ಭಾರತದಲ್ಲಿ IP69 ರೇಟಿಂಗ್ ಹೊಂದಿರುವ ಮೊದಲ ಸ್ಮಾರ್ಟ್‌ಫೋನ್ OPPO F27 Pro+ ಲಾಂಚ್ ! ವಾವ್ ಎನಿಸುವ ಫೀಚರ್ಸ್
ವಿಶಿಷ್ಟ ಫೀಚರ್ಸ್ ಜೊತೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಒಪ್ಪೋ ಸಂಸ್ಥೆ ತನ್ನ ಬಹುನಿರೀಕ್ಷಿತ OPPO F27 Pro+ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಮಾಡಿದ್ದು ಅದರ ಬೆಲೆ ಮತ್ತು ಫಿಚರ್ಸ್ ಅನ್ನು ಬಹಿರಂಗಪಡಿಸಿದೆ. ಈ ಸ್ಮಾರ್ಟ್‌ಫೋನ್ IP69 ರೇಟಿಂಗ್ ಅನ್ನು ಒಳಗೊಂಡಿರುವ ಭಾರತದ ಮೊದಲ ಫೋನ್ ಆಗಿದೆ. ಇದು ನೀರು ಮತ್ತು ಧೂಳಿನಿಂದ ಸ್ಮಾರ್ಟ್‌ಫೋನ್ ಅನ್ನು ರಕ್ಷಣೆ ನೀಡಲಿದೆ. ಹಾಗಿದ್ರೆ ಬನ್ನಿ ಇಂದು ಬಿಡುಗಡೆಯಾಗಿರುವ ಈ ಸ್ಮಾರ್ಟ್‌ಫೋನ್ ನ ಬೆಲೆ, ಯಾವ ಯಾವ ಬಣ್ಣಗಳಲ್ಲಿ ಲಭ್ಯವಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.
ಹೈಲೆಟ್ಸ್:
*OPPO F27 Pro+ ಇದು ಭಾರತದ ಮೊದಲ IP69 ರೇಟೆಡ್ ಫೋನ್ ಆಗಿದೆ.
*ಇದು ವೇಗನ್ ಲೆದರ್ ಚರ್ಮದ ಹಿಂಭಾಗದ ವಿನ್ಯಾಸದ ಜೊತೆಗೆ ಎರಡು ಬಣ್ಣಗಳಲ್ಲಿ ಲಭ್ಯವಿದೆ.
*ಇದು 120Hz ಡಿಸ್‌ಪ್ಲೇ, 7050 SoC ಡೈಮೆನ್ಸಿಟಿ ಮತ್ತು 67W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ.

ಭಾರತದಲ್ಲಿ OPPO F27 Pro+ ಬೆಲೆ, ಮಾರಾಟದ ವಿವರ:
ಇದರ ಮೂಲ ವೇರಿಯಂಟ್ ಆಗಿರುವ 8GB RAM ಮತ್ತು 128GB ಸ್ಟೋರೇಜ್ ನ ಬೆಲೆ 27,999 ರೂ.ಗಳಾಗಿದೆ. ಇದು 8GB RAM ಮತ್ತು 256GB ಸಂಗ್ರಹಣೆಯ ಮತ್ತೊಂದು ರೂಪಾಂತರದಲ್ಲಿ ಲಭ್ಯವಿದ್ದು ಇದು 29,999 ರೂ. ಬೆಲೆ ಹೊಂದಿರಲಿದೆ. ನೀವು ಈ ಸ್ಮಾರ್ಟ್‌ಫೋನ್ ಅನ್ನು ಎರಡು ಬಣ್ಣಗಳಲ್ಲಿ ಖರೀದಿಸಬಹುದಾಗಿದೆ. ಡಸ್ಕ್ ಪಿಂಕ್ ಮತ್ತು ಮಿಡ್ ನೈಟ್ ನೇವಿ ಬಣ್ಣಗಳಲ್ಲಿ ಲಭ್ಯವಿದೆ.
OPPO F27 Pro+ ನಲ್ಲಿ ಹೊಸದೇನಿದೆ:
ಈ ಸ್ಮಾರ್ಟ್‌ಫೋನ್ ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆಯಾದ F25 Pro ಗಿಂತ ಅಪ್‌ಗ್ರೇಡ್ ಆಗಿದೆ. OPPO F27 Pro+ ಫೈಂಡ್ N ಸರಣಿಯಂತೆ ಹಿಂಭಾಗದಲ್ಲಿ ವೃತ್ತಾಕಾರದ ಕ್ಯಾಮೆರಾ ವಿನ್ಯಾಸ ಹೊಂದಿರುವುದರಿಂದ ವಿನ್ಯಾಸ ವಿಭಿನ್ನವಾಗಿದೆ. ಇದು ಕ್ಯಾಮರಾ ಸೆನ್ಸಾರ್‌ಗಳ ಸುತ್ತಲೂ ಕಾಸ್ಮೊಸ್ ರಿಂಗ್ ಜೊತೆಗೆ ಹಿಂಭಾಗದಲ್ಲಿ ವೇಗನ್ ಲೆದರ್ ವಿನ್ಯಾಸದಿಂದ ಕೂಡಿದೆ.
ಫೀಚರ್ಸ್:
OPPO F27 Pro+ ಇದು F25 Pro ನಂತೆಯೇ ಅದೇ ಡೈಮೆನ್ಸಿಟಿ 7050 SoC ಅನ್ನು ಹೊಂದಿದೆ, ಆದ್ದರಿಂದ ಇದರಲ್ಲಿ ಯಾವುದೇ ಅಪ್ಡೇಟ್ ಇರುವುದಿಲ್ಲ. F27 Pro+ ನಲ್ಲಿ ಯಾವುದೇ ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ ಇಲ್ಲದಿರುವುದರಿಂದ ಮತ್ತು ಸೆಲ್ಫಿ ಕ್ಯಾಮೆರಾ 8MP ಸೆನ್ಸಾರ್ ಆಗಿರುವುದರಿಂದ ಕ್ಯಾಮೆರಾ ಬಿಟ್ ಹೆಚ್ಚು ಡೌನ್‌ಗ್ರೇಡ್ ಆಗಿದೆ. F25 Pro ಇದು 8MP ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 32MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
OPPO F27 Pro+ ನ ಪ್ರಮುಖ ಅಂಶವೆಂದರೆ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP69 ರೇಟಿಂಗ್ ಹೊಂದಿದೆ. ಇದು Galaxy S24 ಮತ್ತು iPhone 15 ನಂತಹ ಬ್ರಾಂಡ್ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಲಭ್ಯವಿಲ್ಲದ ಅತ್ಯಧಿಕ ರೇಟಿಂಗ್ ಆಗಿದೆ.
OPPO F27 Pro+ ವಿಶೇಷತೆಗಳು:
*ಇದು 6.7-ಇಂಚಿನ ಫುಲ್ HD+ 3D ಕರ್ವ್ಡ್ AMOLED ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 950 nits ಪೀಕ್ ಬ್ರೈಟ್‌ನೆಸ್ ಹೊಂದಿದೆ.
*ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಮೂಲಕ 8GB RAM ಮತ್ತು 256GB ವರೆಗೆ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ.
*ಇದು 67W SuperVOOC ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.
*ಈ ಸ್ಮಾರ್ಟ್‌ಫೋನ್ 64MP OV64B ಪ್ರಾಥಮಿಕ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 2MP ಡೆಪ್ತ್ ಕ್ಯಾಮೆರಾವನ್ನು ಹೊಂದಿದೆ.
*ಸೆಲ್ಫಿಗಾಗಿ ಇದರಲ್ಲಿ 8MP ಫ್ರಂಟ್ ಕ್ಯಾಮೆರಾ ಪಡೆಯುತ್ತೀರಿ.
*OPPO F27 Pro+ ಆಂಡ್ರಾಯ್ಡ್ 14 ಲೇಯರ್ ಜೊತೆಗೆ ColorOS 14.0 ನಿಂದ ರನ್ ಆಗಲಿದೆ.


Click it and Unblock the Notifications








