Home
ಮೊಬೈಲ್

Oppo K13x 5G ಬಿಡುಗಡೆ: 15,999 ರೂ.ಗೆ 360-ಡಿಗ್ರಿ ಡ್ಯಾಮೇಜ್-ಪ್ರೂಫ್ ಫೋನ್!

ಭಾರತದ ಮೊಬೈಲ್ ಮಾರುಕಟ್ಟೆಯು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ Oppo K13x 5G ಫೋನ್ (ಸೋಮವಾರ, ಜೂನ್ 23, 2025) ಭರ್ಜರಿಯಾಗಿ ಬಿಡುಗಡೆಯಾಗಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌, ಶಕ್ತಿಯುತವಾದ 6,000mAh ಬ್ಯಾಟರಿ, 360-ಡಿಗ್ರಿ ಡ್ಯಾಮೇಜ್-ಪ್ರೂಫ್ ಆರ್ಮರ್ ಬಾಡಿ ಮತ್ತು MIL-STD 810-H ಶಾಕ್ ರೆಸಿಸ್ಟೆನ್ಸ್ ಪ್ರಮಾಣೀಕರಣದ ಗಟ್ಟಿಮುಟ್ಟಾದ ವಿನ್ಯಾಸ ಸೇರಿದಂತೆ ಹಲವಾರು ಪ್ರಮುಖ ಫೀಚರ್ಸ್‌ಗಳನ್ನು ಒಳಗೊಂಡಿರುವ ಈ ಫೋನ್ ಬೆಲೆ 15,999 ರೂ.ಗಳಿಂದ ಆರಂಭವಾಗಿದೆ.

Oppo K13x 5G: ವಿನ್ಯಾಸ
ಹೊಸ Oppo K13x 5G ಫೋನಿನ ಪ್ರಮುಖ ಆಕರ್ಷಣೆಯೆಂದರೆ ಅದರ 360-ಡಿಗ್ರಿ ಡ್ಯಾಮೇಜ್-ಪ್ರೂಫ್ ಆರ್ಮರ್ ಬಾಡಿ ಮತ್ತು MIL-STD 810-H ಶಾಕ್ ರೆಸಿಸ್ಟೆನ್ಸ್ ಪ್ರಮಾಣೀಕರಣ. ಈ ಫೋನ್ ಸಮುದ್ರ ಸ್ಪಂಜುಗಳಿಂದ ಸ್ಫೂರ್ತಿ ಪಡೆದ ಬಯೋಮಿಮೆಟಿಕ್ ಸ್ಪಾಂಜ್ ಶಾಕ್ ಅಬ್ಸಾರ್ಪ್ಷನ್ ಸಿಸ್ಟಮ್ ಅನ್ನು ಬಳಸುತ್ತದೆ. ಕಂಪನಿಯ ಪ್ರಕಾರ, ಈ ತಂತ್ರಜ್ಞಾನವು ಫೋನ್‌ನ ಆಘಾತ ನಿರೋಧಕತೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಇದಲ್ಲದೆ, ಈ ಸ್ಮಾರ್ಟ್‌ಫೋನ್ IP65 ಧೂಳು ಮತ್ತು ನೀರಿನ ಪ್ರತಿರೋಧ-ರೇಟೆಡ್ ಆಗಿದ್ದು, ಮುಂಭಾಗದಲ್ಲಿ ಅತ್ಯಾಧುನಿಕ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆಯನ್ನು ಹೊಂದಿದೆ.

Oppo K13x 5G: ವೈಶಿಷ್ಟ್ಯಗಳು
Oppo K13x 5G ಫೋನ್ 6.67-ಇಂಚಿನ LCD ಪರದೆಯನ್ನು ಹೊಂದಿದೆ, ಇದು 120Hz ವರೆಗೆ ರಿಫ್ರೆಶ್ ದರ ಮತ್ತು 1,000 ನಿಟ್‌ಗಳವರೆಗೆ ಹೊಳಪನ್ನು ನೀಡುತ್ತದೆ. ಈ ಡಿಸ್ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ಯಿಂದ ರಕ್ಷಿಸಲ್ಪಟ್ಟಿದೆ ಮತ್ತು ಸ್ಪ್ಲಾಶ್ ಟಚ್ ಹಾಗೂ ಗ್ಲೋವ್ ಟಚ್ ತಂತ್ರಜ್ಞಾನಗಳನ್ನು ಬೆಂಬಲಿಸುತ್ತದೆ. ಈ ಫೋನ್‌ 165.7 x 76.24 x 7.99 ಮಿಮೀ ಆಯಾಮ ಮತ್ತು ಇದು 194 ಗ್ರಾಂ ತೂಗುತ್ತದೆ.

ಕಾರ್ಯಕ್ಷಮತೆಯ ವಿಷಯದಲ್ಲಿ, ಈ ಫೋನ್ 6nm ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 6300 SoC ಯೊಂದಿಗೆ ಸಜ್ಜುಗೊಂಡಿದೆ. ಇದು 8GB ವರೆಗೆ LPDDR4X RAM ಮತ್ತು 128GB ವರೆಗೆ UFS 2.2 ಆನ್‌ಬೋರ್ಡ್ ಸಂಗ್ರಹಣೆಯನ್ನು ಹೊಂದಿದೆ. ಹಾಗೂ, ಆಂಡ್ರಾಯ್ಡ್ 15-ಆಧಾರಿತ ColorOS 15 ನೊಂದಿಗೆ ಬರುತ್ತದೆ ಮತ್ತು Google Gemini, AI ಸಮ್ಮರಿ, AI ರೆಕಾರ್ಡರ್, ಮತ್ತು AI ಸ್ಟುಡಿಯೋ ನಂತಹ AI ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ.

Oppo K13x 5G ಬಿಡುಗಡೆ: 15,999 ರೂ.ಗೆ 360-ಡಿಗ್ರಿ ಡ್ಯಾಮೇಜ್-ಪ್ರೂಫ್ ಫೋನ್!

ಕ್ಯಾಮೆರಾ ವಿಭಾಗದಲ್ಲಿ, ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದು f/1.8 ಅಪರ್ಚರ್‌ನೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ ಮತ್ತು f/2.4 ಅಪರ್ಚರ್‌ನೊಂದಿಗೆ 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಅನ್ನು ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, ಇದು f/2.0 ಅಪರ್ಚರ್‌ನೊಂದಿಗೆ 8-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಸೆನ್ಸರ್ ಅನ್ನು ಹೊಂದಿದೆ. ಇದು ಡ್ಯುಯಲ್-ವ್ಯೂ ವೀಡಿಯೊ ರೆಕಾರ್ಡಿಂಗ್ ಮತ್ತು AI ಅನ್‌ಬ್ಲರ್, AI ರಿಫ್ಲೆಕ್ಷನ್ ರಿಮೂವರ್, AI ರೀಮೇಜ್ ನಂತಹ AI- ಬೆಂಬಲಿತ ಇಮೇಜಿಂಗ್ ವೈಶಿಷ್ಟ್ಯಗಳನ್ನು ಸಹ ಬೆಂಬಲಿಸುತ್ತದೆ.

ಇತರ ಪ್ರಮುಖ ವೈಶಿಷ್ಟ್ಯಗಳಲ್ಲಿ, Oppo K13x 5G ಫೋನ್ 45W ವೈರ್ಡ್ ಸೂಪರ್‌ವಿಒಒಸಿ ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಬ್ಯಾಟರಿ ನೀಡಲಾಗಿದೆ.. ಸಂಪರ್ಕ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5G, ವೈ-ಫೈ, ಬ್ಲೂಟೂತ್ 5.4, NFC, GPS, 3.5mm ಆಡಿಯೊ ಜ್ಯಾಕ್, ಮತ್ತು USB ಟೈಪ್-ಸಿ ಪೋರ್ಟ್ ಸೇರಿವೆ.

ಭಾರತದಲ್ಲಿ Oppo K13x 5G ಬೆಲೆ ಮತ್ತು ಲಭ್ಯತೆ!
ಹೊಸ Oppo K13x 5G ಫೋನಿನ 4GB RAM ಮತ್ತು 128GB ಸ್ಟೋರೇಜ್ ಆಯ್ಕೆಯ ಬೆಲೆ 15,999 ರೂ. ಆಗಿದೆ. ಇನ್ನು ಇದರ 6GB RAM ಮಾದರಿ ಬೆಲೆ 16,999 ರೂ. ಆಗಿದ್ದರೆ, 8GB RAM ಮಾದರಿ ಪೋನ್ 18,999 ರೂ.ಗೆ ಬಿಡುಗಡೆಯಾಗಿದೆ.. ಈ ಸ್ಮಾರ್ಟ್‌ಫೋನ್ ಎರಡು ಆಕರ್ಷಕ ಬಣ್ಣಗಳಾದ ಮಿಡ್‌ನೈಟ್ ವೈಲೆಟ್ ಮತ್ತು ಸನ್‌ಸೆಟ್ ಪೀಚ್ ಆಯ್ಕೆಗಳಲ್ಲಿ ಲಭ್ಯವಿದ್ದು, ಗ್ರಾಹಕರು ಜೂನ್ 27 ರಿಂದ ಫ್ಲಿಪ್‌ಕಾರ್ಟ್ ಮತ್ತು Oppo ನ ಅಧಿಕೃತ ವೆಬ್‌ಸೈಟ್ ಮೂಲಕ ಈ ಫೋನ್ ಅನ್ನು ಖರೀದಿಸಬಹುದು.

Best Mobiles in India

English summary
OPPO India has introduced the OPPO K13x 5G, the toughest 5G smartphone in its segment—crafted especially for young students and early professionals who demand durability and all-round functionality without compromise.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+