಿದೆ. ಅಧಿಕೃತ ಬಿಡುಗಡೆಗಾಗಿ ಕಾಯೋಣ.


Click it and Unblock the Notifications








