Home
ಮೊಬೈಲ್

ಇಂದಿನಿಂದ OPPO K14x 5G ಸೇಲ್ ಶುರು: 13,499 ರೂ.ಗೆ ಖರೀದಿಸುವ ಅವಕಾಶ!

ಭಾರತೀಯ ಸ್ಮಾರ್ಟ್‌ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಎದುರುನೋಡುತ್ತಿರುವ ಬಜೆಟ್ ಬೆಲೆಯ ಹೊಸ Oppo K14x 5G ಸ್ಮಾರ್ಟ್‌ಫೋನ್ ದೇಶದಲ್ಲಿ ಇಂದು (ಫೆ.16) ಮೊದಲ ಬಾರಿಗೆ ಮಾರಾಟಕ್ಕೆ ಬಂದಿದೆ. ಕಳೆದ ವಾರವಷ್ಟೇ (ಫೆ. 10 ರಂದು) ದೇಶದ ಮಾರುಕಟ್ಟೆಗೆ 15 ಸಾವಿರ ರೂ. ಬೆಲೆ ವಿಭಾಗದಲ್ಲಿ ಪರಿಚಯಗೊಂಡಿರುವ ಈ ಹೊಸ ಫೋನ್, ಈ ಬೆಲೆಯಲ್ಲಿ 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 6,500mAh ಬ್ಯಾಟರಿ ಮತ್ತು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ನೊಂದಿಗೆ ಲಭ್ಯವಾಗುತ್ತಿದೆ. ಹಾಗಾದರೆ, ಹೊಸ Oppo K14x 5G ಸ್ಮಾರ್ಟ್‌ಫೋನ್ ಬೆಲೆ ಎಷ್ಟು?, ಕೊಡುಗೆಗಳು ಯಾವುವು ಮತ್ತು ಫೀಚರ್ಸ್ ಹೇಗಿವೆ ಎಂಬುದನ್ನು ನೋಡೋಣ ಬನ್ನಿ.

Oppo K14x 5G: ಬೆಲೆ, ಕೊಡುಗೆಗಳು ಮತ್ತು ಲಭ್ಯತೆ!
ಭಾರತದಲ್ಲಿ Oppo K14x 5G ಸ್ಮಾರ್ಟ್‌ಫೋನ್ ಬೆಲೆ 4GB+128GB RAM ಮತ್ತು ಸ್ಟೋರೇಜ್ ಕಾನ್ಫಿಗರೇಶನ್‌ಗೆ 14,999 ರೂ. ನಿಂದ ಪ್ರಾರಂಭವಾಗುತ್ತದೆ.6GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಇದರ ಟಾಪ್-ಆಫ್-ದಿ-ಲೈನ್ ರೂಪಾಂತರದ ಬೆಲೆ ರೂ. 16,999. ಕಂಪನಿಯು SBI, HDFC ಬ್ಯಾಂಕ್ ಮತ್ತು ICICI ಬ್ಯಾಂಕ್ ಕಾರ್ಡ್‌ಗಳ ಮೇಲೆ 1,500 ರೂ. ವರೆಗೆ ತಕ್ಷಣದ ಬ್ಯಾಂಕ್ ರಿಯಾಯಿತಿಯನ್ನು ಸಹ ನೀಡುತ್ತಿದೆ. ಇದರಿಂದ ದೇಶದಲ್ಲಿ ಈ ಫೋನ್ ಬೆಲೆ 13,499 ರೂ.ಗೆ ಇಳಿಕೆಯಾಗಲಿದೆ. ಜೊತೆಗೆ ನೋ-ಕಾಸ್ಟ್ EMI ಸೌಲಭ್ಯವೂ ಇರುವುದರಿಂದ ವಿದ್ಯಾರ್ಥಿಗಳು ಮತ್ತು ಯುವ ಬಳಕೆದಾರರಿಗೆ ಇದು ಕೈಗೆಟುಕುವ ಆಯ್ಕೆಯಾಗಬಹುದು. ಇನ್ನು ಈ ಸ್ಮಾರ್ಟ್‌ಫೋನ್ Flipkart ಹಾಗೂ OPPO ಅಧಿಕೃತ ವೆಬ್‌ಸೈಟ್‌ನಲ್ಲಿ Icy Blue ಮತ್ತು Prism Violet ಬಣ್ಣಗಳಲ್ಲಿ ಮಾರಾಟವಾಗುತ್ತಿದೆ.

Oppo K14x 5G: ಪ್ರಮುಖ ವೈಶಿಷ್ಟ್ಯಗಳು
ಹೊಸ Oppo K14x 5G ಸ್ಮಾರ್ಟ್‌ಫೋನ್ 6.75-ಇಂಚಿನ HD+ (720x1,570 ಪಿಕ್ಸೆಲ್‌ಗಳು) LCD ಡಿಸ್‌ಪ್ಲೆಯನ್ನು ಹೊಂದಿದೆ. ಈ ಡಿಸ್‌ಪ್ಲೆಯು 120Hz ವರೆಗೆ ರಿಫ್ರೆಶ್ ರೇಟ್, 1,125 nits ವರೆಗೆ ಗರಿಷ್ಠ ಹೊಳಪು, 16.7 ಮಿಲಿಯನ್ ಬಣ್ಣಗಳು, 240Hz ವರೆಗೆ ಸ್ಪರ್ಶ ಮಾದರಿ ದರ, 256 ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿಗೆ ಮತ್ತು 83 ಪ್ರತಿಶತ DCI-P3 ಬಣ್ಣದ ಗ್ಯಾಮಟ್ ಅನ್ನು ನೀಡುತ್ತದೆ ಎಂದು ಕಂಪೆನಿಯು ತಿಳಿಸಿದೆ. ಈ ಫೋನ್ 166.6x78.5x8.6mm ಅಳತೆ ಮತ್ತು ಸುಮಾರು 212g ತೂಗುತ್ತದೆ.

ಇಂದಿನಿಂದ OPPO K14x 5G ಸೇಲ್ ಶುರು: 13,499 ರೂ.ಗೆ ಖರೀದಿಸುವ ಅವಕಾಶ!

ಕಾರ್ಯಕ್ಷಮತೆಗಾಗಿ, Oppo K14x 5G ನಲ್ಲಿ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ ನೀಡಲಾಗಿದೆ. ಮತ್ತು ಇದು ARM ಮಾಲಿ-G57 MC2 GPU ನೊಂದಿಗೆ ಜೋಡಿಯಾಗಿದೆ. ಮೆಮೊರಿ ವಿಭಾಗದಲ್ಲಿ, 6GB ವರೆಗೆ LPDDR4x RAM ಮತ್ತು 128GB ಯ UFS 2.2 ಆಂತರಿಕ ಸಂಗ್ರಹಣೆಯನ್ನು ಹೊಂದಿರು ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ColorOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ ವಿಭಾಗದಲ್ಲಿ, ಈ ಪೋನ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿದ್ದು, ಇದು 50-ಮೆಗಾಪಿಕ್ಸೆಲ್ (ಎಫ್/1.8) ಪ್ರಾಥಮಿಕ ಶೂಟರ್ ಮತ್ತು 2-ಮೆಗಾಪಿಕ್ಸೆಲ್ (ಎಫ್/2.4) ಏಕವರ್ಣದ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 5-ಮೆಗಾಪಿಕ್ಸೆಲ್ (ಎಫ್/2.2) ಮುಂಭಾಗದ ಕ್ಯಾಮೆರಾ ಇದೆ. ಇದು 1080p/60 fps ವರೆಗೆ ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಬ್ಯಾಟರಿ ವಿಭಾಗದಲ್ಲಿ, 45W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲವವಿರುವ 6500mAh ಬ್ಯಾಟರಿ ಇದೆ. .ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ ಫೋನ್ IP64 ರೇಟಿಂಗ್‌ ನಿಡಲಾಗಿದೆ. ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದ್ದರೆ, ಸಂಪರ್ಕ ವ್ಯವಸ್ಥೆಗಳಲ್ಲಿ, ಇದು ವೈ-ಫೈ 5, ಬ್ಲೂಟೂತ್ 5.4, ಯುಎಸ್‌ಬಿ ಟೈಪ್-ಸಿ ಪೋರ್ಟ್, 3.5 ಎಂಎಂ ಆಡಿಯೊ ಜ್ಯಾಕ್, ಬೀಡೌ, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ ಮತ್ತು ಕ್ಯೂಝಡ್‌ಎಸ್‌ಎಸ್ ಸಹ ಬೆಂಬಲಿಸುತ್ತದೆ.

Best Mobiles in India

English summary
The OPPO K14x 5G is now on sale in India starting at ₹14,999, featuring a massive 6,500mAh battery, 45W fast charging, and MediaTek Dimensity 6300 chipset. Buyers can avail up to ₹1,500 instant bank discount, bringing the effective price down to ₹13,499.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+