ಭಾರತದಲ್ಲಿ Oppo K14x 5G ಬಿಡುಗಡೆ: 15 ಸಾವಿರದೊಳಗೆ ಭರ್ಜರಿ ಫೋನ್!
ಭಾರತೀಯ ಸ್ಮಾರ್ಟ್‌ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ ಬಜೆಟ್ ಬೆಲೆಯ ಹೊಸ Oppo K14x 5G ಸ್ಮಾರ್ಟ್‌ಫೋನ್ ದೇಶದಲ್ಲಿಂದು (ಫೆ. 10) ಭರ್ಜರಿಯಾಗಿ ಬಿಡುಗಡೆಯಾಗಿದೆ. ದೇಶದ ಮಾರುಕಟ್ಟೆಯ ನಿರೀಕ್ಷೆಯಂತೆಯೇ, 15 ಸಾವಿರ ರೂ. ಬೆಲೆ ವಿಭಾಗದಲ್ಲಿಯೇ ಈ ಸ್ಮಾರ್ಟ್‌ಫೋನ್ ಪರಿಚಯಗೊಂಡಿದ್ದು, ಈ ಬೆಲೆಯಲ್ಲಿ 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 6,500mAh ಬ್ಯಾಟರಿ ಮತ್ತು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ನೊಂದಿಗೆ ಕಾಲಿಟ್ಟಿದೆ. ಈ ಹೊಸ ಸ್ಮಾರ್ಟ್‌ಫೋನ್ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.
Oppo K14x 5G: ಬೆಲೆ ಮತ್ತು ಲಭ್ಯತೆ!
ಭಾರತದಲ್ಲಿ Oppo K14x 5G ಸ್ಮಾರ್ಟ್‌ಫೋನ್ ಬೆಲೆ 4GB+128GB RAM ಮತ್ತು ಸ್ಟೋರೇಜ್ ಕಾನ್ಫಿಗರೇಶನ್‌ಗೆ 14,999 ರೂ. ನಿಂದ ಪ್ರಾರಂಭವಾಗುತ್ತದೆ.6GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಇದರ ಟಾಪ್-ಆಫ್-ದಿ-ಲೈನ್ ರೂಪಾಂತರದ ಬೆಲೆ ರೂ. 16,999. ಆದರೆ, ಕಂಪನಿಯು SBI, HDFC ಬ್ಯಾಂಕ್ ಮತ್ತು ICICI ಬ್ಯಾಂಕ್ ಕಾರ್ಡ್‌ಗಳ ಮೇಲೆ 1,500 ರೂ. ವರೆಗೆ ತಕ್ಷಣದ ಬ್ಯಾಂಕ್ ರಿಯಾಯಿತಿಯನ್ನು ಸಹ ನೀಡುತ್ತಿದೆ. ಇದರಿಂದ ದೇಶದಲ್ಲಿ ಈ ಫೋನ್ ಬೆಲೆ 13,499 ರೂ.ಗೆ ಇಳಿಕೆಯಾಗಲಿದೆ. ಲಬ್ಯತೆ ಕುರಿತು ನೋಡುವುದಾದರೆ, ಈ ಹೊಸ ಸ್ಮಾರ್ಟ್‌ಫೋನ್ ಇದೇ ಫೆಬ್ರವರಿ 16 ರಂದು ಫ್ಲಿಪ್‌ಕಾರ್ಟ್ ಮತ್ತು ಒಪ್ಪೋ ಆನ್‌ಲೈನ್ ಸ್ಟೋರ್ ಮೂಲಕ ಭಾರತದಲ್ಲಿ ಮಾರಾಟಕ್ಕೆ ಬರಲಿದೆ. ಮತ್ತು ಗ್ರಾಹಕರು Icy Blue ಮತ್ತು Prism Violet ಎರಡು ಬಣ್ಣಗಳಲ್ಲಿ ಫೋನ್ ಅನ್ನು ಖರಿದಿಸಬಹುದು.

Oppo K14x 5G: ಪ್ರಮುಖ ವೈಶಿಷ್ಟ್ಯಗಳು
ಹೊಸ Oppo K14x 5G ಸ್ಮಾರ್ಟ್‌ಫೋನ್ 6.75-ಇಂಚಿನ HD+ (720x1,570 ಪಿಕ್ಸೆಲ್‌ಗಳು) LCD ಡಿಸ್‌ಪ್ಲೆಯನ್ನು ಹೊಂದಿದೆ. ಈ ಡಿಸ್‌ಪ್ಲೆಯು 120Hz ವರೆಗೆ ರಿಫ್ರೆಶ್ ರೇಟ್, 1,125 nits ವರೆಗೆ ಗರಿಷ್ಠ ಹೊಳಪು, 16.7 ಮಿಲಿಯನ್ ಬಣ್ಣಗಳು, 240Hz ವರೆಗೆ ಸ್ಪರ್ಶ ಮಾದರಿ ದರ, 256 ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿಗೆ ಮತ್ತು 83 ಪ್ರತಿಶತ DCI-P3 ಬಣ್ಣದ ಗ್ಯಾಮಟ್ ಅನ್ನು ನೀಡುತ್ತದೆ ಎಂದು ಕಂಪೆನಿಯು ತಿಳಿಸಿದೆ. ಈ ಫೋನ್ 166.6x78.5x8.6mm ಅಳತೆ ಮತ್ತು ಸುಮಾರು 212g ತೂಗುತ್ತದೆ.
ಕಾರ್ಯಕ್ಷಮತೆಗಾಗಿ, Oppo K14x 5G ನಲ್ಲಿ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ನೀಡಲಾಗಿದೆ. ಮತ್ತು ಇದು ARM ಮಾಲಿ-G57 MC2 GPU ನೊಂದಿಗೆ ಜೋಡಿಯಾಗಿದೆ. ಮೆಮೊರಿ ವಿಭಾಗದಲ್ಲಿ, 6GB ವರೆಗೆ LPDDR4x RAM ಮತ್ತು 128GB ಯ UFS 2.2 ಆಂತರಿಕ ಸಂಗ್ರಹಣೆಯನ್ನು ಹೊಂದಿರು ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ColorOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ ವಿಭಾಗದಲ್ಲಿ, ಈ ಪೋನ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿದ್ದು, ಇದು 50-ಮೆಗಾಪಿಕ್ಸೆಲ್ (ಎಫ್/1.8) ಪ್ರಾಥಮಿಕ ಶೂಟರ್ ಮತ್ತು 2-ಮೆಗಾಪಿಕ್ಸೆಲ್ (ಎಫ್/2.4) ಏಕವರ್ಣದ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 5-ಮೆಗಾಪಿಕ್ಸೆಲ್ (ಎಫ್/2.2) ಮುಂಭಾಗದ ಕ್ಯಾಮೆರಾ ಇದೆ. ಇದು 1080p/60 fps ವರೆಗೆ ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಬ್ಯಾಟರಿ ವಿಭಾಗದಲ್ಲಿ, 45W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲವವಿರುವ 6500mAh ಬ್ಯಾಟರಿ ಇದೆ. .ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ ಫೋನ್ IP64 ರೇಟಿಂಗ್ ನಿಡಲಾಗಿದೆ. ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದ್ದರೆ, ಸಂಪರ್ಕ ವ್ಯವಸ್ಥೆಗಳಲ್ಲಿ, ಇದು ವೈ-ಫೈ 5, ಬ್ಲೂಟೂತ್ 5.4, ಯುಎಸ್‌ಬಿ ಟೈಪ್-ಸಿ ಪೋರ್ಟ್, 3.5 ಎಂಎಂ ಆಡಿಯೊ ಜ್ಯಾಕ್, ಬೀಡೌ, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ ಮತ್ತು ಕ್ಯೂಝಡ್‌ಎಸ್‌ಎಸ್ ಸಹ ಬೆಂಬಲಿಸುತ್ತದೆ.


Click it and Unblock the Notifications