Home
ಮೊಬೈಲ್

ಈಗ ₹12,999ಕ್ಕೆ Oppo K14x 5G: ಹೊಸ 4GB + 64GB ಮಾದರಿ ಪರಿಚಯ!

ಕಳೆದ ಫೆಬ್ರವರಿಯಲ್ಲಿ ಬಜೆಟ್ ಬೆಲೆಯ Oppo K14 ಶ್ರೇಣಿಯ ಮೊದಲ ಮಾದರಿಯಾಗಿ Oppo K14x 5G ಫೋನ್ ಬಿಡುಗಡೆಯಾಗಿತ್ತು. ಇದೀಗ ಕಂಪೆನಿಯು ಈ ಸ್ಮಾರ್ಟ್‌ಫೋನ್ ಸರಣಿಗೆ ಹೊಸ RAM ಮತ್ತು ಸ್ಟೋರೇಜ್ ಮಾದರಿಯನ್ನು ಪರಿಚಯಿಸಿದೆ. ಇದರಿಂದ Oppo K14x 5G ಫೋನ್ ದೇಶದಲ್ಲಿ ಇದೀಗ 12,999 ರೂ. ಆರಂಭಿಕ ಬೆಲೆಗೆ ಖರೀದಿಗೆ ದೊರೆಯುತ್ತಿದೆ. ಈ ಮೂಲಕ ವಿದ್ಯಾರ್ಥಿಗಳು ಮತ್ತು ಮೊದಲ ಬಾರಿಗೆ ಸ್ಮಾರ್ಟ್‌ಫೋನ್ ಬಳಕೆದಾರರಂತಹ ಮೌಲ್ಯ-ಪ್ರಜ್ಞೆಯ ಖರೀದಿದಾರರಿಗೆ ಸ್ಮಾರ್ಟ್‌ಫೋನ್ ಅನ್ನು ಹೆಚ್ಚು ಪ್ರವೇಶಿಸುವಂತೆ ಮಾಡುವ ಗುರಿಯನ್ನು ಹೊಂದಿರುವುದಾಗಿ ಕಂಪನಿ ಹೇಳಿಕೊಂಡಿದೆ.

ಭಾರತದಲ್ಲಿ Oppo K14x 5G ಬೆಲೆ, ಲಭ್ಯತೆ
ಭಾರತದಲ್ಲಿ ಹೊಸದಾಗಿ Oppo K14x 5G ಫೋನ್ ಅನ್ನು ​​4GB + 64GB ಸಾಮರ್ಥ್ಯದ ಹೊಸ ರೂಪಾಂತರದಲ್ಲಿ ಪರಿಚಯಿಸಲಾಗಿದ್ದು, ಇದರ ಬೆಲೆಯನ್ನು 12,999 ರೂ.ಗೆ ನಿಗದಿಪಡಿಸಲಾಗಿದೆ. ಇದು ಅಸ್ತಿತ್ವದಲ್ಲಿರುವ 4GB + 128GB ಮತ್ತು 6GB + 128GB RAM ಎರಡು ಮಾದರಿಗಳ ಸಾಲಿಗೆ ಹೊಸದಾಗಿ ಸೇರ್ಪಡೆಗೊಂಡಿದೆ. ಗಮನಿಸುವುದಾದರೆ, ಈ ಮೊದಲು ಬಿಡುಗಡೆಯಾಗಿದ್ದ 4GB + 128GB ಮತ್ತು 6GB + 128GB RAM ಎರಡು ಮಾದರಿಗಳ ಕ್ರಮವಾಗಿ 14,999 ರೂ. ಮತ್ತು 16,999 ರೂ. ಬೆಲೆಗಳನ್ನು ಹೊಂದಿವೆ. ಈ ಎಲ್ಲಾ ಮೂರು ಫೋನ್‌ಗಳು ಈಗ ಫ್ಲಿಪ್‌ಕಾರ್ಟ್ ಮತ್ತು ಒಪ್ಪೋ ಇಂಡಿಯಾ ಇ-ಸ್ಟೋರ್ ಮೂಲಕ ಐಸಿ ಬ್ಲೂ ಮತ್ತು ಪ್ರಿಸ್ಮ್ ವೈಲೆಟ್ ಎರಡು ಬಣ್ಣಗಳ ಆಯ್ಕೆಗಳಲ್ಲಿ ಖರೀದಿಸಲು ಲಭ್ಯವಿದ್ದು, ಗ್ರಾಹಕರು ಬ್ಯಾಂಕ್ ರಿಯಾಯಿತಿಗಳು ಹಾಗೂ ನೋ-ಕಾಸ್ಟ್ EMI ಆಯ್ಕೆಯನ್ನೂ ಪಡೆಯಬಹುದು ಎಂದು ಕಂಪೆನಿ ತಿಳಿಸಿದೆ.

Oppo K14x 5G: ಪ್ರಮುಖ ವೈಶಿಷ್ಟ್ಯಗಳು
ಹೊಸ Oppo K14x 5G ಸ್ಮಾರ್ಟ್‌ಫೋನ್ 6.75-ಇಂಚಿನ HD+ (720x1,570 ಪಿಕ್ಸೆಲ್‌ಗಳು) LCD ಡಿಸ್‌ಪ್ಲೆಯನ್ನು ಹೊಂದಿದೆ. ಈ ಡಿಸ್‌ಪ್ಲೆಯು 120Hz ವರೆಗೆ ರಿಫ್ರೆಶ್ ರೇಟ್, 1,125 nits ವರೆಗೆ ಗರಿಷ್ಠ ಹೊಳಪು, 16.7 ಮಿಲಿಯನ್ ಬಣ್ಣಗಳು, 240Hz ವರೆಗೆ ಸ್ಪರ್ಶ ಮಾದರಿ ದರ, 256 ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿಗೆ ಮತ್ತು 83 ಪ್ರತಿಶತ DCI-P3 ಬಣ್ಣದ ಗ್ಯಾಮಟ್ ಅನ್ನು ನೀಡುತ್ತದೆ ಎಂದು ಕಂಪೆನಿಯು ತಿಳಿಸಿದೆ. ಈ ಫೋನ್ 166.6x78.5x8.6mm ಅಳತೆ ಮತ್ತು ಸುಮಾರು 212g ತೂಗುತ್ತದೆ.

ಈಗ ₹12,999ಕ್ಕೆ Oppo K14x 5G: ಹೊಸ 4GB + 64GB ಮಾದರಿ ಪರಿಚಯ!

ಕಾರ್ಯಕ್ಷಮತೆಗಾಗಿ, Oppo K14x 5G ನಲ್ಲಿ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ ನೀಡಲಾಗಿದೆ. ಮತ್ತು ಇದು ARM ಮಾಲಿ-G57 MC2 GPU ನೊಂದಿಗೆ ಜೋಡಿಯಾಗಿದೆ. ಮೆಮೊರಿ ವಿಭಾಗದಲ್ಲಿ, 6GB ವರೆಗೆ LPDDR4x RAM ಮತ್ತು 128GB ಯ UFS 2.2 ಆಂತರಿಕ ಸಂಗ್ರಹಣೆಯನ್ನು ಹೊಂದಿರು ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ColorOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ ವಿಭಾಗದಲ್ಲಿ, ಈ ಪೋನ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿದ್ದು, ಇದು 50-ಮೆಗಾಪಿಕ್ಸೆಲ್ (ಎಫ್/1.8) ಪ್ರಾಥಮಿಕ ಶೂಟರ್ ಮತ್ತು 2-ಮೆಗಾಪಿಕ್ಸೆಲ್ (ಎಫ್/2.4) ಏಕವರ್ಣದ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 5-ಮೆಗಾಪಿಕ್ಸೆಲ್ (ಎಫ್/2.2) ಮುಂಭಾಗದ ಕ್ಯಾಮೆರಾ ಇದೆ. ಇದು 1080p/60 fps ವರೆಗೆ ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಬ್ಯಾಟರಿ ವಿಭಾಗದಲ್ಲಿ, 45W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲವವಿರುವ 6500mAh ಬ್ಯಾಟರಿ ಇದೆ. .ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ ಫೋನ್ IP64 ರೇಟಿಂಗ್‌ ನಿಡಲಾಗಿದೆ. ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದ್ದರೆ, ಸಂಪರ್ಕ ವ್ಯವಸ್ಥೆಗಳಲ್ಲಿ, ಇದು ವೈ-ಫೈ 5, ಬ್ಲೂಟೂತ್ 5.4, ಯುಎಸ್‌ಬಿ ಟೈಪ್-ಸಿ ಪೋರ್ಟ್, 3.5 ಎಂಎಂ ಆಡಿಯೊ ಜ್ಯಾಕ್, ಬೀಡೌ, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ ಮತ್ತು ಕ್ಯೂಝಡ್‌ಎಸ್‌ಎಸ್ ಸಹ ಬೆಂಬಲಿಸುತ್ತದೆ.

Best Mobiles in India

English summary
Oppo has introduced a new 4GB RAM + 64GB storage variant of the Oppo K14x 5G in India at a starting price of ₹12,999. The smartphone is now available alongside the existing 4GB+128GB and 6GB+128GB models via Flipkart and the Oppo India e-store.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+