Home
ಮೊಬೈಲ್

ಮಾರ್ಚ್ 9ಕ್ಕೆ Oppo K14 5G ಬಿಡುಗಡೆ: 7,000mAh ಬ್ಯಾಟರಿ ಹೈಲೈಟ್!

ಭಾರತದಲ್ಲಿ Oppo ಇತ್ತೀಚೆಗೆ ತನ್ನ ಹೊಸ ಬಜೆಟ್ ಶ್ರೇಣಿಯ ಸ್ಮಾರ್ಟ್‌ಫೋನ್ Oppo K14x 5G ಅನ್ನು ಬಿಡುಗಡೆ ಮಾಡಿ ಸಾಕಷ್ಟು ಗಮನ ಸೆಳೆದಿತ್ತು. 14,999 ರೂ. ಆರಂಭಿಕ ಬೆಲೆಯಲ್ಲಿ ಲಭ್ಯವಾಗುತ್ತಿರುವ ಈ ಸಾಧನವು ಆಕರ್ಷಕ ವಿನ್ಯಾಸ ಮತ್ತು ಉತ್ತಮ ವೈಶಿಷ್ಟ್ಯಗಳಿಂದ ಗ್ರಾಹಕರ ಮೆಚ್ಚುಗೆ ಪಡೆದಿದೆ. ಇದೀಗ, ಇದೇ ಸರಣಿಯನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ Oppo ಮತ್ತೊಂದು ಹೊಸ ಮಾದರಿಯನ್ನು ಪರಿಚಯಿಸಲು ಸಜ್ಜಾಗಿದೆ. K14x 5G ಬಿಡುಗಡೆಯಾದ ಬಳಿಕ, ಕಂಪನಿ ಇದೀಗ Oppo K14 5G ಅನ್ನು ಭಾರತೀಯ ಮಾರುಕಟ್ಟೆಗೆ ತರಲು ಅಧಿಕೃತವಾಗಿ ಘೋಷಿಸಿದೆ.

ಮಾರ್ಚ್ 9ರಂದು ಅಧಿಕೃತ ಬಿಡುಗಡೆ!
Oppo ಕಂಪನಿಯ ಪ್ರಕಟಣೆಯ ಪ್ರಕಾರ, ಹೊಸ Oppo K14 5G ಫೋನ್ ಭಾರತದಲ್ಲಿ ಮಾರ್ಚ್ 9ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ Oppo K14 5G ಸ್ಮಾರ್ಟ್‌ಫೋನ್‌ಗಾಗಿ ಮೀಸಲಾದ ಮೈಕ್ರೋಸೈಟ್ ಅನ್ನು ತೆರೆಯಲಾಗಿದ್ದು, ಇದರಿಂದ ಫೋನ್‌ನ ವಿನ್ಯಾಸ, ಬಣ್ಣ ಆಯ್ಕೆಗಳು ಹಾಗೂ ಬ್ಯಾಟರಿ ಸಾಮರ್ಥ್ಯವು ಬಹಿರಂಗವಾಗಿವೆ. ಹೊಸ Oppo K14 5G ಫೋನ್ ನೇರಳೆ ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಬರುವುದು ಖಚಿತವಾಗಿದೆ.

ಮೈಕ್ರೋಸೈಟ್‌ನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳ ಪ್ರಕಾರ, Oppo K14 5G ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿರಲಿದೆ. ಚೌಕಾಕಾರದ ಕ್ಯಾಮೆರಾ ಮಾಡ್ಯೂಲ್ ಒಳಗೆ ಕ್ಯಾಮೆರಾ ಮತ್ತು LED ಫ್ಲ್ಯಾಶ್ ವ್ಯವಸ್ಥೆ ಇರಲಿದೆ. ಹಿಂಭಾಗದಲ್ಲಿ ಕ್ರಿಸ್ಟಲ್ ಮಾದರಿಯ ವಿನ್ಯಾಸ ನೀಡಲಾಗಿದ್ದು, ಫೋನ್‌ಗೆ ಪ್ರೀಮಿಯಂ ಲುಕ್ ನೀಡುತ್ತದೆ. ಪವರ್ ಬಟನ್ ಮತ್ತು ವಾಲ್ಯೂಮ್ ಕಂಟ್ರೋಲ್‌ಗಳು ಬಲಭಾಗದಲ್ಲಿ ಇರಲಿದ್ದು, ಎಡಭಾಗದಲ್ಲಿ ಸಿಮ್ ಟ್ರೇ ಸ್ಲಾಟ್ ಇರಲಿದೆ. ಫ್ಲಾಟ್ ಮೆಟಲ್ ಫ್ರೇಮ್ ಹಾಗೂ ಮೃದುವಾದ ಮೂಲೆಗಳ ವಿನ್ಯಾಸ ಫೋನ್‌ಗೆ ಸ್ಟೈಲಿಷ್ ಸ್ಪರ್ಶ ನೀಡುವ ಸಾಧ್ಯತೆ ಇದೆ.

ಮಾರ್ಚ್ 9ಕ್ಕೆ Oppo K14 5G ಬಿಡುಗಡೆ: 7,000mAh ಬ್ಯಾಟರಿ ಹೈಲೈಟ್!

ಮುಂಬರುವ Oppo K14 5G ಫೋನಿನ ಪ್ರಮುಖ ಹೈಲೈಟ್ ಎಂದರೆ ಇದರ 7,000mAh ಸಾಮರ್ಥ್ಯದ ಭಾರೀ ಬ್ಯಾಟರಿ ಮತ್ತು ಇದಕ್ಕಿರುವ 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ. ಏಕೆಂದರೆ, ಪ್ರಸ್ತುತ ಬ್ಯಾಟರಿ ವಿಭಾಗವನ್ನು ಮಾತ್ರ ಹೈಲೈಟ್ ಮಾಡಲಾಗಿದೆ. ಇನ್ನು ಸಾಫ್ಟ್‌ವೇರ್ ಭಾಗದಲ್ಲಿ ಈ ಫೋನ್ ColorOS ಆಧಾರಿತ ಆಂಡ್ರಾಯ್ಡ್ ಅನುಭವವನ್ನು ನೀಡಲಿದೆ ಎಂದು ತಿಳಿಸಲಾಗಿದೆ. ಗಮನಿಸುವುದಾದರೆ, ಈ ಹಿಂದೆ ಪರಿಚಯವಾಗಿದ್ದ Oppo K14x 5G ಫೋನ್ 6,500mAh ಬ್ಯಾಟರಿ ಹೊಂದಿತ್ತು.

Oppo K14x 5G ನಂತರದ ಹೊಸ ಹೆಜ್ಜೆ
ಭಾರತದಲ್ಲಿ ಇದೇ ಸರಣಿಯ ಮೊದಲ ಫೋನ್ ಆಗಿರುವ Oppo K14x 5G ಫೆಬ್ರವರಿ 10ರಂದು ಭಾರತದಲ್ಲಿ ಬಿಡುಗಡೆಯಾಗಿತ್ತು. ಇದರ ಆರಂಭಿಕ ಬೆಲೆ ರೂ. 14,999 ಆಗಿದ್ದು, 6.75 ಇಂಚಿನ HD+ ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು 6,500mAh ಬ್ಯಾಟರಿಯನ್ನು ಹೊಂದಿದೆ. ಈ ಮಾದರಿ ಉತ್ತಮ ಪ್ರತಿಕ್ರಿಯೆ ಪಡೆದ ನಂತರ, ಇದೀಗ K14 5G ಮೂಲಕ ಕಂಪನಿ ಮತ್ತಷ್ಟು ದೊಡ್ಡ ಬ್ಯಾಟರಿ ಹಾಗೂ ಸುಧಾರಿತ ವಿನ್ಯಾಸವನ್ನು ನೀಡಲು ಸಜ್ಜಾಗಿರುವಂತೆ ಕಾಣುತ್ತಿದೆ.

ಭಾರತದಲ್ಲಿ ಮಧ್ಯಮ ಬೆಲೆಯ 5G ಫೋನ್‌ಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೆಚ್ಚಿನ ಬ್ಯಾಟರಿ ಸಾಮರ್ಥ್ಯ, ವೇಗದ ಚಾರ್ಜಿಂಗ್ ಹಾಗೂ ಆಕರ್ಷಕ ವಿನ್ಯಾಸವನ್ನು ಒಟ್ಟಿಗೆ ನೀಡುವ ಸಾಧನಗಳಿಗೆ ಬಳಕೆದಾರರು ಆದ್ಯತೆ ನೀಡುತ್ತಿದ್ದಾರೆ. ಈ ಹಿನ್ನೆಲೆ Oppo K14 5G ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಪಡೆಯುವ ಸಾಧ್ಯತೆ ಇದೆ. ಬಿಡುಗಡೆಯಾದ ನಂತರ ಇದರ ಸಂಪೂರ್ಣ ಸ್ಪೆಸಿಫಿಕೇಷನ್ ಹಾಗೂ ಬೆಲೆ ವಿವರಗಳು ಸ್ಪಷ್ಟವಾಗಲಿವೆ. ಇದೀಗ ದೊರೆಯುತ್ತಿರುವ ಮಾಹಿತಿಯ ಪ್ರಕಾರ, ದೀರ್ಘಕಾಲ ಬಳಕೆಗೆ ಅನುಕೂಲವಾಗುವ ಬ್ಯಾಟರಿ ಮತ್ತು ಸ್ಟೈಲಿಷ್ ವಿನ್ಯಾಸವೇ ಈ ಫೋನ್‌ನ ಪ್ರಮುಖ ಆಕರ್ಷಣೆಗಳಾಗಿವೆ.

Best Mobiles in India

English summary
Oppo is set to launch the new Oppo K14 5G in India on March 9 at 12 PM. The upcoming smartphone is confirmed to feature a massive 7,000mAh battery and will be available in purple and white color options. A dedicated Flipkart microsite has already revealed key design details ahead of the official launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+